ಬ್ರೇಕಿಂಗ್ ನ್ಯೂಸ್
27-08-21 01:13 pm Headline Karnataka News Network ದೇಶ - ವಿದೇಶ
ನವದೆಹಲಿ, ಆಗಸ್ಟ್ 27: ತಾಲಿಬಾನಿ ಐಡಿಯಾಲಜಿ ಭಾರತಕ್ಕೆ ದೊಡ್ದ ಬೆದರಿಕೆಯಾಗಿದ್ದು ಅಫ್ಘಾನಿಸ್ತಾನದ ಯಾವುದೇ ಮುಸ್ಲಿಮರಿಗೆ ಭಾರತದಲ್ಲಿ ಆಶ್ರಯ ನೀಡಬಾರದು ಎಂದು ಅಂತರಾಷ್ಟ್ರೀಯ ಹಿಂದು ಪರಿಷದ್ ಮುಖ್ಯಸ್ಥ ಪ್ರವೀಣ್ ತೊಗಡಿಯಾ ಕೇಂದ್ರ ಸರಕಾರವನ್ನು ಆಗ್ರಹಿಸಿದ್ದಾರೆ.
ತಾಲಿಬಾನಿ ಸಿದ್ಧಾಂತದ ಕೇಂದ್ರ ಸ್ಥಾನ ಭಾರತದಲ್ಲಿದೆ. ಇದೇ ಐಡಿಯಾಲಜಿ ದೇಶದ ಭವಿಷ್ಯಕ್ಕೆ ಮಾರಕವಾಗಲಿದೆ. ದೇಶದಲ್ಲಿ ತಾಲಿಬಾನೀಕರಣ ಆಗುವುದನ್ನು ತಪ್ಪಿಸಲು ಭಾರತದ ಮೂರು ಮುಖ್ಯ ಇಸ್ಲಾಮಿಕ್ ಸಂಘಟನೆಗಳ ಮೇಲೆ ನಿಯಂತ್ರಣ ಹೇರಬೇಕಾಗಿದೆ ಎಂದು ಪ್ರವೀಣ್ ತೊಗಡಿಯಾ ಹೇಳಿದ್ದಾರೆ.
ಹೀಗಾಗಿ ಅಫ್ಘಾನಿಸ್ತಾನದ ಯಾವುದೇ ಮುಸ್ಲಿಮರಿಗೆ ದೇಶದಲ್ಲಿ ಆಶ್ರಯ ನೀಡಬಾರದು. ಇದೇ ವೇಳೆ, ಅಲ್ಲಿರುವ ಹಿಂದು ಮತ್ತು ಸಿಖ್ ಸಮುದಾಯದ ನಿವಾಸಿಗಳಿಗೆ ಭಾರತ ಅಗತ್ಯವಾಗಿ ಆಶ್ರಯ ನೀಡಬೇಕಾಗಿದೆ ಎಂದು ತೊಗಡಿಯಾ ಹೇಳಿದರು.
ತಾಲಿಬಾನ್ ಒಂದು ಸಿದ್ಧಾಂತ. ಈ ಮಾದರಿಯ ವಿಕೃತ ಸಿದ್ಧಾಂತದ ಕೇಂದ್ರ ಸ್ಥಾನ ಭಾರತದಲ್ಲೇ ಇದೆ. ಇದರ ನಿಯಂತ್ರಣಕ್ಕಾಗಿ ದೇಶದಲ್ಲಿ ದಾರುಲ್ ಉಲೂಮ್ ದೇವಬಂದಿ, ತಬ್ಲಿಘಿ ಜಮಾತ್ ಮತ್ತು ಜಮೀಯತ್ ಉಲೇಮಾ ಹಿಂದ್ ಮಾದರಿಯ ಸಂಘಟನೆಗಳ ಮೇಲೆ ನಿಷೇಧ ಹೇರಬೇಕು. ಈ ಮೂರು ಸಂಘಟನೆಗಳು ತಾಲಿಬಾನಿ ಐಡಿಯಾಲಜಿಯ ಪ್ರಮುಖ ಕೇಂದ್ರಗಳು. ಭಾರತ ಉಗ್ರವಾದದ ಬಹುದೊಡ್ಡ ಅಪಾಯವನ್ನು ಎದುರಿಸುತ್ತಿದ್ದು ದೇಶದ ಎಲ್ಲ ಶಕ್ತಿಗಳು ಸೇರಿ ಈ ಅಪಾಯವನ್ನು ಎದುರಿಸಬೇಕು. ದೇಶದ ಭವಿಷ್ಯದ ದೃಷ್ಟಿಯಿಂದ ಸರಕಾರ ಈ ಮೂರು ಸಂಘಟನೆಗಳ ಮೇಲೆ ನಿಯಂತ್ರಣ ಹೇರಬೇಕು ಎಂದು ಆಗ್ರಹಿಸಿದರು.
ಅಯೋಧ್ಯೆಯ ರಾಮ ಮಂದಿರದ ಕುರಿತ ಪ್ರಶ್ನೆಗೆ, ವಿಶ್ವ ಹಿಂದು ಪರಿಷತ್ ಅಧ್ಯಕ್ಷರಾಗಿದ್ದ ಅಶೋಕ್ ಸಿಂಘಲ್, ಶಿವಸೇನಾ ಮುಖ್ಯಸ್ಥರಾಗಿದ್ದ ಬಾಳ ಠಾಕ್ರೆ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ ಸಿಂಗ್ ಸ್ವಾತಂತ್ರ್ಯೋತ್ತರ ಭಾರತದ ಮೂವರು ಹೀರೋಗಳು ಎಂದು ಹೇಳಿದರು.
Afghan Muslims Should not Seek Refuge in India Says Pravin Togadia.
08-10-25 09:21 am
Bangalore Correspondent
ಪರಿಶಿಷ್ಟ ಜಾತಿಗೆ ಸೇರಿದವರು ಬೌದ್ಧ ಧರ್ಮಕ್ಕೆ ಮತಾಂತ...
07-10-25 11:20 pm
Big Boss, Prashanth Sambargi, Dk Shivakumar,...
07-10-25 10:49 pm
Big Boss Kannada, Close, Update: ಬಿಗ್ ಬಾಸ್ ಮನ...
07-10-25 10:18 pm
Big Boss Kannada Closed: ಕನ್ನಡ ಶೋ ಬಿಗ್ ಬಾಸ್ ಗ...
07-10-25 07:32 pm
08-10-25 05:49 pm
HK News Desk
ಹಿಮಾಚಲ ಪ್ರದೇಶದಲ್ಲಿ ಭಾರೀ ಭೂಕುಸಿತ ; ಅವಶೇಷಗಳಡಿ ಸ...
08-10-25 09:24 am
ಚಿನ್ನ ಅಡವಿಟ್ಟು ಸಾಲ ; ಕಳೆನಾಶಕ ಕೆಮಿಕಲ್ ಸೇವಿಸಿ ದ...
07-10-25 11:16 pm
ವಿಶ್ವಸಂಸ್ಥೆ ಮಹಾಧಿವೇಶನಕ್ಕೆ ಪಿಪಿ ಚೌಧರಿ ನೇತೃತ್ವದ...
07-10-25 01:53 pm
ಮೊಘಲ್ ಆಕ್ರಮಣದಿಂದ ವಿಷ್ಣು ಮೂರ್ತಿ ಭಗ್ನ ; ಪ್ರತಿಮೆ...
06-10-25 07:56 pm
08-10-25 06:07 pm
Mangalore Correspondent
ತಲಪಾಡಿಯಲ್ಲಿ ಮಾನವ ಅಸ್ಥಿಪಂಜರ ಪತ್ತೆ ಪ್ರಕರಣ ; ಬಿಹ...
07-10-25 11:14 pm
Mangaluru, Sudheer Reddy: ಶಾರದೋತ್ಸವ ಗೊಂದಲ ಇತ್...
07-10-25 10:54 pm
Ullal News, Mangalore, BJP, Police: ಉಳ್ಳಾಲ ಶಾ...
07-10-25 05:17 pm
Talapady, Mangalore, Crime: ತಲಪಾಡಿ ಅಕ್ಷಯ ಫಾರ್...
07-10-25 05:04 pm
08-10-25 12:23 pm
Mangalore Correspondent
ಉಡುಪಿಯಲ್ಲಿ ಶಾಲಾ, ಕಾಲೇಜು ಬಸ್ಗಳ ನಕಲಿ ವಿಮಾ ಜಾಲ...
08-10-25 09:17 am
ಸುರತ್ಕಲ್ ನಲ್ಲಿ ಪಿಕಪ್ ಕಳವು ; ಅಂತರಾಜ್ಯ ಕುಖ್ಯಾತ...
07-10-25 10:13 pm
Kasaragod Gang War, Crime: ಕುಂಬಳೆ ಸೀತಾಂಗೋಳಿಯಲ...
07-10-25 10:31 am
Kali Yogish, Arrest, Mangalore: ಮಂಗಳೂರು, ಮೈಸೂ...
05-10-25 03:22 pm