ಬ್ರೇಕಿಂಗ್ ನ್ಯೂಸ್
25-02-26 03:38 pm HK News Staffer ದೇಶ - ವಿದೇಶ
ಭೋಪಾಲ್, ಫೆ.25: ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಲ್ಲಿ ಇಬ್ಬರು ಮುಸ್ಲಿಂ ಸೋದರಿಯರು ಬ್ಯೂಟೀಶಿಯನ್ ಹೆಸರಲ್ಲಿ ಹಿಂದು ಹುಡುಗಿಯರನ್ನು ಉದ್ಯೋಗಕ್ಕೆ ನೇಮಿಸಿಕೊಂಡು ಅವರನ್ನು ಸೆಕ್ಸ್ ಮತ್ತು ಮತಾಂತರ ಜಾಲಕ್ಕೆ ತಳ್ಳುತ್ತಿದ್ದ ಆಘಾತಕಾರಿ ಮಾಹಿತಿ ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿದೆ.
ಗೆಳೆಯರೊಂದಿಗೆ ಕಳಿಸಿಕೊಟ್ಟು ಅಲ್ಲಿ ಅಮಲೇರಿಸುವ ಪದಾರ್ಥ ಕೊಟ್ಟು ಅತ್ಯಾಚಾರ ಮಾಡುವುದಲ್ಲದೆ, ಅದರ ವಿಡಿಯೋಗಳನ್ನು ಚಿತ್ರೀಕರಿಸಿ ಬ್ಲಾಕ್ಮೇಲ್ ಮಾಡುತ್ತಿದ್ದರು. ನಂತರ ಸಂತ್ರಸ್ತ್ರ ಮಹಿಳೆಯರನ್ನು ಮತಾಂತರಕ್ಕೆ ಒತ್ತಡ ಹೇರುತ್ತಿದ್ದರು. ಬುರ್ಖಾ ಧರಿಸಲು ಒತ್ತಾಯಿಸಿ ಇಸ್ಲಾಂಗೆ ಮತಾಂತರ ಆಗುವಂತೆ ಒತ್ತಡ ಹೇರಿದ್ದರು. ದೂರಿನ ಮೇರೆಗೆ ಪೊಲೀಸರು ಅವರನ್ನು ಬಂಧಿಸಿ ಪ್ರಕರಣದ ತನಿಖೆ ಆರಂಭಿಸಿದ್ದಾರೆ.
ಸಂತ್ರಸ್ತೆಯ ದೂರಿನ ಆಧಾರದಲ್ಲಿ ಭೋಪಾಲ್ ಪೊಲೀಸರು ಇಬ್ಬರು ಸಹೋದರಿಯರು ಸೇರಿದಂತೆ ಆರು ಜನರ ವಿರುದ್ಧ ಧಾರ್ಮಿಕ ಮತಾಂತರ ಮತ್ತು ಅತ್ಯಾಚಾರ ಪ್ರಕರಣವನ್ನು ದಾಖಲಿಸಿದ್ದಾರೆ. ಪೊಲೀಸರು ಸೋದರಿಯರಾದ ಅಮ್ರೀನ್ ಅಲಿಯಾಸ್ ಮಹಿರಾ, ಅಫ್ರೀನ್ ಹಾಗೂ ಇವರ ಗೆಳೆಯ ಚಂದನ್ ಯಾದವ್ ಎಂಬಾತನನ್ನು ಬಂಧಿಸಿದ್ದಾರೆ. ಬಿಲಾಲ್, ಚಾನು ಮತ್ತು ಯಾಸಿರ್‌ಗಾಗಿ ಹುಡುಕಾಟ ನಡೆಯುತ್ತಿದೆ. ಪೊಲೀಸ್ ತಂಡಗಳು ಪ್ರಕರಣವನ್ನು ಕೂಲಂಕಷವಾಗಿ ತನಿಖೆ ನಡೆಸುತ್ತಿವೆ.
ದೂರು ನೀಡಿರುವ ಸಂತ್ರಸ್ತೆ ಛತ್ತೀಸ್‌ಗಢ ನಿವಾಸಿಯಾಗಿದ್ದು ಬ್ಯೂಟಿಷಿಯನ್ ಆಗಿ ಕೆಲಸ ಮಾಡುತ್ತಿದ್ದಳು. ಭೋಪಾಲ್‌ನಲ್ಲಿದ್ದಾಗ ಈ ಜಾಲಕ್ಕೆ ಸಿಲುಕಿದ್ದಳು. ಆಕೆಯ ಪ್ರಕಾರ, ಅಮ್ರೀನ್ ಖಾನ್ ಇಡೀ ಜಾಲದ ಮಾಸ್ಟರ್‌ಮೈಂಡ್ ಆಗಿದ್ದು ಮೊದಲಿಗೆ, ಅಮ್ರೀನ್ ತನ್ನ ಮಗುವನ್ನು ನೋಡಿಕೊಳ್ಳಲು ಸಂತ್ರಸ್ತೆಯನ್ನು ತನ್ನ ಮನೆಯಲ್ಲಿ ಕೆಲಸಕ್ಕೆ ನೇಮಿಸಿಕೊಂಡಿದ್ದಳು. ಅಮ್ರೀನ್ ಇತರ ಹಲವಾರು ಯುವತಿಯರನ್ನು ಸಹ ಇದೇ ರೀತಿ ಬಲೆಗೆ ಬೀಳಿಸಿ ಅವರ ಧರ್ಮವನ್ನು ಮತಾಂತರಿಸುವಂತೆ ಒತ್ತಾಯಿಸಿದ್ದಾಳೆ ಎಂದು ಆರೋಪಿಸಲಾಗಿದೆ.
ಇಲ್ಲಿಯವರೆಗೆ, ಒಬ್ಬ ಮಹಿಳೆ ಮಾತ್ರ ಪೊಲೀಸರಿಗೆ ದೂರು ನೀಡಿದ್ದಾಳೆ. ಭೋಪಾಲ್ ಪೊಲೀಸರು ಅವಳು ಎಷ್ಟು ಇತರ ಹಿಂದೂ ಮಹಿಳೆಯರನ್ನು ಗುರಿಯಾಗಿಸಿಕೊಂಡಿದ್ದಾಳೆ ಎಂದು ತನಿಖೆ ನಡೆಸುತ್ತಿದ್ದಾರೆ. ಸಂತ್ರಸ್ತೆ ತನ್ನ ಪತಿ ಮೃತಪಟ್ಟಿದ್ದು ನನಗೆ ಇಬ್ಬರು ಮಕ್ಕಳಿದ್ದಾರೆ. ನಾನು ಅಡುಗೆ ಕೆಲಸ ಮಾಡುತ್ತಿದ್ದೆ. ಅಮ್ರೀನ್‌ಳನ್ನು ಆಶಿಮಾ ಮಾಲ್‌ನಲ್ಲಿ ಭೇಟಿಯಾದೆ. ಮಕ್ಕಳನ್ನು ನೋಡಿಕೊಳ್ಳಲು ತಿಂಗಳಿಗೆ 10,000 ರೂಪಾಯಿಗಳಿಗೆ ನೇಮಿಸಿಕೊಂಡಳು. ನಂತರ ಅವಳು ನನ್ನನ್ನು ಅಶೋಕ ಗಾರ್ಡನ್‌ನಲ್ಲಿರುವ ತನ್ನ ಮನೆಗೆ ಕರೆದೊಯ್ದಳು. ಅಮ್ರೀನ್ ತನ್ನ ಗೆಳೆಯ ಚಂದನ್ ಜೊತೆ ಅಲ್ಲಿ ವಾಸಿಸುತ್ತಿದ್ದಳು. ಅದೇ ಮನೆಯಲ್ಲಿ ನನ್ನ ಮೇಲೆ ಚಂದನ್ ಅತ್ಯಾಚಾರ ಮಾಡಿದ್ದ ಎಂದು ಸಂತ್ರಸ್ತೆ ಆರೋಪಿಸಿದ್ದಾಳೆ.
03-10-26 05:30 pm
HK News Staffer
Urdu Habba Row: ವಿಧಾನಸೌಧ ಮೆಟ್ಟಿಲುಗಳಲ್ಲಿ ಉರ್ದು...
01-10-26 10:50 pm
‘ಕನ್ನಡದ ಶಿವಮಣಿ’ ಖ್ಯಾತಿಯ ಡ್ರಮ್ಮರ್ ದೇವ್ ನಿಧನ ;...
27-09-26 03:21 pm
ಬೆಂಗಳೂರಿಗೆ ಬಂದ ಶಾಸಕರೆಲ್ಲ ಎರಡೆರಡು ಮದುವೆಯಾಗಿದ್ದ...
25-09-26 04:49 pm
ರಾಜ್ಯ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ; ಬೆಳಗಾವಿ ವಿಟಿ...
25-09-26 03:11 pm
05-10-26 08:56 pm
HK News Staffer
ಪಶ್ಚಿಮ ಬಂಗಾಳದಲ್ಲಿ ಏಕರೂಪ ನಾಗರಿಕ ಸಂಹಿತೆ ; ಲವ್ ಜ...
05-10-26 01:49 pm
ನಾನು ಸಾವಿಗೆ ಅಂಜಲ್ಲ, ವಿಮಾನ ಪತನವೇ ಉದ್ದೇಶವಾಗಿತ್ತ...
05-10-26 11:40 am
Ramesh Chennithala: ಕೇರಳದಲ್ಲಿ ಪಿಡಬ್ಲ್ಯೂಡಿ ರಸ್...
04-10-26 07:07 pm
Smith Machar, benjamin netanyahu: ಸ್ಮಿತ್ ಮಚ್ಚ...
04-10-26 12:34 pm
05-10-26 10:53 pm
Mangaluru Staffer
Mangalore News, Ekkaru Temple, Tirupati Templ...
05-10-26 12:35 pm
'ಮುಳಿಯ ಜುವೆಲ್ಲರಿ' ಮಾಲೀಕ ಪುತ್ತೂರಿನ ಮುಳಿಯ ಶ್ಯಾಮ...
05-10-26 11:41 am
brijesh chowta: ಹೈಕೋರ್ಟ್ ಪೀಠ ಸ್ಥಾಪನೆಗೆ ಒಗ್ಗಟ್...
03-10-26 09:56 pm
Tammanna Shetty, mysore kambala: ಮೈಸೂರು ದಸರಾ...
03-10-26 01:27 pm
05-10-26 08:26 pm
HK News Staffer
ಪುತ್ತೂರಿನಿಂದ ಕೇರಳಕ್ಕೆ ಹಿಂಸಾತ್ಮಕ ರೀತಿಯಲ್ಲಿ 11...
05-10-26 08:24 pm
Udupi News, Indrali Railway Station, Nizamudd...
05-10-26 12:28 pm
Belthangady News, Banakal Accident, Mudigere...
05-10-26 10:49 am
bantwal rain: ಕರಾವಳಿ ಭಾಗದಲ್ಲಿ ಹಿಂಗಾರು ಮಳೆ ಅಬ್...
05-10-26 10:04 am