ಬ್ರೇಕಿಂಗ್ ನ್ಯೂಸ್
22-04-23 07:19 pm Source: Vijayakarnataka ಡಾಕ್ಟರ್ಸ್ ನೋಟ್
ಸಕ್ಕರೆಕಾಯಿಲೆ ಇರುವವರಿಗೆ ತಮ್ಮ ರಕ್ತದ ಸಕ್ಕರೆಯ ಮಟ್ಟವನ್ನು ನಿರ್ವಹಿಸುವುದು ಬಹಳ ಕಷ್ಟ. ಅದರಲ್ಲೂ ತಮ್ಮ ಡಯೆಟ್‌ನ ಬಗ್ಗೆಯೂ ಕಾಳಜಿವಹಿಸಬೇಕಾತ್ತದೆ. ಸಿಕ್ಕ ಸಿಕ್ಕ ಪಾನೀಯಗಳನ್ನು ಸೇವಿಸುವಂತಿಲ್ಲ, ಅನಾರೋಗ್ಯಕರ ಜೀವನಶೈಲಿಯಿಂದ ದೂರವಿರಬೇಕಾಗುತ್ತದೆ. ನೀವು ಕೂಡ ಅಧಿಕ ರಕ್ತದ ಸಕ್ಕರೆ ಮಟ್ಟವನ್ನು ಹೊಂದಿದ್ದರೆ. ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ, ನಿಮ್ಮ ಚಯಾಪಚಯ ಆರೋಗ್ಯವನ್ನು ಸುಧಾರಿಸುವ ಮತ್ತು ನಿಮ್ಮ ಇನ್ಸುಲಿನ್ ಮಟ್ಟವನ್ನು ನೈಸರ್ಗಿಕವಾಗಿ ನಿರ್ವಹಿಸುವ ಸರಳ ಪಾನೀಯ ಇಲ್ಲಿದೆ.
ಹಾಗಲಕಾಯಿ ಮತ್ತು ನೇರಳೆಹಣ್ಣಿನ ಜ್ಯೂಸ್
ಹಾಗಲಕಾಯಿ ಮತ್ತು ನೇರಳೆಹಣ್ಣು ಮಧುಮೇಹಿಗಳಿಗೆ ಉತ್ತಮವಾಗಿದೆ. ಇವುಗಳಿಂದ ತಯಾರಿಸಿದ ಜ್ಯೂಸ್ ಇನ್ಸುಲಿನ್ ಮಟ್ಟವನ್ನು ನಿರ್ವಹಿಸುವುದಲ್ಲದೆ, ಜೀರ್ಣಕಾರಿ ಕಾಯಿಲೆಗಳು, ಚರ್ಮದ ಸಮಸ್ಯೆಗಳು, ವಿಷವನ್ನು ತೆಗೆದುಹಾಕುವುದಲ್ಲದೆ ಆರೋಗ್ಯವನ್ನು ಉತ್ತಮವಾಗಿಡಲು ಸಹಾಯ ಮಾಡುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಚಯಾಪಚಯ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಮಧುಮೇಹಿಗಳಿಗೆ ಹಾಗಲಕಾಯಿ
ಹಾಗಲಕಾಯಿ ಮತ್ತು ನೇರಳೆ ಹಣ್ಣು ಎರಡರಲ್ಲೂ ಅತ್ಯಗತ್ಯ ಪೋಷಕಾಂಶಗಳು ಮತ್ತು ಸಸ್ಯದ ಸಂಯುಕ್ತಗಳು ಹೆಚ್ಚಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಹಾಗಲಕಾಯಿ ಪಾಲಿಪೆಪ್ಟೈಡ್-ಪಿ ಅನ್ನು ಹೊಂದಿರುತ್ತದೆ, ಇದು ಇನ್ಸುಲಿನ್ ಅಸಮತೋಲನವನ್ನು ಸರಿಪಡಿಸುತ್ತದೆ ಮತ್ತು ಅಧಿಕ ರಕ್ತದ ಸಕ್ಕರೆಯನ್ನು ನಿಯಂತ್ರಿಸುತ್ತದೆ. ದೇಹದಲ್ಲಿ ಉರಿಯೂತವನ್ನು ಕಡಿಮೆ ಮಾಡುತ್ತದೆ, ಕೆಲವು ಚರ್ಮದ ಸಮಸ್ಯೆಗಳನ್ನು ಗುಣಪಡಿಸುತ್ತದೆ.
ನೇರಳೆ ಹಣ್ಣಿನ ಪ್ರಯೋಜನಗಳು
ನೇರಳೆ ಹಣ್ಣು ನೈಸರ್ಗಿಕವಾಗಿ ವಿಟಮಿನ್ ಎ, ವಿಟಮಿನ್ ಸಿ, ಬಯೋಟಿನ್ ಮತ್ತು ಸತುವುಗಳಂತಹ ಅಗತ್ಯ ಪೋಷಕಾಂಶಗಳಿಂದ ತುಂಬಿರುತ್ತದೆ. ಇದನ್ನು ಹಾಗಲಕಾಯಿಯ ರಸದೊಂದಿಗೆ ಸೇರಿಸಿದಾಗ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಪೋಷಕಾಂಶಗಳು ಮತ್ತು ಫೈಬರ್‌ಗಳ ಉಪಸ್ಥಿತಿಯು ಚಯಾಪಚಯ ಆರೋಗ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ನಿಯಮಿತವಾಗಿ ಈ ರಸವನ್ನು ಕುಡಿಯುವುದರಿಂದ ಚರ್ಮ ಮತ್ತು ಕೂದಲಿನ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ. ನೀವೂ ಹೆಚ್ಚಿನ ಸಕ್ಕರೆ ಹೊಂದಿದ್ದರೆ ಮನೆಯಲ್ಲಿ ಈ ಪಾನೀಯವನ್ನು ತಯಾರಿಸಬಹುದು.
ಹಾಗಲಕಾಯಿ ಮತ್ತು ನೇರಳೆಹಣ್ಣಿನ ಜ್ಯೂಸ್ ತಯಾರಿಸುವುದು ಹೇಗೆ?
ಮನೆಯಲ್ಲಿ ಈ ಜ್ಯೂಸ್‌ನ್ನು ತಯಾರಿಸಲು ನೀವು ಅರ್ಧ ಹಾಗಲಕಾಯಿ ಮತ್ತು 5 ರಿಂದ 6 ನೇರಳೆಹಣ್ಣುಗಳನ್ನು ತೆಗೆದುಕೊಳ್ಳಿ. ಇವುಗಳನ್ನು ಮಿಕ್ಸಿಗೆ ಹಾಕಿ ರುಬ್ಬಿ ರಸವನ್ನು ಸೋಸಿಕೊಳ್ಳಿ ಮತ್ತು 1 ಟೀಸ್ಪೂನ್ ನಿಂಬೆ ರಸ, ಕಲ್ಲು ಉಪ್ಪು ಸೇರಿಸಿ ಕುಡಿಯಿರಿ.
homemade drinks to manage blood sugar levels.
30-04-25 05:08 pm
Bangalore Correspondent
R Ahsok, Cm Siddaramaiah, Pak: ಕಾಂಗ್ರೆಸ್ನವರಿ...
29-04-25 10:45 pm
CM Siddaramaiah, Belagavi, BJP Suresh Kumar:...
29-04-25 09:51 pm
Protest Kalaburagi, islamabad Locality: ಕಲಬುರ...
29-04-25 09:20 pm
Kudupu Murder, Mob attack, Parameshwar: ಕುಡುಪ...
29-04-25 04:28 pm
30-04-25 03:14 pm
HK News Desk
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
ಪಾಕಿಸ್ತಾನದ ಶಾಂತಿ ಸಮಿತಿ ಕಚೇರಿ ಎದುರೇ ಬಾಂಬ್ ಸ್ಫೋ...
28-04-25 05:53 pm
30-04-25 04:06 pm
Mangalore Correspondent
ಗುಂಪು ಥಳಿತಕ್ಕೆ ಸಾವು ಪ್ರಕರಣ ; ಕೇರಳ ಮೂಲದ ಯುವಕನೆ...
30-04-25 11:26 am
Puttur Elephant Attack: ಕಾಡಾನೆ ತಿವಿತಕ್ಕೆ ಪುತ್...
29-04-25 11:00 pm
Mangalore, Ullal Nethravathi Bridge: ಉಳ್ಳಾಲ ನ...
29-04-25 05:45 pm
Mangalore, Dr Kalladka Bhat: ಹೆಣ್ಣು ಮಕ್ಕಳು ವ್...
29-04-25 12:40 pm
30-04-25 04:09 pm
Mangalore Correspondent
Mangalore Mudipu Murder, Mob, Police, Crime:...
29-04-25 09:59 pm
Kudupu Murder, Mangalore Crime, Police: ಕುಡುಪ...
29-04-25 02:53 pm
Belthagady, Blackmail, Mangalore crime: ಬೆಳ್ತ...
28-04-25 11:39 am
Shootout Bakrebail, Mangalore Crime: ಬಾಕ್ರಬೈಲ...
28-04-25 11:24 am