ಕೋವಿಡ್​ ಗೆ ಬಲಿಯಾದ ಪ್ರಿಯತಮೆ ; ಆತ್ಮಹತ್ಯೆಗೆ ಶರಣಾದ ಪ್ರಿಯಕರ, ಸಾವಿನಲ್ಲೂ ಒಂದಾದ ಪ್ರೇಮಿಗಳು !

22-07-21 11:27 am       Headline Karnataka News Network   ದೇಶ - ವಿದೇಶ

ಪ್ರೇಮಿ ತನ್ನ ಪ್ರಿಯತಮೆ ಕೋವಿಡ್​ನಿಂದ ಮೃತಪಟ್ಟಿದ್ದಾಳೆಂದು ಆತ್ಮಹತ್ಯೆಗೆ ಶರಾಣಗಿರುವ ಘಟನೆ ಇಲ್ಲಿನ ಗಾಜುವಾಕ ಕಣಿತಿ ನಗರದಲ್ಲಿ ನಡೆದಿದೆ.

ಆಂಧ್ರಪ್ರದೇಶ, ಜುಲೈ 22: ಕೋವಿಡ್​ನಿಂದ ಅದೇಷ್ಟೋ ಜನರು ತಮ್ಮ ಸಂಬಂಧಿಗಳು, ತಂದೆ-ತಾಯಿ ಕಳೆದುಕೊಂಡು ಸಂಕಷ್ಟಕ್ಕಿಡಾಗಿದ್ದಾರೆ. ಆದರೆ ಇಲ್ಲೊಬ್ಬ ಪ್ರೇಮಿ ತನ್ನ ಪ್ರಿಯತಮೆ ಕೋವಿಡ್​ನಿಂದ ಮೃತಪಟ್ಟಿದ್ದಾಳೆಂದು ಆತ್ಮಹತ್ಯೆಗೆ ಶರಾಣಗಿರುವ ಘಟನೆ ಇಲ್ಲಿನ ಗಾಜುವಾಕ ಕಣಿತಿ ನಗರದಲ್ಲಿ ನಡೆದಿದೆ.

ಹೌದು, ತಾನು ಇಷ್ಟಪಟ್ಟಿದ್ದ ಯುವತಿ ಕೋವಿಡ್​ ಸೊಂಕಿನಿಂದಾಗಿ ಕಳೆದ ಮೂರು ದಿನಗಳ ಹಿಂದೆ ಗುಂಟೂರಿನಲ್ಲಿ ಮೃತಪಟ್ಟಿದ್ದಾಳೆ. ಈ ವಿಷಯವನ್ನು ಜೀರ್ಣಿಸಿಕೊಳ್ಳದ ರೋಹಿತ್​ ಕುಮಾರ್​ (25) ಆತ್ಮಹತ್ಯೆಗೆ ಶರಣಾಗಿದ್ದಾನೆ.

ಪರವಾಡ ತಾಲೂಕಿನ ದೇಶಪಾತ್ರುನಿಪಾಲೇ ಗ್ರಾಮದ ನಿವಾಸಿ ದಟ್ಟಿ ಕೃಷ್ಣಾರಾವು, ಶಾಂತಿ ದಂಪತಿ ಮಗ ರೋಹಿತ್​ ಕುಮಾರ್​ ಇಂಟರ್ ಮೀಡಿಯೆಟ್​​ ​ವರೆಗೆ ವ್ಯಾಸಂಗ ಮುಗಿಸಿದ್ದಾರೆ. ಹೋಟೆಲ್​ ಆನ್​ಲೈನ್​ ಪಾರ್ಸಲ್​ ಸರ್ವಿಸ್​ವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಆರು ಸ್ನೇಹಿತರೊಡನೆ ಸೇರಿ ರೋಹಿತ್​ ಕಣಿತಿ ರಸ್ತೆ ನಗರದಲ್ಲಿ ವಾಸಿಸುತ್ತಿದ್ದನು. ಮಧ್ಯಾಹ್ನದವರೆಗೆ ಪಾರ್ಸಲ್​ ನೀಡಿ ಬಂದಿದ್ದಾರೆ. ಮಧ್ಯಾಹ್ನ 2.30ರ ಸಮಯಕ್ಕೆ ನೇರ ರೂಂಗೆ ತೆರಳಿ ಫ್ಯಾನ್​ಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸಂಜೆ ಸ್ನೇಹಿತರೆಲ್ಲರೂ ಕಾರ್ಯ ಮುಗಿಸಿಕೊಂಡು ರೂಂಗೆ ಬಂದಾಗ ರೋಹಿತ್​ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಕೂಡಲೇ ಈ ಸಂಗತಿಯನ್ನು ಮೃತ ರೋಹಿತ್​ ಪೋಷಕರಿಗೆ ತಿಳಿಸಿದರು.

ಅನಕಾಪಲ್ಲಿಯ ಯುವತಿಯನ್ನು ರೋಹಿತ್​ ಪ್ರೀತಿಸುತ್ತಿದ್ದನು. ಕಳೆದ ಮೂರು ದಿನಗಳ ಹಿಂದೆ ಆಕೆ ಕೋವಿಡ್​ನಿಂದ ಮೃತಪಟ್ಟಿದ್ದಾಳೆ. ಬೇರೆ ಯುವತಿಯೊಂದಿಗೆ ಮದುವೆ ಮಾಡುವುದಾಗಿ ಹೇಳಿದ್ದೇವೆ. ಆದ್ರೆ ಇದನ್ನೇ ನೆನಪು ಮಾಡಿಕೊಂಡು ರೋಹಿತ್​ ತನ್ನ ಪ್ರಾಣ ಕಳೆದುಕೊಳ್ಳುತ್ತಾನೆ ಎಂದು ತಿಳಿದಿರಲಿಲ್ಲ ಅಂತಾ ಮೃತ ರೋಹಿತ್​ ತಂದೆ ಕೃಷ್ಣರಾವು ಕಣ್ಣೀರು ಹಾಕಿದ್ದಾರೆ.

ಸುದ್ದಿ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕಾಗಮಿಸಿ ಮೃತ ಶವವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆ ರವಾನಿಸಿದರು. ಈ ಘಟನೆ ಕುರಿತು ಗಾಜುವಾಕ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.