ಬ್ರೇಕಿಂಗ್ ನ್ಯೂಸ್
08-07-21 03:06 pm Headline Karnataka News Network ದೇಶ - ವಿದೇಶ
ದುಬೈ, ಜುಲೈ 8: ದುಬೈನ ಮುಖ್ಯ ಬಂದರಿನ ಸರಕು ಸಾಗಣೆ ಹಡಗಿನಲ್ಲಿ ಸ್ಫೋಟ ಸಂಭವಿಸಿದ್ದು, ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ಎಮಿರೇಟ್ಸ್‌ನ ಮಾಧ್ಯಮ ಕಚೇರಿ ತಿಳಿಸಿದೆ.
ಘಟನೆಯಲ್ಲಿ ಯಾವುದೇ ಸಾವು-ನೋವುಗಳ ಬಗ್ಗೆ ವರದಿಯಾಗಿಲ್ಲ. ಸ್ಫೋಟದ ತೀವ್ರತೆಗೆ ಸಮೀಪದ ಮೂರು ಮನೆಗಳಲ್ಲಿ ಕಿಟಕಿ, ಬಾಗಿಲುಗಳು ಅಲುಗಾಡಿದ್ದವು. ಬಳಿಕ ಬೆಂಕಿಯನ್ನು ನಂದಿಸಲಾಗಿದೆ ಎಂದು ತಿಳಿಸಿದೆ.
ಘಟನೆ ಹಿಂದಿನ ಕಾರಣಗಳು ತಿಳಿದು ಬಂದಿಲ್ಲ. ಈ ಕುರಿತು ತನಿಖೆ ನಡೆಸಲಾಗುತ್ತಿದೆ. ಜೆಬೆಲ್ ಅಲಿ ಬಂದರಲಿನಲ್ಲಿ ಹಡಗಿನಲ್ಲಿದ್ದ ಕಂಟೇನರ್‌ನೊಳಗೆ ಸ್ಫೋಟ ಉಂಟಾದ ಪರಿಣಾಮ ಬೆಂಕಿ ಕಾಣಿಸಿಕೊಂಡಿದೆ ಎಂದು ದುಬೈ ಮಾಧ್ಯಮ ಕಚೇರಿಯು ತಿಳಿಸಿದೆ.
ಇಲ್ಲಿನ ಬಂದರು ವಿಮಾನವಾಹಕ ನೌಕೆಗಳನ್ನು ನಿಭಾಯಿಸುವ ಸಾಮರ್ಥ್ಯವನ್ನು ಹೊಂದಿದ್ದು, ಜನತ್ತಿನ ಅತಿ ನಿಬಿಡ ಬಂದರುಗಳಲ್ಲಿ ಒಂದಾಗಿದೆ.
ಬಂದರಿನಲ್ಲಿ ಸರಕು ಸಾಗಣೆ ಕಾರ್ಯಾಚರಣೆಯನ್ನು ಸಹಜ ಸ್ಥಿತಿಗೆ ಮರಳಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದೆ.
ನಾನು ನನ್ನ ಮನೆಯ ಬಾಲ್ಕನಿಯಲ್ಲಿದ್ದೆ. ಸೂರ್ಯನ ಬೆಳಕಿನಂತೆ ಹಳದಿ ಬಣ್ಣವು ಸ್ನೇಹಿತನ ಗಮನಕ್ಕೆ ಬಂತು. ಇದಾದ ಬಳಿಕ ಶಬ್ದ ಕೇಳಿಸಿತ್ತು' ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.
ಮಗದೊಬ್ಬರ ಹೇಳಿಕೆ ಪ್ರಕಾರ ಸ್ಫೋಟದ ತೀವ್ರತೆಗೆ ಕಿಟಕಿಗಳು ಅಲುಗಾಡಿದ್ದವು. 'ಕಳೆದ 15 ವರ್ಷಗಳಿಂದ ನಾನಿಲ್ಲಿ ವಾಸಿಸುತ್ತಿದ್ದೇನೆ. ಇದೇ ಮೊದಲ ಬಾರಿಗೆ ಇಂತಹ ಅನುಭವಾಗಿದೆ' ಎಂದಿದ್ದಾರೆ.
ಮಧ್ಯ ಪ್ರಾಚ್ಯದ ಅತಿದೊಡ್ಡ ವ್ಯಾಪಾರ ಕೇಂದ್ರವಾಗಿರುವ ಜೆಬೆಲ್ ಅಲಿ ಮುಕ್ತ ವಲಯದಲ್ಲಿ (ಜೆಎಎಫ್‌ಝಡ್‌ಎ) 8,000ದಷ್ಟು ಕಂಪನಿಗಳು ಸ್ಥಿತಗೊಂಡಿದ್ದು, ಕಳೆದ ವರ್ಷ ದುಬೈನ ದೇಶೀಯ ಉತ್ಪನ್ನದ ಶೇಕಡಾ 23ರಷ್ಟು ಉತ್ಪಾದಿಸಿವೆ.
ದುಬೈನ ಉತ್ತರ ತುದಿಯಲ್ಲಿರುವ ಜೆಬೆಲ್ ಅಲಿ ಬಂದರು ವಿಶ್ವದ ಅತಿದೊಡ್ಡ ಮಾನವ ನಿರ್ಮಿತ ಆಳ ನೀರಿನಲ್ಲಿನ ಬಂದರು. ಭಾರತೀಯ ಉಪಖಂಡ, ಆಫ್ರಿಕಾ ಮತ್ತು ಏಷ್ಯಾದಿಂದ ಸರಕುಗಳು ಇಲ್ಲಿಗೆ ಆಗಮಿಸುತ್ತದೆ. ಬಂದರು ನಿರ್ಣಾಯಕ ಜಾಗತಿಕ ಸರಕು ಕೇಂದ್ರವಲ್ಲ, ಆದರೆ ದುಬೈ ಮತ್ತು ಸುತ್ತಮುತ್ತಲಿನ ಎಮಿರೇಟ್‌ಗಳಿಗೆ ಜೀವಸೆಲೆಯಾಗಿದ್ದು, ಅಗತ್ಯ ಆಮದುಗಳಿಗೆ ಪ್ರವೇಶ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ.
Catastrophe: The outcome of the explosion at Jebel Ali Port ground video of Dubai Port blast pic.twitter.com/1sehCQVUB4
— Abhishek Saxena (@tagabhishek) July 7, 2021
Big explosion at Dubai’s Jebel Ali port, heard across south Dubai, likely a ship container. Details awaited pic.twitter.com/b8g0Ow5uaf
— Shiv Aroor (@ShivAroor) July 7, 2021
The combustion unleashed a shock wave through the skyscraper-studded city of Dubai, causing walls and windows to shake in neighborhoods as far as 25 kilometers away from the port.
16-08-25 10:03 pm
Bangalore Correspondent
ಸೆ.9ರಂದು ಉಪ ರಾಷ್ಟ್ರಪತಿ ಚುನಾವಣೆ ; ಬಿಹಾರ ರಾಜ್ಯಪ...
16-08-25 09:58 pm
Dharmasthala, Eshwar kandre: ಧರ್ಮಸ್ಥಳ ತಲೆಬುರು...
16-08-25 09:15 pm
BJP, Dharmasthala, DK Shivakumar, SIT Probe:...
16-08-25 08:05 pm
ಧರ್ಮಸ್ಥಳ ಪ್ರಕರಣದಲ್ಲಿ ಸುಳ್ಳು ಹೇಳಿ, ಅಪಪ್ರಚಾರ ಮಾ...
15-08-25 10:29 pm
16-08-25 03:34 pm
HK News Desk
ಕೆಂಪುಕೋಟೆಯಲ್ಲಿ ಸತತ 12ನೇ ಬಾರಿಗೆ ಸ್ವಾತಂತ್ರ್ಯೋತ್...
15-08-25 08:46 pm
ಜಮ್ಮು -ಕಾಶ್ಮೀರದಲ್ಲಿ ಭೀಕರ ಮೇಘಸ್ಫೋಟ: 46 ಜನ ಮೃತ್...
15-08-25 01:32 pm
ಕದನ ವಿರಾಮದಲ್ಲಿ ಪಾಲು ಸಿಗದ್ದಕ್ಕೆ ಭಾರತದ ಸರಕುಗಳಿಗ...
14-08-25 07:24 pm
ಯುಎಇ ಸುದ್ದಿ ; ಆರೇ ತಿಂಗಳಲ್ಲಿ ದುಬೈನಲ್ಲಿ 3,600ಕ್...
14-08-25 07:02 pm
16-08-25 11:11 pm
Mangalore Correspondent
Dharmasthala, BJP MLA S.R. Vishwanath: ಸೌಜನ್ಯ...
16-08-25 09:19 pm
ಕಾವೂರು ಮೊಸರು ಕುಡಿಕೆ ಉತ್ಸವದಲ್ಲಿ ಡಿಜೆ ಬಳಕೆ ; ಸೌ...
16-08-25 08:26 pm
Dharmasthala Panchayat, RTI: 38 ವರ್ಷಗಳಲ್ಲಿ 27...
16-08-25 04:45 pm
Expert PU College Announces ‘Xcelerate 2025’...
15-08-25 09:04 pm
16-08-25 10:49 pm
Mangalore Correspondent
Bengaluru Woman Hurls Abuses at Traffic Cops:...
16-08-25 07:06 pm
ಉತ್ತರ ಪ್ರದೇಶದಲ್ಲಿ ಮತ್ತೊಂದು ಮತಾಂತರ ಜಾಲ ; ಹಿಂದು...
16-08-25 11:25 am
Gold Robbery, Mangalore, Kerala: ಕೇರಳದ ಚಿನ್ನದ...
16-08-25 10:20 am
Headline karnataka Impact, Lucky Scheme, Frau...
15-08-25 09:22 pm