ಬ್ರೇಕಿಂಗ್ ನ್ಯೂಸ್
14-06-21 09:48 pm Headline Karnataka News Network ದೇಶ - ವಿದೇಶ
ತಿರುವನಂತಪುರಂ, ಜೂ.14: ದೇಶದಲ್ಲಿ ಪ್ರಯಾಣ ನಿರ್ಬಂಧಗಳ ಕಾರಣದಿಂದಾಗಿ ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ದಂಪತಿಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ವಿವಾಹ ನೋಂದಣಿಗೆ ಕೇರಳ ಹೈಕೋರ್ಟ್ ಅನುಮತಿ ನೀಡಿದೆ.
ಅರ್ಜಿದಾರರಾದ ಥಾಮಸ್ ಕುಟ್ಟಿ ಜೋಸೆಫ್ ಮತ್ತು ಬ್ಲೋಸಮ್ ಥಾಮಸ್ ತಮ್ಮ ವಿವಾಹ ನೋಂದಣಿ ಮಾಡಬೇಕಾದರೆ ರಿಜಿಸ್ಟ್ರಾರ್ ಕಚೇರಿಯಲ್ಲಿ ಇಬ್ಬರೂ ಹಾಜರಿರಬೇಕು ಎಂದು ಸ್ಥಳೀಯ ರಿಜಿಸ್ಟ್ರಾರ್ ಕಚೇರಿ ಸಿಬ್ಬಂದಿಗಳು ತಿಳಿಸಿದ್ದರು. ಈ ಹಿನ್ನೆಲೆ ಥಾಮಸ್ ಕುಟ್ಟಿ ಜೋಸೆಫ್ ಮತ್ತು ಬ್ಲೋಸಮ್ ಥಾಮಸ್ ಹೈಕೋರ್ಟ್ ಕದ ತಟ್ಟಿದ್ದಾರೆ.
ಅರ್ಜಿದಾರರ ಪರ ವಕೀಲ ಜಾಕೋಬ್ ಪಿ. ಅಲೆಕ್ಸ್ ಪ್ರಕಾರ, ಅರ್ಜಿದಾರರು 1997 ರ ಜೂನ್ 30 ರಂದು ವಿವಾಹವಾಗಿದ್ದಾರೆ. ಪ್ರಸ್ತುತ ದಂಪತಿಗೆ ಮೂವರು ಮಕ್ಕಳಿದ್ದಾರೆ. ತಾತ್ಕಾಲಿಕ ವೀಸಾದ ಮೇಲೆ ಈ ದಂಪತಿ ಇತ್ತೀಚೆಗೆ ಯುಎಇಯಿಂದ ಆಸ್ಟ್ರೇಲಿಯಾಕ್ಕೆ ಹೋಗಿದ್ದಾರೆ. ವಲಸೆ ನಿಯಮದ ಬದಲಾವಣೆಯಿಂದಾಗಿ, ಈ ದಂಪತಿಗೆ ವಿವಾಹ ನೋಂದಣಿ ಪ್ರಮಾಣಪತ್ರವನ್ನು ಸಲ್ಲಿಸಬೇಕಾಗಿದೆ ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ. ಈ ಜೋಡಿಯು 1997 ರ ಜೂನ್ 30 ರಂದು ವಿವಾಹವಾಗಿದ್ದಾರೆ ಎಂದು ಉಲ್ಲೇಖ ಮಾಡಲಾಗಿದೆ.

ಅರ್ಜಿ ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್ ವಿಡಿಯೋ ಕಾನ್ಫರೆನ್ಸ್ ಮೂಲಕ ವಿವಾಹದ ನೋಂದಣಿಗೆ ಅವಕಾಶವಿದೆ ಎಂದು ತೀರ್ಪು ಹೇಳಿದೆ. ಅಲ್ಲದೆ, ಅರ್ಜಿದಾರರು ಹಾಜರುಪಡಿಸಿದ ಸಾಕ್ಷ್ಯಗಳಿಂದ ಪತಿ, ಪತ್ನಿ ಎಂಬುದು ಸಾಬೀತಾಗಿದೆ. ಮದುವೆಗಳ ನೋಂದಣಿಯನ್ನು ರಿಜಿಸ್ಟ್ರಾರ್ ಜನರಲ್ ಆಫ್ ಮ್ಯಾರೇಜ್ ನಡೆಸುತ್ತದೆ. ಆದರೆ ಈ ಕೊರೊನಾ ಸಾಂಕ್ರಾಮಿಕ ಅವಧಿಯಲ್ಲಿ ಅರ್ಜಿದಾರರು ಆಸ್ಟ್ರೇಲಿಯಾದಿಂದ ಇಲ್ಲಿಗೆ ಬಂದು ಸಹಿ ಮಾಡುವುದು ಅಸಾಧ್ಯವೆಂದು ಕೋರ್ಟ್ ಗಮನಿಸಿದೆ.
ವಿವಾಹದ ರಿಜಿಸ್ಟ್ರಾರ್ ಅಧಿಕಾರಿ ಅಗತ್ಯವಿದ್ದಲ್ಲಿ, ಅರ್ಜಿದಾರರೊಂದಿಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಮಾತುಕತೆ ನಡೆಸಬಹುದಾಗಿದೆ. ಅರ್ಜಿದಾರರ ಡಿಜಿಟಲ್ ಸಹಿಯೊಂದಿಗಿನ ನಕಲನ್ನು ಇ-ಮೇಲ್ ಮೂಲಕ ಅಥವಾ ಕೊರಿಯರ್ ಮೂಲಕ ಪಡೆದುಕೊಳ್ಳಬೇಕು. ಬಳಿಕ ರಿಜಿಸ್ಟ್ರಾರ್ ಕಚೇರಿ ಸಿಬ್ಬಂದಿಗಳು ಅರ್ಜಿದಾರರ ಮದುವೆಯನ್ನು ನೋಂದಾಯಿಸಿ ವಿವಾಹ ಪ್ರಮಾಣಪತ್ರವನ್ನು ಅರ್ಜಿದಾರರ ಪವರ್ ಆಫ್ ಅಟಾರ್ನಿ ಹೊಂದಿರುವವರಿಗೆ ನೀಡಬೇಕು ಎಂದು ತೀರ್ಪಿನಲ್ಲಿ ಹೇಳಿದೆ.
Kerala High Court has permitted a couple residing in Australia to register their marriage under the Kerala Registration of Marriages (Common) via Video Conference.
21-11-25 05:25 pm
HK News Desk
ವಾಹನ ಸವಾರರಿಗೆ ಗುಡ್ ನ್ಯೂಸ್ ; ಮತ್ತೆ 50% ದಂಡ ವ...
21-11-25 10:19 am
CM. Siddaramaiah, CM SEAT: ಯಾವ ಕ್ರಾಂತಿಯೂ ಇಲ್ಲ...
20-11-25 03:30 pm
DK Suresh, CM Siddaramaiah : ಸಿಎಂ ಕುರ್ಚಿ ಕ್ಲೈ...
20-11-25 03:01 pm
ಆನೇಕಲ್ ನಲ್ಲಿ ಕಚಡಾ ಡಾಕ್ಟರ್ ; ಇನ್ಪೆಕ್ಟರ್ ಅಮಾನತಿ...
19-11-25 02:16 pm
21-11-25 06:10 pm
HK News Desk
ಶಬರಿಮಲೆ ಚಿನ್ನ ಲೂಟಿ ಪ್ರಕರಣ ; ಕೊನ್ನಿ ಕ್ಷೇತ್ರದ ಸ...
21-11-25 02:26 pm
ಶ್ರೀಲಂಕಾದಲ್ಲಿ ನ್ಯೂಜಿಲೆಂಡ್ ಮಹಿಳೆಯ ಜೊತೆ ಯುವಕನ ಅ...
19-11-25 06:47 pm
ಕೆಂಪು ಕೋಟೆ ಬ್ಲಾಸ್ಟ್ ಕೇಸ್ ; ಅಲ್ ಫಲಾಹ್ ವಿವಿಗೆ ಸ...
19-11-25 11:10 am
ಬಾಂಗ್ಲಾದಲ್ಲಿ ವಿದ್ಯಾರ್ಥಿಗಳ ಮಾರಣ ಹೋಮಕ್ಕೆ ಅವರೇ ಕ...
17-11-25 10:58 pm
21-11-25 10:39 pm
Mangalore Correspondent
ನವೆಂಬರ್ 23ರಿಂದ ಪ್ರತಿ ವಾರ 'ಸಂಸದ್ ಖೇಲ್ ಮಹೋತ್ಸವ'...
21-11-25 10:03 pm
ಸುರತ್ಕಲ್- ನಂತೂರು- ಬಿಸಿ ರೋಡ್ ಹೆದ್ದಾರಿ ಎನ್ಎಚ...
21-11-25 09:55 pm
Snake Bite, Mangalore, Detection Kit: ಹಾವು ಕಚ...
21-11-25 08:45 pm
ಮಾನಸಿಕ ಖಿನ್ನತೆ ; ಶಿಕ್ಷಕಿ ತಾಯಿಯನ್ನು ಕಾಲೇಜು ಬಿಟ...
20-11-25 10:48 pm
21-11-25 11:07 pm
Bangalore Correspondent
ಮಲ್ಪೆ ಶಿಪ್ ಯಾರ್ಡ್ ನಿಂದ ಪಾಕಿಸ್ತಾನಕ್ಕೆ ಮಾಹಿತಿ ಸ...
21-11-25 05:11 pm
ಬೆಂಗಳೂರು ಎಟಿಎಂ ಹಣ ದರೋಡೆ ಪ್ರಕರಣ ; ತಿರುಪತಿಯಲ್ಲಿ...
20-11-25 10:53 pm
BMR Group Fraud, Money, Mangalore, Surathkal:...
20-11-25 06:01 pm
Bangalore ATM Van Robbery, Update: ಬೆಂಗಳೂರಿನ...
20-11-25 11:51 am