ಬ್ರೇಕಿಂಗ್ ನ್ಯೂಸ್
06-11-21 12:31 pm Headline Karnataka News Desk ದೇಶ - ವಿದೇಶ
ಮುಂಬೈ, ನ.6: ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಸೇರಿದಂತೆ ನಟ- ನಟಿಯರ ಡ್ರಗ್ಸ್ ಪ್ರಕರಣದಲ್ಲಿ ತನಿಖಾಧಿಕಾರಿಯಾಗಿ ಹೆಸರು ಮಾಡಿದ್ದ ಸಮೀರ್ ವಾಂಖೇಡೆಯನ್ನು ತನಿಖಾಧಿಕಾರಿ ಹೊಣೆಯಿಂದ ಹೊರಗಿಡಲಾಗಿದೆ. ಡ್ರಗ್ಸ್ ಪ್ರಕರಣದಲ್ಲಿ ಸಮೀರ್ ವಿರುದ್ಧ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಎನ್ ಸಿಬಿ ಘಟಕದ ದೆಹಲಿ ಅಧಿಕಾರಿಗಳು ತನಿಖೆಯ ಬಗ್ಗೆ ಪ್ರತ್ಯೇಕ ತಂಡ ರಚಿಸಿದ್ದಾರೆ.
ದೆಹಲಿ ಮಟ್ಟದ ಅಧಿಕಾರಿಗಳು, ಡ್ರಗ್ಸ್ ಪ್ರಕರಣದ ತನಿಖೆಯಿಂದ ಸಮೀರ್ ವಾಂಖೇಡೆ ಅವರನ್ನು ಹೊರಗಿಟ್ಟಿದ್ದಾರೆಂದು ಉನ್ನತ ಮೂಲಗಳ ಮಾಹಿತಿ ಆಧರಿಸಿ ಸಿಎನ್ಎನ್ - ನ್ಯೂಸ್ 18 ವರದಿ ಮಾಡಿದೆ. ಇದಲ್ಲದೆ, ಇತರ ನಾಲ್ಕು ಹೈ ಪ್ರೊಫೈಲ್ ಪ್ರಕರಣದ ತನಿಖೆಯಿಂದಲೂ ಸಮೀರ್ ಅವರನ್ನು ಹೊರಗಿಡಲಾಗಿದೆ. ಸಮೀರ್ ವಾಂಖೇಡೆ ಅವರು ಎನ್ ಸಿಬಿ ಮುಂಬೈ ಘಟಕದ ವಲಯ ಮುಖ್ಯಸ್ಥರಾಗಿದ್ದು ಎರಡು ವರ್ಷಗಳಲ್ಲಿ ಹಲವಾರು ಪ್ರಕರಣಗಳನ್ನು ಸಮರ್ಥವಾಗಿ ಎದುರಿಸಿ ಹಲವು ಖ್ಯಾತ ನಾಮರ ಡ್ರಗ್ಸ್ ನಂಟನ್ನು ಬಯಲಿಗೆಳೆದಿದ್ದರು.
ಸಮೀರ್ ವಾಂಖೇಡೆ ವಿರುದ್ಧ ಮಹಾರಾಷ್ಟ್ರ ಸರಕಾರದಲ್ಲಿ ಸಚಿವರಾಗಿರುವ ನವಾಬ್ ಮಲಿಕ್ ಗಂಭೀರ ಆರೋಪ ಹೊರಿಸಿದ್ದರು. ತಮ್ಮ ಗುರುತು ಮರೆಮಾಚಿ, ನಕಲಿ ದಾಖಲೆಗಳನ್ನು ಆಧರಿಸಿ ಕೆಲಸ ಗಿಟ್ಟಿಸಿಕೊಂಡಿದ್ದರು. ಮೂಲತಃ ಮುಸ್ಲಿಂ ಆಗಿದ್ದರೂ ದಲಿತ ಕೋಟಾದಲ್ಲಿ ಅಧಿಕಾರಿ ಹುದ್ದೆಗೇರಿದ್ದರು. ಅಲ್ಲದೆ, ಬೋಗಸ್ ಡ್ರಗ್ಸ್ ಪ್ರಕರಣದಲ್ಲಿ ಹಲವರನ್ನು ಸಿಲುಕಿಸಿದ್ದಾರೆ ಎಂದು ಆರೋಪಿಸಿದ್ದರು. ಇದೇ ವೇಳೆ, ಆರ್ಯನ್ ಖಾನ್ ಪ್ರಕರಣದಲ್ಲಿ ಆತನನ್ನು ಪ್ರಕರಣದಿಂದ ಬಚಾವ್ ಮಾಡಲು 25 ಕೋಟಿ ಲಂಚ ಕೇಳಿದ್ದರು ಎಂಬ ಆರೋಪವೂ ಕೇಳಿಬಂದಿತ್ತು.
ಆದರೆ, ಇವೆಲ್ಲ ಆರೋಪಗಳನ್ನು ನಿರಾಕರಿಸಿದ್ದ ಸಮೀರ್ ವಾಂಖೇಡೆ ದೆಹಲಿಗೆ ತೆರಳಿ ತನ್ನ ಬಗೆಗಿನ ಆರೋಪಗಳ ಬಗ್ಗೆ ಮೇಲಧಿಕಾರಿಗಳಿಗೆ ಉತ್ತರ ನೀಡಿದ್ದರು. ಸಮೀರ್ ಮತ್ತು ತಂಡದ ವಿರುದ್ಧದ ಆರೋಪಗಳ ಬಗ್ಗೆ ಇಲಾಖಾ ತನಿಖೆ ನಡೆಸಲು ನಿರ್ಧರಿಸಲಾಗಿದ್ದು, ಈಗಾಗ್ಲೇ ತನಿಖೆ ಆರಂಭಗೊಂಡಿದೆ. ಇದೇ ವೇಳೆ, ಡ್ರಗ್ಸ್ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ. ಹಡಗಿನಲ್ಲಿ ಡ್ರಗ್ಸ್ ಪತ್ತೆ ಸೇರಿದಂತೆ ಐದು ಡ್ರಗ್ಸ್ ಪ್ರಕರಣಗಳು ರಾಷ್ಟ್ರ ಮಟ್ಟ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಲಿಂಕ್ ಗಳನ್ನು ಹೊಂದಿದೆ ಎಂದು ಅಧಿಕಾರಿಗಳು ಅಭಿಪ್ರಾಯ ಪಟ್ಟಿದ್ದಾರೆ.
ಸಮೀರ್ ವಾಂಖೇಡೆ ವಿರುದ್ಧದ ಆರೋಪಗಳ ಬಗ್ಗೆ ತನಿಖೆ ನಡೆಸಲು ಎನ್ ಸಿಬಿ ಡೆಪ್ಯುಟಿ ಡೈರೆಕ್ಟರ್ ಜನರಲ್ ಗ್ಯಾನೇಶ್ವರ್ ಸಿಂಗ್ ಅವರನ್ನು ನೇಮಕ ಮಾಡಲಾಗಿದೆ. ಆರ್ಯನ್ ಖಾನ್ ಪ್ರಕರಣದಲ್ಲಿ ಕೇಳಿಬಂದಿರುವ ಆರೋಪಗಳು ಸೇರಿದಂತೆ ಇನ್ನಿತರ ವಿಚಾರಗಳ ಬಗ್ಗೆ ಸಿಂಗ್ ವಿಜಿಲೆನ್ಸ್ ತನಿಖೆ ನಡೆಸಲಿದ್ದಾರೆ. ತನಿಖೆಯ ಹೊಣೆಯನ್ನು ಮಾತ್ರ ಬೇರೆಯವರಿಗೆ ವಹಿಸಲಾಗಿದೆ. ಸಮೀರ್, ಮುಂಬೈ ಎನ್ ಸಿಬಿ ಘಟಕದ ಝೋನಲ್ ಡೈರೆಕ್ಟರ್ ಆಗಿಯೇ ಮುಂದುವರಿಯಲಿದ್ದಾರೆ.
Six cases being investigated by NCB officer Sameer Wankhede - including the Aryan Khan drugs case - have been transferred out of the agency's Mumbai unit amid allegations of extortion and a Rs 8 crore payoff linked to the case involving Bollywood star Shah Rukh Khan's son.
08-10-25 11:04 pm
Bangalore Correspondent
ಕಳ್ಳತನ ಪ್ರಕರಣದಲ್ಲಿ ರಿಕವರಿ ಮಾಡಿದ್ದ 2 ಕಿಲೋ ಚಿನ್...
08-10-25 09:21 am
ಪರಿಶಿಷ್ಟ ಜಾತಿಗೆ ಸೇರಿದವರು ಬೌದ್ಧ ಧರ್ಮಕ್ಕೆ ಮತಾಂತ...
07-10-25 11:20 pm
Big Boss, Prashanth Sambargi, Dk Shivakumar,...
07-10-25 10:49 pm
Big Boss Kannada, Close, Update: ಬಿಗ್ ಬಾಸ್ ಮನ...
07-10-25 10:18 pm
08-10-25 08:57 pm
HK News Desk
Nirmala Sitharaman, Cybersecurity: ನನ್ನ ಹೆಸರಿ...
08-10-25 08:40 pm
ಕೆಮ್ಮಿನ ಸಿರಪ್ ಸೇವಿಸಿ ಮಧ್ಯಪ್ರದೇಶದಲ್ಲಿ ಮತ್ತೆ ಆರ...
08-10-25 05:49 pm
ಹಿಮಾಚಲ ಪ್ರದೇಶದಲ್ಲಿ ಭಾರೀ ಭೂಕುಸಿತ ; ಅವಶೇಷಗಳಡಿ ಸ...
08-10-25 09:24 am
ಚಿನ್ನ ಅಡವಿಟ್ಟು ಸಾಲ ; ಕಳೆನಾಶಕ ಕೆಮಿಕಲ್ ಸೇವಿಸಿ ದ...
07-10-25 11:16 pm
08-10-25 10:09 pm
Mangalore Correspondent
ಸಮೀಕ್ಷೆ ನಡೆಸಲು ರಾಜ್ಯ ಸರ್ಕಾರಕ್ಕೆ ಹಕ್ಕಿದೆ, ಸಹಕಾ...
08-10-25 06:07 pm
ತಲಪಾಡಿಯಲ್ಲಿ ಮಾನವ ಅಸ್ಥಿಪಂಜರ ಪತ್ತೆ ಪ್ರಕರಣ ; ಬಿಹ...
07-10-25 11:14 pm
Mangaluru, Sudheer Reddy: ಶಾರದೋತ್ಸವ ಗೊಂದಲ ಇತ್...
07-10-25 10:54 pm
Ullal News, Mangalore, BJP, Police: ಉಳ್ಳಾಲ ಶಾ...
07-10-25 05:17 pm
08-10-25 08:47 pm
HK News Desk
ಸುರತ್ಕಲ್, ಮೂಡುಬಿದ್ರೆಯಲ್ಲಿ ಅಕ್ರಮ ಕಸಾಯಿಖಾನೆಗೆ ಪ...
08-10-25 12:23 pm
ಉಡುಪಿಯಲ್ಲಿ ಶಾಲಾ, ಕಾಲೇಜು ಬಸ್ಗಳ ನಕಲಿ ವಿಮಾ ಜಾಲ...
08-10-25 09:17 am
ಸುರತ್ಕಲ್ ನಲ್ಲಿ ಪಿಕಪ್ ಕಳವು ; ಅಂತರಾಜ್ಯ ಕುಖ್ಯಾತ...
07-10-25 10:13 pm
Kasaragod Gang War, Crime: ಕುಂಬಳೆ ಸೀತಾಂಗೋಳಿಯಲ...
07-10-25 10:31 am