ಸಮುದ್ರ ಮಧ್ಯೆ ಮೀನುಗಾರಿಕಾ ಬೋಟ್ ದುರಂತ ; 14 ಮಂದಿ ನಾಪತ್ತೆ, ಮೂರು ಶವ ಪತ್ತೆ -ಕೋಸ್ಟ್ ಗಾರ್ಡ್ ಹಡಗಿಗೆ ಡಿಕ್ಕಿ ಶಂಕೆ !

13-04-21 01:43 pm       Mangalore Correspondent   ಕರಾವಳಿ

ಅರಬ್ಬೀ ಸಮುದ್ರ ಮಧ್ಯೆ ಕೇರಳ ಮೂಲದ ಮೀನುಗಾರಿಕಾ ಬೋಟ್ ದುರಂತಕ್ಕೀಡಾಗಿದ್ದು, ಮೂರು ಮಂದಿ ಮೃತಪಟ್ಟ ಘಟನೆ ನಡೆದಿದೆ.

Photo credits : Representative Image

ಮಂಗಳೂರು, ಎ.13: ಅರಬ್ಬೀ ಸಮುದ್ರ ಮಧ್ಯೆ ಕೇರಳ ಮೂಲದ ಮೀನುಗಾರಿಕಾ ಬೋಟ್ ದುರಂತಕ್ಕೀಡಾಗಿದ್ದು, ಮೂರು ಮಂದಿ ಮೃತಪಟ್ಟ ಘಟನೆ ನಡೆದಿದೆ. ಮಂಗಳೂರು ಬಂದರಿನಿಂದ 43 ನಾಟಿಕಲ್ ಮೈಲ್ ದೂರದಲ್ಲಿ ಸೋಮವಾರ ರಾತ್ರಿ ದುರಂತ ನಡೆದಿದ್ದು ಇಂಡಿಯನ್ ಕೋಸ್ಟ್ ಗಾರ್ಡಿನ ಮೂರು ಹಡಗುಗಳಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

ದುರಂತಕ್ಕೀಡಾದ ಬೋಟ್ ಕೇರಳದ ಕೋಯಿಕ್ಕೋಡ್ ಜಿಲ್ಲೆಯ ಬೇಪೂರಿನದ್ದು ಎಂದು ಮಾತೃಭೂಮಿ ನ್ಯೂಸ್ ವರದಿ ಮಾಡಿದ್ದು, ಅದರಲ್ಲಿ 14 ಮಂದಿ ಇದ್ದರು ಎನ್ನೋ ಮಾಹಿತಿ ಸಿಕ್ಕಿದೆ. ಬೋಟಿನಲ್ಲಿದ್ದ ಕಾರ್ಮಿಕರು ತಮಿಳ್ನಾಡಿನ ಏಳು ಮಂದಿ ಮತ್ತು ಉಳಿದವರು ಪಶ್ಚಿಮ ಬಂಗಾಳದವರು ಎಂದು ತಿಳಿದುಬಂದಿದೆ.

ಮೂರು ಐಸಿಜಿಎಸ್ ಹಡಗಿನಲ್ಲಿ ಆಪರೇಶನ್ ಕಾರ್ಯ ನಡೆದಿದೆ. ಮೂಲಗಳ ಪ್ರಕಾರ, ಮೀನುಗಾರಿಕಾ ಬೋಟ್ ಕೋಸ್ಟ್ ಗಾರ್ಡ್ ಹಡಗಿಗೆ ಡಿಕ್ಕಿಯಾಗಿ ದುರಂತ ಸಂಭವಿಸಿದೆ ಎನ್ನಲಾಗುತ್ತಿದೆ. ದುರಂತದಲ್ಲಿ 14 ಮಂದಿ ನಾಪತ್ತೆಯಾಗಿದ್ದು ಕೂಡಲೇ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಮೂರು ಮೃತದೇಹಗಳನ್ನು ಪತ್ತೆ ಮಾಡಲಾಗಿದೆ. ಹಡಗು ಮತ್ತು ಹೆಲಿಕಾಪ್ಟರ್ ಮೂಲಕ ರಕ್ಷಣಾ ಕಾರ್ಯ ನಡೆಸಲಾಗಿದೆ.

ಕೇರಳ ಸಾರಿಗೆ ಸಚಿವ ಎ.ಕೆ. ಸಸೀಂದ್ರನ್ ಎರಡು ಶವ ಸಿಕ್ಕಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಆದರೆ, ಬೋಟಿನ ಮಾಲಕರು ಮೂರು ಶವ ಸಿಕ್ಕಿದೆ ಎನ್ನುವುದನ್ನು ತಿಳಿಸಿದ್ದಾರೆ. ಇದೇ ವೇಳೆ, ಇಂಡಿಯನ್ ಕೋಸ್ಟ್ ಗಾರ್ಡ್ ಟ್ವೀಟ್ ಮಾಡಿದ್ದು, ಮೂರು ಹಡಗಿನ ಮೂಲಕ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದೇವೆ. ಬೋಟಿನಲ್ಲಿದ್ದ ಇಬ್ಬರು ಸಿಬಂದಿ ಪತ್ತೆಯಾಗಿದ್ದಾರೆ ಎಂದು ಹೇಳಿದೆ. 

Three fishermen were killed and several went missing after a fishing boat capsized by collision with ship 43 Nautical miles of Mangalore Bunder Port. The Boat Rabha Ventured into the sea from Kozhikode district, Kerala.