ಬ್ರೇಕಿಂಗ್ ನ್ಯೂಸ್
11-11-24 05:19 pm HK News Desk ದೇಶ - ವಿದೇಶ
ಮುಂಬೈ, ನ.11: ಎನ್ ಸಿಪಿ ನಾಯಕ ಬಾಬಾ ಸಿದ್ದಿಕಿ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿ ತಲೆಮರೆಸಿಕೊಂಡಿದ್ದ ವ್ಯಕ್ತಿಯನ್ನು ಉತ್ತರ ಪ್ರದೇಶದಲ್ಲಿ ಪೊಲೀಸರು ಬಂಧಿಸಿದ್ದಾರೆ. ಉತ್ತರ ಪ್ರದೇಶದ ಸ್ಪೆಷಲ್ ಟಾಸ್ಕ್ ಫೋರ್ಸ್ ಮತ್ತು ಮುಂಬೈ ಕ್ರೈಮ್ ಬ್ರಾಂಚ್ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದು, ನೇಪಾಳಕ್ಕೆ ಪರಾರಿಯಾಗುವ ಯತ್ನದಲ್ಲಿದ್ದ ಶಿವಕುಮಾರ್ ನನ್ನು ಬಹ್ರೈಚ್ ನಲ್ಲಿ ಬಂಧಿಸಿದ್ದಾರೆ.
ಬಾಬಾ ಸಿದ್ದಿಕಿ ಅವರನ್ನು ಅ.12ರಂದು ಪುತ್ರ ಮತ್ತು ಶಾಸಕನಾಗಿರುವ ಜೀಶಾನ್ ಸಿದ್ದಿಕ್ ಅವರ ಪೂರ್ವ ಬಾಂದ್ರಾದ ಕಚೇರಿಯಲ್ಲಿದ್ದಾಗ 9 ಎಂಎಂ ಪಿಸ್ತೂಲ್ ನಲ್ಲಿ ಆರು ಸುತ್ತು ಗುಂಡು ಹಾರಿಸಿ ಕೊಲ್ಲಲಾಗಿತ್ತು. ಮೂವರಿದ್ದ ಆಗಂತುಕರು ಹತ್ತಿರದಿಂದಲೇ ಫೈರ್ ಮಾಡಿದ್ದು, ಅದರಲ್ಲಿ ಒಬ್ಬಾತ ಶಿವಕುಮಾರ್ ಪೊಲೀಸರ ಕಣ್ತಪ್ಪಿಸಿ ಪರಾರಿಯಾಗಿದ್ದ. ಇಬ್ಬರು ಆರೋಪಿಗಳು ಕೆಲವೇ ದಿನಗಳಲ್ಲಿ ಬಂಧಿತರಾಗಿದ್ದರು.
ಲಾರೆನ್ಸ್ ಬಿಷ್ಣೋಯಿ ಸೋದರ, ಅನ್ಮೋಲ್ ಬಿಷ್ಣೋಯಿ ಸೂಚನೆಯಂತೆ ಬಾಬಾ ಸಿದ್ದಿಕಿಯನ್ನು ಕೊಂದಿದ್ದಾಗಿ ಆರೋಪಿ ಶಿವಕುಮಾರ್ ಹೇಳಿಕೊಂಡಿದ್ದಾನೆ. ಲಾರೆನ್ಸ್ ಬಿಷ್ಣೋಯಿ ಆಪ್ತನಾಗಿರುವ ಶುಭಂ ಲೋಂಕಾರ್ ಎಂಬಾತನ ಮೂಲಕ ಅನ್ಮೋಲ್ ಪರಿಚಯವಾಗಿತ್ತು. ಒಂದು ವರ್ಷದ ಹಿಂದೆಯೇ ದೇಶ ಬಿಟ್ಟು ಕೀನ್ಯಾ ಆಬಳಿಕ ಕೆನಡಾಕ್ಕೆ ಹಾರಿದ್ದ ಅನ್ಮೋಲ್ ಬಿಷ್ಣೋಯಿ, ಆರೋಪಿಗಳ ಜೊತೆಗೆ ಸ್ನಾಪ್ ಚಾಟ್ ಜಾಲತಾಣದಲ್ಲಿ ಸಂಪರ್ಕ ಹೊಂದಿದ್ದ. ದೇಶದ ಮೋಸ್ಟ್ ವಾಂಟೆಡ್ ಲಿಸ್ಟ್ ನಲ್ಲಿ ಅನ್ಮೋಲ್ ಬಿಷ್ಣೋಯಿ ಹೆಸರು ಸೇರ್ಪಡೆಯಾಗಿದ್ದು, ಈತನ ಸುಳಿವು ಕೊಟ್ಟವರಿಗೆ ಹತ್ತು ಲಕ್ಷ ಕೊಡುವುದಾಗಿ ಎನ್ಐಎ ಮಾಹಿತಿ ನೀಡಿದೆ.
ಶಿವಕುಮಾರ್ ಬಂಧನ ಆಗುವುದರೊಂದಿಗೆ, ಬಾಬಾ ಸಿದ್ದಿಕಿ ಕೊಲೆ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 23ಕ್ಕೇರಿದೆ.
Shiv Kumar, the man who shot NCP leader Baba Siddique, was arrested in Uttar Pradesh's Bahraich on Sunday. He had been on the run since the killing of Baba Siddique and was trying to flee to Nepal, when he was caught in a joint operation of the UP Special Task Force (STF) and the Mumbai Crime Branch.
21-11-25 05:25 pm
HK News Desk
ವಾಹನ ಸವಾರರಿಗೆ ಗುಡ್ ನ್ಯೂಸ್ ; ಮತ್ತೆ 50% ದಂಡ ವ...
21-11-25 10:19 am
CM. Siddaramaiah, CM SEAT: ಯಾವ ಕ್ರಾಂತಿಯೂ ಇಲ್ಲ...
20-11-25 03:30 pm
DK Suresh, CM Siddaramaiah : ಸಿಎಂ ಕುರ್ಚಿ ಕ್ಲೈ...
20-11-25 03:01 pm
ಆನೇಕಲ್ ನಲ್ಲಿ ಕಚಡಾ ಡಾಕ್ಟರ್ ; ಇನ್ಪೆಕ್ಟರ್ ಅಮಾನತಿ...
19-11-25 02:16 pm
21-11-25 06:10 pm
HK News Desk
ಶಬರಿಮಲೆ ಚಿನ್ನ ಲೂಟಿ ಪ್ರಕರಣ ; ಕೊನ್ನಿ ಕ್ಷೇತ್ರದ ಸ...
21-11-25 02:26 pm
ಶ್ರೀಲಂಕಾದಲ್ಲಿ ನ್ಯೂಜಿಲೆಂಡ್ ಮಹಿಳೆಯ ಜೊತೆ ಯುವಕನ ಅ...
19-11-25 06:47 pm
ಕೆಂಪು ಕೋಟೆ ಬ್ಲಾಸ್ಟ್ ಕೇಸ್ ; ಅಲ್ ಫಲಾಹ್ ವಿವಿಗೆ ಸ...
19-11-25 11:10 am
ಬಾಂಗ್ಲಾದಲ್ಲಿ ವಿದ್ಯಾರ್ಥಿಗಳ ಮಾರಣ ಹೋಮಕ್ಕೆ ಅವರೇ ಕ...
17-11-25 10:58 pm
21-11-25 10:39 pm
Mangalore Correspondent
ನವೆಂಬರ್ 23ರಿಂದ ಪ್ರತಿ ವಾರ 'ಸಂಸದ್ ಖೇಲ್ ಮಹೋತ್ಸವ'...
21-11-25 10:03 pm
ಸುರತ್ಕಲ್- ನಂತೂರು- ಬಿಸಿ ರೋಡ್ ಹೆದ್ದಾರಿ ಎನ್ಎಚ...
21-11-25 09:55 pm
Snake Bite, Mangalore, Detection Kit: ಹಾವು ಕಚ...
21-11-25 08:45 pm
ಮಾನಸಿಕ ಖಿನ್ನತೆ ; ಶಿಕ್ಷಕಿ ತಾಯಿಯನ್ನು ಕಾಲೇಜು ಬಿಟ...
20-11-25 10:48 pm
21-11-25 11:07 pm
Bangalore Correspondent
ಮಲ್ಪೆ ಶಿಪ್ ಯಾರ್ಡ್ ನಿಂದ ಪಾಕಿಸ್ತಾನಕ್ಕೆ ಮಾಹಿತಿ ಸ...
21-11-25 05:11 pm
ಬೆಂಗಳೂರು ಎಟಿಎಂ ಹಣ ದರೋಡೆ ಪ್ರಕರಣ ; ತಿರುಪತಿಯಲ್ಲಿ...
20-11-25 10:53 pm
BMR Group Fraud, Money, Mangalore, Surathkal:...
20-11-25 06:01 pm
Bangalore ATM Van Robbery, Update: ಬೆಂಗಳೂರಿನ...
20-11-25 11:51 am