ಬ್ರೇಕಿಂಗ್ ನ್ಯೂಸ್
10-02-25 05:48 pm HK News Desk ದೇಶ - ವಿದೇಶ
ಮುಂಬೈ, ಫೆ.10: ಹುಡುಗನ ನಡತೆ ಸರಿ ಇಲ್ಲ, ಬೇರೆಯವಳ ಜೊತೆ ಸಂಬಂಧ ಇಟ್ಟುಕೊಂಡಿದ್ದಾನೆ, ಇನ್ಯಾರಿಗೋ ಮೋಸ ಮಾಡಿದ್ದಾನೆ ಇತ್ಯಾದಿ ಕಾರಣಕ್ಕೆ ನಿಶ್ಚಯಗೊಂಡ ಮದುವೆ ಮುರಿದು ಬೀಳುವುದನ್ನು ಕೇಳಿದ್ದೇವೆ. ಮಹಾರಾಷ್ಟ್ರದಲ್ಲಿ ಮದುವೆ ಸಂಬಂಧವೊಂದು ಕೊನೆ ಕ್ಷಣದಲ್ಲಿ ಮುರಿದು ಬಿದ್ದಿದೆ. ಇದಕ್ಕೆ ಕಾರಣವಾಗಿರೋದು ವರನ ಸಿಬಿಲ್ ಸ್ಕೋರ್ ಚೆನ್ನಾಗಿಲ್ಲ ಅನ್ನೋದಂತೆ. ಈ ರೀತಿ ಕಾರಣವೊಡ್ಡಿ ಮದುವೆ ನಿರಾಕರಣೆ ಆಗಿರುವ ವಿಷಯ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ.
ಮಹಾರಾಷ್ಟ್ರದ ಮುರ್ತಿಜಾಪುರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಅರೇಂಜ್ಡ್ ಮ್ಯಾರೇಜ್ ಗಳಲ್ಲಿ ವರನ ಫೈನಾನ್ಸ್ ಹಿನ್ನೆಲೆಯೂ ನಿರ್ಣಾಯಕ ಎನ್ನುವ ಹಂತಕ್ಕೆ ಬಂದಿರುವುದನ್ನು ಇದು ತೋರಿಸಿದೆ. ವದು ಮತ್ತು ವರನ ಕಡೆಯವರು ನೋಡಿಕೊಂಡು ಮದುವೆ ಬಗ್ಗೆ ಎಲ್ಲ ಮಾತುಕತೆಯನ್ನೂ ಅಂತಿಮಗೊಳಿಸಿದ್ದರು. ಇದರ ನಡುವಲ್ಲೇ ವಧುವಿನ ಮಾವ, ವರನ ಹಣಕಾಸು ಹಿನ್ನೆಲೆ ಹೇಗಿದೆ ಎನ್ನುವ ಬಗ್ಗೆ ಚೆಕ್ ಮಾಡಿದ್ದಾರೆ. ಚಾರ್ಟಡ್ ಅಕೌಂಟೆಂಟ್ ಮೂಲಕ ಮದುವೆಯಾಗುವ ಹುಡುಗನ ಸಿಬಿಲ್ ಸ್ಕೋರ್ ಚೆಕ್ ಮಾಡಿದಾಗ, ಏನೂ ಒಳ್ಳೆದಿಲ್ಲ ಅನ್ನೋದು ತಿಳಿದುಬಂದಿತ್ತು. ಹಲವು ಬ್ಯಾಂಕ್ ಖಾತೆಗಳಲ್ಲಿ ಲೋನ್ ಹೊಂದಿರುವುದು ಮತ್ತು ಅದನ್ನು ಸೂಕ್ತ ಕಾಲದಲ್ಲಿ ಮರು ಪಾವತಿ ಮಾಡದೇ ಇದ್ದುದು ಪತ್ತೆಯಾಗಿತ್ತು. ಇದರಿಂದಾಗಿ ಹುಡುಗನ ಹಣಕಾಸು ಸ್ಥಿರತೆ ಚೆನ್ನಾಗಿಲ್ಲ. ಅಷ್ಟೇ ಅಲ್ಲ, ಇಂಥ ವ್ಯಕ್ತಿ ಭವಿಷ್ಯದಲ್ಲಿ ಪತ್ನಿಯಾದವಳನ್ನು ಹೇಗೆ ನೋಡಿಕೊಳ್ಳುತ್ತಾನೆ ಎಂಬ ಪ್ರಶ್ನೆ ಎದುರಾಗಿತ್ತು.
ವಿಷಯ ತಿಳಿದೊಡನೆ ವಧುವಿನ ಮಾವ, ಅವರ ಕುಟುಂಬಸ್ಥರಿಗೆ ಹುಡುಗನ ಸಿಬಿಲ್ ಸ್ಕೋರ್ ಏನೂ ಚೆನ್ನಾಗಿಲ್ಲ ಎಂದು ತಿಳಿಸಿದ್ದಾರೆ. ಅಲ್ಲದೆ, ಇಂಥ ಹುಡುಗನ ಕಟ್ಟಿಕೊಂಡು ಏನು ಮಾಡೋದು, ಆಮೇಲೆ ಪಶ್ಚಾತ್ತಾಪ ಪಡೋ ಬದಲು ಈಗಲೇ ಯೋಚನೆ ಮಾಡಿ, ಮದುವೆ ಸಂಬಂಧ ಮುರಿದುಕೊಳ್ಳುವುದೇ ಲೇಸು ಎಂದು ಸೂಚನೆ ಕೊಟ್ಟಿದ್ದಾರೆ. ಮಾವನ ಕಾಳಜಿಯನ್ನು ವಧುವಿನ ಕಡೆಯವರು ಒಪ್ಪಿಕೊಂಡಿದ್ದು, ಮದುವೆಗೆ ಸಿದ್ಧತೆ ನಡೆಸಿದ್ದರೂ ಅರ್ಧಕ್ಕೇ ಕೈಬಿಟ್ಟಿದ್ದಾರೆ. ಮದುವೆಗೆ ಆರಂಭದಲ್ಲಿ ಒಪ್ಪಿಗೆ ನೀಡಿದ್ದರೂ, ಫೈನಾನ್ಸ್ ವಿಷಯದಲ್ಲಿ ರೆಡ್ ಸಿಗ್ನಲ್ ಬಂದಿದ್ದರಿಂದ ಸಂಬಂಧ ಮುರಿದು ಬಿದ್ದಿತ್ತು.
ಏನಿದು ಸಿಬಿಲ್ ಸ್ಕೋರ್ ?
ಸಿಬಿಲ್ ಸ್ಕೋರ್ ಎಂದರೆ, ಒಬ್ಬನ ಹಣಕಾಸು ಸ್ಥಿತಿ ಬಗ್ಗೆ ತಿಳಿಸುವ ಮಾಪಕ. 300ರಿಂದ 900ರ ನಡುವಿನ ಮೂರು ಅಂಕಿಯ ಸಂಖ್ಯೆಯಲ್ಲಿ ವ್ಯಕ್ತಿಯ ಹಣಕಾಸು ಮ್ಯಾನೇಜ್ಮೆಂಟ್ ಹೇಗಿದೆ ಎನ್ನುವ ಬಗ್ಗೆ ಇದು ತಿಳಿಸಲಾಗುತ್ತದೆ. ಮಾಪಕದಲ್ಲಿ ಹೆಚ್ಚಿನ ಸ್ಕೋರ್ ಬಂದರೆ, ಹಣಕಾಸು ಸ್ಥಿತಿ ಉತ್ತಮ ಎಂದು ತೋರಿಸಿದರೆ, ಕಡಿಮೆ ತೋರಿಸಿದರೆ ಹಣಕಾಸು ಸ್ಥಿತಿ ಚೆನ್ನಾಗಿಲ್ಲ ಎಂದು ಸೂಚಿಸುತ್ತದೆ. ಬ್ಯಾಂಕ್ ಇನ್ನಿತರ ಹಣಕಾಸು ಸಂಸ್ಥೆಗಳು ಸಾಲ ನೀಡುವಾಗ ವ್ಯಕ್ತಿಯ ಸಿಬಿಲ್ ಸ್ಕೋರ್ ಪರಿಶೀಲನೆ ಮಾಡುತ್ತದೆ. ಬೇರೆ ಬೇರೆ ಕಡೆ ಸಾಲ ಪಡೆದು ಮರು ಪಾವತಿ ಮಾಡದೇ ಉಳಿಸಿದ್ದರೆ, ಸ್ಯಾಲರಿ ಖಾತೆ ಇದ್ದವರಿಗೂ ಸರಿಯಾಗಿ ಸ್ಯಾಲರಿ ಕ್ರೆಡಿಟ್ ಆಗಿಲ್ಲದಿದ್ದರೆ, ಸಿಬಿಲ್ ಸ್ಕೋರ್ ಕಡಿಮೆ ತೋರಿಸುತ್ತದೆ.
A wedding in Maharashtra’s Murtizapur was abruptly called off—not due to familial disagreements or compatibility concerns, but because the groom’s CIBIL score failed to meet the bride’s family’s expectations.
12-01-26 08:20 pm
Mangaluru
ಮನೆ ಕಟ್ಟಲು ಅಡಿಪಾಯ ತೆಗೆಯುವ ವೇಳೆ 1 ಕೆಜಿಯಷ್ಟು ನಿ...
10-01-26 10:28 pm
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
12-01-26 11:00 pm
HK staffer
ಕುಂಬಳೆ ಟೋಲ್ ಗೇಟ್ ವಿರುದ್ಧ ರಸ್ತೆ ತಡೆದು ಪ್ರತಿಭಟನ...
12-01-26 05:01 pm
ಎಕ್ಸ್ ನಲ್ಲಿ ಅಶ್ಲೀಲ ಕಂಟೆಂಟ್ ; ಐಟಿ ಸಚಿವಾಲಯದ ಒತ್...
11-01-26 06:07 pm
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
12-01-26 08:03 pm
Mangaluru Staffer
ಭಾರತ ರಕ್ತಪಾತಕ್ಕೆ ಇನ್ನಷ್ಟು ಸಿದ್ಧವಾಗಬೇಕು ; ಚೀನಾ...
11-01-26 10:39 pm
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
12-01-26 06:28 pm
Mangaluru Staffer
Mangalore Crime: ಬಾಂಗ್ಲಾದವನೆಂದು ಹೇಳಿ ವಲಸೆ ಕಾರ...
12-01-26 01:54 pm
Sharmila Death, Murder, Bangalore: ಮಂಗಳೂರಿನ ಟ...
12-01-26 01:31 pm
ಅಯ್ಯಪ್ಪ ಸ್ವಾಮಿಗಳ ಪೂಜೆ ಸಂದರ್ಭದಲ್ಲಿ ಮುಸ್ಲಿಂ ವ್ಯ...
11-01-26 09:59 pm
ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆ ; ತಾಯಿ ಜಗಳ...
07-01-26 10:45 pm