ಬ್ರೇಕಿಂಗ್ ನ್ಯೂಸ್
06-10-26 10:11 am HK News Staffer ದೇಶ - ವಿದೇಶ
ವಾಷಿಂಗ್ಟನ್, ಅ 06: ಫ್ಲೈದುಬೈ ವಿಮಾನದ ಹೈಜಾಕ್ ಯತ್ನದ ಹಿಂದೆ ಇರಾನ್ ದೇಶದ ನೇರ ಕೈವಾಡವಿದೆ. ಇದು ನನ್ನ ವೈಯಕ್ತಿಕವಾಗಿ ನಂಬಿಕೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ವೈಟ್ ಹೌಸ್ ಆವರಣದಲ್ಲಿ ಮಾಧ್ಯಮ ಪ್ರತಿನಿಧಿಗಳು, ಫ್ಲೈದುಬೈ ವಿಮಾನದ ಮೇಲಿನ ದಾಳಿಗೆ ಇರಾನ್ ಹೊಣೆ ಎಂದು ನಂಬುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ಹೌದು, ನಾನು ವೈಯಕ್ತಿಕವಾಗಿ ನಂಬುತ್ತೇನೆ” ಎಂದು ಉತ್ತರಿಸಿದ್ದಾರೆ.
ಸೆಪ್ಟೆಂಬರ್ 30ರಂದು ಫ್ಲೈದುಬೈ ವಿಮಾನ ಸಂಖ್ಯೆ ಎಫ್ಝಡ್1073ರಲ್ಲಿ ಮಧ್ಯಾಕಾಶದಲ್ಲಿ ನಡೆದ ಅಪಹರಣ ಹಾಗೂ ವಿಮಾನ ಪತನದ ಯತ್ನದ ಹಿನ್ನೆಲೆಯಲ್ಲಿ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ.
ಇನ್ನು ದುಬೈನಿಂದ ಇಸ್ರೇಲ್ ರಾಜಧಾನಿ ಟೆಲ್ ಅವಿವ್ಗೆ ತೆರಳುತ್ತಿದ್ದ 174 ಪ್ರಯಾಣಿಕರಿದ್ದ ವಿಮಾನವನ್ನು ಪತನಗೊಳಿಸಲು ಯತ್ನಿಸಿದ ಆರೋಪ ಹೊತ್ತಿರುವ ಫ್ಲೈದುಬೈ ಸಹ-ಪೈಲಟ್ ಒಮಾನಿ ಪ್ರಜೆ ಹಮಾಮ್-ಅಲ್-ಹಮ್ಮಾಮಿಗೆ ಅಲ್ ಖೈದಾ ನಂಟಿರುವ ಕುರಿತು ವರದಿಯಾಗುತ್ತಿದ್ದಂತೆ ಇದೀಗ ಈ ದಾಳಿಯನ್ನು ಅಲ್ ಖೈದಾ ಬಹಿರಂಗವಾಗಿ ಶ್ಲಾಘಿಸಿದೆ. ಅಷ್ಟೇ ಅಲ್ಲದೆ, ಯುದ್ಧ ಇನ್ನೂ ಮುಗಿದಿಲ್ಲ.. 9/11 ದಾಳಿಯನ್ನು ಮರುಕಳಿಸುವಂತೆ ಇಸ್ರೇಲ್ ಹಾಗೂ ಅಮೆರಿಕನ್ ಪ್ರಜೆಗಳನ್ನು ಹೊತ್ತ ವಿಮಾನಗಳ ಮೇಲೆ ಇದೇ ರೀತಿ ದಾಳಿ ನಡೆಸುತ್ತೇವೆ ಎಂದು ಗಂಭೀರ ಎಚ್ಚರಿಕೆ ನೀಡಿದೆ.
ಫ್ಲೈದುಬೈ ಹೈಜಾಕರ್ ಹಮಾಮ್-ಅಲ್-ಹಮ್ಮಾಮಿಗೆ ಅಲ್ ಖೈದಾ ನಂಟಿನ ಜಾಡಿನ ಬೆನ್ನಲ್ಲೇ ಈ ಕುರಿತು ಅಲ್ ಖೈದಾ ಸಹ ಬಹಿರಂಗವಾಗಿ ಅಲ್ ಖೈದಾ ತನ್ನ ವಾರಪತ್ರಿಕೆಯಾದ ಅಲ್-ಬಯಾನ್ನ ಇತ್ತೀಚಿನ ಆವೃತ್ತಿಯಲ್ಲಿ ಈ ದಾಳಿಕೋರನನ್ನು ಮೆಚ್ಚಿಕೊಂಡಿದ್ದು, ಹೆಚ್ಚಿನ ದಾಳಿ ನಡೆಸುವ ಎಚ್ಚರಿಕೆಯನ್ನು ಪ್ರಕಟಿಸಿದೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.
ಈ ವರದಿಯ ಪ್ರಕಾರ, ಜುಲೈನಲ್ಲಿ ಅಲ್ ಖೈದಾ ಪರ ಬೆಂಬಲಿಗರು ಪ್ರಾರಂಭಿಸಿದ ವಾರಪತ್ರಿಕೆ ಅಲ್-ಬಯಾನ್ನ ಇತ್ತೀಚಿನ ಆವೃತ್ತಿಯಲ್ಲಿ ಇಂತಹ ಪ್ರಕಟಣೆ ಬಂದಿದ್ದು, ಇದರಲ್ಲಿ 9/11 ದಾಳಿ ಹಾಗೂ ಸೆ.30ರಂದು ಫ್ಲೈದುಬೈ ವಿಮಾನ ಹೈಜಾಕ್ ಘಟನೆಗಳನ್ನು ಉಲ್ಲೇಖಿಸಿ ಅರೇಬಿಕ್ ಭಾಷೆಯಲ್ಲಿ ಪೋಸ್ಟ್ ಮಾಡಿದೆ. ಇದರಲ್ಲಿ, ಯುದ್ಧ ಇನ್ನೂ ಮುಗಿದಿಲ್ಲ, ಝಿಯೋನಿಸ್ಟ್ಗಳು(ಇಸ್ರೇಲಿಗರು), ಅಮೆರಿಕನ್ನರು ಮತ್ತು ಇಸ್ಲಾಂ ವಿರುದ್ಧ ಹೋರಾಡುತ್ತಿರುವ ಇತರ ಎಲ್ಲಾ ನಾಸ್ತಿಕರನ್ನು ಹೊತ್ತ ವಿಮಾನಗಳು ಇನ್ನೂ ಆಕಾಶದಲ್ಲಿ ಸುಳಿದಾಡುತ್ತಿವೆ. ಇವುಗಳ ಮೇಲೆ 2001ರ ಸೆ.11ರಂದು ಮತ್ತು 2026ರ ಸೆಪ್ಟೆಂಬರ್ 30 ರಂದು ನಡೆದಂತೆ ಅವುಗಳನ್ನು ಗುರಿಯಾಗಿಸಬಹುದು" ಎಂದು ಎಚ್ಚರಿಕೆ ನೀಡಿದೆ.
06-10-26 09:32 am
HK News Staffer
ರಾಜ್ಯಕ್ಕೆ 7,142.64 ಕೋಟಿ ರೂ. ಬರ ಪರಿಹಾರ ನೀಡಿ ;...
03-10-26 05:30 pm
Urdu Habba Row: ವಿಧಾನಸೌಧ ಮೆಟ್ಟಿಲುಗಳಲ್ಲಿ ಉರ್ದು...
01-10-26 10:50 pm
‘ಕನ್ನಡದ ಶಿವಮಣಿ’ ಖ್ಯಾತಿಯ ಡ್ರಮ್ಮರ್ ದೇವ್ ನಿಧನ ;...
27-09-26 03:21 pm
ಬೆಂಗಳೂರಿಗೆ ಬಂದ ಶಾಸಕರೆಲ್ಲ ಎರಡೆರಡು ಮದುವೆಯಾಗಿದ್ದ...
25-09-26 04:49 pm
06-10-26 10:11 am
HK News Staffer
Nigerian aircraft: ನೈಜೀರಿಯಾದಲ್ಲಿ ವಾಯುಪಡೆ ವಿಮಾ...
06-10-26 09:30 am
Emergency Funds: ಆರ್ಥಿಕ ಸ್ಥಿತಿ ಮತ್ತಷ್ಟು ಹದಗೆಡ...
05-10-26 08:56 pm
ಪಶ್ಚಿಮ ಬಂಗಾಳದಲ್ಲಿ ಏಕರೂಪ ನಾಗರಿಕ ಸಂಹಿತೆ ; ಲವ್ ಜ...
05-10-26 01:49 pm
ನಾನು ಸಾವಿಗೆ ಅಂಜಲ್ಲ, ವಿಮಾನ ಪತನವೇ ಉದ್ದೇಶವಾಗಿತ್ತ...
05-10-26 11:40 am
05-10-26 10:53 pm
Mangaluru Staffer
Mangalore News, Ekkaru Temple, Tirupati Templ...
05-10-26 12:35 pm
'ಮುಳಿಯ ಜುವೆಲ್ಲರಿ' ಮಾಲೀಕ ಪುತ್ತೂರಿನ ಮುಳಿಯ ಶ್ಯಾಮ...
05-10-26 11:41 am
brijesh chowta: ಹೈಕೋರ್ಟ್ ಪೀಠ ಸ್ಥಾಪನೆಗೆ ಒಗ್ಗಟ್...
03-10-26 09:56 pm
Tammanna Shetty, mysore kambala: ಮೈಸೂರು ದಸರಾ...
03-10-26 01:27 pm
05-10-26 08:26 pm
HK News Staffer
ಪುತ್ತೂರಿನಿಂದ ಕೇರಳಕ್ಕೆ ಹಿಂಸಾತ್ಮಕ ರೀತಿಯಲ್ಲಿ 11...
05-10-26 08:24 pm
Udupi News, Indrali Railway Station, Nizamudd...
05-10-26 12:28 pm
Belthangady News, Banakal Accident, Mudigere...
05-10-26 10:49 am
bantwal rain: ಕರಾವಳಿ ಭಾಗದಲ್ಲಿ ಹಿಂಗಾರು ಮಳೆ ಅಬ್...
05-10-26 10:04 am