ಬ್ರೇಕಿಂಗ್ ನ್ಯೂಸ್
05-11-21 11:34 am Headline Karnataka News Desk ದೇಶ - ವಿದೇಶ
ನವದೆಹಲಿ, ನ.5: ದೀಪಾವಳಿ ಪಟಾಕಿ ಸಿಡಿಸಿದ ಬೆನ್ನಲ್ಲೇ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯ ವಿಪರೀತ ಮಟ್ಟಕ್ಕೆ ಹೋಗಿದೆ. ಮೊದಲೇ ವಾಹನಗಳ ಭರಾಟೆಯಿಂದಾಗಿ ಗಬ್ಬೆದ್ದು ಹೋಗಿದ್ದ ಪರಿಸರ ಇಂದು ವೈಪರೀತ್ಯ ಸೃಷ್ಟಿಸಿದೆ. ದಟ್ಟವಾದ ಕಪ್ಪು ಹೊಗೆ ರಸ್ತೆಗಳ ತುಂಬ ಆವರಿಸಿದ್ದು ಕೆಲವು ಕಡೆಗಳಲ್ಲಿ ಜನರ ಉಸಿರಾಟಕ್ಕೆ ತೊಂದರೆಯಾಗಿದೆ.
ಪಟಾಕಿ ಸಿಡಿಸಬಾರದು ಎಂದು ದೆಹಲಿ ಸರಕಾರ ನಿಷೇಧ ವಿಧಿಸಿದ್ದರೂ, ಅಲ್ಲಿನ ಜನರು ಎಚ್ಚರಿಕೆಯನ್ನು ನಿರ್ಲಕ್ಷಿಸಿ ಪಟಾಕಿ ಸಿಡಿಸಿದ್ದಾರೆ. ಇದರಿಂದಾಗಿ ಕೆಲವು ಏರಿಯಾಗಳಲ್ಲಿ ದಟ್ಟ ಹೊಗೆ ಆವರಿಸಿದೆ. ಇದರ ಪರಿಣಾಮ ದೆಹಲಿಯ ವಾಯು ಗುಣಮಟ್ಟ ತೀವ್ರ ಕುಸಿತಗೊಂಡಿದೆ. ವಾಯು ಗುಣಮಟ್ಟ ಪ್ರಮಾಣ ಇಂದು ಬೆಳಗ್ಗೆ ಏಳು ಗಂಟೆ ಸುಮಾರಿಗೆ 617ಕ್ಕೆ ಕುಸಿದಿದ್ದು ಗಂಭೀರ ಸ್ಥಿತಿಗೆ ತಲುಪಿದ್ದಾಗಿ ವಾಯು ಗುಣಮಟ್ಟ ಮತ್ತು ಹವಾಮಾನ ಮುನ್ಸೂಚನೆ ಹಾಗೂ ಸಂಶೋಧನಾ ಏಜನ್ಸಿ (SAFAR) ಹೇಳಿಕೆ ಬಿಡುಗಡೆ ಮಾಡಿದೆ.
ಜನಪಥ್ ರಸ್ತೆಯಲ್ಲಿ ಶುಕ್ರವಾರ ನಸುಕಿನ ಮೂರು ಗಂಟೆ ವೇಳೆಗೆ ವಾಯು ಗುಣಮಟ್ಟ 655 ಪಾಯಿಂಟ್ ಗೆ ಕುಸಿದಿತ್ತು ಎಂದು ಸಂಶೋಧನಾ ಏಜನ್ಸಿ ಹೇಳಿದೆ. ಏರ್ ಕ್ವಾಲಿಟಿ ಇಂಡೆಕ್ಸ್ (ಎಕ್ಯುಐ) ಎನ್ನುವುದು ವಾಯು ಮಾಲಿನ್ಯ ಮತ್ತು ಗಾಳಿಯ ಗುಣಮಟ್ಟದ ಬಗ್ಗೆ ಸರಕಾರಿ ಏಜನ್ಸಿಗಳು ಬಳಕೆ ಮಾಡುವ ಸೂಚ್ಯಂಕ. ಅತಿ ಹೆಚ್ಚು ಏಕ್ಯುಐ ಅಂದರೆ, ಜನರ ಉಸಿರಾಟಕ್ಕೆ ತೊಂದರೆ ಆಗಬಲ್ಲ ಮತ್ತು ರೋಗಗಳಿಗೆ ಕಾರಣವಾಗಬಲ್ಲ ಸ್ಥಿತಿ ಎಂದರ್ಥ. ಮೊದಲ 50ರ ವರೆಗಿನ ವಾಯು ಗುಣಮಟ್ಟವನ್ನು ಉತ್ತಮ ಎಂದು ಪರಿಗಣಿಸಿದ್ದರೆ, ಆನಂತರದ 51ರಿಂದ 100ರ ವರೆಗಿನ ಮಟ್ಟವನ್ನು ಸಾಮಾನ್ಯ ಎಂದು ಪರಿಗಣಿಸಲಾಗಿದೆ. 101ರಿಂದ 200ರ ವರೆಗಿನ ವಾಯು ಮಾಲಿನ್ಯ ಅಂದರೆ ತಾಳಿಕೊಳ್ಳಬಲ್ಲ ಎಂದು ನಿರ್ಧಾರಕ್ಕೆ ಬಂದಿದ್ದರೆ, ಆನಂತರದ 201ರಿಂದ 300 ನಡುವಿನದನ್ನು ಕೆಟ್ಟದು ಮತ್ತು 300ರಿಂದ 400 ಅತಿ ಕೆಟ್ಟದಾಗಿರುವ ವಾಯುಮಾಲಿನ್ಯ ಎಂದು ಪರಿಗಣಿಸಲಾಗಿದೆ. 400ರಿಂದ 500ರ ಮಧ್ಯದ ಸ್ಥಿತಿಯನ್ನು ಗಂಭೀರ ಪರಿಸ್ಥಿತಿ ಎಂದು ಪರಿಗಣಿಸಲಾಗಿದೆ.
ವಾಯುಮಾಲಿನ್ಯ ಬಗ್ಗೆ ಸಂಶೋಧನೆ ನಡೆಸುವ ಸಫರ್ ಏಜನ್ಸಿಯ ಪ್ರಕಾರ, ಮೊನ್ನೆ ಸೋಮವಾರ ದೆಹಲಿಯ ವಾಯು ಗುಣಮಟ್ಟ 281 ಇತ್ತು. ಮರುದಿನ ಮಂಗಳವಾರ 303, ಬುಧವಾರ 314 ಮತ್ತು ಗುರುವಾರ ಬೆಳಗ್ಗೆ ಎಕ್ಯುಐ ಗುಣಮಟ್ಟ 382 ಪಾಯಿಂಟ್ ಆಗಿತ್ತು. ದಿನವೂ 24 ಗಂಟೆಗಳ ಆಧಾರದಲ್ಲಿ ಎಕ್ಯುಐ ಇಂಡೆಕ್ಸ್ ಅನ್ನುವ ಏಜನ್ಸಿ ಪ್ರಕಟಿಸುತ್ತದೆ. ಆದರೆ, ಗುರುವಾರದಿಂದ ಶುಕ್ರವಾರ ಬೆಳಗ್ಗಿನ ನಡುವಿನ ಇಂಡೆಕ್ಸ್ ವಿಪರೀತ (617 ಪಾಯಿಂಟ್) ಆಗಿದ್ದು, ತೀವ್ರ ಹದಗೆಟ್ಟಿರುವುದನ್ನು ಸೂಚಿಸಿದೆ.
ದೆಹಲಿಯ ಹಲವು ಭಾಗಗಳಲ್ಲಿ ಹೊಗೆ ಆವರಿಸಿದ ಕಾರಣ ಜನರಿಗೆ ಕಣ್ಣು ತುರಿಕೆ, ಕಣ್ಣಲ್ಲಿ ನೀರು ಬರುವುದು, ಕೆಂಪಾಗಿ ಉರಿಯುವುದು ಲಕ್ಷಣ ಎದುರಾಗಿದೆ. ದೆಹಲಿ ಸರಕಾರ ಮುಂದಿನ ಜನವರಿ ವರೆಗೂ ಪಟಾಕಿ ಸಿಡಿಸುವುದನ್ನು ನಿಷೇಧಿಸಿದ್ದರೂ, ದೀಪಾವಳಿ ಹಿನ್ನೆಲೆಯಲ್ಲಿ ಗುರುವಾರ ಸಂಜೆ ಬಹುತೇಕ ಕಡೆ ಪಟಾಕಿ ಉರಿಸಲಾಗಿತ್ತು. ಇದರಿಂದ ಮೊದಲೇ ಗರಿಷ್ಠ ಸೂಚ್ಯಂಕ ಎದುರಿಸುತ್ತಿರುವ ದೆಹಲಿಯಲ್ಲಿ ತೀವ್ರ ಮಾಲಿನ್ಯ ಎದುರಾಗಿದೆ.
ಈ ಬಾರಿ ದೀಪಾವಳಿಗೆ ಪಟಾಕಿ ಉರಿಸಬಾರದು ಎಂಬ ನೆಲೆಯಲ್ಲಿ ದೆಹಲಿ ಸರಕಾರ ಪಟಾಕೇ ನಹೀ ದಿಯೇ ಜಲಾವೋ ಎನ್ನುವ ಹೆಸರಲ್ಲಿ ಕಳೆದ ಅಕ್ಟೋಬರ್ 27ರಂದು ಅಭಿಯಾನ ನಡೆಸಿತ್ತು. ಈ ವೇಳೆ, ಅಧಿಕಾರಿಗಳು ವಿವಿಧ ಕಡೆಗಳಲ್ಲಿ ದಾಳಿ ನಡೆಸಿದ್ದು ಅಕ್ರಮವಾಗಿ ಶೇಖರಣೆ ಮಾಡಿದ್ದ 13 ಸಾವಿರ ಕೇಜಿ ಪಟಾಕಿಗಳನ್ನು ವಶಕ್ಕೆ ಪಡೆದು, 33 ಮಂದಿಯನ್ನು ಬಂಧಿಸಿದ್ದರು. ಅಭಿಯಾನದ ಸಂದರ್ಭದಲ್ಲಿ ಯಾರೇ ಆದ್ರೂ ಪಟಾಕಿ ಉರಿಸಿದ್ದು ಕಂಡುಬಂದರೆ ಸ್ಫೋಟಕ ಕಾಯ್ದೆಯಡಿ ಕ್ರಮ ಜರುಗಿಸುವುದಾಗಿ ಹೇಳಿದ್ದರು. ಎಚ್ಚರಿಕೆ ನಡುವೆಯೂ ವಿವಿಧ ಕಡೆಗಳಲ್ಲಿ ಜನರು ಪಟಾಕಿ ಉರಿಸಿ ಮಾಲಿನ್ಯಕ್ಕೆ ಕಾರಣವಾಗಿದ್ದಾರೆ.
The air quality in Delhi was recorded in the “hazardous” category at Janpath in the city early on Friday, a day after the celebrations of Diwali. The particulate matter (PM) 2.5 concentration was recorded at 655.07 in Janpath on Friday morning, according to news agency ANI. As per government standards, PM 2.5 concentrations over 380 are marked as “severe.”
08-10-25 11:04 pm
Bangalore Correspondent
ಕಳ್ಳತನ ಪ್ರಕರಣದಲ್ಲಿ ರಿಕವರಿ ಮಾಡಿದ್ದ 2 ಕಿಲೋ ಚಿನ್...
08-10-25 09:21 am
ಪರಿಶಿಷ್ಟ ಜಾತಿಗೆ ಸೇರಿದವರು ಬೌದ್ಧ ಧರ್ಮಕ್ಕೆ ಮತಾಂತ...
07-10-25 11:20 pm
Big Boss, Prashanth Sambargi, Dk Shivakumar,...
07-10-25 10:49 pm
Big Boss Kannada, Close, Update: ಬಿಗ್ ಬಾಸ್ ಮನ...
07-10-25 10:18 pm
08-10-25 08:57 pm
HK News Desk
Nirmala Sitharaman, Cybersecurity: ನನ್ನ ಹೆಸರಿ...
08-10-25 08:40 pm
ಕೆಮ್ಮಿನ ಸಿರಪ್ ಸೇವಿಸಿ ಮಧ್ಯಪ್ರದೇಶದಲ್ಲಿ ಮತ್ತೆ ಆರ...
08-10-25 05:49 pm
ಹಿಮಾಚಲ ಪ್ರದೇಶದಲ್ಲಿ ಭಾರೀ ಭೂಕುಸಿತ ; ಅವಶೇಷಗಳಡಿ ಸ...
08-10-25 09:24 am
ಚಿನ್ನ ಅಡವಿಟ್ಟು ಸಾಲ ; ಕಳೆನಾಶಕ ಕೆಮಿಕಲ್ ಸೇವಿಸಿ ದ...
07-10-25 11:16 pm
08-10-25 10:09 pm
Mangalore Correspondent
ಸಮೀಕ್ಷೆ ನಡೆಸಲು ರಾಜ್ಯ ಸರ್ಕಾರಕ್ಕೆ ಹಕ್ಕಿದೆ, ಸಹಕಾ...
08-10-25 06:07 pm
ತಲಪಾಡಿಯಲ್ಲಿ ಮಾನವ ಅಸ್ಥಿಪಂಜರ ಪತ್ತೆ ಪ್ರಕರಣ ; ಬಿಹ...
07-10-25 11:14 pm
Mangaluru, Sudheer Reddy: ಶಾರದೋತ್ಸವ ಗೊಂದಲ ಇತ್...
07-10-25 10:54 pm
Ullal News, Mangalore, BJP, Police: ಉಳ್ಳಾಲ ಶಾ...
07-10-25 05:17 pm
08-10-25 08:47 pm
HK News Desk
ಸುರತ್ಕಲ್, ಮೂಡುಬಿದ್ರೆಯಲ್ಲಿ ಅಕ್ರಮ ಕಸಾಯಿಖಾನೆಗೆ ಪ...
08-10-25 12:23 pm
ಉಡುಪಿಯಲ್ಲಿ ಶಾಲಾ, ಕಾಲೇಜು ಬಸ್ಗಳ ನಕಲಿ ವಿಮಾ ಜಾಲ...
08-10-25 09:17 am
ಸುರತ್ಕಲ್ ನಲ್ಲಿ ಪಿಕಪ್ ಕಳವು ; ಅಂತರಾಜ್ಯ ಕುಖ್ಯಾತ...
07-10-25 10:13 pm
Kasaragod Gang War, Crime: ಕುಂಬಳೆ ಸೀತಾಂಗೋಳಿಯಲ...
07-10-25 10:31 am