ಬ್ರೇಕಿಂಗ್ ನ್ಯೂಸ್
16-06-23 07:59 pm Mangalore Correspondent ಕರಾವಳಿ
ಮಂಗಳೂರು, ಜೂನ್ 16: ದೇಶದ ಮುಂಚೂಣಿ ಡ್ರೈಫ್ರುಟ್ಸ್ ಬ್ರಾಂಡ್ ಆಗಿರುವ ಬೋಳಾಸ್ ಆಗ್ರೋ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯಿಂದ ಮಂಗಳೂರು ನಗರದಲ್ಲಿ ಮತ್ತೆರಡು ಮಳಿಗೆಗಳನ್ನು ಸ್ಥಾಪಿಸಲಾಗಿದೆ. ಚಿಲಿಂಬಿ ಮತ್ತು ರಥಬೀದಿಯಲ್ಲಿ ಒಂದೇ ಬಾರಿಗೆ ಎರಡು ಮಳಿಗೆ ಆರಂಭಿಸಲಾಗಿದ್ದು, ಶುಕ್ರವಾರ ಹೆಸರಾಂತ ವೈದ್ಯ ಡಾ.ದೇವದಾಸ ಶೆಣೈ ಚಾಲನೆ ನೀಡಿದ್ದಾರೆ.
ಮಂಗಳೂರಿನಲ್ಲಿ ಪಾಂಡೇಶ್ವರ, ಯೆಯ್ಯಾಡಿ, ಬಿಜೈ ಮತ್ತು ಬೈಕಂಪಾಡಿಯಲ್ಲಿ ಈಗಾಗಲೇ ನಾಲ್ಕು ಮಳಿಗೆಗಳನ್ನು ಬೋಳಾಸ್ ಸಂಸ್ಥೆಯವರು ಹೊಂದಿದ್ದರು. ಈಗ ಮತ್ತೆರಡು ಮಳಿಗೆಯ ಸ್ಥಾಪನೆಯೊಂದಿಗೆ ನಗರದಲ್ಲಿ ಆರು ಮಳಿಗೆಗಳನ್ನು ಹೊಂದಿದಂತಾಗಿದೆ. ರಾಜ್ಯದಲ್ಲಿ ಒಟ್ಟು 50 ರಿಟೈಲ್ ಮಳಿಗೆಗಳನ್ನು ಸ್ಥಾಪಿಸಿದ್ದು, ಇದಲ್ಲದೆ ತಮಿಳುನಾಡಿನ ಹೊಸೂರು, ಗೋವಾ, ಮುಂಬೈನಲ್ಲಿಯೂ ಮಳಿಗೆ ಹೊಂದಿದೆ. ಮುಂದಿನ ದೀಪಾವಳಿ ಹೊತ್ತಿಗೆ ಬೆಂಗಳೂರಿನಲ್ಲಿ 17 ಹೊಸ ಮಳಿಗೆ ಸ್ಥಾಪಿಸಿ ಒಟ್ಟು ರೀಟೈಲ್ ಶಾಪ್ ಸಂಖ್ಯೆ 75ಕ್ಕೇರಿಸುವ ಗುರಿ ಹೊಂದಿದ್ದೇವೆ ಎಂದು ಸಂಸ್ಥೆಯ ನಿರ್ದೇಶಕ ಬೋಳಾ ರಾಹುಲ್ ಕಾಮತ್ ತಿಳಿಸಿದ್ದಾರೆ.




ಬೋಳಾಸ್ ಸಂಸ್ಥೆಯವರು ಹಿಂದಿನಿಂದಲೂ ಗೋಡಂಬಿ ಫ್ಯಾಕ್ಟರಿ ಹೊಂದಿದ್ದು, ಸಾವಿರಾರು ಜನರಿಗೆ ಉದ್ಯೋಗ ನೀಡಿದ್ದರು. 2005ರ ಬಳಿಕ ಅಡುಗೆ ಎಣ್ಣೆ ಉತ್ಪಾದನೆಯಲ್ಲೂ ತೊಡಗಿಸಿದ್ದರು. ಗೋಡಂಬಿಯನ್ನು ಫ್ಯಾಕ್ಟರಿಯಲ್ಲೇ ಗ್ರಾಹಕರಿಗೆ ನೀಡುತ್ತಿದ್ದ ಸಂಸ್ಥೆಯವರು 2020ರಲ್ಲಿ ಕೋವಿಡ್ ಸೋಂಕು ಎದುರಾದ ಸಂದರ್ಭದಲ್ಲಿ ಪೌಷ್ಟಿಕಾಂಶಕ್ಕಾಗಿ ಒಣ ಬೀಜಗಳಿಗೆ ಬೇಡಿಕೆ ಹೆಚ್ಚಿದ್ದನ್ನು ಪರಿಗಣಿಸಿ ನಗರ ಪ್ರದೇಶದಲ್ಲಿ ಮಳಿಗೆ ಸ್ಥಾಪನೆಗೆ ಮುಂದಾಗಿದ್ದರು. ಕೇವಲ ಮೂರು ವರ್ಷದಲ್ಲಿ ರಾಜ್ಯಾದ್ಯಂತ ಬೆಂಗಳೂರು, ಹುಬ್ಬಳ್ಳಿ, ಮಂಗಳೂರು, ಉಡುಪಿ, ಮೈಸೂರು ಹೀಗೆ ಪ್ರಮುಖ ನಗರಗಳಲ್ಲಿ 50 ಮಳಿಗೆಯನ್ನು ಸ್ಥಾಪಿಸಿದ್ದಾರೆ.


ರೈತರು ಮತ್ತು ಫ್ಯಾಕ್ಟರಿಯಿಂದ ಜನರಿಗೆ ನೇರವಾಗಿ ಡ್ರೈಫ್ರುಟ್ಸನ್ನು ಕೈಗೆಟಕುವ ಬೆಲೆಯಲ್ಲಿ ಒದಗಿಸುವುದು ನಮ್ಮ ಗುರಿ ಎಂದು ಹೇಳಿದ ರಾಹುಲ್ ಕಾಮತ್, ಕ್ವಾಲಿಟಿಯಲ್ಲಿ ರಾಜಿ ಮಾಡುವುದಿಲ್ಲ. ಈಗಾಗಲೇ ನಾವು 30 ದೇಶಗಳಿಗೆ ಒಣಬೀಜ ಮತ್ತು ಅಡುಗೆ ಎಣ್ಣೆಯನ್ನು ರಫ್ತು ಮಾಡುತ್ತಿದ್ದೇವೆ. ದೇಶ- ವಿದೇಶದಲ್ಲಿ ಬೋಳಾಸ್ ಹೆಸರಲ್ಲಿ ಮಳಿಗೆ ಸ್ಥಾಪಿಸುವ ಗುರಿ ಹೊಂದಿದ್ದೇವೆ ಎಂದು ಹೇಳಿದರು. ಪಿಸ್ತಾ, ಗೋಡಂಬಿ, ಖರ್ಜೂರದಿಂದ ಹಿಡಿದು ಎಲ್ಲ ರೀತಿಯ ಡ್ರೈಫ್ರುಟ್ಸ್ ಗಳು ಬೋಳಾಸ್ ನಲ್ಲಿ ಸಿಗಲಿವೆ. ಮಳಿಗೆ ಲಾಂಚಿಂಗ್ ಹೆಸರಲ್ಲಿ ಮೊದಲ ದಿನದಲ್ಲಿ ಚಿಲಿಂಬಿಯ ಮಳಿಗೆಯಲ್ಲಿ 300 ರೂ. ಮೌಲ್ಯದ ವಸ್ತುಗಳನ್ನು ಖರೀದಿಸಿದರೆ 375 ರೂ. ಮೌಲ್ಯದ ಪಿಸ್ತಾ ಪ್ಯಾಕೆಟ್ ಉಚಿತ ನೀಡಲಾಗಿತ್ತು. ಗ್ರಾಹಕರು ಬೆಳಗ್ಗಿನಿಂದಲೇ ಡ್ರೈಫ್ರುಟ್ಸ್ ಖರೀದಿಗೆ ಮುಂದಾಗಿದ್ದರು. ಸಂಸ್ಥೆಯ ಮತ್ತೊಬ್ಬ ಡೈರೆಕ್ಟರ್ ರಜತ್ ಕಾಮತ್, ಕಂಪನಿಯ ಪಿಆರ್ ಓ ವಿನೋದ್ ಉಪಸ್ಥಿತರಿದ್ದರು.
Mangalore Bolas Dry Fruits open two more new branches in city at Chilimbi, 50 outlets in three years. The Bolas Group of Companies is well- known in the international market for the past seven decades in the industry of cashews and other dry fruits and nuts. Coastal Karnataka-based Bolas Group is managing five stores across Mysuru under “Bolas The Factory Outlet.”
15-10-26 02:30 pm
HK News Staffer
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
15-10-26 10:34 pm
HK News Desk
Sting News, DK Shivakumar in Mangalore: 'ಸ್ಟಿ...
15-10-26 06:46 pm
ನವರಾತ್ರಿ ನೆಪದಲ್ಲಿ ಕುಡ್ಲದ ತುಂಬ ಫ್ಲೆಕ್ಸ್ಗಳದ್ದೇ...
15-10-26 03:30 pm
Sudheer Reddy, Agnes College, ABVP: ಭಾರತ ಮಾತೆ...
15-10-26 12:19 pm
Mangalore Agnes College Protest, ABVP: ಮಂಗಳೂರ...
14-10-26 10:45 pm
16-10-26 11:04 am
HK News Staffer
Mangaluru Valencia Church Priest Fr. Cyprian...
16-10-26 10:27 am
Fr. Cyprian Pinto Posco Case, Mangalore: ಅಪ್ರ...
16-10-26 10:03 am
ಕೇರಳದಿಂದ ಲಾಟರಿ ಟಿಕೆಟ್ ತಂದು ಮಾರಾಟ ; ಪುತ್ತೂರಿನ...
15-10-26 05:06 pm
Mangaluru Valencia St. Vincent Church Priest...
14-10-26 09:09 pm