ಬ್ರೇಕಿಂಗ್ ನ್ಯೂಸ್
27-02-21 10:44 pm Headline Karnataka News Network ದೇಶ - ವಿದೇಶ
ಮುಂಬೈ, ಫೆ 27: ಕಕ್ಷಿದಾರರನ್ನು ಪ್ರತಿನಿಧಿಸುವ ವೇಳೆ ವಕೀಲರೊಬ್ಬರು ನ್ಯಾಯಾಲಯ ಕೊಠಡಿಯಲ್ಲಿ ಮುಖಕ್ಕೆ ಧರಿಸಿದ್ದ ಮಾಸ್ಕ್ ತೆಗೆದುಹಾಕಿದ್ದಕ್ಕೆ ಪ್ರಕರಣದ ಅಹವಾಲು ಆಲಿಸುವುದನ್ನು ಬಾಂಬೆ ಹೈಕೋರ್ಟ್ ನಿರಾಕರಿಸಿದೆ. ಫೆಬ್ರವರಿ 22ನೇ ತಾರೀಕಿನಂದು ನಡೆದ ಘಟನೆಯ ಈ ಆದೇಶವು ಶನಿವಾರದಂದು ಲಭ್ಯವಾಗಿದೆ ಎಂದು ಪಿಟಿಐ ವರದಿ ಮಾಡಿದೆ.
ಒಬ್ಬರೇ ನ್ಯಾಯಮೂರ್ತಿಗಳನ್ನು ಒಳಗೊಂಡ ಪೀಠದ ನ್ಯಾ. ಪೃಥ್ವಿರಾಜ್ ಚವ್ಹಾಣ್ ಫೆಬ್ರವರಿ 22ರಂದು ಅಹವಾಲು ಆಲಿಸುತ್ತಿದ್ದರು. ಆ ವೇಳೆ ಕಕ್ಷಿದಾರರ ಪರ ವಕೀಲರು ಮಾರ್ಗದರ್ಶಿ ಸೂತ್ರಗಳಿಗೆ ವಿರುದ್ಧವಾಗಿ ನ್ಯಾಯಾಲಯದ ಕೊಠಡಿಯಲ್ಲಿ ಮಾಸ್ಕ್ ತೆಗೆದುಹಾಕಿದ್ದರು.

ವ್ಯಕ್ತಿಗಳ ಉಪಸ್ಥಿತಿಯಲ್ಲೇ ಪ್ರಕರಣದ ಅಹವಾಲು ಕೇಳುವ ವೇಳೆಯಲ್ಲಿ ಪಾಲಿಸಲೇಬೇಕೆಂದು ಹೈಕೋರ್ಟ್ ರೂಪಿಸಿರುವ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸಿಜರ್ ಬಗ್ಗೆ ನ್ಯಾಯಮೂರ್ತಿ ಚವ್ಹಾಣ್ ಮಾತನಾಡಿ, ಎಲ್ಲ ಸಮಯದಲ್ಲಿ ಮಾಸ್ಕ್ ಧರಿಸಿರುವುದು ಕಡ್ಡಾಯ ಎಂದಿದ್ದರು. ಆ ನಂತರ ಇದೇ ಪ್ರಕರಣದ ವಿಚಾರಣೆ ಬಂದಾಗ ಅದರ ಅಹವಾಲು ಆಲಿಸುವುದಕ್ಕೆ ನ್ಯಾಯಮೂರ್ತಿ ಚವ್ಹಾಣ್ ನಿರಾಕರಿಸಿದ್ದಾರೆ. “ಬೋರ್ಡ್ನಿಂದ ಈ ವಿಷಯ ತೆಗೆಯಬೇಕು,” ಎಂದು ಆದೇಶ ಹೇಳಿದೆ.
ಸರದಿ ಬರುವ ತನಕ ಇತರರು ಕಾಯುತ್ತಿರಬೇಕು:
ನ್ಯಾ. ಚವ್ಹಾಣ್ ಅವರು ಪ್ರಕರಣಗಳಿಗೆ ಸಂಬಂಧಿಸಿದ ವಕೀಲರಿಗೆ ಮಾತ್ರ ನ್ಯಾಯಾಲಯ ಕೊಠಡಿಯೊಳಗೆ ಪ್ರವೇಶಿಸಲು ಅವಕಾಶ ನೀಡುತ್ತಿದ್ದಾರೆ. ಆ ಸಂದರ್ಭದಲ್ಲಿ ಇತರ ವಕೀಲರು ಮತ್ತು ಅವರ ಕಕ್ಷಿದಾರರು ತಮ್ಮ ಸರದಿಯ ಸಂಖ್ಯೆ ಬರುವ ತನಕ ಮತ್ತೊಂದು ಕೊಠಡಿಯಲ್ಲಿ ಕಾಯಬೇಕಾಗುತ್ತದೆ. ಪುಣೆ ಹೊರತುಪಡಿಸಿ ಮಹಾರಾಷ್ಟ್ರದಲ್ಲಿ ಹೈಕೋರ್ಟ್ ಮತ್ತು ಇತರ ಎಲ್ಲ ಸಹವರ್ತಿ ಕೋರ್ಟ್ಗಳಲ್ಲಿ ಎಂಟು ತಿಂಗಳ ನಂತರ ವ್ಯಕ್ತಿಯ ಸಮ್ಮುಖದಲ್ಲೇ ಅಹವಾಲು ಆಲಿಸುವುದಕ್ಕೆ ಆರಂಭಿಸಲಾಗಿದೆ.

ಕೊರೊನಾ ಆರಂಭವಾದಾಗಿನಿಂದ ಕೋರ್ಟ್ಗಳು ಆನ್ಲೈನ್ನಲ್ಲಿ, ವಿಡಿಯೋ ಕಾನ್ಫರೆನ್ಸ್ ಮೂಲಕ ಅಹವಾಲು ಆಲಿಸುತ್ತಿದ್ದವು. ಫೆಬ್ರವರಿ ಮಧ್ಯಭಾಗದಿಂದ ಮಹಾರಾಷ್ಟ್ರ ಮತ್ತು ಮುಂಬೈನಲ್ಲಿ ಹೊಸದಾಗಿ ಕೊರೊನಾ ಪ್ರಕರಣಗಳು ಹೆಚ್ಚಾಗಿವೆ. ಪೆಬ್ರವರಿ 26ಕ್ಕೆ ಮಹಾರಾಷ್ಟ್ರದಲ್ಲಿ ಕೊರೊನಾ ಪ್ರಕರಣಗಳು 21,38,154 ದಾಖಲಾಗಿದ್ದವು. ಆ ಪೈಕಿ ಮುಂಬೈನಲ್ಲೇ 3,23,879 ಪ್ರಕರಣಗಳು ದಾಖಲಾಗಿವೆ.
A single-judge bench of Justice Prithviraj Chavan was on February 22 hearing an appeal matter during which the appellant's advocate removed his mask in the courtroom contrary to guidelines.
21-11-25 05:25 pm
HK News Desk
ವಾಹನ ಸವಾರರಿಗೆ ಗುಡ್ ನ್ಯೂಸ್ ; ಮತ್ತೆ 50% ದಂಡ ವ...
21-11-25 10:19 am
CM. Siddaramaiah, CM SEAT: ಯಾವ ಕ್ರಾಂತಿಯೂ ಇಲ್ಲ...
20-11-25 03:30 pm
DK Suresh, CM Siddaramaiah : ಸಿಎಂ ಕುರ್ಚಿ ಕ್ಲೈ...
20-11-25 03:01 pm
ಆನೇಕಲ್ ನಲ್ಲಿ ಕಚಡಾ ಡಾಕ್ಟರ್ ; ಇನ್ಪೆಕ್ಟರ್ ಅಮಾನತಿ...
19-11-25 02:16 pm
21-11-25 06:10 pm
HK News Desk
ಶಬರಿಮಲೆ ಚಿನ್ನ ಲೂಟಿ ಪ್ರಕರಣ ; ಕೊನ್ನಿ ಕ್ಷೇತ್ರದ ಸ...
21-11-25 02:26 pm
ಶ್ರೀಲಂಕಾದಲ್ಲಿ ನ್ಯೂಜಿಲೆಂಡ್ ಮಹಿಳೆಯ ಜೊತೆ ಯುವಕನ ಅ...
19-11-25 06:47 pm
ಕೆಂಪು ಕೋಟೆ ಬ್ಲಾಸ್ಟ್ ಕೇಸ್ ; ಅಲ್ ಫಲಾಹ್ ವಿವಿಗೆ ಸ...
19-11-25 11:10 am
ಬಾಂಗ್ಲಾದಲ್ಲಿ ವಿದ್ಯಾರ್ಥಿಗಳ ಮಾರಣ ಹೋಮಕ್ಕೆ ಅವರೇ ಕ...
17-11-25 10:58 pm
21-11-25 10:39 pm
Mangalore Correspondent
ನವೆಂಬರ್ 23ರಿಂದ ಪ್ರತಿ ವಾರ 'ಸಂಸದ್ ಖೇಲ್ ಮಹೋತ್ಸವ'...
21-11-25 10:03 pm
ಸುರತ್ಕಲ್- ನಂತೂರು- ಬಿಸಿ ರೋಡ್ ಹೆದ್ದಾರಿ ಎನ್ಎಚ...
21-11-25 09:55 pm
Snake Bite, Mangalore, Detection Kit: ಹಾವು ಕಚ...
21-11-25 08:45 pm
ಮಾನಸಿಕ ಖಿನ್ನತೆ ; ಶಿಕ್ಷಕಿ ತಾಯಿಯನ್ನು ಕಾಲೇಜು ಬಿಟ...
20-11-25 10:48 pm
21-11-25 11:07 pm
Bangalore Correspondent
ಮಲ್ಪೆ ಶಿಪ್ ಯಾರ್ಡ್ ನಿಂದ ಪಾಕಿಸ್ತಾನಕ್ಕೆ ಮಾಹಿತಿ ಸ...
21-11-25 05:11 pm
ಬೆಂಗಳೂರು ಎಟಿಎಂ ಹಣ ದರೋಡೆ ಪ್ರಕರಣ ; ತಿರುಪತಿಯಲ್ಲಿ...
20-11-25 10:53 pm
BMR Group Fraud, Money, Mangalore, Surathkal:...
20-11-25 06:01 pm
Bangalore ATM Van Robbery, Update: ಬೆಂಗಳೂರಿನ...
20-11-25 11:51 am