ಬ್ರೇಕಿಂಗ್ ನ್ಯೂಸ್
15-04-21 05:27 pm Headline Karnataka News Network ದೇಶ - ವಿದೇಶ
ನವದೆಹಲಿ, ಏ.15 : ಕಳೆದ ವರ್ಷ ಕೋವಿಡ್ 19 ಸೋಂಕು ಹೆಚ್ಚಳವಾದ ಹಿನ್ನೆಲೆಯಲ್ಲಿ ಅನಾರೋಗ್ಯದ ಕಾರಣದಿಂದ ತಿಹಾರ್ ಜೈಲಿನಿಂದ ಪೆರೋಲ್ ಮೇಲೆ 6,740 ಮಂದಿ ವಿಚಾರಣಾಧೀನ ಕೈದಿಗಳು ಬಿಡುಗಡೆಗೊಂಡಿದ್ದು, ಇದರಲ್ಲಿ 3,468 ಕೈದಿಗಳು ನಾಪತ್ತೆಯಾಗಿರುವುದಾಗಿ ಜೈಲಿನ ಅಧಿಕಾರಿಗಳು ತಿಳಿಸಿದ್ದು, ಅವರ ಪತ್ತೆಗಾಗಿ ದೆಹಲಿ ಪೊಲೀಸರ ನೆರವು ಕೋರಲಾಗಿದೆ ಎಂದು ವರದಿ ತಿಳಿಸಿದೆ.
ಪೆರೋಲ್ ಮೇಲೆ ಆರೋಪಿಗಳು, ವಿಚಾರಣಾಧೀನ ಕೈದಿಗಳು ಹೊರ ಹೋಗಿದ್ದು, ಇವರು ಎಚ್ ಐವಿ, ಕ್ಯಾನ್ಸರ್, ಕಿಡ್ನಿ ಸಮಸ್ಯೆ, ಹೆಪಟೈಟೀಸ್ ಬಿ (ಸಿ), ಅಸ್ತಮಾ ಮತ್ತು ಟಿಬಿಯಂತಹ ಕಾಯಿಲೆಯಿಂದ ಬಳಲುತ್ತಿದ್ದರು. ದಕ್ಷಿಣ ಏಷ್ಯಾದ ಅತೀ ದೊಡ್ಡ ಜೈಲು ಸಂಕೀರ್ಣಗಳಲ್ಲಿ ಒಂದಾಗಿರುವ ತಿಹಾರ್ ಜೈಲಿನಲ್ಲಿ 10,026 ಕೈದಿಗಳನ್ನು ಇರಿಸಬಹುದಾಗಿದೆ ಎಂದು ವರದಿ ತಿಳಿಸಿದೆ.
ದೆಹಲಿಯ ತಿಹಾರ್, ಮಾಂಡೋಲಿ ಮತ್ತು ರೋಹಿಣಿ ಜೈಲುಗಳಿಂದ 1,184 ಆರೋಪಿಗಳನ್ನು ಕೋವಿಡ್ ಪೆರೋಲ್ ಮೇಲೆ ಬಿಡುಗಡೆಗೊಳಿಸಲಾಗಿತ್ತು. ಆರಂಭಿಕ ಎಂಟು ವಾರಗಳ ಗಡುವಿನ ಮೇಲೆ ಬಿಡುಗಡೆ ಮಾಡಲಾಗಿದ್ದು, ನಂತರ ಸಮಯಕ್ಕೆ ತಕ್ಕಂತೆ ಅವಧಿಯನ್ನು ಮುಂದುವರಿಸಲಾಗಿತ್ತು ಎಂದು ಜೈಲಿನ ಮೂಲಗಳು ವಿವರಿಸಿದೆ.
ಪೆರೋಲ್ ಮೇಲೆ ಹೋದ ಕೈದಿಗಳು ಫೆಬ್ರುವರಿ 7 ಮತ್ತು ಮಾರ್ಚ್ 6ರ ನಡುವೆ ಶರಣಾಗಬೇಕಿತ್ತು. ಆದರೆ 1,184 ಕೈದಿಗಳ ಪೈಕಿ 112 ಕೈದಿಗಳು ನಾಪತ್ತೆಯಾಗಿದ್ದಾರೆ. ಜೈಲಿನ ಅಧಿಕಾರಿಗಳು ಆರೋಪಿತರ ಕುಟುಂಬದ ಸದಸ್ಯರನ್ನು ಭೇಟಿಯಾದಾಗ, ಕೈದಿಗಳು ಮನೆಯಲ್ಲಿ ಇಲ್ಲ ಎಂದು ತಿಳಿಸಿರುವುದಾಗಿ ವರದಿ ಹೇಳಿದೆ.
ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ 5,556 ವಿಚಾರಣಾಧೀನ ಕೈದಿಗಳ ಪೈಕಿ ಕೇವಲ 2,200 ಕೈದಿಗಳು ಮಾತ್ರ ವಾಪಸ್ ಆಗಿರುವುದಾಗಿ ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ. 2021ರ ಮಾರ್ಚ್ 6ರಂದು ಕೈದಿಗಳು ಶರಣಾಗುವ ಪ್ರಕ್ರಿಯೆ ಆರಂಭಿಸಲಾಗಿತ್ತು, ಆದರೆ ಈವರೆಗೆ 3,468 ಕೈದಿಗಳು ನಾಪತ್ತೆಯಾಗಿರುವುದಾಗಿ ತಿಹಾರ್ ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ.
Of the 6,740 prisoners at Tihar Jail who were released on parole last year in the wake of the Covid-19 pandemic, 3,468 have gone “missing”. Jail authorities have now approached the Delhi Police to help trace them.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:23 am
HK News Desk
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
ಭಾರತದ ಮೇಲೆ ದಾಳಿಗೆ ಟರ್ಕಿ ಡ್ರೋಣ್ ಬಳಕೆ ; ಒಂದೇ ರಾ...
11-05-25 06:25 pm
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
ಜಮ್ಮು ಗಡಿಯಲ್ಲಿ ಪಾಕ್ ಶೆಲ್ ದಾಳಿ ; ಬಿಎಸ್ಎಫ್ ಯೋಧ,...
11-05-25 01:43 pm
12-05-25 11:26 am
HK News Desk
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm