ಬ್ರೇಕಿಂಗ್ ನ್ಯೂಸ್
14-09-24 09:46 pm HK News Desk ದೇಶ - ವಿದೇಶ
ನವದೆಹಲಿ, ಸೆ.14: ಅಂಡಮಾನ್ ನಿಕೋಬಾರ್ ದ್ವೀಪ ಸಮೂಹದ ರಾಜಧಾನಿ ಪೋರ್ಟ್ ಬ್ಲೇರ್ ಹೆಸರನ್ನು ಕೇಂದ್ರ ಸರಕಾರ ಶ್ರೀವಿಜಯ ಪುರಂ ಎಂದು ಮರುನಾಮಕರಣ ಮಾಡಿದೆ. ವಶಾಹತುಶಾಹಿ ಗುರುತುಗಳನ್ನು ಅಳಿಸಿಹಾಕುವ ಉದ್ದೇಶದಿಂದ ಹೆಸರು ಬದಲಿಸಲಾಗಿದೆ ಎಂದು ಗೃಹ ಸಚಿವ ಅಮಿತ್ ಷಾ ಹೇಳಿದ್ದಾರೆ. ಇಷ್ಟಕ್ಕೂ ಪೋರ್ಟ್ ಬ್ಲೇರ್ ಹೆಸರು ಹೇಗೆ ಬಂತು, ಅದರ ಐತಿಹಾಸಿಕ ಹಿನ್ನೆಲೆ ಏನು ಅನ್ನೋದು ಕುತೂಹಲಕಾರಿ ಅಂಶ.
18ನೇ ಶತಮಾನದಲ್ಲಿ ಬ್ರಿಟಿಷರು ವಸಾಹತುಗಳನ್ನು ಹೆಚ್ಚಿಸುತ್ತ ಹೊಸ ಹೊಸ ದೇಶಗಳನ್ನು ವಶಪಡಿಸುತ್ತಿದ್ದಾಗ ಆರ್ಚ್ ಬಾಲ್ಡ್ ಬ್ಲೇರ್ ಎಂಬಾತ ನೌಕಾಧಿಕಾರಿಯಾಗಿದ್ದ. ಆಗ ಪೂರ್ವ ಭಾರತಕ್ಕೆ ಕೊಲ್ಕತ್ತಾ ನಗರ ಕೇಂದ್ರ ಸ್ಥಾನವಾಗಿತ್ತು. ಪಶ್ಚಿಮದಲ್ಲಿ ಮಂಗಳೂರು, ಮುಂಬೈ ಇದ್ದ ರೀತಿ ಕೊಲ್ಕತ್ತಾ ಇತ್ತು. ಅಲ್ಲಿಂದ ಹತ್ತಿರವಾಗಿದ್ದ ಸಮುದ್ರದ ನಡುವಿನ ದ್ವೀಪ ಪ್ರದೇಶವನ್ನು ಪತ್ತೆಗೈದು ಅದನ್ನೂ ಭಾರತದ ಈಸ್ಟ್ ಇಂಡಿಯಾ ಕಂಪನಿಗೆ ಸೇರಿಸಿದ್ದು ಆರ್ಚ್ ಬಾಲ್ಡ್ ಬ್ಲೇರ್.

ಇದಕ್ಕಾಗಿ ಆತನ ಹೆಸರನ್ನೇ ಅಲ್ಲಿನ ಪ್ರಮುಖ ಪಟ್ಟಣಕ್ಕೆ ಇಡಲಾಗಿತ್ತು. ಆನಂತರ, ಅದೇ ಪ್ರದೇಶ ಅಲ್ಲಿನ ರಾಜಧಾನಿಯಾಗಿ ಬೆಳೆಯಿತು. ಅಷ್ಟೇ ಅಲ್ಲ, ಬ್ರಿಟಿಷರ ಕಾಲದಲ್ಲೇ ಪ್ರಮುಖ ಬಂದರು ಆಗಿಯೂ ಮಾರ್ಪಟ್ಟಿತ್ತು. ಹೀಗಾಗಿ ಪೋರ್ಟ್ ಬ್ಲೇರ್ ಎನ್ನುವ ಹೆಸರು ಪ್ರಸಿದ್ದಿಗೆ ಬಂದಿತ್ತು. ಅಷ್ಟೇ ಅಲ್ಲದೆ, ಪೂರ್ವ ಬಂಗಾಳದಲ್ಲಿ ಪೋರ್ಟ್ ಬ್ಲೇರ್ ಬ್ರಿಟಿಷರ ಪಾಲಿನ ಪ್ರಮುಖ ವಾಣಿಜ್ಯ ಕೇಂದ್ರವಾಗಿ ಬದಲಾಗಿತ್ತು. ಪೋರ್ಟ್ ಬ್ಲೇರ್ ಹೆಸರಲ್ಲಿ ಅದನ್ನು ನಗರವನ್ನಾಗಿಸಿದ್ದು ಬ್ರಿಟಿಷ್ ಸೇನಾಧಿಕಾರಿ ಆರ್ಚ್ ಬಾಲ್ಡ್ ಬ್ಲೇರ್ ಹೆಗ್ಗಳಿಕೆ. ಅಲ್ಲದೆ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಅಷ್ಟೂ ಜಾಗದ ಹಿಡಿತವನ್ನೂ ಪಡೆದು ಪೋರ್ಟ್ ಬ್ಲೇರ್ ನಿಂದಲೇ ಆಡಳಿತ ನಡೆಸಲಾರಂಭಿಸಿದ್ದ. ಬ್ರಿಟಿಷರ ವಿರುದ್ಧ ಭಾರತದಲ್ಲಿ ದಂಗೆ ಏಳುತ್ತಿದ್ದವರನ್ನು ಬಂಧಿಸಿಡಲು ವಿಶೇಷವಾಗಿದ್ದ ಅಂಡಮಾನ್ ಜೈಲನ್ನೂ ಆನಂತರ ಕಾಲದಲ್ಲಿ ಮಾಡಲಾಗಿತ್ತು.

ಬ್ರಿಟಿಷರು ಅಲ್ಲಿಗೆ ಬರುವುದಕ್ಕೂ ಮುನ್ನ ಚಾತಾಮ್ ದ್ವೀಪಗಳು ಎಂಬ ಹೆಸರು ಅಲ್ಲಿಗಿತ್ತು. ಬ್ರಿಟಿಷರು ಅದನ್ನು ಗ್ರೇಟ್ ಅಂಡಮಾನ್ ಎಂದು ಹೆಸರಿಸಿದ್ದರು. ಅಲ್ಲದೆ, ಆರ್ಚ್ ಬಾಲ್ಡ್ ಬ್ಲೇರ್ ಸ್ವಾಧೀನಕ್ಕೆ ಕೊಟ್ಟು ಬಂದರು ನಗರಿಯಾಗಿ ಬೆಳೆಸುವಂತೆ ಮಾಡಿದ್ದರು. ಆದರೆ, ಸ್ವಾತಂತ್ರ್ಯ ಹೋರಾಟ ಕಾಲದಲ್ಲಿ ಅಂಡಮಾನ್ ಅಂದರೆ ಕುಖ್ಯಾತ ಜೈಲು ಅನ್ನುವುದಕ್ಕಷ್ಟೇ ಹೆಸರಿತ್ತು. ಸ್ವಾತಂತ್ರ್ಯಾ ನಂತರವೂ ಪೋರ್ಟ್ ಬ್ಲೇರ್ ಎಂದೇ ಹೆಸರಿನಲ್ಲಿದ್ದ ಅಲ್ಲಿನ ಪಟ್ಟಣಕ್ಕೀಗ ಶ್ರೀವಿಜಯ ಪುರಂ ಎಂದು ಹೆಸರಿಡಲಾಗಿದೆ. ಗುಲಾಮಿ ಸಂಸ್ಕೃತಿಯ ಸೂಚಕವಾಗಿದ್ದ ಹೆಸರನ್ನು ವಿಜಯದ ಸಂಕೇತವಾಗಿ ಬದಲಿಸಲಾಗಿದೆ ಎಂದು ಅಮಿತ್ ಷಾ ಟ್ವೀಟ್ ಮಾಡಿದ್ದಾರೆ.


ಚೋಳರ ಸಾಮ್ರಾಜ್ಯದಲ್ಲಿಯೇ ಅಂಡಮಾನ್ ಪ್ರಮುಖ ನೌಕಾ ಬಂದರು ಆಗಿತ್ತು. ಆನಂತರ, ಬ್ರಿಟಿಷರ ವಶಕ್ಕೆ ಹೋಗಿತ್ತು. ದೇಶದ ಸ್ವಾತಂತ್ರ್ಯಕ್ಕೆ ಕಹಳೆ ಊದಿದ ಮೊದಲ ಜಾಗವೂ ಇದೇ ಆಗಿತ್ತು. ನೇತಾಜಿ ಸುಭಾಸರು ಅಲ್ಲಿಂದಲೇ ಮೊದಲ ಬಾರಿಗೆ ತಿರಂಗಾ ಬಾವುಟವನ್ನು ಹಾರಿಸಿದ್ದರು. ಅಲ್ಲಿನ ಸೆಲ್ಯುಲಾರ್ ಜೈಲಿನಿಂದಲೇ ವೀರ ಸಾವರ್ಕರ್ ಸ್ವಾತಂತ್ರ್ಯ ಹೋರಾಟಕ್ಕೆ ಕಹಳೆ ಊದಿದ್ದರು ಎಂದು ಅಮಿತ್ ಷಾ ಪೋರ್ಟ್ ಬ್ಲೇರ್ ಬಗ್ಗೆ ಬರೆದುಕೊಂಡಿದ್ದಾರೆ.
The Central government on Friday, announced that Port Blair, the capital city of the Andaman and Nicobar Islands, is now Sri Vijaya Puram. Home Minister Amit Shah took to his X account and said, "Inspired by the vision of PM Narendra Modi Ji, to free the nation from the colonial imprints, today we have decided to rename Port Blair as Sri Vijaya Puram."
21-11-25 05:25 pm
HK News Desk
ವಾಹನ ಸವಾರರಿಗೆ ಗುಡ್ ನ್ಯೂಸ್ ; ಮತ್ತೆ 50% ದಂಡ ವ...
21-11-25 10:19 am
CM. Siddaramaiah, CM SEAT: ಯಾವ ಕ್ರಾಂತಿಯೂ ಇಲ್ಲ...
20-11-25 03:30 pm
DK Suresh, CM Siddaramaiah : ಸಿಎಂ ಕುರ್ಚಿ ಕ್ಲೈ...
20-11-25 03:01 pm
ಆನೇಕಲ್ ನಲ್ಲಿ ಕಚಡಾ ಡಾಕ್ಟರ್ ; ಇನ್ಪೆಕ್ಟರ್ ಅಮಾನತಿ...
19-11-25 02:16 pm
21-11-25 06:10 pm
HK News Desk
ಶಬರಿಮಲೆ ಚಿನ್ನ ಲೂಟಿ ಪ್ರಕರಣ ; ಕೊನ್ನಿ ಕ್ಷೇತ್ರದ ಸ...
21-11-25 02:26 pm
ಶ್ರೀಲಂಕಾದಲ್ಲಿ ನ್ಯೂಜಿಲೆಂಡ್ ಮಹಿಳೆಯ ಜೊತೆ ಯುವಕನ ಅ...
19-11-25 06:47 pm
ಕೆಂಪು ಕೋಟೆ ಬ್ಲಾಸ್ಟ್ ಕೇಸ್ ; ಅಲ್ ಫಲಾಹ್ ವಿವಿಗೆ ಸ...
19-11-25 11:10 am
ಬಾಂಗ್ಲಾದಲ್ಲಿ ವಿದ್ಯಾರ್ಥಿಗಳ ಮಾರಣ ಹೋಮಕ್ಕೆ ಅವರೇ ಕ...
17-11-25 10:58 pm
21-11-25 10:39 pm
Mangalore Correspondent
ನವೆಂಬರ್ 23ರಿಂದ ಪ್ರತಿ ವಾರ 'ಸಂಸದ್ ಖೇಲ್ ಮಹೋತ್ಸವ'...
21-11-25 10:03 pm
ಸುರತ್ಕಲ್- ನಂತೂರು- ಬಿಸಿ ರೋಡ್ ಹೆದ್ದಾರಿ ಎನ್ಎಚ...
21-11-25 09:55 pm
Snake Bite, Mangalore, Detection Kit: ಹಾವು ಕಚ...
21-11-25 08:45 pm
ಮಾನಸಿಕ ಖಿನ್ನತೆ ; ಶಿಕ್ಷಕಿ ತಾಯಿಯನ್ನು ಕಾಲೇಜು ಬಿಟ...
20-11-25 10:48 pm
21-11-25 11:07 pm
Bangalore Correspondent
ಮಲ್ಪೆ ಶಿಪ್ ಯಾರ್ಡ್ ನಿಂದ ಪಾಕಿಸ್ತಾನಕ್ಕೆ ಮಾಹಿತಿ ಸ...
21-11-25 05:11 pm
ಬೆಂಗಳೂರು ಎಟಿಎಂ ಹಣ ದರೋಡೆ ಪ್ರಕರಣ ; ತಿರುಪತಿಯಲ್ಲಿ...
20-11-25 10:53 pm
BMR Group Fraud, Money, Mangalore, Surathkal:...
20-11-25 06:01 pm
Bangalore ATM Van Robbery, Update: ಬೆಂಗಳೂರಿನ...
20-11-25 11:51 am