ಬ್ರೇಕಿಂಗ್ ನ್ಯೂಸ್
02-05-21 01:09 pm Headline Karnataka News Network ದೇಶ - ವಿದೇಶ
Photo credits : NDTV
ಚೆನ್ನೈ,ಮೇ 2: ತಮಿಳುನಾಡು ವಿಧಾನಸಭಾ ಕ್ಷೇತ್ರದಲ್ಲಿ ಡಿಎಂಕೆ ನೇತೃತ್ವದ ಮೈತ್ರಿಕೂಟ ಮುನ್ನಡೆ ಸಾಧಿಸಿದೆ. ಮತ ಎಣಿಕೆ ಆರಂಭವಾಗಿ ಮೂರು ಗಂಟೆ ಕಳೆದಾಗ ಡಿಎಂಕೆ 137 ಸೀಟುಗಳಲ್ಲಿ ಮುನ್ನಡೆ ಸಾಧಿಸಿದೆ.
ಅದೇ ವೇಳೆ ಆಡಳಿತರೂಢ ಎಐಎಡಿಎಂಕೆ 95 ಸೀಟುಗಳಲ್ಲಿ ಮುನ್ನಡೆ ಸಾಧಿಸಿದೆ. 234 ಸೀಟುಗಳಿರುವ ತಮಿಳುನಾಡು ವಿಧಾನಸಭೆಯಲ್ಲಿ ಸರ್ಕಾರ ರಚಿಸಬೇಕಾದರೆ ರಾಜಕೀಯ ಪಕ್ಷಗಳಿಗೆ 118 ಸೀಟುಗಳ ಅಗತ್ಯವಿದೆ. 2011ರ ವಿಧಾನಸಭಾ ಚುನಾವಣೆ ಗೆದ್ದಿದ್ದ ಎಐಎಡಿಎಂಕೆ ಈ ಬಾರಿಯೂ ಅಧಿಕಾರ ಮುಂದುವರಿಸುವ ನಿರೀಕ್ಷೆ ಹೊಂದಿದ್ದು, ಡಿಎಂಕೆ ಈ ಬಾರಿ ಗದ್ದುಗೆಗೇರುವ ಮಹತ್ವಾಕಾಂಕ್ಷೆಯೊಂದಿಗೆ ಚುನಾವಣೆ ಸ್ಪರ್ಧಿಸಿದೆ. ತಮಿಳುನಾಡಿನ ಹಿರಿಯ ರಾಜಕಾರಣಿಗಳಾದ ಎಂ.ಕರುಣಾನಿಧಿ ಮತ್ತು ಜೆ. ಜಯಲಲಿತಾ ಅವರ ಮರಣದ ನಂತರ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದೆ.
ಎಐಎಡಿಎಂಕೆ ನೇತೃತ್ವದ ಎನ್ಡಿಎ ಮತ್ತು ಡಿಎಂಕೆ ನೇತೃತ್ವದ ಸೆಕ್ಯುಲರ್ ಪ್ರೊಗ್ರೆಸ್ಸಿವ್ ಅಲಯನ್ಸ್ ಶೇ 70-80 ಮತಗಳ ಬೆಂಬಲ ಹೊಂದಿದೆ. ಇನ್ನುಳಿದ ಮತಗಳು ಟಿಟಿವಿ ದಿನಕರನ್ ಅವರ ಅಮ್ಮ ಮಕ್ಕಳ್ ಮುನ್ನೇಟ್ರ ಕಳಗಂ, ಕಮಲ್ ಹಾಸನ್ ಅವರ ಮಕ್ಕಳ್ ನೀಧಿ ಮಯ್ಯಂ ಪಕ್ಷಕ್ಕೆ ಸಿಗುವುದಾಗಿ ಅಂದಾಜಿಸಲಾಗಿದೆ. ಏಪ್ರಿಲ 6ರಂದು ನಡೆದ ಚುನಾವಣೆಯಲ್ಲಿ ಶೇ72. 81 ಮತದಾನವಾಗಿತ್ತು.
ಡಿಎಂಕೆ ಕಾರ್ಯಕರ್ತರಿಂದ ಸಂಭ್ರಮಾಚರಣೆ
ಮತ ಎಣಿಕೆ ಪ್ರಕ್ರಿಯೆ ಮುಂದುವರಿಯುತ್ತಿದ್ದು ಆರಂಭಿಕ ಮತ ಎಣಿಕೆಯಲ್ಲಿ ಡಿಎಂಕೆ ಮುನ್ನಡೆ ಸಾಧಿಸಿದ ಸುದ್ದಿ ತಿಳಿದು ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದ್ದಾರೆ.
ಐದು ಸೀಟುಗಳಲ್ಲಿ ಬಿಜೆಪಿ ಮುನ್ನಡೆ
ತಿರುನಲ್ವೇಲಿ, ಧಾರಾಪುರಂ , ಹಾರ್ಬರ್, ನೀಲಗಿರಿ , ಕನ್ಯಾಕುಮಾರಿ ಈ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ.
ಎಂ.ಕೆ .ಸ್ಟಾಲಿನ್ ಮುನ್ನಡೆ;
ಕೊಲತ್ತೂರ್ ವಿಧಾನಸಭಾ ಕ್ಷೇತ್ರದಲ್ಲಿ ಡಿಎಂಕೆ ನಾಯಕ ಎಂ.ಕೆ,ಸ್ಟಾಲಿನ್ 1,700 ಮತಗಳ ಮುನ್ನಡೆ ಸಾಧಿಸಿದ್ದಾರೆ. ಇಲ್ಲಿ ಎಐಎಡಿಎಂಕೆ ಪಕ್ಷದ ಆದಿರಾಜಾರಾಂ ಪ್ರತಿಸ್ಪರ್ಧಿಯಾಗಿದ್ದಾರೆ
ಕಮಲ್ ಹಾಸನ್ ಮುನ್ನಡೆ;
ಕೊಯಮತ್ತೂರ್ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಮಕ್ಕಳ್ ನೀಧಿ ಮಯ್ಯಂ ಪಕ್ಷದ ಸಂಸ್ಥಾಪಕ, ನಟ ಕಮಲ್ ಹಾಸನ್ ಮುನ್ನಡೆ ಸಾಧಿಸಿದ್ದಾರೆ.
In Tamil Nadu, the DMK is set to form government but their performance was not as exit polls predicted. According to current leads, the DMK+ alliance is leading in 137 seats.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 04:38 pm
HK News Desk
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
ಭಾರತದ ಮೇಲೆ ದಾಳಿಗೆ ಟರ್ಕಿ ಡ್ರೋಣ್ ಬಳಕೆ ; ಒಂದೇ ರಾ...
11-05-25 06:25 pm
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
12-05-25 11:26 am
HK News Desk
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm