ಬ್ರೇಕಿಂಗ್ ನ್ಯೂಸ್
19-01-25 06:35 pm HK News Desk ದೇಶ - ವಿದೇಶ
ನವದೆಹಲಿ, ಜ.19: ಕಡೆಗೂ ಇಸ್ರೇಲ್ - ಪ್ಯಾಲೆಸ್ತೀನ್ ನಡುವಿನ ಬಿಕ್ಕಟ್ಟು ಕೊನೆಯಾಗಿದೆ. ಸುದೀರ್ಘ 15 ತಿಂಗಳ ಯುದ್ಧಕ್ಕೆ ಇಸ್ರೇಲ್ ಕ್ಯಾಬಿನೆಟ್ ಒಪ್ಪಿಕೊಂಡಿದ್ದು ಕದನ ವಿರಾಮ ಒಪ್ಪಂದಕ್ಕೆ ಸಹಿ ಹಾಕಿದೆ. ಇದಕ್ಕೆ ಕಾರಣವಾಗಿದ್ದು ಮೂರು ದೇಶಗಳ ನಾಯಕರು ಮಾಡಿದ ಪ್ರಯತ್ನ.
ಇಸ್ರೇಲ್ ಮತ್ತು ಹಮಾಸ್ ಬಂಡುಕೋರರ ನಡುವಿನ ಯುದ್ಧಕ್ಕೆ ಅಂತ್ಯವೇ ಇಲ್ಲ ಎನ್ನುವ ಸ್ಥಿತಿಯಾಗಿತ್ತು. ನೀ ಕೊಡೆ, ನಾ ಬಿಡೆ ಎನ್ನುವ ರೀತಿ ಗಾಜಾ ಪಟ್ಟಿಯ ಜನರು ಜೀವಂತ ಶವಗಳಾಗಿದ್ದರೂ, ಅವರ ಉಪಟಳ ನಿಂತಿರಲಿಲ್ಲ. ಬದಲಿಗೆ, ಇರಾನ್, ಹೌತಿ ಬಂಡುಕೋರರು ಕೂಡ ಇಸ್ರೇಲ್ ವಿರುದ್ಧದ ಯುದ್ಧಕ್ಕೆ ಕೈಜೋಡಿಸಿದ್ದರು. ಇದರಿಂದಾಗಿ ಮುಸ್ಲಿಂ ರಾಷ್ಟ್ರಗಳೆಲ್ಲ ಒಟ್ಟಾಗಿ ಮೂರನೇ ಮಹಾಯುದ್ಧ ಆರಂಭಗೊಳ್ಳುತ್ತೆ ಎಂದೇ ಭಾವಿಸಲಾಗಿತ್ತು.
ನೆರೆ ರಾಷ್ಟ್ರಗಳಲ್ಲಿ ಯುದ್ಧ ಸ್ಥಿತಿಯಿಂದಾಗಿ ಕತಾರ್ ತೀವ್ರ ನಷ್ಟ ಅನುಭವಿಸಿತ್ತು. ಹೀಗಾಗಿ ಇವರ ಯುದ್ಧ ನಿಲ್ಲಿಸಲು ಪ್ರಬಲ ಒತ್ತಾಸೆ ಇಟ್ಟಿದ್ದು ಕತಾರ್. ಇದರ ಜೊತೆಗೆ, ಅಮೆರಿಕಾ, ಈಜಿಪ್ಟ್ ಕೂಡ ಕದನ ವಿರಾಮಕ್ಕಾಗಿ ಪ್ರಯತ್ನ ನಡೆಸಿದ್ದವು. ಸತತವಾಗಿ ಇಸ್ರೇಲ್ ಮನವೊಲಿಸುವ ಕೆಲಸವನ್ನು ಮಾಡುತ್ತಲೇ ಬಂದವು. ಎರಡು ದೇಶಗಳ ರಾಯಭಾರಿಗಳ ನಡುವೆ ಮೊದಲು ಕತಾರ್ ದೇಶದ ದೋಹಾದಲ್ಲಿ ಮಾತುಕತೆ ನಡೆದಿತ್ತು. ವಿಪರೀತ ಸಾವು- ನೋವು, ಯುದ್ಧಾತಂಕದಿಂದ ಉಂಟಾದ ಅಡ್ಡ ಪರಿಣಾಮಗಳ ಬಗ್ಗೆ ಚರ್ಚೆಯಾಗಿತ್ತು. ಹಮಾಸ್ ಉಗ್ರರ ಮೇಲೆ ಸೇಡು ತೀರಿಸುವ ಇಸ್ರೇಲ್ ಉದ್ದೇಶ ಅದಾಗಲೇ ಈಡೇರಿತ್ತು. ಹಾಗಾಗಿ, ಯುದ್ಧ ಮುಂದುವರಿಸುವುದಕ್ಕೆ ಇಸ್ರೇಲ್ ನಾಯಕರಲ್ಲು ಕಾರಣ ಇರಲಿಲ್ಲ.


ಇತ್ತ ಈಜಿಪ್ಟ್ ಕೂಡ ಇಸ್ರೇಲ್ ನಾಯಕರ ಮನವೊಲಿಕೆಗೆ ಮುಂದಾಗಿತ್ತು. ಇತ್ತೀಚೆಗೆ ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷ ಪದವಿಗೇರುತ್ತಲೇ ರಷ್ಯಾ - ಉಕ್ರೇನ್ ಮತ್ತು ಇಸ್ರೇಲ್ - ಹಮಾಸ್ ಯುದ್ಧ ನಿಲ್ಲಿಸುವ ಬಗ್ಗೆ ಘೋಷಣೆ ಮಾಡಿದ್ದರು. ಇದರಿಂದ ಇಸ್ರೇಲ್ ಮೇಲೆ ಪರೋಕ್ಷ ಒತ್ತಡವೂ ಬಿದ್ದಿತ್ತು. ಕೊನೆಗೂ ಇಸ್ರೇಲ್ ನಾಯಕರು ಜ.17ರಂದು ಕದನ ವಿರಾಮಕ್ಕೆ ಸಹಿ ಹಾಕಿದ್ದಾರೆ.
ಇದುವರೆಗೆ ಇಸ್ರೇಲ್ - ಹಮಾಸ್ ನಡುವಿನ ಯುದ್ದದಲ್ಲಿ ಇಸ್ರೇಲ್ ದೇಶದ 1,200ಕ್ಕೂ ಹೆಚ್ಚು ನಾಗರೀಕರು ಮಡಿದಿದ್ದರೆ, ಪ್ಯಾಲೇಸ್ತೀನ್ ದೇಶದ 46 ಸಾವಿರಕ್ಕೂ ಅಧಿಕ ಜನರು ಸಾವನ್ನಪ್ಪಿದ್ದರು. 2023ರ ಅಕ್ಟೋಬರ್ 7 ರಂದು ಏಕಾಏಕಿ ಹಮಾಸ್ ಉಗ್ರರು ಇಸ್ರೇಲ್ ಸೇನೆ, ನಾಗರಿಕರನ್ನು ಗುರಿಯಾಗಿಸಿ ದಾಳಿ ನಡೆಸಿತ್ತು. ಆದರೆ ಇಸ್ರೇಲ್ ನಡೆಸಿದ ಪ್ರತಿದಾಳಿಗೆ ಗಾಜಾ ಪಟ್ಟಿ ಹೇಳ ಹೆಸರಿಲ್ಲದಂತೆ ಕನಲಿ ಹೋಗಿತ್ತು. ಉಗ್ರರು ಎಲ್ಲಿ ಅಡಗಿದ್ದರೂ ಬಿಡಲ್ಲ ಎನ್ನುತ್ತಲೇ ಬಾಂಬ್ ದಾಳಿ ನಡೆಸಿತ್ತು. ಕೊನೆಗೆ, ಹಮಾಸ್ ನಾಯಕರು ಇರಾನ್ ದೇಶದಲ್ಲಿ ಅಡಗಿಕೊಂಡರೂ, ಅಲ್ಲಿಗೂ ಡ್ರೋಣ್ ದಾಳಿ ಮಾಡಿ ಮಟಾಷ್ ಮಾಡಿತ್ತು.
ಕದನ ವಿರಾಮ ಯಾವಾಗ ಎನ್ನುವ ಪ್ರಶ್ನೆ ಜಗತ್ತಿನಾದ್ಯಂತ ಕಾಡುತ್ತಿತ್ತು. ಈ 15 ತಿಂಗಳ ಅವಧಿಯಲ್ಲಿ ಒಮ್ಮೆ ಮಾತ್ರ ಕದನ ವಿರಾಮ ಜಾರಿಗೆ ಬಂದಿತ್ತು. ಈ ಯುದ್ದದಲ್ಲಿ ಇಸ್ರೇಲ್ ಮೇಲುಗೈ ಸಾಧಿಸಿತು ಎಂದೇ ವ್ಯಾಖ್ಯಾನಿಸಲಾಗುತ್ತಿದೆ.
Israel’s cabinet has approved the Israel-Hamas ceasefire and hostage release deal, according to the prime minister’s office, following hours of deliberation. The smaller security cabinet approved the deal earlier on Friday.
21-11-25 05:25 pm
HK News Desk
ವಾಹನ ಸವಾರರಿಗೆ ಗುಡ್ ನ್ಯೂಸ್ ; ಮತ್ತೆ 50% ದಂಡ ವ...
21-11-25 10:19 am
CM. Siddaramaiah, CM SEAT: ಯಾವ ಕ್ರಾಂತಿಯೂ ಇಲ್ಲ...
20-11-25 03:30 pm
DK Suresh, CM Siddaramaiah : ಸಿಎಂ ಕುರ್ಚಿ ಕ್ಲೈ...
20-11-25 03:01 pm
ಆನೇಕಲ್ ನಲ್ಲಿ ಕಚಡಾ ಡಾಕ್ಟರ್ ; ಇನ್ಪೆಕ್ಟರ್ ಅಮಾನತಿ...
19-11-25 02:16 pm
21-11-25 06:10 pm
HK News Desk
ಶಬರಿಮಲೆ ಚಿನ್ನ ಲೂಟಿ ಪ್ರಕರಣ ; ಕೊನ್ನಿ ಕ್ಷೇತ್ರದ ಸ...
21-11-25 02:26 pm
ಶ್ರೀಲಂಕಾದಲ್ಲಿ ನ್ಯೂಜಿಲೆಂಡ್ ಮಹಿಳೆಯ ಜೊತೆ ಯುವಕನ ಅ...
19-11-25 06:47 pm
ಕೆಂಪು ಕೋಟೆ ಬ್ಲಾಸ್ಟ್ ಕೇಸ್ ; ಅಲ್ ಫಲಾಹ್ ವಿವಿಗೆ ಸ...
19-11-25 11:10 am
ಬಾಂಗ್ಲಾದಲ್ಲಿ ವಿದ್ಯಾರ್ಥಿಗಳ ಮಾರಣ ಹೋಮಕ್ಕೆ ಅವರೇ ಕ...
17-11-25 10:58 pm
21-11-25 10:39 pm
Mangalore Correspondent
ನವೆಂಬರ್ 23ರಿಂದ ಪ್ರತಿ ವಾರ 'ಸಂಸದ್ ಖೇಲ್ ಮಹೋತ್ಸವ'...
21-11-25 10:03 pm
ಸುರತ್ಕಲ್- ನಂತೂರು- ಬಿಸಿ ರೋಡ್ ಹೆದ್ದಾರಿ ಎನ್ಎಚ...
21-11-25 09:55 pm
Snake Bite, Mangalore, Detection Kit: ಹಾವು ಕಚ...
21-11-25 08:45 pm
ಮಾನಸಿಕ ಖಿನ್ನತೆ ; ಶಿಕ್ಷಕಿ ತಾಯಿಯನ್ನು ಕಾಲೇಜು ಬಿಟ...
20-11-25 10:48 pm
21-11-25 11:07 pm
Bangalore Correspondent
ಮಲ್ಪೆ ಶಿಪ್ ಯಾರ್ಡ್ ನಿಂದ ಪಾಕಿಸ್ತಾನಕ್ಕೆ ಮಾಹಿತಿ ಸ...
21-11-25 05:11 pm
ಬೆಂಗಳೂರು ಎಟಿಎಂ ಹಣ ದರೋಡೆ ಪ್ರಕರಣ ; ತಿರುಪತಿಯಲ್ಲಿ...
20-11-25 10:53 pm
BMR Group Fraud, Money, Mangalore, Surathkal:...
20-11-25 06:01 pm
Bangalore ATM Van Robbery, Update: ಬೆಂಗಳೂರಿನ...
20-11-25 11:51 am