ಬ್ರೇಕಿಂಗ್ ನ್ಯೂಸ್
21-02-25 10:36 am HK News Desk ದೇಶ - ವಿದೇಶ
ವಾಷಿಂಗ್ಟನ್, ಫೆ 21 : ರಿಪಬ್ಲಿಕನ್ ನೇತೃತ್ವದ ಅಮೆರಿಕದ ಸೆನೆಟ್ ಗುರುವಾರ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ (ಎಫ್‌ಬಿಐ) ನ ಮುಂದಿನ ನಿರ್ದೇಶಕರಾಗಿ ಕಾಶ್ ಪಟೇಲ್ ಅವರನ್ನ ಆಯ್ಕೆ ಮಾಡಿದೆ. ಯುಎಸ್ ನ ಪ್ರಧಾನ ತನಿಖಾ ಸಂಸ್ಥೆಯ ಮುಖ್ಯಸ್ಥರಾಗಿರುವ ಮೊದಲ ಭಾರತೀಯ ಮೂಲದ ಅಮೆರಿಕನ್ ಎಂಬ ಹೆಗ್ಗಳಿಕೆಗೆ ಕಾಶ್ ಪಟೇಲ್ ಪಾತ್ರರಾಗಿದ್ದಾರೆ.
ಪಟೇಲ್ 51 - 49 ಮತಗಳ ಅಂತರದಿಂದ ವಿಶ್ವದ ಅತ್ಯಂತ ದೊಡ್ಡ ತನಿಖಾ ಸಂಸ್ಥೆಯೊಂದರ ಮಹತ್ವದ ಹುದ್ದೆಗೆ ಆಯ್ಕೆ ಆಗಿದ್ದಾರೆ. ವಿಶೇಷ ಎಂದರೆ ಕಾಶ್ ಪಟೇಲ್ ಆಯ್ಕೆಗೆ ಇಬ್ಬರು ರಿಪಬ್ಲಿಕನ್ ಸೆನೆಟರ್‌ಗಳು ವಿರೋಧ ವ್ಯಕ್ತಪಡಿಸಿದರು. ಸಹಜವಾಗಿ ವಿರೋಧ ಪಕ್ಷ ಡೆಮಾಕ್ರಟಿಕ್ ನ ಸೆನೆಟರ್ ಗಳು ಕಾಶ್ ಪಟೇಲ್ ವಿರುದ್ಧ ಮತ ಚಲಾಯಿಸಿದರು.
ಸೆನಟ್ ನಲ್ಲಿ ರಿಪಬ್ಲಿಕನ್ ಪಕ್ಷ 53 ಸದಸ್ಯ ಬಲದೊಂದಿಗೆ ಬಹುಮತ ಹೊಂದಿದೆ. ಇನ್ನು ಪ್ರತಿಪಕ್ಷ ಡೆಮಾಕ್ರಟಿಕ್ ನ 47 ಸದಸ್ಯರಿದ್ದಾರೆ.
ಕಾಶ್ ಪಟೇಲ್ ವಿಶ್ವದ ಪ್ರಬಲ ಹಾಗೂ ಪ್ರಖ್ಯಾತ ತನಿಖಾ ಸಂಸ್ಥೆ ಎಫ್ ಬಿಐನ ಡೈರೆಕ್ಟರ್ ಆಗುವ ಮೂಲಕ ಕೇವಲ ಮೊದಲ ಭಾರತೀಯ ಮೂಲದ ಅಷ್ಟೇ ಅಲ್ಲದೇ ಈ ಸ್ಥಾನವನ್ನು ಅಲಂಕರಿಸಿದ ಮೊದಲ ಏಷ್ಯನ್-ಅಮೆರಿಕನ್ ಆಗಿಯೂ ಇತಿಹಾಸವನ್ನು ನಿರ್ಮಿಸಿದ್ದಾರೆ. ಅಷ್ಟೇ ಏಕೆ ಇತಿಹಾಸದಲ್ಲಿ ಅವರು ತಮ್ಮ ಸ್ಥಾನವನ್ನು ಅಜರಾಮರವಾಗಿಸಿದ್ದಾರೆ.
ಕಾಶ್ ಪಟೇಲ್ ಯಾರು?
ಕಾಶ್ ಪಟೇಲ್ ನಿಜವಾದ ಹೆಸರು ಕಶ್ಯಪ್ ಪ್ರಮೋದ್ ವಿನೋದ್ ಪಟೇಲ್. ಮಾಜಿ ಸಾರ್ವಜನಿಕ ವಕೀಲ ಕಾಶ್ ಪಟೇಲ್, ವಾಷಿಂಗ್ಟನ್, ಡಿಸಿಯ ಅಧಿಕಾರ ವಲಯಗಳಲ್ಲಿ ಭಾರೀ ಪ್ರಭಾವಿ. ಅವರು ಈ ಹಿಂದೆ ಅಧ್ಯಕ್ಷ ಟ್ರಂಪ್ ಅವರ ಮೊದಲ ಅವಧಿಯಲ್ಲಿ ರಕ್ಷಣಾ ಇಲಾಖೆಯಲ್ಲಿ ಮುಖ್ಯಸ್ಥರಾಗಿ ಮತ್ತು ರಾಷ್ಟ್ರೀಯ ಗುಪ್ತಚರ ಉಪ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ಈಗ, ಅವರು ಎಫ್‌ಬಿಐ ಅನ್ನು ಮುನ್ನಡೆಸಲು ಸಜ್ಜಾಗಿದ್ದಾರೆ.
ಟ್ರಂಪ್ ವಿರುದ್ಧ ಆರೋಪ ಮಾಡಿದ್ದ ಸಂಸ್ಥೆಗೆ ಕಾಶ್ ಮುಖ್ಯಸ್ಥ
2021 ರ ನಂತರ ಟ್ರಂಪ್ ಅವರನ್ನು ವರ್ಗೀಕೃತ ದಾಖಲೆಗಳನ್ನು ದುರುಪಯೋಗಪಡಿಸಿಕೊಂಡ ಆರೋಪ ಮತ್ತು ಅಂದಿನ ಅಧ್ಯಕ್ಷ ಜೋ ಬಿಡನ್ ವಿರುದ್ಧ 2020 ರ ಚುನಾವಣಾ ಫಲಿತಾಂಶಗಳನ್ನು ಪ್ರಶ್ನಿಸಲು ಅವರು ಮಾಡಿದ ಪ್ರಯತ್ನಗಳ ಬಗ್ಗೆ ತನಿಖೆ ನಡೆಸಿದ ಸಂಸ್ಥೆ. ಅದಕ್ಕೆ ಈಗ ಕಾಶ್ ಪಟೇಲ್ ಅಧ್ಯಕ್ಷರಾಗುತ್ತಿದ್ದಾರೆ.
FBI ಎಂಬುದು ಗುಪ್ತಚರ-ಚಾಲಿತ ಮತ್ತು ಬೆದರಿಕೆ-ಕೇಂದ್ರಿತ ರಾಷ್ಟ್ರೀಯ ಭದ್ರತಾ ಸಂಸ್ಥೆಯಾಗಿದ್ದು, ಗುಪ್ತಚರ ಮತ್ತು ಕಾನೂನು ಜಾರಿ ಜವಾಬ್ದಾರಿಗಳನ್ನು ಹೊಂದಿದೆ. ಇದು ಅಮೆರಿಕ ನ್ಯಾಯ ಇಲಾಖೆಯ ಪ್ರಮುಖ ತನಿಖಾ ವಿಭಾಗವಾಗಿದೆ. FBI ಅದಕ್ಕೆ ನಿಯೋಜಿಸಲಾದ ನಿರ್ದಿಷ್ಟ ಅಪರಾಧಗಳನ್ನು ತನಿಖೆ ಮಾಡುವ ಮತ್ತು ಇತರ ಕಾನೂನು ಜಾರಿ ಸಂಸ್ಥೆಗಳಿಗೆ ಫಿಂಗರ್‌ಪ್ರಿಂಟ್ ಗುರುತಿಸುವಿಕೆ, ಪ್ರಯೋಗಾಲಯ ಪರೀಕ್ಷೆಗಳು ಮತ್ತು ತರಬೇತಿಯಂತಹ ಸಹಕಾರಿ ಸೇವೆಗಳನ್ನು ಒದಗಿಸುವ ಅಧಿಕಾರ ಮತ್ತು ಜವಾಬ್ದಾರಿಯನ್ನು ಹೊಂದಿದೆ.
The Senate on Thursday narrowly voted to confirm Kash Patel as director of the FBI, moving to place him atop the nation's premier federal law enforcement agency despite doubts from Democrats about his qualifications and concerns he will do Donald Trump's bidding and go after the Republican president's adversaries.
03-08-25 10:52 am
HK News Desk
Dharmasthala News, High Court; ಧರ್ಮಸ್ಥಳ ಸುದ್ದ...
01-08-25 11:34 pm
‘Comedy Kiladigalu’, Chandrashekhar Siddi Sui...
01-08-25 10:45 pm
Kannada Producer Ganesh, Film Dharmasthala Fi...
01-08-25 09:09 pm
Rape Case, Prajwal Revanna Verdict : ಮೈಸೂರಿನ...
01-08-25 02:55 pm
01-08-25 10:48 pm
HK News Desk
ಭಾರತ, ರಷ್ಯಾದ್ದು ಸತ್ತ ಆರ್ಥಿಕತೆ, ಒಟ್ಟಿಗೇ ನಾಶವಾಗ...
01-08-25 11:44 am
2008ರ ಮಾಲೆಗಾಂವ್ ಸ್ಫೋಟ ಪ್ರಕರಣ ; ಸಾಧ್ವಿ ಪ್ರಜ್ಞ...
31-07-25 10:08 pm
Trump, Modi, Export Tariff: ಸ್ನೇಹಿತ ಎನ್ನುತ್ತಲ...
31-07-25 09:51 am
ಪಾಕಿಸ್ತಾನದ ಡಿಜಿಎಂಒ ಕರೆ ಮಾಡಿ ದಾಳಿ ನಿಲ್ಲಿಸಲು ಮನ...
30-07-25 09:06 am
02-08-25 10:51 pm
Mangalore Correspondent
Kallapu Highway News; ಕಲ್ಲಾಪು ಹೆದ್ದಾರಿಯಲ್ಲಿ ಬ...
02-08-25 03:51 pm
Inspector Manjunath Gowda, SIT, Dharmasthala:...
02-08-25 02:31 pm
Dharmasthala Case, UDR, SIT Police News; ಧರ್ಮ...
02-08-25 01:46 pm
Kerala Comes to Mangalore: Feast at Coral, Th...
02-08-25 01:40 pm
02-08-25 10:04 pm
Giridhar Shettt, Mangaluru
ಪ್ರಜ್ವಲ್ ರೇವಣ್ಣ ಅಪರಾಧಿ ; 14 ವರ್ಷ ಅಲ್ಲ, ಜೀವನಪರ...
02-08-25 07:20 pm
Suhas Shetty Murder, NIA Raid Mangalore: ಸುಹಾ...
02-08-25 04:43 pm
Mangalore CCB Police, Drugs: ಆಂಧ್ರಪ್ರದೇಶದಿಂದ...
01-08-25 05:05 pm
13 ವರ್ಷದ ಬಾಲಕನ ಕಿಡ್ನಾಪ್ ; 5 ಲಕ್ಷ ರೂ. ಹಣ ತರುವಷ...
01-08-25 04:27 pm