ಬ್ರೇಕಿಂಗ್ ನ್ಯೂಸ್
05-03-23 10:33 pm Mangalore Correspondent ಕರಾವಳಿ
ಮಂಗಳೂರು, ಮಾ.5 : ರಾಜ್ಯದಲ್ಲಿ ಕರಾವಳಿಯ ಶಾಸಕರು ಭ್ರಷ್ಟಾಚಾರ ವಿಚಾರದಲ್ಲಿ ಒಂದಷ್ಟು ಮೇಲ್ಪಂಕ್ತಿ ಹೊಂದಿದ್ದರು. ನಾವು ಶಾಸಕರಿದ್ದಾಗ ಕರಾವಳಿ ಮಂದಿ ಭ್ರಷ್ಟರಾಗಿರಲಿಲ್ಲ. ಆದರೆ ಈಗಿನ ಬಿಜೆಪಿ ಶಾಸಕರು ಭ್ರಷ್ಟರಾಗಿದ್ದಾರೆ. ಪರ್ಸೆಂಟೇಜ್ ಎಷ್ಟರಮಟ್ಟಿಗೆ ಇದೆ ಅಂದ್ರೆ, ದೇವಸ್ಥಾನದ ನವೀಕರಣ ಅನುದಾನದಲ್ಲೂ ಪರ್ಸೆಂಟ್ ಕೇಳುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಗಂಭೀರ ಆರೋಪ ಮಾಡಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಉಪ್ಪಿನಂಗಡಿ ಹತ್ತಿರ ಒಂದು ದೇವಸ್ಥಾನದ ನವೀಕರಣಕ್ಕೆ ಆರು ಕೋಟಿ ಎಸ್ಟಿಮೇಟ್ ಮಾಡಿ ಶಾಸಕರ ನೇತೃತ್ವದಲ್ಲಿ ಸಿಎಂ ಹತ್ತಿರ ಹೋಗಿದ್ದಾರೆ. ಬಜೆಟ್ ನಂತರ ಹೋಗಿದ್ದರಿಂದ ಅನುದಾನ ಹೊಂದಿಸಲು ಸಾಧ್ಯವಿಲ್ಲ ಅಂತ ಅಲ್ಲಿಂದ ವಾಪಾಸ್ ಕಳಿಸಿದ್ದಾರೆ. ಆದರೆ ಇಲ್ಲಿ ಬಂದ ನಂತರ 20% ಕಮಿಷನ್ ಕೊಟ್ಟರೆ ಅನುದಾನ ಕೊಡೋದಾಗಿ ಯಾರೋ ಫೋನ್ ಮಾಡಿದ್ದಾರಂತೆ. ನಾನು ಆ ದೇವಸ್ಥಾನ ಯಾವುದು ಅಂತ ಹೇಳಲ್ಲ, ಆ ಬಗ್ಗೆ ನನ್ನತ್ರ ದಾಖಲೆ ಇದೆ. ಇವರು ದೇವಸ್ಥಾನ, ಗರಡಿ ಯಾವುದನ್ನೂ ಬಿಡಲ್ಲ. ದೇವಸ್ಥಾನಕ್ಕೆ ಅನುದಾನ ಕೊಡಿಸುವುದರಲ್ಲೂ ಪರ್ಸೆಂಟ್ ಕೇಳುತ್ತಿದ್ದಾರೆ ಎಂದು ಹೇಳಿದರು.
ಮಂಜೇಶ್ವರ ಗೋವಿಂದ ಪೈ, ಶಿವರಾಮ ಕಾರಂತರ ಸ್ಮಾರಕಕ್ಕೆ ಕೊಡಲು ಇವರ ಬಳಿ ಹಣ ಇಲ್ಲ. ಕರ್ನಾಟಕದ ಮೇಲೆ ಕೇಂದ್ರಕ್ಕೆ ಪ್ರೀತಿ ಇದ್ರೆ ರಾಜ್ಯಕ್ಕೆ ವಿಶೇಷ ಅನುದಾನ ಕೊಡಬಹುದಿತ್ತು, ಆದರೆ ಕೊಡಲಿಲ್ಲ. ರಾಜಕೀಯಕ್ಕೆ ಮಾತ್ರ ಬಳಸುತ್ತಿದ್ದಾರೆ. ಕಾಂಗ್ರೆಸ್ ಅವಧಿಯಲ್ಲಿ ಮಂಗಳೂರಿನ ಕ್ಯಾಂಪ್ಕೋ ಸ್ಥಾಪನೆಯಾಗಿದ್ದು. ಆದರೆ ಈಗ ಬಿಜೆಪಿ ಅದನ್ನ ಹೈಜಾಕ್ ಮಾಡಿ ಓನರ್ ಶಿಪ್ ತೆಗೊಳೋದಕ್ಕೆ ಯತ್ನಿಸ್ತಿದೆ ಎಂದು ಆರೋಪಿಸಿದರು.
ಮೋದಿ ಮತ್ತು ಅಮಿತ್ ಶಾ ಸೈಕ್ಲೋನ್ ಥರ ರಾಜ್ಯಕ್ಕೆ ಬರ್ತಾ ಇದಾರೆ. ಆದರೆ ಬರುವ ಮೊದಲು ಅವರು ರಾಜ್ಯದ ಸಮಸ್ಯೆ ಬಗ್ಗೆ ಮಾತನಾಡಲಿ. ಪ್ರಧಾನಿ ಮೋದಿಗೆ ಸುದ್ದಿಗೋಷ್ಟಿ ನಡೆಸುವ ಧೈರ್ಯ ಕೂಡ ಇಲ್ಲ. ಕರ್ನಾಟಕ ಎದುರಿಸುತ್ತಿರುವ ಹಲವು ಮೂಲಭೂತ ಸಮಸ್ಯೆಗಳಿವೆ. ಕೃಷ್ಣಾ ನದಿ ನೀರು ಹಂಚಿಕೆ ನ್ಯಾಯಪೀಠದಲ್ಲಿ ಇತ್ಯರ್ಥವಾಗಿ ಹಲವು ವರ್ಷಗಳಾಗಿದೆ. ಆದರೆ ಈವರೆಗೆ ಕೇಂದ್ರ ಸರ್ಕಾರ ಇದರ ಬಗ್ಗೆ ಅಧಿಸೂಚನೆ ಹೊರಡಿಸಿಲ್ಲ. ನೋಟಿಫಿಕೇಶನ್ ಮಾಡದೇ ಕರ್ನಾಟಕವನ್ನ ಕೇಂದ್ರ ಸರ್ಕಾರ ಸತಾಯಿಸುತ್ತಿದೆ. ಜನರು ಮೋದಿ ಮತ್ತು ಅಮಿತ್ ಶಾ ಬಂದಾಗ ಇದನ್ನ ಕೇಳಬೇಕು ಎಂದು ಹೇಳಿದರು.
ಮೊನ್ನೆ ಶಾಸಕ ಮಾಡಾಳು ವಿರೂಪಾಕ್ಷಪ್ಪ ಭ್ರಷ್ಟಾಚಾರ ಬಯಲಾಗಿದೆ. 1980ರಲ್ಲಿ ನಾನು ಸೋಪ್ ಫ್ಯಾಕ್ಟರಿ ಆಧುನೀಕರಣ ಮಾಡಿ ಉಳಿಸಿದ್ದೆ. ಆದರೆ ಇದೀಗ ಆ ಸೋಪ್ ಪ್ಯಾಕ್ಟರಿಯನ್ನು ದರೋಡೆ ಮಾಡಲು ಇಳಿದಿದ್ದಾರೆ. ಸದ್ಯ ಎಂಎಲ್ಎ ಮಾಡಾಳು ಸಿಕ್ಕಿಲ್ಲ, ಅವರು ಸಿಗಲ್ಲ ಅನ್ನೋದು ಕೂಡ ಸ್ಪಷ್ಟ.
ಅಮಿತ್ ಷಾನಿಗೆ ಇತಿಹಾಸ ಗೊತ್ತಿಲ್ಲ !
ಅಮಿತ್ ಶಾ ಪ್ರತಿ ಸಾರಿ ಇಲ್ಲಿಗೆ ಬಂದು ನಿಮಗೆ ಅಬ್ಬಕ್ಕ ಬೇಕಾ, ಟಿಪ್ಪು ಬೇಕಾ ಅಂತಾರೆ. ಆದರೆ ಈ ಅಮಿತ್ ಶಾನಿಗೆ ಇತಿಹಾಸದ ಸಾಮಾನ್ಯ ಜ್ಞಾನ ಇಲ್ಲ. ಅಬ್ಬಕ್ಕನ ಸೈನಿಕರು ಬ್ಯಾರಿಗಳು ಮತ್ತು ಮೊಗವೀರರಾಗಿದ್ದರು. ಅಬ್ಬಕ್ಕ ಪೋರ್ಚುಗೀಸರನ್ನ ಓಡಿಸಲು ಇವರ ಸೈನ್ಯವನ್ನು ಬಳಸಿಕೊಂಡಿದ್ದಳು. ಇತಿಹಾಸದಲ್ಲಿ ಈ ಸೈನ್ಯದ ಬಗ್ಗೆ ಉಲ್ಲೇಖವಿದೆ, ಅಮಿತ್ ಶಾ ಇತಿಹಾಸದ ಪ್ರಜ್ಞೆ ಇಲ್ಲದೆ ಮಾತನಾಡುತ್ತಿದ್ದಾರೆ.
ಕೆಪಿಸಿಸಿಯಿಂದ ಟಿಕೆಟ್ ಫೈನಲ್
ಕರಾವಳಿಯಲ್ಲಿ ಟಿಕೆಟ್ ಬಗ್ಗೆ ಜಟಾಪಟಿ ಆಗ್ತಾ ಇದೆಯಲ್ಲಾ ಎಂಬ ಪ್ರಶ್ನೆಗೆ, ಕೆಪಿಸಿಸಿ ಕಡೆಯಿಂದ ಟಿಕೆಟ್ ಹೆಸರು ಫೈನಲ್ ಆಗಿದೆ, ಈಗ ಸ್ಕ್ರೀನಿಂಗ್ ಕಮಿಟಿ ಮುಂದೆ ಇದೆ. ಆಬಳಿಕ ಅದು ಕಾಂಗ್ರೆಸ್ ಕೇಂದ್ರೀಯ ಚುನಾವಣಾ ಸಮಿತಿ ಮುಂದೆ ಬರುತ್ತದೆ. ನಾನು ಸಮಿತಿಯಲ್ಲಿ ಇರುವ ಕಾರಣ ದ.ಕ ಮತ್ತು ಉಡುಪಿ ಜಿಲ್ಲೆಯ ಆಕಾಂಕ್ಷಿಗಳ ಜೊತೆ ಚರ್ಚೆ ಮಾಡ್ತೇನೆ. ಇಲ್ಲಿನ ವಾತಾವರಣದ ಬಗ್ಗೆ ಮಾಹಿತಿ ಪಡೆದು ಸಮಿತಿ ಮುಂದೆ ಇಡ್ತೇನೆ. ಫೆ.7 ಮತ್ತು 8 ಕ್ಕೆ ಸ್ಕ್ರೀನಿಂಗ್ ಕಮಿಟಿ ಮೀಟಿಂಗ್ ಇದೆ. ಈ ತಿಂಗಳ ಅಂತ್ಯಕ್ಕೆ ಅಭ್ಯರ್ಥಿಗಳ ಮೊದಲ ಪಟ್ಟಿ ಬರಬಹುದು. ಎಐಸಿಸಿ ಈ ಬಾರಿ ಯುವಕರಿಗೆ ಅವಕಾಶ ಕೊಡಲು ಹೇಳಿದೆ. ಎಐಸಿಸಿ, ಕೆಪಿಸಿಸಿ ಸೇರಿ ಮೂರ್ನಾಲ್ಕು ಸರ್ವೇ ಈಗಾಗಲೇ ಆಗಿದೆ. ಯಾರಿಗೆ ಸೀಟು ಕೊಟ್ಟರೆ ಗೆಲುವು ಸಾಧ್ಯ ಎಂಬ ಬಗ್ಗೆ ಸಮೀಕ್ಷೆ ಆಗಿದೆ. ಗೆಲ್ಲುವ ಯುವ ಅಭ್ಯರ್ಥಿ ಇದ್ದರೆ ಅವರಿಗೆ ಅವಕಾಶ ಸಿಗಲಿದೆ ಎಂದು ಹೇಳಿದರು.
Mangalore MLAs are involved in a 40 percent commission, MLAs have been looting the people slams Veerappa Moily. He alleged that ministers and MLAs are involved in a 40% commission, unlike in the past when MLAs in Dakshina Kannada were never involved in any corruption.
26-08-25 10:47 pm
HK News Desk
ನನ್ನ ಪಕ್ಷ ನಿಷ್ಠೆಯನ್ನು ಪ್ರಶ್ನಿಸುವವರು ಮೂರ್ಖರು ;...
26-08-25 07:07 pm
Dharmasthala, SIT, NIA, Home Minister: ಧರ್ಮಸ್...
26-08-25 06:06 pm
Dharmasthala Case SIT Officer M.N. Anucheth:...
26-08-25 04:48 pm
DK Shivakumar, BBMP, Potholea: ಬೆಂಗಳೂರಿನಲ್ಲಿ...
26-08-25 02:04 pm
26-08-25 09:02 pm
HK News Desk
ಜಮ್ಮು ಭಾರಿ ಮಳೆಗೆ ಒಂಬತ್ತು ಮಂದಿ ಬಲಿ ; ಹಲವೆಡೆ ಭೂ...
26-08-25 07:39 pm
Trump Immigrant Population: ಟ್ರಂಪ್ ಸಾಮ್ರಾಜ್ಯದ...
24-08-25 01:47 pm
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
Mp Brijesh Chowta, Mangalore: ಆನ್ಲೈನ್ ಗೇಮಿಂಗ್...
22-08-25 10:00 pm
26-08-25 10:57 pm
Mangalore Correspondent
Vasanth Giliyar Hate speech, Case: ಬೆಳ್ತಂಗಡಿ...
26-08-25 10:18 pm
Dharmasthala case, Chinmaya, Mahesh Shetty: ದ...
26-08-25 10:36 am
Mangalore, Rushabh Rao: ವಿಯಟ್ನಾಂ ಫ್ಯಾಷನ್ ಶೋ ಸ...
25-08-25 10:59 pm
Mangalore, Esyasoft, AI, Bajpe: ಬಜ್ಪೆ ; ಎಸ್ಯಾ...
25-08-25 10:44 pm
26-08-25 10:39 pm
HK News Desk
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm
How Did Pastor John Shamine and Criminal Mada...
25-08-25 07:31 pm