ಚೀನಾದಲ್ಲಿ ಮಳೆ, ರಷ್ಯಾದಲ್ಲಿ ಬೆಂಕಿ! ನಲುಗಿದ ಸೈಬೀರಿಯಾ, ಒಂದೂವರೆ ಮಿಲಿಯನ್ ಹೆಕ್ಟೇರ್ ಕಾಡು ಬೆಂಕಿಗಾಹುತಿ !!

24-07-21 12:21 pm       Headline Karnataka News Network   ದೇಶ - ವಿದೇಶ

ಉತ್ತರ ಸೈಬೀರಿಯಾ ಪ್ರದೇಶದ ಯಕುಟಿಯಾ ಆಸುಪಾಸಿನಲ್ಲಿ ಕಳೆದ ಎರಡು ತಿಂಗಳಿಂದ ಬೆಂಕಿ ಕಾಣಿಸಿಕೊಂಡಿದ್ದು, ಒಂದೂವರೆ ಮಿಲಿಯನ್ ಹೆಕ್ಟೇರ್ ವ್ಯಾಪ್ತಿಯಲ್ಲಿ ಕಾಡು ಬೆಂಕಿಯ ಕೆನ್ನಾಲಿಗೆಗೆ ತುತ್ತಾಗಿದೆ.

ಯಕುಟಿಯಾ, (ರಷ್ಯಾ), ಜುಲೈ 24: ಒಂದೆಡೆ ಚೀನಾದಲ್ಲಿ ರಣಭೀಕರ ಮಳೆಯಾಗುತ್ತಿದ್ದರೆ, ಪಕ್ಕದ ರಷ್ಯಾದಲ್ಲಿ ಉಷ್ಣಗಾಳಿಯಿಂದಾಗಿ ಭಾರೀ ಬೆಂಕಿ ಕಾಣಿಸಿಕೊಂಡಿದೆ. ಉತ್ತರ ಸೈಬೀರಿಯಾ ಪ್ರದೇಶದ ಯಕುಟಿಯಾ ಆಸುಪಾಸಿನಲ್ಲಿ ಕಳೆದ ಎರಡು ತಿಂಗಳಿಂದ ಬೆಂಕಿ ಕಾಣಿಸಿಕೊಂಡಿದ್ದು, ಒಂದೂವರೆ ಮಿಲಿಯನ್ ಹೆಕ್ಟೇರ್ ವ್ಯಾಪ್ತಿಯಲ್ಲಿ ಕಾಡು ಬೆಂಕಿಯ ಕೆನ್ನಾಲಿಗೆಗೆ ತುತ್ತಾಗಿದೆ. ಇದರಿಂದಾಗಿ ರಷ್ಯಾದ ಹಲವೆಡೆ ದಟ್ಟ ಹೊಗೆ ಆವರಿಸಿದೆ.

ಹೊಗೆ ಹೆಚ್ಚು ಇರುವಲ್ಲಿ ಜನರನ್ನು ಹೊರಗೆ ಬರದಂತೆ ಮತ್ತು ಮನೆಯ ಕಿಟಕಿ, ಬಾಗಿಲು ಮುಚ್ಚಿಕೊಂಡು ಒಳಗೆ ಕೂರುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಅಲ್ಲದೆ, ಆ ಭಾಗದಲ್ಲಿ ವಿಮಾನ ಹಾರಾಟ ನಡೆಸದಂತೆ ನಿಷೇಧ ಹೇರಲಾಗಿದೆ. ಇದೇ ವೇಳೆ ರಷ್ಯಾದ ವಿಮಾನಗಳ ಮೂಲಕ ಮೋಡ ಬಿತ್ತನೆಯಿಂದ ಕೃತಕ ಮಳೆ ಬರುವಂತೆ ಮಾಡಲಾಗುತ್ತಿದೆ. ಆದರೆ, ಇದ್ಯಾವುದರಿಂದಲೂ ಬೆಂಕಿಯನ್ನು ಆರಿಸಲು ಸಾಧ್ಯವಾಗಿಲ್ಲ.

ಸ್ಥಳೀಯ ಪ್ರಾಂತದ ರಾಜಧಾನಿ ಯಕುಟ್ಸ್ ಎಂಬ ಜಾಗದಲ್ಲಿ ಜಲವಿದ್ಯುತ್ ಘಟಕವಿದ್ದು, ಅದಕ್ಕೂ ಬೆಂಕಿ ತಗಲುವ ಭೀತಿ ವ್ಯಕ್ತವಾಗಿದೆ. ಯಕುಟ್ಸ್ ವರ್ಷದಲ್ಲಿ ಕೆಲವೊಮ್ಮೆ ಅತ್ಯಂತ ಶೀತದಿಂದ ಕೂಡಿದ್ದು ಮೈನಸ್ ಡಿಗ್ರಿಯಲ್ಲಿ ಇರುತ್ತದೆ. ಇಂಥ ಜಾಗದಲ್ಲೀಗ ಬೆಂಕಿ ಕಾಣಿಸಿಕೊಂಡು ದಟ್ಟ ಹೊಗೆ ಆವರಿಸಿದೆ. ಬೆಂಕಿ ನಂದಿಸಲು 6500ಕ್ಕೂ ಹೆಚ್ಚು ಫೈರ್ ಫೈಟರ್ ಜೆಟ್ ಗಳನ್ನು ಬಳಸಲಾಗಿದೆ.

ಯಕುಟಿಯಾ ಭಾಗದಲ್ಲಿ ಎರಡು ತಿಂಗಳಿಂದ ಉರಿಯುತ್ತಿರುವ ಬೆಂಕಿಯಿಂದಾಗಿ ಭಾರೀ ಹೊಗೆ ಆವರಿಸಿದ್ದು, ಅಂದಾಜು 150 ಮೆಗಾ ಟನ್ ಕಾರ್ಬನ್ ಡೈಆಕ್ಸೈಡ್ ವಾತಾವರಣಕ್ಕೆ ಬಿಡುಗಡೆಯಾಗಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಇದೇ ವೇಳೆ, ಕೆಲವು ಭಾಗದಲ್ಲಿ ಹೊಗೆಯಿಂದಾಗಿ ವಾಹನಗಳ ಸಂಚಾರವನ್ನು ನಿಷೇಧ ಮಾಡಲಾಗಿದೆ. ಸೈಬೀರಿಯಾದಲ್ಲಿ ಸರಕು ಸಾಗಣೆಗೆ ಬಳಸುತ್ತಿದ್ದ ಲೀನಾ ನದಿಯಲ್ಲಿ ಸಂಚಾರವನ್ನು ನಿಷೇಧ ಮಾಡಲಾಗಿದೆ.

ತೀರತ್ ಎನ್ನುವ ಗ್ರಾಮದಲ್ಲಿ ಜನರನ್ನು ಸ್ಥಳಾಂತರ ಮಾಡಲಾಗಿದೆ. ಅಲ್ಲಿನ 63 ವರ್ಷದ ವ್ಯಕ್ತಿಯೊಬ್ಬ, ನಾನು ಒಂದು ತಿಂಗಳಿಂದ ದಟ್ಟ ಹೊಗೆಯ ಕಾರಣ ಸರಿಯಾಗಿ ಯಾವುದನ್ನೂ ಕಣ್ಣು ಬಿಟ್ಟುಕೊಂಡು ನೋಡಿಲ್ಲ. ಮಕ್ಕಳನ್ನು ದೂರಕ್ಕೆ ಕಳಿಸಿದ್ದೇವೆ. ನಮ್ಮ ಗ್ರಾಮಕ್ಕೆ ಎರಡು ಕಿಮೀ ಅಂತರದಲ್ಲಿ ಬೆಂಕಿ ಬರುತ್ತಾ ಇದೆ ಎಂದು ಹೇಳಿದ್ದಾರೆ.

ಈ ಬಾರಿಯ ಬೇಸಗೆ ಅತಿ ಕೆಟ್ಟದಾಗಿತ್ತು. 150 ವರ್ಷಗಳಲ್ಲೇ ಅತಿ ಭೀಕರ ಬರಗಾಲ ಈಗಿನದ್ದು. ಸತತ ಐದು ವರ್ಷಗಳಿಂದ ಬರಗಾಲ ಆವರಿಸುತ್ತಿದ್ದು, ಇದರಿಂದಾಗಿ ಕಾಡಿಗೆ ಬೆಂಕಿ ಬಿದ್ದಿದೆ ಎನ್ನುತ್ತಿದ್ದಾರೆ. ಬೆಂಕಿ ನಂದಿಸಲು ಅಧಿಕಾರಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ. ನಾವು ಗ್ರಾಮಸ್ಥರು ಕೂಡ ಬೆಂಕಿ ನಂದಿಸುವ ಕಾರ್ಯ ಮಾಡುತ್ತಿದ್ದೇವೆ. ಆದರೆ, ಯಾವತ್ತೂ ಸ್ನೋ ಫಾರೆಸ್ಟ್ ಆಗಿರುತ್ತಿದ್ದ ಕಾಡುಗಳಲ್ಲಿ ಅಲ್ಲಲ್ಲಿ ಬೆಂಕಿ ಕಾಣಿಸಿದ್ದು, ಆರಿಸಲು ಸಾಧ್ಯವಾಗುತ್ತಿಲ್ಲ ಎಂದು ಅಮೆರಿಕದ ಗಾರ್ಡಿಯನ್ ಪತ್ರಿಕೆಗೆ ಫೋನಲ್ಲಿ ಸಂದರ್ಶನ ಹಂಚಿಕೊಂಡಿದ್ದಾರೆ. 

Russia” s armed forces got on Thursday released to held include surging wildfires in the nation’s Sakha-Yakutia area. Greater than 1.5 million hectares (3.7 million acres) of land have actually thus far been blistered in the Siberian area given that the start of the summer season with thousands of wildfires stimulated by document temperature levels.