ಬ್ರೇಕಿಂಗ್ ನ್ಯೂಸ್
21-01-25 11:02 pm HK News Desk ದೇಶ - ವಿದೇಶ
ಮುಂಬೈ, ಜ.21: ಬಾಲಿವುಡ್ ನಟ ಸೈಫ್ ಆಲಿ ಖಾನ್ ಗೆ ಚೂರಿ ಇರಿದು ಪರಾರಿಯಾಗಿದ್ದ ಬಾಂಗ್ಲಾದೇಶ ಮೂಲದ ಆರೋಪಿಯನ್ನು ಮುಂಬೈ ಪೊಲೀಸರು ಥಾಣೆಯಲ್ಲಿ ಬಂಧಿಸಿದ್ದಾರೆ. ಬಾಂಗ್ಲಾದೇಶದ ಜಲೋಕಾಟಿ ಜಿಲ್ಲೆಯ ನಿವಾಸಿಯಾಗಿದ್ದು, ಥಾಣೆಯಲ್ಲಿ ಹೊಟೇಲ್ ಕಾರ್ಮಿಕನಾಗಿದ್ದ ಮೊಹಮ್ಮದ್ ಶರೀಫುಲ್ ಇಸ್ಲಾಮ್ ಶೆಹಜಾದ್ ಬಂಧಿತ ಆರೋಪಿ.
ಥಾಣೆಯ ಹೀರಾನಂದಾನಿ ಎಸ್ಟೇಟ್ ನಲ್ಲಿ ಅಡಗಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ತಾನೇ ಕೃತ್ಯ ಎಸಗಿದ್ದಾಗಿ ತಪ್ಪು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಜ.17ರಂದು ಆರೋಪಿ ಸೈಫ್ ಆಲಿ ಖಾನ್ ವಾಸವಿರುವ ಅಪಾರ್ಟ್ಮೆಂಟ್ ಗೆ ನುಗ್ಗಿದ್ದು, ಆತನನ್ನು ಹಿಡಿಯಲು ಯತ್ನಿಸಿದಾಗ ಚೂರಿಯಿಂದ ಕುತ್ತಿಗೆ, ಬೆನ್ನಿಗೆ ದಾಳಿ ಮಾಡಿದ್ದ. ಆನಂತರ, ಸ್ಥಳದಿಂದ ಪರಾರಿಯಾಗಿದ್ದ. ರಾತ್ರಿ 2.30ರ ಸುಮಾರಿಗೆ ಘಟನೆ ನಡೆದಿದ್ದು, ಆನಂತರ ಸೈಫ್ ಅವರನ್ನು ಆಟೋದಲ್ಲಿ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆರೋಪಿ ಮೊಹಮ್ಮದ್ ಶರೀಫ್ ಎಂಟನೇ ಮಹಡಿ ವರೆಗೆ ಮೆಟ್ಟಿಲ ಮೂಲಕ ಏರಿದ್ದು, ಆನಂತರ ಕಿಟಕಿ ಮೂಲಕ 12 ಮಹಡಿಗೆ ಹೋಗಿದ್ದ. ಈ ವೇಳೆ, ಸಿಸಿಟಿವಿಯಿಂದ ತಪ್ಪಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಪಟ್ಟಿದ್ದ. ಆದರೂ ಒಂದು ಕಡೆ ಮೆಟ್ಟಿಲಿನಿಂದ ಇಳಿದು ಹೋಗುವ ಚಿತ್ರಣ ಸಿಸಿಟಿವಿಯಲ್ಲಿ ಬಂದಿತ್ತು. ತನಿಖೆಯ ಸಂದರ್ಭದಲ್ಲಿ ಆರೋಪಿ ಉತ್ತರ ಪ್ರದೇಶಕ್ಕೆ ಪರಾರಿಯಾಗಿದ್ದಾನೆ ಎಂದೇ ತಿಳಿಯಲಾಗಿತ್ತು. ಆರೋಪಿ ಬಗ್ಗೆ ಯಾವುದೇ ಸುಳಿವು ಕೂಡ ಇರಲಿಲ್ಲ. ಆದರೆ ತನಿಖೆಯ ಸಂದರ್ಭದಲ್ಲಿ ಸಿಕ್ಕಿದ್ದ ಒಂದು ಸುಳಿವು ಆತನನ್ನು ಪೊಲೀಸರ ಕೈಗೆ ಸಿಕ್ಕಿಬೀಳುವಂತೆ ಮಾಡಿತ್ತು.
ಪರಾರಿಯಾಗುವ ಸಂದರ್ಭದಲ್ಲಿ ವೂರ್ಲಿಯ ಸ್ಟಾಲ್ ಒಂದರಲ್ಲಿ ಪರಾಟ ತಿಂದಿದ್ದಲ್ಲದೆ, ಒಂದು ವಾಟರ್ ಬಾಟಲ್ ಖರೀದಿಸಿದ್ದ. ಈ ವೇಳೆ, ಗೂಗಲ್ ಪೇ ಮೂಲಕ ಹಣ ಪಾವತಿ ಮಾಡಿದ್ದ. ಪೊಲೀಸರು ಫೋಟೋ ಹಿಡಿದು ತನಿಖೆ ಮಾಡುತ್ತಿದ್ದಾಗ ಸ್ಟಾಲ್ ಹೊಕ್ಕಿದ್ದು ಪತ್ತೆಯಾಗಿತ್ತು. ಗೂಗಲ್ ಪೇ ಮಾಡಿದ್ದರಿಂದ ಆತನ ಮೊಬೈಲ್ ನಂಬರ್ ಸಿಕ್ಕಿದ್ದರಿಂದ ಥಾಣೆಯಲ್ಲಿ ಟವರ್ ಲೊಕೇಶನ್ ಸಿಗುವಂತೆ ಮಾಡಿತ್ತು. ಆನಂತರ ಒಂದೇ ದಿನದಲ್ಲಿ ಥಾಣೆಯ ಎಸ್ಟೇಟ್ ಒಂದರ ಕಾಡಿನಲ್ಲಿ ಆರೋಪಿ ಸಿಕ್ಕಿಬಿದ್ದಿದ್ದಾನೆ.
ವಿಶೇಷ ಅಂದ್ರೆ, ಕೃತ್ಯದ ಮರುದಿನ ಬಾಂದ್ರಾ ವೆಸ್ಟ್ ಪಟವರ್ಧನ್ ಗಾರ್ಡನ್ ಬಳಿಯ ಬಸ್ ನಿಲ್ದಾಣದಲ್ಲಿ ಬೆಳಗ್ಗೆ 7 ಗಂಟೆ ವರೆಗೂ ಮಲಗಿದ್ದ. ಆನಂತರ, ರೈಲು ಹಿಡಿದು ವೂರ್ಲಿಗೆ ತೆರಳಿದ್ದ ಎನ್ನುವುದು ತನಿಖೆಯಲ್ಲಿ ಪತ್ತೆಯಾಗಿದೆ. ಇದೇ ವೇಳೆ, ಶಿವಸೇನೆ ಸಂಸದ ನರೇಶ್ ಮಾಸ್ಕೆ ಬಾಂಗ್ಲಾದೇಶಿಗರು ಕೆಲಸಕ್ಕೆಂದು ಬಂದು ಇಲ್ಲಿ ದೇಶ ದ್ರೋಹಿ ಚಟುವಟಿಕೆ ನಡೆಸುತ್ತಾರೆ, ಉಗ್ರವಾದ ಕೃತ್ಯ ನಡೆಸುತ್ತಾರೆ. ಬಾಂಗ್ಲಾ ವಲಸಿಗರ ಬಗ್ಗೆ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.
On the run for over two days, Mohammad Shariful, a suspect in the Saif Ali Khan stabbing case, was picked up from deep inside the mangrove forests in Thane in the wee hours of Sunday, said sources. When the police confronted Shariful, he said that he was a resident of West Bengal. On probing further, Shariful was unable to give details of his residence and whereabouts in West Bengal.
05-10-25 09:41 pm
HK News Desk
ನಾಯಿ ದಾಳಿಗೆ ಸ್ಥಳೀಯರ ಆಕ್ರೋಶ ; ಬೀದಿ ನಾಯಿಗಳ ಮೇಲೆ...
05-10-25 08:08 pm
ಲಿಂಗಾಯತರನ್ನು ಪ್ರತ್ಯೇಕಿಸುವುದು ಸಮಾಜ ವಿರೋಧಿ ಕೆಲಸ...
05-10-25 07:57 pm
ಬಿಹಾರ ಚುನಾವಣೆ ಬಳಿಕ ರಾಜ್ಯದಲ್ಲಿ ರಾಜಕೀಯ ಕ್ರಾಂತಿ...
05-10-25 07:38 pm
ಜಾತಿ ಗಣತಿ ತೆರಳಿದ್ದ ಶಿಕ್ಷಕಿ ಮತ್ತು ಪತಿಗೆ ಅಟ್ಟಾಡ...
05-10-25 07:18 pm
05-10-25 11:07 pm
HK News Desk
ಡೆಡ್ಲಿ ಸಿರಪ್ 'ಕೋಲ್ಡ್ರಿಫ್ 'ಶಿಫಾರಸು ಮಾಡಿದ್ದ...
05-10-25 10:38 pm
Coldrif syrup: ಸಿರಪ್ ಸೇವಿಸಿ 11 ಮಕ್ಕಳು ಸಾವು ;...
04-10-25 04:45 pm
Rashmika Mandanna, Vijay Deverakonda Marriage...
04-10-25 03:11 pm
ಕಾಂತಾರ ಬ್ಲಾಕ್ ಬಸ್ಟರ್, ನಾವೆಲ್ಲ ಚಿತ್ರೋದ್ಯಮಿಗಳು...
04-10-25 01:11 pm
04-10-25 10:29 pm
Mangalore Correspondent
103ನೇ ವರ್ಷದ ರಥಬೀದಿ 'ಮಂಗಳೂರು ಶಾರದಾ ಮಹೋತ್ಸವ' ಸಂ...
03-10-25 11:07 pm
Puttur Krishna Rao, Baby, Pratibha Kulai: ಕೃಷ...
03-10-25 05:59 pm
Ullal Dasara Issue, Mangalore 2025: ದಸರಾ ಶೋಭಾ...
03-10-25 02:11 pm
ಮಂಗಳೂರಿನಲ್ಲಿ ಗಣತಿ ಕಾರ್ಯಕ್ಕೆ 425 ಮಂದಿ ಗೈರು: ಶಿ...
02-10-25 11:05 pm
05-10-25 03:22 pm
Mangalore Correspondent
Shivamogga Murder, Mother: ಶಿವಮೊಗ್ಗ ; ಮಗಳನ್ನು...
04-10-25 02:57 pm
Karkala Murder, Crime: ಕಾರ್ಕಳ ; ಪ್ರೀತಿಸಿದ ಯುವ...
03-10-25 11:28 pm
ಸುಧಾಮೂರ್ತಿ, ನಿರ್ಮಲಾ ಸೀತಾರಾಮನ್ ಹೆಸರಲ್ಲಿ ಎಐ ವಿಡ...
01-10-25 02:39 pm
Ullal Gold Robbery, Mangalore, CCB police: ಜು...
29-09-25 01:24 pm