ಬ್ರೇಕಿಂಗ್ ನ್ಯೂಸ್
13-04-21 09:27 pm Headline Karnataka News Network ಕರಾವಳಿ
ಮಂಗಳೂರು, ಎ.13: ಅರಬ್ಬೀ ಸಮುದ್ರದಲ್ಲಿ ಸಿಂಗಾಪುರ ಮೂಲದ ಕಂಟೇನರ್ ಹಡಗಿಗೆ ಡಿಕ್ಕಿಯಾಗಿ ದುರಂತಕ್ಕೀಡಾದ ಮೀನುಗಾರಿಕೆ ಬೋಟಿನಲ್ಲಿದ್ದ ಇಬ್ಬರನ್ನು ರಕ್ಷಣೆ ಮಾಡಲಾಗಿದೆ. ಮೂವರು ಕಾರ್ಮಿಕರ ಮೃತದೇಹ ಪತ್ತೆಯಾಗಿದ್ದು ಉಳಿದ ಸಿಬಂದಿಯ ಪತ್ತೆಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.
ಸಿಂಗಾಪುರ ಮೂಲದ ಕಂಟೇನರ್ ಹಡಗು ಮಂಗಳೂರು ಬಂದರಿನಿಂದ 43 ನಾಟಿಕಲ್ ಮೈಲ್ ದೂರದಲ್ಲಿ ಸಮುದ್ರ ಮಧ್ಯೆ ಸಂಚರಿಸುತ್ತಿದ್ದಾಗ ಮೀನುಗಾರಿಕಾ ಬೋಟಿಗೆ ಡಿಕ್ಕಿಯಾಗಿದೆ ಎನ್ನಲಾಗುತ್ತಿದೆ. ನಿನ್ನೆ ತಡರಾತ್ರಿ ಎರಡು ಗಂಟೆ ಸುಮಾರಿಗೆ ಘಟನೆ ನಡೆದಿದ್ದು ಕೋಸ್ಟ್ ಗಾರ್ಡ್ ಮತ್ತು ಕಂಟೇನರ್ ಹಡಗಿನ ಸಿಬಂದಿ ಸೇರಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.

ಮೂವರ ಮೃತದೇಹ ಪತ್ತೆಯಾಗಿದ್ದು ಅವರನ್ನು ಪಶ್ಚಿಮ ಬಂಗಾಳ ಮೂಲದ ಅಲೆಕ್ಸಾಂಡರ್ ಸೈರಂಗ್, ಅವರ ಮಾವ ಎನ್ನಲಾಗಿರುವ ಇನ್ನೊಬ್ಬ ವ್ಯಕ್ತಿ (ಹೆಸರು ಗೊತ್ತಾಗಿಲ್ಲ), ಮತ್ತೊಬ್ಬ ಮಾಣಿಕ್ ದಾಸ್ ಎಂಬವರೆಂದು ಕೋಸ್ಟ್ ಗಾರ್ಡ್ ಮಾಹಿತಿ ನೀಡಿದೆ. ಈ ನಡುವೆ ಇಬ್ಬರನ್ನು ರಕ್ಷಿಸಿದ್ದು ಪಶ್ಚಿಮ ಬಂಗಾಳದ ಸುನಿಲ್ ದಾಸ್ (34), ತಮಿಳುನಾಡಿನ ರಾಮೇಶ್ವರದ ವೇಲ್ ಮುರುಗನ್ (37) ಎಂದು ಗುರುತಿಸಲಾಗಿದೆ.
ಬೋಟಿನಲ್ಲಿ ಒಟ್ಟು 14 ಮಂದಿ ಇದ್ದರೆನ್ನಲಾಗಿದ್ದು ಈ ಪೈಕಿ ಒಂಬತ್ತು ಮಂದಿಯ ಸುಳಿವು ಪತ್ತೆಯಾಗಿಲ್ಲ. ಕೋಸ್ಟ್ ಗಾರ್ಡ್ ನಿಂದ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.
ಸಿಂಗಾಪುರ್ ಎಂವಿ ಆ್ಯಪಲ್ ಎಂಬ ಹೆಸರಿನ ಕಂಟೇನರ್ ಹಡಗು ಡಿಕ್ಕಿಯಾಗಿತ್ತು. ರಭಾ ಎಂಬ ಹೆಸರಿನ ಬೋಟ್ ಕೇರಳದ ಕೋಯಿಕ್ಕೋಡ್ ಜಿಲ್ಲೆಯ ಬೇಪೂರ್ ಮೂಲದ್ದಾಗಿದ್ದು ಎರಡು ದಿನಗಳ ಹಿಂದೆ ಬೇಪೂರ್ ನಿಂದ ಮೀನುಗಾರಿಕೆಗೆ ಹೊರಟಿತ್ತು. ತಮಿಳುನಾಡು ಮತ್ತು ಪಶ್ಚಿಮ ಬಂಗಾಳದ ತಲಾ ಏಳು ಮಂದಿ ಬೋಟಿನಲ್ಲಿದ್ದರು.
In a tragic incident, three fishermen were killed after the boat start to sink by collision with Singapore ship in Mangalore. Several are said to be missing among 14 members two have been reduced and three found dead.
08-10-26 08:00 pm
HK News Staffer
B.Y. Vijayendra: ಸ್ಟಿಂಗ್, ಡಿಂಗ್ ಆಪರೇಷನ್ ಮಾ...
08-10-26 04:38 pm
ಜನಸಾಮಾನ್ಯರು ಅಪಘಾತದಲ್ಲಿ ಸತ್ತರೆ 5 ಲಕ್ಷ ಕೊಡಕ್ಕಾಗ...
07-10-26 10:45 pm
HD Kumaraswamy, DK Shivakumar: ಡಿಕೆಶಿ ಸಿಎಂ ಆಗ...
07-10-26 09:16 pm
ಬೆಂಗಳೂರು ನಗರದಲ್ಲಿ ಐದು ಕಮಿಷನರೇಟ್ ; ವಿಭಜನೆಗೆ ಸಚ...
06-10-26 10:46 pm
11-10-26 10:28 pm
HK News Desk
ರಷ್ಯನ್ ತೈಲಕ್ಕಾಗಿ ಭಾರತಕ್ಕೆ ಬರೆ ಹಾಕಿದ್ದ ಅಮೆರಿಕ...
11-10-26 03:20 pm
ರಿಯಾದ್ ಏರ್ಪೋರ್ಟ್ ಮೇಲೆ ಹೌತಿಗಳಿಂದ ಬಾಂಬ್ ದಾಳಿ ;...
11-10-26 02:34 pm
Elon Musk , Ambani, Modi: ಭಾರತದ ಆತ್ಮೀಯ ಪ್ರಧಾನ...
10-10-26 10:31 pm
ಸಿಇಸಿ ವಿರುದ್ಧ ದೆಹಲಿ, ಮುಂಬೈನಲ್ಲಿ ಭಾರೀ ಪ್ರತಿಭಟನ...
10-10-26 07:33 pm
11-10-26 06:35 pm
HK News Staffer
Someshwar Beach, Mangalore: ಸೋಮೇಶ್ವರದಲ್ಲಿ ಸಮು...
11-10-26 05:37 pm
Mahesh Shetty Thimarodi, Sowjanya Case: ಸೌಜನ್...
10-10-26 09:27 pm
Sowjanya, Mangalore, Justice: ಬೆಳ್ತಂಗಡಿಯಲ್ಲಿ...
10-10-26 09:17 pm
ಕರ್ನಾಟಕ ಕಬಡ್ಡಿ ಪ್ರೀಮಿಯರ್ ಲೀಗ್ ; ಉತ್ತರ ಕನ್ನಡ ಸ...
10-10-26 05:09 pm
10-10-26 02:27 pm
HK News Staffer
ಮೃಗಾಲಯಕ್ಕೆ ಗಂಡನೊಂದಿಗೆ ಬಂದ ನವವಿವಾಹಿತೆ: ಪತಿ ಬೈಕ...
09-10-26 08:41 pm
Dharwad Accident: ಧಾರವಾಡ ; ಕಾರು - ಕ್ಯಾಂಟರ್ ನಡ...
09-10-26 05:37 pm
ಕೊರಿಯರ್ ನಲ್ಲಿ ಪಂಜಾಬಿನಿಂದ ಮಂಗಳೂರಿಗೆ ಎಂಡಿಎಂಎ ಪೂ...
09-10-26 03:25 pm
Nisha Raphael, POCSO: 11 ವರ್ಷದ ಬಾಲಕನ ಮೇಲೆ ಲೈಂ...
09-10-26 03:23 pm