ಬ್ರೇಕಿಂಗ್ ನ್ಯೂಸ್
28-04-21 01:03 pm Headline Karnataka News Network ದೇಶ - ವಿದೇಶ
ಅಗರ್ತಲಾ, ಎ.28: ಕೋವಿಡ್ ನಿಯಮ ಉಲ್ಲಂಘಿಸಿ ಅದ್ದೂರಿ ಮದುವೆ ಸಮಾರಂಭ ನಡೆಸುತ್ತಿದ್ದ ವೇಳೆ ಜಿಲ್ಲಾಧಿಕಾರಿಯೇ ಸ್ವತಃ ರೈಡ್ ಮಾಡಿ, ವರ ಸೇರಿದಂತೆ ಸೇರಿದ್ದ ಜನರನ್ನು ಬಂಧಿಸಲು ಆದೇಶ ಮಾಡಿದ ಘಟನೆಯ ವಿಡಿಯೋ ವೈರಲ್ ಆಗಿದ್ದು ಅಧಿಕಾರಿಯ ದರ್ಪದ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ.
ತ್ರಿಪುರಾದಲ್ಲಿ ಕೋವಿಡ್ ಹಿನ್ನೆಲೆಯಲ್ಲಿ ರಾತ್ರಿ 10ರಿಂದ ಬೆಳಗ್ಗೆ 5 ರ ವರೆಗೆ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ. ಮದುವೆಗಳಿಗೆ ನೂರು ಜನಕ್ಕೆ ಸೀಮಿತಗೊಳಿಸಿ ಸಮಾರಂಭ ನಡೆಸುವಂತೆ ಸೂಚಿಸಲಾಗಿದೆ.

ಈ ನಡುವೆ, ಪಶ್ಚಿಮ ತ್ರಿಪುರಾದಲ್ಲಿ ರಾತ್ರಿ ಹತ್ತು ಗಂಟೆ ನಂತರವೂ ಮದುವೆ ಸಮಾರಂಭ ಏರ್ಪಡಿಸಿದ ಬಗ್ಗೆ ಮಾಹಿತಿ ಪಡೆದ ಜಿಲ್ಲಾಧಿಕಾರಿ ಶೈಲೇಶ್ ಕುಮಾರ್ ಯಾದವ್ ಸಮಾರಂಭ ನಡೆಯುತ್ತಿದ್ದ ವೇಳೆ ದಾಳಿ ನಡೆಸಿದ್ದಾರೆ. ಮದುವೆ ಹಾಲ್ ಗೆ ಪೊಲೀಸರ ಜೊತೆ ನುಗ್ಗಿದ ಜಿಲ್ಲಾಧಿಕಾರಿ, ಸಮಾರಂಭದಲ್ಲಿ ಸೇರಿದ್ದ ಅತಿಥಿಗಳನ್ನು ದಬಾಯಿಸಿ ಹೊರಗೆ ಕಳಿಸಿದ್ದಾರೆ. ಈ ವೇಳೆ, ಅತಿಥಿಗಳು ಮತ್ತು ಪೊಲೀಸರ ನಡುವೆ ವಾಗ್ವಾದ ನಡೆದಿದ್ದು ಕೂಡಲೇ ಅಲ್ಲಿಂದ ಜಾಗ ಖಾಲಿ ಮಾಡುವಂತೆ ಅಧಿಕಾರಿ ಸೂಚಿಸಿದ್ದಾರೆ.
ಮದುವೆ ಗಂಡು ಸೇರಿದಂತೆ ಜೊತೆಗಿದ್ದ ಸಂಬಂಧಿಕರನ್ನು ಜಿಲ್ಲಾಧಿಕಾರಿಯೇ ಕುತ್ತಿಗೆ ಕೈಹಾಕಿ ದೂಡಿದ್ದು ಪೊಲೀಸರಲ್ಲಿ ಅರೆಸ್ಟ್ ಮಾಡುವಂತೆ ಹೇಳಿದ್ದಾರೆ. ಮದುವೆ ನಡೆಸಲು ಅನುಮತಿ ಪಡೆದಿದ್ದೇವೆ ಎಂದು ವರನ ಕಡೆಯವರು ಹೇಳಿದರೂ, ರಾತ್ರಿ ಹತ್ತರ ವರೆಗೆ ಮಾತ್ರ ಅನುಮತಿ ಇರುವುದು. ಆನಂತರವೂ ನೀವು ಇಷ್ಟು ಜನರನ್ನು ಸೇರಿಸಿದ್ದೀರಿ. ಕೋವಿಡ್ ರೂಲ್ ಮತ್ತು 144 ಸೆಕ್ಷನ್ ಉಲ್ಲಂಘಿಸಿದ್ದಕ್ಕೆ ಇವರನ್ನೆಲ್ಲ ಬಂಧಿಸಿ ಎನ್ನುತ್ತಲೇ ದರ್ಪದಿಂದ ನಡೆದುಕೊಂಡಿದ್ದಾರೆ.

ಪೊಲೀಸರು 19 ಮಹಿಳೆಯರು ಸೇರಿದಂತೆ 31 ಮಂದಿಯನ್ನು ಬಂಧಿಸಿದ್ದಾರೆ. " ಇವರೆಲ್ಲ ಒಳ್ಳೆ ಎಜುಕೇಟೆಡ್ ಮಂದಿ. ಕೋವಿಡ್ ಸೋಂಕು ಹೆಚ್ಚುತ್ತಿದ್ದರೂ, ನಿಯಮ ಪಾಲಿಸುತ್ತಿಲ್ಲ. ಇದ್ರ ನಡುವೆ ಸರಕಾರ ಏನೂ ಮಾಡಲ್ಲ ಎಂದು ಜನರು ಆರೋಪ ಮಾಡುತ್ತಾರೆ. ಆದರೆ ಸೆಕ್ಷನ್ ಹಾಕಿದ್ದರೂ, ಅದನ್ನು ಪಾಲನೆ ಮಾಡದೆ ಸೋಂಕು ಹೆಚ್ಚಲು ಕಾರಣವಾಗುತ್ತಿದ್ದಾರೆ. ವೆಸ್ಟ್ ಅಗರ್ತಲಾ ಪೊಲೀಸ್ ಠಾಣೆಯ ಠಾಣಾಧಿಕಾರಿಯನ್ನು ಸಸ್ಪೆಂಡ್ ಮಾಡ್ತೀನಿ ಎಂದು ವಿಡಿಯೋದಲ್ಲಿ ಜಿಲ್ಲಾಧಿಕಾರಿ ಶೈಲೇಶ್ ಯಾದವ್ ಹೇಳಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಅಧಿಕಾರಿಯ ವರ್ತನೆ ಬಗ್ಗೆ ಆಕ್ರೋಶ, ಟೀಕೆ ಕೇಳಿಬಂದಿದೆ. ಸ್ಥಳೀಯ ಬಿಜೆಪಿ ಶಾಸಕ ಕೂಡ ಅಧಿಕಾರಿಯ ವರ್ತನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಲ್ಲಾಧಿಕಾರಿ ಅಲ್ಲಿ ಸೇರಿದ್ದ ಅತಿಥಿಗಳಿಗೆ ಕಿರುಕುಳ ಕೊಟ್ಟಿದ್ದಾರೆ. ಅರ್ಚಕರನ್ನು ದೂಡಿದ್ದಾರೆ. ವರನ ಕುತ್ತಿಗೆ ಹಿಡಿದು ತಳ್ಳಿದ್ದಾರೆ. ಈ ಪರಿ ದರ್ಪ ತೋರಬೇಕಿತ್ತೇ ಎಂದು ಅಧಿಕಾರಿಯ ಬಗ್ಗೆ ಶಾಸಕ ಸುಶಾಂತ್ ಚೌಧರಿ ಹೇಳಿದ್ದಾರೆ. ಘಟನೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ ಅಧಿಕಾರಿ ತನ್ನ ವರ್ತನೆ ಬಗ್ಗೆ ಕ್ಷಮೆ ಕೇಳಿದ್ದು ತಾನು ಕರ್ತವ್ಯ ಮಾಡಿದ್ದೇನಷ್ಟೇ ಎಂದಿದ್ದಾರೆ.

ಸ್ಥಳೀಯ ಪೊಲೀಸರು ಮದುವೆ ಆಯೋಜಕರಿಂದ ಹಣ ಪಡೆದು ಈ ರೀತಿಯ ಸಮಾರಂಭಕ್ಕೆ ಅವಕಾಶ ನೀಡಿದ್ದಾರೆಂದು ಆರೋಪ ಕೇಳಿಬಂದಿದ್ದು ಜಿಲ್ಲಾಧಿಕಾರಿ ಸ್ಥಳೀಯ ಠಾಣಾಧಿಕಾರಿಯನ್ನು ಸಸ್ಪೆಂಡ್ ಮಾಡಿದ್ದಾರೆ.
13-01-26 10:13 pm
HK News Desk
ಇಲೆಕ್ಟ್ರಾನಿಕ್ ಸಿಟಿ ಪಕ್ಕದಲ್ಲೇ ಬಾಂಗ್ಲಾ ವಲಸಿಗರ ಅ...
13-01-26 03:04 pm
ಉಪನ್ಯಾಸಕರ ಟಾರ್ಚರ್ ಎಂದು ಡೆಂಟಲ್ ವಿದ್ಯಾರ್ಥಿನಿ ಆತ...
13-01-26 12:57 pm
Gadag Lakkundi, Gold: ಲಕ್ಕುಂಡಿ ನಿಧಿ ಪತ್ತೆ ಜಾಗ...
12-01-26 08:20 pm
ಮನೆ ಕಟ್ಟಲು ಅಡಿಪಾಯ ತೆಗೆಯುವ ವೇಳೆ 1 ಕೆಜಿಯಷ್ಟು ನಿ...
10-01-26 10:28 pm
13-01-26 06:39 pm
HK News Desk
ರಷ್ಯಾ ಬಳಿಕ ಇರಾನ್ ಮುಂದಿಟ್ಟು ಟ್ರಂಪ್ ಬೆದರಿಕೆ ; ಇ...
13-01-26 04:21 pm
ಮುಂಬೈಗೆ ಬಂದೇ ಬರುತ್ತೇನೆ, ತಾಕತ್ತಿದ್ದರೆ ತಡೆಯಿರಿ....
12-01-26 11:00 pm
ಕುಂಬಳೆ ಟೋಲ್ ಗೇಟ್ ವಿರುದ್ಧ ರಸ್ತೆ ತಡೆದು ಪ್ರತಿಭಟನ...
12-01-26 05:01 pm
ಎಕ್ಸ್ ನಲ್ಲಿ ಅಶ್ಲೀಲ ಕಂಟೆಂಟ್ ; ಐಟಿ ಸಚಿವಾಲಯದ ಒತ್...
11-01-26 06:07 pm
13-01-26 10:30 pm
Mangalore Correspondent
Ayyappa Death, Mangalore: ಶಬರಿಮಲೆ ಹೊರಟಿದ್ದ ಅಯ...
12-01-26 08:03 pm
ಭಾರತ ರಕ್ತಪಾತಕ್ಕೆ ಇನ್ನಷ್ಟು ಸಿದ್ಧವಾಗಬೇಕು ; ಚೀನಾ...
11-01-26 10:39 pm
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
13-01-26 05:28 pm
HK News Desk
ಡಿಜಿಟಲ್ ಅರೆಸ್ಟ್ ನೆಪದಲ್ಲಿ ದೆಹಲಿಯ ವೃದ್ಧ ವೈದ್ಯ...
13-01-26 03:37 pm
ಡ್ರಗ್ಸ್ ನೆಟ್ವರ್ಕ್ ಭೇದಿಸಿದ ಮಂಗಳೂರು ಪೊಲೀಸರು ; ಬ...
12-01-26 06:28 pm
Mangalore Crime: ಬಾಂಗ್ಲಾದವನೆಂದು ಹೇಳಿ ವಲಸೆ ಕಾರ...
12-01-26 01:54 pm
Sharmila Death, Murder, Bangalore: ಮಂಗಳೂರಿನ ಟ...
12-01-26 01:31 pm