ಬ್ರೇಕಿಂಗ್ ನ್ಯೂಸ್
25-03-21 08:24 pm Headline Karnataka News Network ದೇಶ - ವಿದೇಶ
ನವದೆಹಲಿ: ಕೇಂದ್ರ ಸರ್ಕಾರದ ಹೊಸ ಕೃಷಿ ಕಾನೂನುಗಳ ವಿರುದ್ಧ ದೆಹಲಿಯ ಎಲ್ಲಾ ಗಡಿಗಳಲ್ಲಿ ಸುಮಾರು ನಾಲ್ಕು ತಿಂಗಳಿಂದ ರೈತರು ನಡೆಸುತ್ತಿರುವ ಪ್ರತಿಭಟನೆ ಮುಂದುವರೆದಿದ್ದು ನಾಳೆ ಎಂದರೆ ಮಾರ್ಚ್ 26ರಂದು ಸಂಪೂರ್ಣ ಭಾರತ ಬಂದ್‌ಗೆ ಕರೆ ನೀಡಿದ್ದಾರೆ. ರೈತರ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಮಾರ್ಚ್ 26 ರಂದು ಭಾರತ್ ಬಂದ್ ಅನ್ನು ಸಂಪೂರ್ಣವಾಗಿ ಯಶಸ್ವಿಗೊಳಿಸುವಂತೆ ದೇಶದ ನಾಗರಿಕರಿಗೆ ಮನವಿ ಮಾಡಿದೆ.
ಬೆಳಿಗ್ಗೆ 6 ರಿಂದ ಸಂಜೆ 6 ರವರೆಗೆ ಭಾರತ ಬಂದ್:
ಸುದ್ದಿ ಸಂಸ್ಥೆ ಪಿಟಿಐ ನೀಡಿದ ವರದಿಯ ಪ್ರಕಾರ, ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಮಾರ್ಚ್ 26 ರಂದು ಬೆಳಿಗ್ಗೆ 6 ರಿಂದ ಸಂಜೆ 6 ರವರೆಗೆ ರೈತರಿಂದ ಭಾರತ್ ಬಂದ್‌ಗೆ ಕರೆ ನೀಡಿದೆ. ಈ ಸಮಯದಲ್ಲಿ, ದೇಶಾದ್ಯಂತ ರಸ್ತೆ ಮತ್ತು ರೈಲು ಸಾರಿಗೆ, ಮಾರುಕಟ್ಟೆಗಳು ಮತ್ತು ಇತರ ಸಾರ್ವಜನಿಕ ಸ್ಥಳಗಳನ್ನು ಮುಚ್ಚಲು ನಿರ್ಧರಿಸಲಾಗಿದೆ. ಆದಾಗ್ಯೂ, ಎಲ್ಲಾ ತುರ್ತು ಆರೋಗ್ಯ ಸೇವೆಗಳು ಬಂದ್ ಸಮಯದಲ್ಲಿ ಕಾರ್ಯನಿರ್ವಹಿಸುತ್ತವೆ ಎಂದು ತಿಳಿದುಬಂದಿದೆ.
ರೈತ ಮುಖಂಡ ದರ್ಶನ್ ಪಾಲ್ ಮಾತನಾಡಿ, 'ಭಾರತ್ ಬಂದ್ ಅನ್ನು ಯಶಸ್ವಿಗೊಳಿಸಿ ಅನ್ನದಾತ'ರಿಗೆ ಬೆಂಬಲ ಸೂಚಿಸುವಂತೆ ದೇಶದ ಜನರಿಗೆ ಮನವಿ ಮಾಡಿದ್ದಾರೆ.
ದೆಹಲಿ ಗಡಿಯಲ್ಲಿ ನಾಲ್ಕು ತಿಂಗಳಿನಿಂದ ನಡೆಯುತ್ತಿರುವ ರೈತರ ಹೋರಾಟ:
ಹೊಸ ಕೃಷಿ ಕಾನೂನುಗಳ ವಿರುದ್ಧ ದೆಹಲಿ ಗಡಿಗಳಲ್ಲಿ ರೈತರ ಪ್ರತಿಭಟನೆ ನವೆಂಬರ್ 26 ರಂದು ಪ್ರಾರಂಭವಾಯಿತು. ಮಾರ್ಚ್ 26 ರಂದು ರೈತರ ಪ್ರತಿಭಟನೆ ನಾಲ್ಕು ತಿಂಗಳನ್ನು ಪೂರೈಸುತ್ತಿದೆ. ದೆಹಲಿಯ ಸಿಂಗು, ಟಿಕ್ರಿ ಮತ್ತು ಗಾಜಿಪುರ ಗಡಿಗಳಲ್ಲಿ ರೈತರು ಕ್ಯಾಂಪ್ ಮಾಡುತ್ತಿದ್ದಾರೆ. ಈ ಅವಧಿಯಲ್ಲಿ ಸರ್ಕಾರದೊಂದಿಗೆ ಹಲವಾರು ಸುತ್ತಿನ ಮಾತುಕತೆ ನಡೆಸಲಾಗಿದ್ದರೂ ಇನ್ನೂ ಸಮಸ್ಯೆ ಬಗೆಹರಿದಿಲ್ಲ. ರೈತ ಸಂಘಟನೆಗಳು ಹೊಸ ಕಾನೂನುಗಳನ್ನು ಕೈಬಿಡುವಂತೆ ಪಟ್ಟು ಹಿಡಿದಿದ್ದರೆ, ಕಾನೂನುಗಳ ಲೋಪದೋಷಗಳನ್ನು ಚರ್ಚಿಸುವ ಮೂಲಕ ಸರ್ಕಾರ ತಿದ್ದುಪಡಿಗೆ ಸಿದ್ಧವಾಗಿದೆ. ಇದರೊಂದಿಗೆ ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್‌ಪಿ) ಕಾನೂನು ಖಾತರಿ ನೀಡಬೇಕು ಎಂಬ ರೈತರ ಬೇಡಿಕೆಯಿದೆ.
ಹೋಳಿ ದಹನದ ಸಮಯದಲ್ಲಿ ಹೊಸ ಕೃಷಿ ಕಾನೂನುಗಳ ನಕಲನ್ನು ಸುಡಲು ರೈತರ ನಿರ್ಧಾರ:
ಈ ಮೊದಲು, ರೈತ ಮುಖಂಡ ಬುಟಾ ಸಿಂಗ್ ಬುರ್ಜ್‌ಗಿಲ್, 'ಹೊಸ ಕೃಷಿ ಕಾನೂನುಗಳ ವಿರುದ್ಧ ನಾಲ್ಕು ತಿಂಗಳ ಪ್ರತಿಭಟನೆಯ ನಂತರ ನಾವು ಮಾರ್ಚ್ 26 ರಂದು ನಾವು ಭಾರತ್ ಬಂದ್‌ಗೆ ಕರೆ ನೀಡಿದ್ದೇವೆ. ಬೆಳಿಗ್ಗೆಯಿಂದ ಸಂಜೆಯವರೆಗೆ ಶಾಂತಿಯುತ ಪ್ರತಿಭಟನೆ ನಡೆಸುತ್ತೇವೆ. ಇದರೊಂದಿಗೆ ಮಾರ್ಚ್ 28 ರಂದು ನಡೆಯುವ 'ಹೋಳಿಕಾ ದಹನ್' ಸಂದರ್ಭದಲ್ಲಿ ಕೃಷಿ ಕಾನೂನುಗಳ ನಕಲಿ ಪ್ರತಿಗಳನ್ನು ಸುಡಲಾಗುವುದು ಎಂದು ತಿಳಿಸಿದ್ದಾರೆ.
ಭಾರತ್ ಬಂದ್‌ಗೆ ವೈಎಸ್ಆರ್ ಕಾಂಗ್ರೆಸ್ ಬೆಂಬಲ:
ಆಂಧ್ರಪ್ರದೇಶದ ಆಡಳಿತಾರೂಢ ವೈಎಸ್ಆರ್ ಕಾಂಗ್ರೆಸ್ ಪಕ್ಷ (YSRCP) ಮಾರ್ಚ್ 26 ರಂದು ರೈತರು ಕರೆ ನೀಡಿರುವ ಭಾರತ್ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದೆ.
ಮಾರ್ಚ್ 26 ರಂದು ಭಾರತ್ ಬಂದ್: ಏನಿದೆ? ಏನಿಲ್ಲ?
ವಿಧಾನಸಭಾ ಚುನಾವಣೆಗಳು ನಡೆಯಲಿರುವ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಮಾರ್ಚ್ 26 ರಂದು ಭಾರತ್ ಬಂದ್‌ನಿಂದ ವಿನಾಯಿತಿ ನೀಡಲಾಗುವುದು ಎಂದು ರೈತ ಸಂಘ ಸ್ಪಷ್ಟಪಡಿಸಿದೆ. ತುರ್ತು ಸೇವೆಗಳಿಗೆ ತೊಂದರೆಯಾಗುವುದಿಲ್ಲ ಔಷಧದ ಲಭ್ಯತೆ, ಹಾಲು ಪೂರೈಕೆ, ಆಂಬ್ಯುಲೆನ್ಸ್ ಮತ್ತು ಆಸ್ಪತ್ರೆ ಸೇವೆಗಳಂತಹ ತುರ್ತು ಸೇವೆಗಳಿಗೆ ಯಾವುದೇ ಪರಿಣಾಮ ಬೀರುವುದಿಲ್ಲ.
ಎಲ್ಲಾ ರಸ್ತೆ ಮತ್ತು ರೈಲು ಸಾರಿಗೆ, ಮಾರುಕಟ್ಟೆಗಳು ಮತ್ತು ಇತರ ಸಾರ್ವಜನಿಕ ಸ್ಥಳಗಳನ್ನು ದೇಶಾದ್ಯಂತ ಮುಚ್ಚಲಾಗುವುದರಿಂದ ಪ್ರಯಾಣಿಕರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಬ್ಯಾಂಕಿಂಗ್ ಸೇವೆಗಳಿಗೆ ತೊಂದರೆಯಾಗುವುದು ಬ್ಯಾಂಕಿಂಗ್ ಸೇವೆಗಳಾದ ಠೇವಣಿ ಮತ್ತು ವಾಪಸಾತಿ ಮತ್ತು ಚೆಕ್ ಕ್ಲಿಯರಿಂಗ್ ಮುಷ್ಕರದಿಂದಾಗಿ ಪರಿಣಾಮ ಬೀರುವ ಸಾಧ್ಯತೆಯಿದೆ.
The Samyukta Kisan Morcha (SKM), an umbrella body of farmer unions, will on Friday observe 'Bharat Bandh'. Notably, 26 March 2021 marks four months of farmers’ agitation on the borders of the national capital against the three Central farm laws.
14-08-25 03:51 pm
Bangalore Correspondent
DK Shivakumar, Dharmasthala, Virendra Heggade...
14-08-25 03:49 pm
IPS Alok Kumar, News: ಪೊಲೀಸ್ ಶಾಲೆಗಳಲ್ಲೇ ಲಂಚ,...
14-08-25 01:48 pm
Dharmasthala Case, Dinesh Gundu Rao: ಮತ್ತೆ ಗು...
13-08-25 07:03 pm
ವಜಾ ಹಿಂದೆ ದೊಡ್ಡ ಷಡ್ಯಂತ್ರ ಆಗಿದೆ, ರಾಹುಲ್ ಗಾಂಧಿ...
12-08-25 10:39 pm
14-08-25 07:24 pm
HK News Desk
ಯುಎಇ ಸುದ್ದಿ ; ಆರೇ ತಿಂಗಳಲ್ಲಿ ದುಬೈನಲ್ಲಿ 3,600ಕ್...
14-08-25 07:02 pm
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮೋಡಿ ಮಾಡಲಿದ್ದಾರ...
14-08-25 11:26 am
ತಾಯಿ ಜೊತೆ ಅಂಡಮಾನ್ ಹೋಗ್ತೀನಿ ಎಂದಿದ್ದ ಮಗಳು ; ಬೇಡ...
13-08-25 11:56 am
ಪುಣ್ಯಕ್ಷೇತ್ರ ಯಾತ್ರೆ ಹೊರಟವರ ಮೇಲೆರಗಿದ ಜವರಾಯ ; ರ...
13-08-25 10:41 am
14-08-25 10:29 pm
Mangalore Correspondent
SCDCC Bank Launches Special Independence Day...
14-08-25 01:12 pm
Bantwal Deputy Tahsildar, Lokayukta: 20 ಸಾವಿರ...
13-08-25 10:22 pm
Dharmasthala News Today, Point No 13: ಕಡೆಗೂ ಪ...
13-08-25 10:01 pm
The Ocean Pearl Brings “Flavors of India” to...
13-08-25 08:23 pm
14-08-25 05:31 pm
Bangalore Correspondent
Supreme Court, Actor Darshan Jail Order: ಸುಪ್...
14-08-25 11:51 am
Fake Stock Market Scam, Fraud: 10 ಲಕ್ಷ ಹೂಡಿಕೆ...
13-08-25 05:40 pm
Fraud, Laxmi Hebbalkar: ಸಚಿವೆ ಲಕ್ಷ್ಮೀ ಹೆಬ್ಬಾಳ...
13-08-25 04:14 pm
ಅನೈತಿಕ ಸಂಬಂಧ ಶಂಕೆ ; ಅತ್ತೆ ಮೇಲಿನ ದ್ವೇಷದಿಂದ ಕೊಲ...
12-08-25 12:36 pm