ಬ್ರೇಕಿಂಗ್ ನ್ಯೂಸ್
04-06-21 11:54 am Headline Karnataka News Network ದೇಶ - ವಿದೇಶ
ನವದೆಹಲಿ, ಜೂನ್ 04: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ತನ್ನ ಹಣಕಾಸು ನೀತಿಯಲ್ಲಿ ರೆಪೋ ಹಾಗೂ ರಿವರ್ಸ್ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಆರ್‌ಬಿಐ ದರ ನಿಗದಿ ಸಮಿತಿ(ಎಂಪಿಸಿ) ಮೂರು ದಿನಗಳ ಚರ್ಚೆಯ ಬಳಿಕ ಇಂದು ತನ್ನ ನಿರ್ಧಾರವನ್ನು ಪ್ರಕಟಿಸಿದೆ.
ಕೋವಿಡ್ 19 ಎರಡನೇ ಅಲೆಯ ಪ್ರಭಾವದ ಮೇಲಿನ ಅನಿಶ್ಚಿತತೆಯ ಪ್ರಭಾವದಿಂದ ಬ್ಯಾಂಕ್ ಮಾನದಂಡದ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಶುಕ್ರವಾರ ತನ್ನ ಹಣಕಾಸು ನೀತಿ ಪರಿಶೀಲನೆ ಮಾಡಿದ್ದು, ರೆಪೋ ದರ, ರಿವರ್ಸ್ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದೆ ಉಳಿಸಿಕೊಂಡಿದೆ.
ರೆಪೋ ದರವನ್ನು ಈ ಹಿಂದಿನ ಶೇಕಡಾ 4ರಷ್ಟು ಮತ್ತು ರಿವರ್ಸ್ ರೆಪೋ ದರವನ್ನು ಶೇಕಡಾ 3.35ರಷ್ಟು ಉಳಿಸಿಕೊಂಡಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.

ಇನ್ನು ಆರ್‌ಬಿಐ 2021-22ರ ಹಣಕಾಸು ವರ್ಷದ ಜಿಡಿಪಿ ಬೆಳವಣಿಗೆ ಮುನ್ಸೂಚನೆಯನ್ನು ಈ ಹಿಂದಿನ ಶೇಕಡಾ 10.5 ರಿಂದ ಶೇಕಡಾ 9.5ಕ್ಕೆ ತಗ್ಗಿಸಿದೆ.
ಕೋವಿಡ್-19 ಅನಿಶ್ಚಿತತೆ ಮತ್ತು ಹಣದುಬ್ಬರದ ಮೇಲಿನ ಆತಂಕಗಳ ನಡುವೆ ಆರ್‌ಬಿಐ ಶುಕ್ರವಾರ ಬಡ್ಡಿದರವನ್ನು ಬದಲಿಸಲಿಲ್ಲ. ಏಪ್ರಿಲ್ 2021 ರಲ್ಲಿ ನಡೆದ ಕೊನೆಯ ಎಂಪಿಸಿ ಸಭೆಯಲ್ಲಿ ರೆಪೋ, ರಿವರ್ಸ್ ರೆಪೋ ದರಗಳನ್ನು ಬದಲಿಸಲಿಲ್ಲ.
ಏಪ್ರಿಲ್ ತಿಂಗಳಿನಲ್ಲಿ ಎಂಪಿಸಿ ಸಭೆ ನಡೆದಿತ್ತು, ರೆಪೋ ದರವನ್ನು ಈ ಹಿಂದಿನ ಶೇಕಡಾ 4ರಷ್ಟು ಮತ್ತು ರಿವರ್ಸ್ ರೆಪೋ ದರವನ್ನು ಶೇಕಡಾ 3.35ರಷ್ಟು ಉಳಿಸಿಕೊಳ್ಳಲಾಗಿದೆ.ಇತ್ತೀಚಿನ ಹಣದುಬ್ಬರ ಕುಸಿತವು ತ್ವರಿತ ಬೆಳವಣಿಗೆಯನ್ನು ಮರಳಿ ಪಡೆದುಕೊಳ್ಳಲು ಅಗತ್ಯವಾದ ಎಲ್ಲ ಬಗೆಯ ಅನುಕೂಲಕರ ಬೆಂಬಲವನ್ನು ಒದಗಿಸಿದೆ. ವಿದೇಶಿ ವಿನಿಮಯ ಮೀಸಲು 600 ಬಿಲಿಯನ್ ಡಾಲರ್ ಗಡಿ ದಾಟುವ ನಿರೀಕ್ಷೆಯಿದೆ ಎಂದು ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ.
ಆರ್‌ಬಿಐ, ಸರ್ಕಾರದ 40,000 ಕೋಟಿ ರೂ ಭದ್ರತಾ ಠೇವಣಿಗಳನ್ನು ಜೂನ್ 17ರಂದು ಖರೀದಿಸಲಿದೆ. ಎರಡನೆಯ ತ್ರೈಮಾಸಿಕ ಅವಧಿಯಲ್ಲಿ 1.20 ಲಕ್ಷ ಕೋಟಿ ರೂ. ಸೆಕ್ಯುರಿಟಿಗಳನ್ನು ಖರೀದಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಏನಿದು ರಿವರ್ಸ್ ರೆಪೋ ದರ: ಬ್ಯಾಂಕ್‌ಗಳಿಂದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸಾಲ ಪಡೆದರೆ, ಅದರ ಮೇಲೆ ವಿಧಿಸುವ ಬಡ್ಡಿದರವನ್ನು ರಿವರ್ಸ್ ರೆಪೋ ದರ ಎಂದು ಕರೆಯಲಾಗುತ್ತದೆ. ಬ್ಯಾಂಕಿಂಗ್ ವಲಯದಲ್ಲಿ ಸಮತೋಲನೆ ಸಾಧಿಸಲು ರೆಪೋ ದರ ಪ್ರಮುಖ ಪಾತ್ರವಹಿಸುತ್ತದೆ.
ರೆಪೋ ದರ ಯಥಾಸ್ಥಿತಿ ಮುಂದುವರಿಕೆಯಿಂದ ಗೃಹ ಮತ್ತು ವಾಹನಗಳ ಮೇಲಿನ ಸಾಲದ ಇಎಂಐ ಇಳಿಕೆಯಾಗಲಿದೆ ಎಂಬುದು ಗ್ರಾಹಕರ ನಿರೀಕ್ಷೆಯಾಗಿದೆ.
The Reserve Bank of India (RBI) is likely to maintain the status quo on benchmark interest rates in its second Monetary Policy Meet of this fiscal, scheduled on June 4.
02-05-26 06:35 pm
HK News Staffer
ತುಮಕೂರಿನಲ್ಲಿ ವಾರದ ಅಂತರದಲ್ಲಿ 44 ನವಿಲು ಸಾವು ; ಬ...
02-05-26 04:48 pm
ಮಲ್ಲಿಕಾnರ್ಜುನ ಖರ್ಗೆ ಸಿಎಂ ಬದಲಾವಣೆ ಇಲ್ಲ ಎಂದಿರುವ...
01-05-26 08:33 pm
ರಾಜ್ಯದಲ್ಲಿ ಸದ್ಯಕ್ಕೆ ಸಿಎಂ ಬದಲಾವಣೆ ಇಲ್ಲ, ನಾನು ಸ...
30-04-26 08:16 pm
ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳ...
30-04-26 11:53 am
02-05-26 08:26 pm
HK News Staffer
ಆನ್ಲೈನ್ ಗೇಮ್ ವಿರುದ್ಧ ಕೇಂದ್ರ ಗದಾಪ್ರಹಾರ ; ಮಕ್ಕಳ...
02-05-26 11:18 am
Actor Vijay, Election, Poll: ಚುನಾವಣೋತ್ತರ ಸಮೀಕ...
29-04-26 11:18 pm
ಇದು ಫ್ರೆಂಡ್ಲಿ ಫೆಡರಲ್ ಅಸ್ಸಾಸಿನ್, ಟ್ರಂಪ್ ಅತ್ಯಾಚ...
27-04-26 02:48 pm
ಶ್ವೇತಭವನದ ಡಿನ್ನರ್ ಪಾರ್ಟಿಯಲ್ಲಿ ಗುಂಡಿನ ದಾಳಿ ; ಭ...
26-04-26 12:49 pm
02-05-26 11:05 pm
Mangalore Correspondent
ತುಂಬೆ ಅಣೆಕಟ್ಟಿನಲ್ಲಿ ಕೃತಕ ಅಭಾವ ಸೃಷ್ಟಿ ; ಸ್ಥಳಕ್...
02-05-26 08:58 pm
Mangalore Accident: ಬಜತ್ತೂರಿನಲ್ಲಿ ಬೈಕ್ - ಲಾರಿ...
29-04-26 11:05 pm
ತಾಲೂಕು ಆಸ್ಪತ್ರೆ ಖಾಸಗಿ ವಶಕ್ಕೆ ; ಆರೋಗ್ಯ ಸಚಿವರ ಉ...
28-04-26 09:18 pm
ASI Assault Case, Mangalore: ಎಎಸ್ಐ ಮೇಲೆ ಹಲ್ಲೆ...
28-04-26 01:35 pm
02-05-26 08:35 pm
HK News Staffer
ಕುಕ್ಕರ್ ಬಾಂಬರ್ ಗೆ 10 ವರ್ಷ ಶಿಕ್ಷೆ ; ಎನ್ಐಎ ಅಧಿಕ...
02-05-26 12:19 pm
ಕೋರ್ಟ್ ಜಟಾಪಟಿ ಬಳಿಕ ಕುದ್ರೋಳಿ ಕ್ಷೇತ್ರಕ್ಕೆ ಹೊಸ ಕ...
01-05-26 09:24 pm
ಸಹೋದ್ಯೋಗಿ ಮೇಲೆ ಆಸಿಡ್ ದಾಳಿ ; ಕೇರಳ ಮೂಲದ ವ್ಯಕ್...
01-05-26 07:18 pm
Rakesh Gladson Dsouza: ಮಂಗಳೂರಿನ ಯುವ ಉದ್ಯಮಿ ರಾ...
01-05-26 06:36 pm