ಬ್ರೇಕಿಂಗ್ ನ್ಯೂಸ್
22-06-21 05:46 pm Headline Karnataka News Network ದೇಶ - ವಿದೇಶ
Photo credits : livelaw
ಬೆಂಗಳೂರು, ಜೂನ್ 22: 2005ರ ಡಿಸೆಂಬರ್ 28ರಂದು ಐಐಎಸ್ಸಿ ಕ್ಯಾಂಪಸ್ ನಲ್ಲಿ ನಡೆದಿದ್ದ ಉಗ್ರರ ದಾಳಿ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಬಂಧಿಸಿದ್ದ ಆರೋಪಿಯನ್ನು ಸಾಕ್ಷ್ಯಾಧಾರಗಳ ಕೊರತೆಯಿಂದ ನ್ಯಾಯಾಲಯ ಬಿಡುಗಡೆ ಮಾಡಿದೆ.
ಬೆಂಗಳೂರಿನ ಐಐಎಸ್ಸಿ ದಾಳಿ ಪ್ರಕರಣದಲ್ಲಿ ವಿಜ್ಞಾನಿಯಾಗಿದ್ದ ಮನೀಶಚಂದ್ರ ಮೃತಪಟ್ಟು ಇತರ ಐವರು ಗಾಯಗೊಂಡಿದ್ದರು. ಉಗ್ರರು ಹಾಡುಹಗಲೇ ಕ್ಯಾಂಪಸ್ ಒಳಬಂದು ಹ್ಯಾಂಡ್ ಗ್ರೆನೇಡ್ ಮತ್ತು ರೈಫಲ್ ನಿಂದ ಗುಂಡಿನ ದಾಳಿ ನಡೆಸಿದ್ದು ಭಾರೀ ಸಂಚಲನ ಸೃಷ್ಟಿಸಿತ್ತು. 12 ವರ್ಷಗಳ ನಂತರ 2017ರಲ್ಲಿ ಕ್ರೈಂ ಬ್ರಾಂಚ್ ಪೊಲೀಸರು ತ್ರಿಪುರಾದಲ್ಲಿ ಹಬೀಬ್ ಮಿಯಾ ಎಂಬ ಶಂಕಿತ ಉಗ್ರನನ್ನು ಬಂಧಿಸಿದ್ದರು. ನಾಲ್ಕು ವರ್ಷಗಳಿಂದ ಬೆಂಗಳೂರಿನ ಜೈಲಿನಲ್ಲಿರುವ ಹಬೀಬ್ ಮಿಯಾನನ್ನು ಸಾಕಷ್ಟು ಸಾಕ್ಷ್ಯಗಳಿಲ್ಲವೆಂದು ಎನ್ಐಎ ವಿಶೇಷ ನ್ಯಾಯಾಲಯ ಆರೋಪ ಮುಕ್ತ ಮಾಡಿದ್ದು ಜೈಲಿನಿಂದ ಬಿಡುಗಡೆ ಮಾಡಲು ಆದೇಶ ಮಾಡಿದೆ.
ಘಟನೆಯಲ್ಲಿ ಪ್ರೊಫೆಸರ್ ಒಬ್ಬರು ಮೃತಪಟ್ಟಿದ್ದರಿಂದ ಬೆಂಗಳೂರು ಪೊಲೀಸರು ತೀವ್ರ ಒತ್ತಡಕ್ಕೆ ಒಳಗಾಗಿದ್ದರು. ಸುದೀರ್ಘ ಕಾಲದ ಹುಡುಕಾಟದ ಬಳಿಕ ಸೆರೆಸಿಕ್ಕ ಉಗ್ರನೊಬ್ಬ ನೀಡಿದ್ದ ಮಾಹಿತಿಯಂತೆ ತ್ರಿಪುರಾಕ್ಕೆ ತೆರಳಿದ್ದ ಬೆಂಗಳೂರಿನ ಸಿಸಿಬಿ ತಂಡ ಬಾಂಗ್ಲಾ ಮೂಲದ ಉಗ್ರ ಹಬೀಬ್ ಮಿಯಾನನ್ನು ಬಂಧಿಸಿತ್ತು. ಬಳಿಕ ಎನ್ಐಎ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಹಾಕಿತ್ತು.
ಆದರೆ, ವಿಚಾರಣೆ ನಡೆಸಿದ ನ್ಯಾಯಾಲಯ ಪೊಲೀಸರು ನೀಡಿದ್ದ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದೆ. ಅದರಲ್ಲಿ ಪ್ರಕರಣದ ಒಂದನೇ ಆರೋಪಿ ಶಹಾಬುದ್ದೀನ್ ನೀಡಿದ್ದ ತಪ್ಪೊಪ್ಪಿಗೆ ಹೇಳಿಕೆಯ ರೆಕಾರ್ಡ್ ಮಾತ್ರ ಪೊಲೀಸರು ನೀಡಿದ್ದರು. ಬೇರಾವುದೇ ದಾಖಲೆಯಾಗಲೀ, ಸಾಕ್ಷ್ಯವಾಗಲೀ ಇರಲಿಲ್ಲ. ಹೀಗಾಗಿ ಕೇವಲ ಆರೋಪಿಯೊಬ್ಬನ ತಪ್ಪೊಪ್ಪಿಗೆ ಹೇಳಿಕೆಯನ್ನು ಮಾತ್ರ ಆಧರಿಸಿ ಮತ್ತೊಬ್ಬ ಆರೋಪಿಯನ್ನು ಅಪರಾಧಿ ಎನ್ನಲು ಸಾಧ್ಯವಿಲ್ಲ ಎಂದು ಕೋರ್ಟ್ ಅಭಿಪ್ರಾಯ ಪಟ್ಟಿದ್ದು, ಆರೋಪಿಯನ್ನು ಬಿಡುಗಡೆ ಮಾಡಲು ಆದೇಶ ಮಾಡಿದೆ.
ಬಾಂಗ್ಲಾ ಮೂಲದ ಹಬೀಬ್ ಮಿಯಾ ತ್ರಿಪುರಾದ ಅಗರ್ತಲಾದ ಮಸೀದಿಯಲ್ಲಿ ಶಹಾಬುದ್ದೀನ್ ಅನ್ನು ಮೀಟ್ ಮಾಡಿದ್ದನ್ನು ಒಪ್ಪಿಕೊಂಡಿದ್ದ. ಅಲ್ಲದೆ, ಶಹಾಬುದ್ದೀನನ್ನು ಬಾಂಗ್ಲಾ ಗಡಿಯಿಂದ ದಾಟಿಸಲು ನೆರವು ನೀಡಿದ್ದಾಗಿ ಹೇಳಿದ್ದು, ಅದಕ್ಕಾಗಿ 800 ರೂ. ಪಡೆದಿದ್ದಾಗಿ ಪೊಲೀಸರಲ್ಲಿ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದ. ಹೀಗಾಗಿ ಪೊಲೀಸರು ಪ್ರಮುಖ ಆರೋಪಿಗೆ ನೆರವು ನೀಡಿದ್ದ ಆರೋಪದಲ್ಲಿ ತ್ರಿಪುರಾಕ್ಕೆ ತೆರಳಿ, ಹಬೀಬ್ ಮಿಯಾನನ್ನು ಬಂಧಿಸಿದ್ದರು.
Habeeb Miya, who was arrested in March 2017, was alleged to have helped a key accused, Sabauddin Ahmed, cross over to Bangladesh, both before and after the attack. Ahmed was picked up from Nepal in early 2008.
15-08-25 10:29 pm
Bangalore Correspondent
ಬೈಂದೂರಿನಲ್ಲಿ ವಿದೇಶಿಗರ ಮೋಡಿ ; ಅಧ್ಯಯನಕ್ಕೆ ಬಂದು...
15-08-25 09:47 pm
ಧರ್ಮಸ್ಥಳ ಪ್ರಕರಣದಲ್ಲಿ ಶವದ ಕುರುಹು ಸಿಗದಿದ್ದರೆ ದೂ...
15-08-25 07:15 pm
Mysterious Explosion in Bangalore: ಸ್ವಾತಂತ್ರ್...
15-08-25 03:20 pm
Masked Man, Dharmasthala, R Ashok: ಕೊನೆಯಲ್ಲಿ...
15-08-25 02:27 pm
15-08-25 08:46 pm
HK News Desk
ಜಮ್ಮು -ಕಾಶ್ಮೀರದಲ್ಲಿ ಭೀಕರ ಮೇಘಸ್ಫೋಟ: 46 ಜನ ಮೃತ್...
15-08-25 01:32 pm
ಕದನ ವಿರಾಮದಲ್ಲಿ ಪಾಲು ಸಿಗದ್ದಕ್ಕೆ ಭಾರತದ ಸರಕುಗಳಿಗ...
14-08-25 07:24 pm
ಯುಎಇ ಸುದ್ದಿ ; ಆರೇ ತಿಂಗಳಲ್ಲಿ ದುಬೈನಲ್ಲಿ 3,600ಕ್...
14-08-25 07:02 pm
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮೋಡಿ ಮಾಡಲಿದ್ದಾರ...
14-08-25 11:26 am
15-08-25 09:04 pm
Mangalore Correspondent
Flag, Oath, and Nation: Expert PU College, Ko...
15-08-25 08:51 pm
ಎಸ್ಐಟಿ ತನಿಖೆಯಿಂದ ಧರ್ಮಸ್ಥಳಕ್ಕೆ ಅಪಚಾರ ಆಗಿಲ್ಲ, ಬ...
15-08-25 08:40 pm
Dharmasthala News: ಧರ್ಮಸ್ಥಳ ಶವ ಶೋಧಕ್ಕೆ 15ನೇ ದ...
14-08-25 10:29 pm
SCDCC Bank Launches Special Independence Day...
14-08-25 01:12 pm
16-08-25 11:25 am
HK News Desk
Gold Robbery, Mangalore, Kerala: ಕೇರಳದ ಚಿನ್ನದ...
16-08-25 10:20 am
Headline karnataka Impact, Lucky Scheme, Frau...
15-08-25 09:22 pm
ನಟ ದರ್ಶನ್ ಗೆ ಮತ್ತೆ ಜೈಲು ದರ್ಶನ ; ಹೆಂಡತಿ ಜೊತೆ ಅ...
14-08-25 05:31 pm
Supreme Court, Actor Darshan Jail Order: ಸುಪ್...
14-08-25 11:51 am