ಬ್ರೇಕಿಂಗ್ ನ್ಯೂಸ್
07-09-21 02:40 pm Headline Karnataka News Network ದೇಶ - ವಿದೇಶ
ಕಾಬೂಲ್, ಸೆ.7: ರಾಜಧಾನಿ ಕಾಬೂಲ್ ನಲ್ಲಿ ನೂರಾರು ಮಹಿಳೆಯರು ಪ್ರತಿಭಟನಾ ಮೆರವಣಿಗೆ ನಡೆಸಿದ್ದು, ಪಾಕಿಸ್ಥಾನ ಮತ್ತು ಅದರ ಗುಪ್ತಚರ ಸಂಸ್ಥೆ ಐಎಸ್ಐ ವಿರುದ್ಧ ಘೋಷಣೆ ಹಾಕಿದ್ದಾರೆ. ಪಂಜ್ ಶೀರ್ ಪ್ರಾಂತ್ಯದಲ್ಲಿ ಹೋರಾಡುತ್ತಿರುವ ಪ್ರತಿರೋಧ ಪಡೆಯ ವಿರುದ್ಧ ಪಾಕಿಸ್ಥಾನಿ ಸೈನಿಕರು ಎರಗಿದ್ದನ್ನು ವಿರೋಧಿಸಿ, ಪ್ರತಿಭಟನೆ ನಡೆಸಿದ್ದಾರೆ. ಪಾಕಿಸ್ಥಾನ ಮತ್ತು ಐಎಸ್ಐ ವಿರುದ್ಧ ಘೋಷಣೆ ಕೂಗುತ್ತಾ ರಸ್ತೆಯಲ್ಲಿ ಮೆರವಣಿಗೆ ನಡೆಸಿದ್ದಾರೆ.
ನೂರಾರು ಮಹಿಳೆಯರು ಬೀದಿಗಿಳಿದು ಪ್ರತಿಭಟನೆ ನಡೆಸಿದ ವೇಳೆ ತಾಲಿಬಾನ್ ಸೈನಿಕರು ಗಾಳಿಯಲ್ಲಿ ಗುಂಡು ಹಾರಿಸಿದ್ದು, ಜನರಲ್ಲಿ ಭಯ ಸೃಷ್ಟಿಸಿದ್ದಾರೆ. ಗುಂಡು ಹಾರುತ್ತಿದ್ದಂತೆ, ಮಹಿಳೆಯರು ದಿಕ್ಕಾಪಾಲು ಓಡಿ ತಪ್ಪಿಸಿಕೊಳ್ಳುತ್ತಿರುವ ವಿಡಿಯೋಗಳನ್ನು ಅಲ್ಲಿನ ಸ್ಥಳೀಯ ಮಾಧ್ಯಮಗಳು ಟ್ವಿಟರ್ ನಲ್ಲಿ ಹಂಚಿಕೊಂಡಿವೆ. ರಾಜಧಾನಿ ಕಾಬೂಲ್ ನಲ್ಲಿರುವ ಅಧ್ಯಕ್ಷರ ಅರಮನೆಯ ಹೊರಗೆ ಮಹಿಳೆಯರು ಸೇರಿದ್ದು, ಘೋಷಣೆ ಕೂಗಿದ್ದಾರೆ. ಅಲ್ಲದೆ, ಕಳೆದ ಒಂದು ವಾರದಿಂದ ಪಾಕಿಸ್ಥಾನದ ಐಎಸ್ಐ ಮುಖ್ಯಸ್ಥ ಉಳಿದುಕೊಂಡಿರುವ ಕಾಬೂಲಿನ ಸೆರೆನಾ ಹೊಟೇಲ್ ಮುಂದುಗಡೆಯೇ ಮಹಿಳೆಯರು ಪಾಕಿಸ್ಧಾನ ಮತ್ತು ಐಎಸ್ಐ ವಿರುದ್ಧ ಘೋಷಣೆ ಕೂಗುತ್ತಾ ಸಾಗಿದ್ದಾರೆ.
#Breaking (Asvaka Exclusive)
— Aśvaka - آسواکا News Agency (@AsvakaNews) September 7, 2021
Happening now near Presidential Palace.
Taliban open fire on anti-Pakistan protesters who were marching towards ARG & Kabul Serena Hotel where the #Pak ISI director is living. pic.twitter.com/XvtMcM3OcI
ಮುಖಕ್ಕೆ ಮಾಸ್ಕ್ ಮತ್ತು ಬುರ್ಖಾ ಧರಿಸಿದ್ದ ಮಹಿಳೆಯರು ಆಕ್ರೋಶಭರಿತರಾಗಿ ಪಾಕಿಸ್ಥಾನ ಸಾವು ಬರಲಿ, ಆಝಾದಿ ಆಝಾದಿ ಎನ್ನುತ್ತಾ ಘೋಷಣೆ ಕೂಗಿದ್ದಾರೆ. ಒಂದು ವಿಡಿಯೋದಲ್ಲಿ ಮಹಿಳೆ ಮಾತನಾಡುತ್ತಾ, ತಾಲಿಬಾನ್ ಆಗಲೀ, ಪಾಕಿಸ್ಥಾನ ಆಗಲೀ ಯಾರಿಗೂ ಪಂಜ್ ಶೀರ್ ಒಳಗೆ ನುಗ್ಗುವ ಹಕ್ಕು ಇಲ್ಲ ಎಂದು ಹೇಳಿದ್ದಾಳೆ. ತಾಲಿಬಾನ್ ಪಡೆಗಳು ಸೋಮವಾರ ಪಂಜ್ ಶೀರ್ ಪ್ರಾಂತ್ಯವನ್ನು ಸಂಪೂರ್ಣ ಹಿಡಿತಕ್ಕೆ ತೆಗೆದುಕೊಂಡಿದ್ದೇವೆ ಎಂದು ಹೇಳಿಕೊಂಡ ಬೆನ್ನಲ್ಲೇ ಮಹಿಳೆಯರು ಈ ರೀತಿ ಪ್ರತಿಭಟನೆ ನಡೆಸಿದ್ದಾರೆ.
#BREAKING
— Muslim Shirzad (@MuslimShirzad) September 7, 2021
Female Protester in Kabul: “No one has the right to invade #Panjshir, neither Pakistan nor the Taliban. Long live the resistance.” https://t.co/puKGQryeMh
Anger mounting on the streets of Kabul, people chanting "freedom" and "death to Pakistan". The demonstrators, many of them women, are in the centre of the Afghan capital #Afghanistan pic.twitter.com/Jg5RDzFsiA
— Yalda Hakim (@BBCYaldaHakim) September 7, 2021
Hundreds of Afghans, mostly women, took to the streets of Kabul on Tuesday in an anti-Pakistan rally in which they chanted slogans against Islamabad and ISI. As the protests intensified, the Taliban opened fire on the rally.
08-10-25 09:21 am
Bangalore Correspondent
ಪರಿಶಿಷ್ಟ ಜಾತಿಗೆ ಸೇರಿದವರು ಬೌದ್ಧ ಧರ್ಮಕ್ಕೆ ಮತಾಂತ...
07-10-25 11:20 pm
Big Boss, Prashanth Sambargi, Dk Shivakumar,...
07-10-25 10:49 pm
Big Boss Kannada, Close, Update: ಬಿಗ್ ಬಾಸ್ ಮನ...
07-10-25 10:18 pm
Big Boss Kannada Closed: ಕನ್ನಡ ಶೋ ಬಿಗ್ ಬಾಸ್ ಗ...
07-10-25 07:32 pm
08-10-25 05:49 pm
HK News Desk
ಹಿಮಾಚಲ ಪ್ರದೇಶದಲ್ಲಿ ಭಾರೀ ಭೂಕುಸಿತ ; ಅವಶೇಷಗಳಡಿ ಸ...
08-10-25 09:24 am
ಚಿನ್ನ ಅಡವಿಟ್ಟು ಸಾಲ ; ಕಳೆನಾಶಕ ಕೆಮಿಕಲ್ ಸೇವಿಸಿ ದ...
07-10-25 11:16 pm
ವಿಶ್ವಸಂಸ್ಥೆ ಮಹಾಧಿವೇಶನಕ್ಕೆ ಪಿಪಿ ಚೌಧರಿ ನೇತೃತ್ವದ...
07-10-25 01:53 pm
ಮೊಘಲ್ ಆಕ್ರಮಣದಿಂದ ವಿಷ್ಣು ಮೂರ್ತಿ ಭಗ್ನ ; ಪ್ರತಿಮೆ...
06-10-25 07:56 pm
08-10-25 06:07 pm
Mangalore Correspondent
ತಲಪಾಡಿಯಲ್ಲಿ ಮಾನವ ಅಸ್ಥಿಪಂಜರ ಪತ್ತೆ ಪ್ರಕರಣ ; ಬಿಹ...
07-10-25 11:14 pm
Mangaluru, Sudheer Reddy: ಶಾರದೋತ್ಸವ ಗೊಂದಲ ಇತ್...
07-10-25 10:54 pm
Ullal News, Mangalore, BJP, Police: ಉಳ್ಳಾಲ ಶಾ...
07-10-25 05:17 pm
Talapady, Mangalore, Crime: ತಲಪಾಡಿ ಅಕ್ಷಯ ಫಾರ್...
07-10-25 05:04 pm
08-10-25 12:23 pm
Mangalore Correspondent
ಉಡುಪಿಯಲ್ಲಿ ಶಾಲಾ, ಕಾಲೇಜು ಬಸ್ಗಳ ನಕಲಿ ವಿಮಾ ಜಾಲ...
08-10-25 09:17 am
ಸುರತ್ಕಲ್ ನಲ್ಲಿ ಪಿಕಪ್ ಕಳವು ; ಅಂತರಾಜ್ಯ ಕುಖ್ಯಾತ...
07-10-25 10:13 pm
Kasaragod Gang War, Crime: ಕುಂಬಳೆ ಸೀತಾಂಗೋಳಿಯಲ...
07-10-25 10:31 am
Kali Yogish, Arrest, Mangalore: ಮಂಗಳೂರು, ಮೈಸೂ...
05-10-25 03:22 pm