ಬ್ರೇಕಿಂಗ್ ನ್ಯೂಸ್
11-06-21 04:28 pm Headline Karnataka News Network ದೇಶ - ವಿದೇಶ
ಕೊಲ್ಕತ್ತಾ, ಜೂನ್ 11: ಬಾಂಗ್ಲಾದೇಶ ಮೂಲಕ ಅಕ್ರಮವಾಗಿ ಭಾರತಕ್ಕೆ ನುಸುಳಲು ಯತ್ನಿಸಿದ್ದ ಚೀನಾ ಮೂಲದ ಶಂಕಿತ ಗೂಢಚರನನ್ನು ಗಡಿಭದ್ರತಾ ಪಡೆಯ ಯೋಧರು ಬಂಧಿಸಿದ್ದಾರೆ. ಚೈನಾದ ಹುಬೈ ಪ್ರಾಂತದ ನಿವಾಸಿ ಹ್ಯಾನ್ ಜೂನ್ (36) ಬಂಧಿತ ವ್ಯಕ್ತಿ.
ಚೀನಾ ಪರವಾಗಿ ಭಾರತದಲ್ಲಿ ಗೂಢಚಾರಿಕೆ ನಡೆಸುತ್ತಿದ್ದ ವ್ಯಕ್ತಿಯ ಬಂಧನ ಬಿಎಸ್ಎಫ್ ಪಾಲಿಗೆ ದೊಡ್ಡ ಗೆಲುವು ಎಂದು ಗಡಿಭದ್ರತಾ ಪಡೆ ಹೇಳಿಕೊಂಡಿದೆ. ಈತ ಜೂನ್ 2ರಂದು ಬಾಂಗ್ಲಾದೇಶದ ರಾಜಧಾನಿ ಢಾಕಾಕ್ಕೆ ಬಂದಿದ್ದ. ಅಲ್ಲಿ ತನ್ನ ಸ್ನೇಹಿತನ ಮನೆಯಲ್ಲಿ ಉಳಿದುಕೊಂಡಿದ್ದ. ಬಳಿಕ ಪಶ್ಚಿಮ ಬಂಗಾಳದ ಗಡಿಜಿಲ್ಲೆ ಮಾಲ್ಡಾ ಮೂಲಕ ಭಾರತ ಪ್ರವೇಶ ಮಾಡುತ್ತಿದ್ದಾಗ ಗಡಿಭದ್ರತಾ ಪಡೆಯ ಕಣ್ಣಿಗೆ ಬಿದ್ದಿದ್ದು ವಿಚಾರಣೆ ನಡೆಸಿ ವಶಕ್ಕೆ ಪಡೆದಿದ್ದಾರೆ.

ಹ್ಯಾನ್ ಜೂನ್ ವಿಚಾರಣೆ ವೇಳೆ ಆತನ ಬಳಿ ನಿಗೂಢ ರೀತಿಯ ಇಲೆಕ್ಟ್ರಾನಿಕ್ ವಸ್ತುಗಳು ಪತ್ತೆಯಾಗಿವೆ. ಹೀಗಾಗಿ ಚೀನಾದ ವ್ಯಕ್ತಿ ಭಾರತದಲ್ಲಿದ್ದುಕೊಂಡು ಗೂಢಚಾರಿಕೆ ನಡೆಸುತ್ತಿದ್ದಾನೆಯೇ ಎನ್ನುವ ಅನುಮಾನ ಉಂಟಾಗಿದ್ದು, ಪೊಲೀಸರು ಬಂಧಿಸಿದ್ದಾರೆ. ಈ ಹಿಂದೆ ನಾಲ್ಕು ಬಾರಿ ಭಾರತಕ್ಕೆ ಬಂದಿದ್ದಾಗಿ ಹ್ಯಾನ್ ಜೂನ್ ಹೇಳಿದ್ದು, ಉತ್ತರ ಪ್ರದೇಶದ ಗುರ್ ಗ್ರಾಮ್ ನಲ್ಲಿ ಸ್ಟಾರ್ ಸ್ಪ್ರಿಂಗ್ ಎನ್ನುವ ಹೆಸರಿನ ಹೊಟೇಲ್ ನಡೆಸುತ್ತಿರುವ ಬಗ್ಗೆ ಮಾಹಿತಿ ನೀಡಿದ್ದಾನೆ. ಉತ್ತರ ಪ್ರದೇಶದಲ್ಲಿ ಈತನ ವಿರುದ್ಧ ಮೊಕದ್ದಮೆ ದಾಖಲಾಗಿದೆ.
ಬಾಂಗ್ಲಾ ಗಡಿಭಾಗ ಮಾಲಿಕ್ ಸುಲ್ತಾನ್ ಪುರ್ ಔಟ್ ಪೋಸ್ಟ್ ಮೂಲಕ ಕಾರಿನಲ್ಲಿ ಬಂದಿದ್ದ ಚೀನಾದ ವ್ಯಕ್ತಿಯನ್ನು ನಿಲ್ಲಿಸಿ ವಿಚಾರಣೆ ನಡೆಸಲು ಯತ್ನಿಸಿದಾಗ, ಕಾರಿನಲ್ಲಿ ಎಸ್ಕೇಪ್ ಆಗಿದ್ದಾನೆ. ಕೂಡಲೇ ಸ್ಥಳೀಯ ಪೊಲೀಸರು ಬೆನ್ನಟ್ಟಿ ಹಿಡಿದಿದ್ದು, ವಿಚಾರಣೆ ನಡೆಸಿದ್ದಾರೆ. ಪಾಸ್ಪೋರ್ಟ್ ಪರಿಶೀಲನೆ ನಡೆಸಿದಾಗ ಬಿಸಿನೆಸ್ ವೀಸಾದಲ್ಲಿ ಜೂನ್ 2ರಂದು ಢಾಕಾಕ್ಕೆ ಬಂದಿದ್ದು ಗೊತ್ತಾಗಿದೆ.
ಪರಿಶೀಲನೆ ವೇಳೆ ನಾಲ್ಕು ಬಾರಿ ಭಾರತಕ್ಕೆ ಬಂದಿದ್ದು ಗೊತ್ತಾಗಿದ್ದು, ದೆಹಲಿ, ಗುರುಗ್ರಾಮ್, ಹೈದರಾಬಾದ್ ನಲ್ಲಿ ಇದ್ದುದು ತಿಳಿದುಬಂದಿದೆ. ಕೆಲವು ದಿನಗಳ ಹಿಂದೆ ಹ್ಯಾನ್ ಜೂನ್ ಜೊತೆಗೆ ಪಾರ್ಟ್ನರ್ ಆಗಿದ್ದ ಸೂನ್ ಜಿಯಾಂಗ್, ಎಟಿಎಸ್ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ. ಆತನ ಜೊತೆಗೆ ನಿಕಟ ನೆಟ್ವರ್ಕ್ ಹೊಂದಿದ್ದ ಕಾರಣ ಹ್ಯಾನ್ ಜೂನ್ ಹೆಸರನ್ನು ಪೊಲೀಸರಿಗೆ ತಿಳಿಸಿದ್ದ. ಇದೇ ಕಾರಣದಿಂದ ಚೀನಾದಲ್ಲಿದ್ದ ಹ್ಯಾನ್ ಜೂನ್ ಭಾರತಕ್ಕೆ ಮರಳಲು ಪಾಸ್ಪೋರ್ಟ್ ಸಿಕ್ಕಿರಲಿಲ್ಲ. ಇದರಿಂದಾಗಿ ಬಾಂಗ್ಲಾದೇಶದ ಢಾಕಾಕ್ಕೆ ಬಂದು ಭಾರತಕ್ಕೆ ಒಳನುಸುಳಿದ್ದ ಅನ್ನುವುದು ತನಿಖೆಯಲ್ಲಿ ತಿಳಿದುಬಂದಿದೆ.
The Border Security Force nabbed a Chinese intruder attempting to enter India through the Bangladesh border, who has been identified as a wanted criminal
13-01-26 10:13 pm
HK News Desk
ಇಲೆಕ್ಟ್ರಾನಿಕ್ ಸಿಟಿ ಪಕ್ಕದಲ್ಲೇ ಬಾಂಗ್ಲಾ ವಲಸಿಗರ ಅ...
13-01-26 03:04 pm
ಉಪನ್ಯಾಸಕರ ಟಾರ್ಚರ್ ಎಂದು ಡೆಂಟಲ್ ವಿದ್ಯಾರ್ಥಿನಿ ಆತ...
13-01-26 12:57 pm
Gadag Lakkundi, Gold: ಲಕ್ಕುಂಡಿ ನಿಧಿ ಪತ್ತೆ ಜಾಗ...
12-01-26 08:20 pm
ಮನೆ ಕಟ್ಟಲು ಅಡಿಪಾಯ ತೆಗೆಯುವ ವೇಳೆ 1 ಕೆಜಿಯಷ್ಟು ನಿ...
10-01-26 10:28 pm
13-01-26 06:39 pm
HK News Desk
ರಷ್ಯಾ ಬಳಿಕ ಇರಾನ್ ಮುಂದಿಟ್ಟು ಟ್ರಂಪ್ ಬೆದರಿಕೆ ; ಇ...
13-01-26 04:21 pm
ಮುಂಬೈಗೆ ಬಂದೇ ಬರುತ್ತೇನೆ, ತಾಕತ್ತಿದ್ದರೆ ತಡೆಯಿರಿ....
12-01-26 11:00 pm
ಕುಂಬಳೆ ಟೋಲ್ ಗೇಟ್ ವಿರುದ್ಧ ರಸ್ತೆ ತಡೆದು ಪ್ರತಿಭಟನ...
12-01-26 05:01 pm
ಎಕ್ಸ್ ನಲ್ಲಿ ಅಶ್ಲೀಲ ಕಂಟೆಂಟ್ ; ಐಟಿ ಸಚಿವಾಲಯದ ಒತ್...
11-01-26 06:07 pm
13-01-26 10:30 pm
Mangalore Correspondent
Ayyappa Death, Mangalore: ಶಬರಿಮಲೆ ಹೊರಟಿದ್ದ ಅಯ...
12-01-26 08:03 pm
ಭಾರತ ರಕ್ತಪಾತಕ್ಕೆ ಇನ್ನಷ್ಟು ಸಿದ್ಧವಾಗಬೇಕು ; ಚೀನಾ...
11-01-26 10:39 pm
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
13-01-26 05:28 pm
HK News Desk
ಡಿಜಿಟಲ್ ಅರೆಸ್ಟ್ ನೆಪದಲ್ಲಿ ದೆಹಲಿಯ ವೃದ್ಧ ವೈದ್ಯ...
13-01-26 03:37 pm
ಡ್ರಗ್ಸ್ ನೆಟ್ವರ್ಕ್ ಭೇದಿಸಿದ ಮಂಗಳೂರು ಪೊಲೀಸರು ; ಬ...
12-01-26 06:28 pm
Mangalore Crime: ಬಾಂಗ್ಲಾದವನೆಂದು ಹೇಳಿ ವಲಸೆ ಕಾರ...
12-01-26 01:54 pm
Sharmila Death, Murder, Bangalore: ಮಂಗಳೂರಿನ ಟ...
12-01-26 01:31 pm