ಬ್ರೇಕಿಂಗ್ ನ್ಯೂಸ್
30-01-26 01:23 pm HK News Desk ದೇಶ - ವಿದೇಶ
ಕೋಲ್ಕತ್ತಾ, ಜ.30 : ಕೋಲ್ಕತ್ತಾ ನಗರ ದಕ್ಷಿಣದ ಆನಂದಪುರ ಪ್ರದೇಶದಲ್ಲಿ ಎರಡು ಗೋದಾಮುಗಳಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಘಟನೆಯಲ್ಲಿ 21 ಮಂದಿ ಪ್ರಾಣ ಕಳೆದುಕೊಂಡಿದ್ದು, ಹಲವರು ನಾಪತ್ತೆಯಾಗಿದ್ದಾರೆ. ಅವಶೇಷಗಳ ಅಡಿಯಲ್ಲಿ ಇನ್ನೂ ಕೆಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, 18 ಮಂದಿ ನಾಪತ್ತೆಯಾಗಿರುವ ಮಾಹಿತಿ ಆಧರಿಸಿ ಶೋಧ ಕಾರ್ಯಾಚರಣೆ ನಡೆದಿದೆ.
ಮೃತರ ಗುರುತು ಪತ್ತೆಯಾಗದ ಹಿನ್ನೆಲೆಯಲ್ಲಿ ಸಂಬಂಧಿಕರಿಂದ 16 ಡಿಎನ್‌ಎ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಪುಷ್ಪಾಂಜಲಿ ಡೆಕೋರೇಟರ್ಸ್‌ಗೆ ಸೇರಿದ ಗೋದಾಮಿನಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿದ್ದು, ಕೆಲವೇ ಕ್ಷಣಗಳಲ್ಲಿ ಪಕ್ಕದಲ್ಲಿದ್ದ ಖ್ಯಾತ ಫಾಸ್ಟ್ ಫುಡ್ ಬ್ರಾಂಡ್ ‘ವಾವ್ ಮೊಮೊ’ ಕಂಪನಿಯ ಗೋಡೌನ್‌ಗೂ ಹರಡಿದೆ. ಬೆಂಕಿ ಹೊತ್ತಿಕೊಂಡ ಸಮಯದಲ್ಲಿ ಗೋದಾಮಿನೊಳಗೆ ಅನೇಕ ಕಾರ್ಮಿಕರು ನಿದ್ರಿಸುತ್ತಿದ್ದರು. ಕಾರ್ಮಿಕರು ಹೊರಬರಲು ಸಾಧ್ಯವಾಗದೆ ಭಾರೀ ಸಾವು-ನೋವು ಸಂಭವಿಸಿದೆ. ಜನವರಿ 26ರಂದು ನಸುಕಿನಲ್ಲಿ ಘಟನೆ ನಡೆದಿದ್ದು ಆರಂಭದಲ್ಲಿ ಎಷ್ಟು ಜನ ಕಾರ್ಮಿಕರಿದ್ದರು ಎನ್ನುವ ಮಾಹಿತಿ ಇರಲಿಲ್ಲ.






ಎರಡು ಅಂತಸ್ತಿನ ಗೋದಾಮು ಕಟ್ಟಡ ಪೂರ್ತಿ ಸುಟ್ಟು ಹೋಗಿದ್ದು ಗೋಡೆಗಳು ಒಡೆದು ಕುಸಿದು ಬಿದ್ದಿವೆ. ಅಲ್ಲದೆ, ಬೆಂಕಿ ನಂದಿಸಲು 36 ಗಂಟೆ ಕಾಲ ಬೇಕಾಗಿ ಬಂದಿತ್ತು.ಹೀಗಾಗಿ ಎಷ್ಟು ಮಂದಿ ಕಾರ್ಮಿಕರು ಇದ್ದರು ಎನ್ನುವ ಮಾಹಿತಿಯೂ ಇರಲಿಲ್ಲ. ವಾವ್ ಮೊಮೋ ಕಂಪನಿಯ ಮೂವರು ಕಾರ್ಮಿಕರು ಮಾತ್ರ ಇದ್ದುದಾಗಿ ಹೇಳಿದ್ದು ಮೃತರ ಕುಟುಂಬಸ್ಥರಿಗೆ ತಲಾ ಹತ್ತು ಲಕ್ಷ ಪರಿಹಾರ, ಪ್ರತಿ ತಿಂಗಳು ವೇತನದ ಭರವಸೆ ಮತ್ತು ಮಕ್ಕಳ ಶಿಕ್ಷಣದ ವೆಚ್ಚ ಭರಿಸುವುದಾಗಿ ಹೇಳಿದೆ.
ನಾಪತ್ತೆಯಾದ ಕಾರ್ಮಿಕರ ಕುಟುಂಬಸ್ಥರು ಎರಡು ದಿನಗಳಿಂದ ಗೋದಾಮು ಬಳಿ ಸೇರಿದ್ದು ತಮ್ಮ ಸಂಬಂಧಿಕರು ಅವಶೇಷಗಳಡಿಯಲ್ಲಿ ಸಿಲುಕಿರಬಹುದು ಎಂಬ ಭಯದಲ್ಲಿದ್ದಾರೆ. ಘಟನಾ ಸ್ಥಳದಲ್ಲಿ ರಕ್ಷಣಾ ತಂಡಗಳ ಶೋಧ ಕಾರ್ಯ ನಡೆಯುತ್ತಿದೆ. ಇದೇ ವೇಳೆ, ಕಾರ್ಮಿಕರ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಕ್ಕಾಗಿ ಪುಷ್ಪಾಂಜಲಿ ಡೆಕೋರೇಟರ್ಸ್ ಗೋದಾಮಿನ ಮಾಲೀಕ ಗಂಗಾಧರ್ ದಾಸ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಪುಷ್ಪಾಂಜಲಿ ಡೆಕೋರೇಟರ್ಸ್ ಸಂಸ್ಥೆಯಲ್ಲಿ ರಾತ್ರಿಯೂ ಕಾರ್ಮಿಕರನ್ನು ದುಡಿಸುತ್ತಿದ್ದರು. ಹೀಗಾಗಿ ಕೆಲವರು ಅಲ್ಲಿಯೇ ಉಳಿದುಕೊಳ್ಳುತ್ತಿದ್ದರು.
ಅಗ್ನಿ ಸುರಕ್ಷತಾ ನಿಯಮ ಉಲ್ಲಂಘನೆ ಶಂಕೆ
ಬೆಂಕಿಯಿಂದ ಎರಡೂ ಗೋದಾಮುಗಳು ತೀವ್ರ ಹಾನಿಗೀಡಾಗಿವೆ. ವಾವ್ ಮೊಮೊ ಕಂಪನಿಯು ಗಂಗಾಧರ್ ದಾಸ್ ಅವರಿಂದ ಗೋದಾಮನ್ನು ಬಾಡಿಗೆ ಪಡೆದಿದ್ದು, ಅಗ್ನಿ ಸುರಕ್ಷತಾ ಮಾರ್ಗಸೂಚಿಗಳನ್ನು ಪಾಲಿಸಲಾಗಿತ್ತೇ? ಎಂಬುದನ್ನು ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ, ವಾವ್ ಮೊಮೊ ಕಂಪನಿ ಆ ಸ್ಥಳದಲ್ಲಿ 12,000 ಚದರ ಅಡಿ ವಿಸ್ತೀರ್ಣದ ಗೋದಾಮನ್ನು ನಿರ್ವಹಿಸುತ್ತಿದ್ದುದಾಗಿ ತಿಳಿದುಬಂದಿದೆ. ಪ್ಯಾಕೇಜಿಂಗ್ ಸಾಮಗ್ರಿಗಳು, ಪಾನೀಯಗಳು ಹಾಗೂ ಇತರ ಅಗತ್ಯ ವಸ್ತುಗಳನ್ನು ಸಂಗ್ರಹಿಸಲು ಬಳಸಲಾಗುತ್ತಿದ್ದ ಈ ಗೋದಾಮಿನಲ್ಲಿದ್ದ ಬಹುತೇಕ ವಸ್ತುಗಳು ಬೆಂಕಿಯಲ್ಲಿ ಬೆಂದು ಹೋಗಿವೆ.
ಅಗ್ನಿಶಾಮಕ ಅನುಮತಿ ಇಲ್ಲದೇ ದಾಸ್ತಾನು
ತನಿಖೆಯಲ್ಲಿ, ಗೋಡೌನ್ ಹಾಗೂ ದಾಸ್ತಾನು ಸಂಕೀರ್ಣಕ್ಕೆ ಅಗ್ನಿಶಾಮಕ ಇಲಾಖೆಯಿಂದ ಅಗತ್ಯ ಅನುಮತಿ ಪಡೆದಿರಲಿಲ್ಲ ಎಂಬುದು ಬೆಳಕಿಗೆ ಬಂದಿದೆ. ಒಂದು ಕಾಲದಲ್ಲಿ ಕೋಲ್ಕತ್ತಾ ನಗರದ ಪ್ರಮುಖ ಜಲಮೂಲವಾಗಿದ್ದ ಈ ಪೂರ್ವ ಭಾಗವು ಇತ್ತೀಚಿನ ವರ್ಷಗಳಲ್ಲಿ ಅಕ್ರಮ ಗೋದಾಮುಗಳ ಕೇಂದ್ರವಾಗಿ ಪರಿವರ್ತನೆಗೊಂಡಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ.
A devastating fire broke out in two warehouses in Kolkata’s Anandapur area, killing at least 21 workers who were sleeping inside. With 18 people still missing, rescue teams continue search operations amid debris. The blaze, which destroyed a decorator’s warehouse and a Wow! Momo godown, has raised serious questions over fire safety violations, leading to the arrest of the warehouse owner.
30-01-26 12:38 pm
HK News Desk
ಕರಾವಳಿ ಜಿಲ್ಲೆಗಳ ರೈತರ ಬೆಳೆ ವಿಮೆಗೆ ರಾಜ್ಯ ಸರ್ಕಾರ...
30-01-26 12:20 pm
ಕಾರವಾರ ರಿಶೇಲ್ ಡಿಸೋಜಾ ಆತ್ಮಹತ್ಯೆ ; ಕೊನೆಗೂ JDS ನ...
30-01-26 11:55 am
ಚೀಟಿ ವ್ಯವಹಾರ ಇತ್ಯರ್ಥಕ್ಕೆ 4 ಲಕ್ಷ ರೂ. ಲಂಚಕ್ಕೆ ಬ...
29-01-26 11:03 pm
ಡಿಕೆ ಮುಖ್ಯಮಂತ್ರಿ ಸ್ಥಾನಕ್ಕೆ ಹೋಗಲು ಭಗವಂತ ಅವಕಾಶ...
29-01-26 10:48 pm
30-01-26 02:04 pm
HK News Desk
ಕೋಲ್ಕತ್ತಾ ಭೀಕರ ಅಗ್ನಿ ಅವಘಡ ; 21 ಮಂದಿ ಸಾವು, ಹೊತ...
30-01-26 01:23 pm
ಕೇರಳದಲ್ಲಿ ಹೈಸ್ಪೀಡ್ ರೈಲು ಯೋಜನೆ ; ತಿರುವನಂತಪುರ-...
29-01-26 11:07 pm
ಮಂಜು ಮುಸುಕಿದ್ದೇ ವಿಮಾನ ಅಪಘಾತಕ್ಕೆ ಕಾರಣ? ರನ್ ವೇ...
28-01-26 11:16 pm
ಬೌದ್ಧ ಧರ್ಮಕ್ಕೆ ಮತಾಂತರಗೊಂಡು ಅಲ್ಪಸಂಖ್ಯಾತ ಮೀಸಲಾತ...
28-01-26 11:14 pm
29-01-26 10:38 pm
Mangalore Correspondent
Kadri Flower Show 2026: ಕದ್ರಿಯಲ್ಲಿ ಫ್ಲವರ್ ಶೋ...
29-01-26 08:37 pm
ಕೋಡಿಬೆಂಗ್ರೆ ದುರಂತದ ಬಳಿಕ ಎಚ್ಚೆತ್ತ ಜಿಲ್ಲಾಡಳಿತ ;...
29-01-26 03:54 pm
ನಿರ್ಲಕ್ಷ್ಯದಿಂದಲೇ ಅಪಘಾತ ಹೆಚ್ಚಳ, ಕುಡಿದು ವಾಹನ ಚಲ...
27-01-26 10:50 pm
ಫೆ.1ರಂದು "ನಮ್ಮ ನಡಿಗೆ ತಲಪಾಡಿ ದೇವಿಪುರದ ಕಡೆಗೆ" ಬ...
27-01-26 08:58 pm
27-01-26 10:18 pm
Bangalore Correspondent
ಬೆಂಗಳೂರಿನಲ್ಲಿ ಮತ್ತೊಂದು ದರೋಡೆ ; 1.37 ಕೋಟಿ ರೂ....
27-01-26 05:56 pm
ಕೆನರಾ ಲೈಟಿಂಗ್ ಇಂಡಸ್ಟ್ರೀಸ್ ಸಂಸ್ಥೆಯಿಂದ ಕೊಲ್ಕತ್ತ...
27-01-26 05:15 pm
ನಿಮ್ಮ ಕ್ರೆಡಿಟ್ ಕಾರ್ಡ್ ಮೇಲೆ ಬೋನಸ್ ಬಂದಿದೆ ! ಬಣ್...
27-01-26 03:21 pm
JAKEA Michael Rego, Rajeev Gowda Arrest: ಧಮ್ಕ...
27-01-26 12:22 pm