ಬ್ರೇಕಿಂಗ್ ನ್ಯೂಸ್
07-09-24 03:02 pm HK News Desk ದೇಶ - ವಿದೇಶ
ಇಂದೋರ್, ಸೆ.7: ಪತಿಯ ನಿರಂತರ ಕಿರುಕುಳದಿಂದ ನೊಂದ ಮುಸ್ಲಿಂ ಮಹಿಳೆಯೊಬ್ಬರು ತನ್ನ ಇಬ್ಬರು ಮಕ್ಕಳೊಂದಿಗೆ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಘಟನೆ ಮಧ್ಯಪ್ರದೇಶದ ಮಂಡಸೌರ್ ಜಿಲ್ಲೆಯಲ್ಲಿ ನಡೆದಿದೆ. ಮಹಿಳೆ ತನ್ನ ಪುತ್ರರಿಗೆ ಲವ-ಕುಶ ಎಂದು ಹೆಸರಿಟ್ಟಿದ್ದು ತನ್ನ ಹೆಸರನ್ನು ಮೆಹನಾಜ್ ಬದಲಿಗೆ ಮೀನಾಕ್ಷಿ ಎಂದು ಬದಲಿಸಿದ್ದಾರೆ.
ಧಮ್ನಾರ್ ಗ್ರಾಮದ ನಿವಾಸಿ ಮೆಹನಾಜ್ (30) ಅವರು ತಮ್ಮ 12 ಮತ್ತು 11 ವರ್ಷದ ಇಬ್ಬರು ಪುತ್ರರೊಂದಿಗೆ ಮಂಡಸೌರ್‌ನ ಗಾಯತ್ರಿ ದೇವಸ್ಥಾನದಲ್ಲಿ ಮತಾಂತರ ಆಗಿದ್ದು ಶುದ್ಧೀಕರಣದ ನಂತರ ಮನೆಗೆ ಮರಳಿದ್ದಾರೆ. ಮನೆಯವರು ತನಗೆ ಚಿತ್ರಹಿಂಸೆ ನೀಡಿದ್ದಾರೆ ಎಂದು ಮೀನಾಕ್ಷಿ ಹೇಳಿದ್ದಾರೆ. ಸನಾತನ ಧರ್ಮದಲ್ಲಿ ಮಹಿಳೆಯರಿಗೆ ಗೌರವವಿದೆ ಎಂಬ ದೃಷ್ಟಿಯಿಂದ ಮತಾಂತರ ಆಗಿದ್ದೇನೆ ಎಂದು ಹೇಳಿದರು. ತಾನೇ ಹಿಂದೂ ಸಂಘಟನೆಯ ಜನರನ್ನು ಸಂಪರ್ಕಿಸಿ ಸನಾತನ ಧರ್ಮವನ್ನು ಅಳವಡಿಸಿಕೊಂಡಿದ್ದಾರೆ.
ಮಾಹಿತಿ ಪ್ರಕಾರ, ಮೆಹನಾಜ್ 15 ವರ್ಷಗಳ ಹಿಂದೆ ಧಮ್ನಾರ್‌ನ ಇರ್ಫಾನ್ ಖಾನ್ ಎಂಬವರನ್ನು ಮದುವೆಯಾಗಿದ್ದರು. ಮೆಹನಾಜ್ ತಂದೆ ಅಬ್ದುಲ್ ರಶೀದ್ ರೈತ. ಆರಂಭದಲ್ಲಿ ಎಲ್ಲವೂ ಸರಿಯಾಗಿತ್ತು. ಆದರೆ ನಂತರ ಪತಿ ಮತ್ತು ಅತ್ತೆ ಸಣ್ಣಪುಟ್ಟ ವಿಷಯಗಳಿಗೂ ಜಗಳ ಆರಂಭಿಸಿದರು. ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದು ಸಣ್ಣಪುಟ್ಟ ವಿಚಾರಕ್ಕೂ ಕೈ ಎತ್ತುತ್ತಿದ್ದರು. ಈ ಬಗ್ಗೆ ನನ್ನ ತಂದೆಗೆ ತಿಳಿಸಿದಾಗ, ಅವರು ಇದು ನಿಮ್ಮ ಕುಟುಂಬದ ವಿಷಯ ಎಂದು ಹೇಳಿ ಸಹಾಯಕ್ಕೆ ಬರಲಿಲ್ಲ.
ದೇವಸ್ಥಾನದಲ್ಲಿ ಒಂದೂವರೆ ಗಂಟೆಗಳ ಕಾಲ ಮಂತ್ರಗಳನ್ನು ಪಠಿಸಿದ ನಂತರ ತಾಯಿ ಮಕ್ಕಳು ಸನಾತನ ಧರ್ಮಕ್ಕೆ ಮತಾಂತರಗೊಂಡರು. ಮಹಿಳೆ ಮತ್ತು ಇಬ್ಬರು ಪುತ್ರರಿಗೆ ವೇದ ಮಂತ್ರಗಳೊಂದಿಗೆ ಹಾಲು, ಮೊಸರು, ಜೇನುತುಪ್ಪ, ಗಂಗಾಜಲ, ಗೋಮೂತ್ರ ಮತ್ತು ಗೋಮಯದಿಂದ ಸ್ನಾನ ಮಾಡಲಾಯಿತು. ಇದೇ ವೇಳೆ, ಹಿಂದೂ ಯುವವಾಹಿನಿಯ ರಾಜ್ಯ ಉಸ್ತುವಾರಿ ಚೈತನ್ಯ ಸಿಂಗ್ ರಜಪೂತ್ ಮಾತನಾಡಿ, 2-3 ತಿಂಗಳ ಹಿಂದೆ ಮೆಹನಾಜ್ ನಮ್ಮನ್ನು ಸಂಪರ್ಕಿಸಿದ್ದರು. ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ, ಮೆಹ್ನಾಜ್ ಮತ್ತು ಅವರ ಇಬ್ಬರು ಪುತ್ರರನ್ನು ಘರ್ ವಾಪ್ಸಿ ಮಾಡಿಸಲಾಯಿತು. ಇದುವರೆಗೆ 40 ಮಹಿಳೆಯರು, 5 ಪುರುಷರು ಮತ್ತು ಇಬ್ಬರು ಮಕ್ಕಳನ್ನು ಕಾನೂನು ಪ್ರಕಾರವೇ ಘರ್ ವಾಪ್ಸಿ ಮಾಡಿಸಿದ್ದೇವೆ ಎಂದು ಹೇಳಿದ್ದಾರೆ.
Indore Muslim women converts to Hindu with her two children after torture by husband.
13-12-25 10:47 pm
HK News Desk
ಕುರ್ಚಿ ಗುದ್ದಾಟ ; ಪರಮೇಶ್ವರ್ ಸಿಎಂ ಆಗಲೆಂದು ಹಾರೈಸ...
13-12-25 08:38 pm
BJP MLA Subhash Guttedar: ಅಳಂದ ಮತಗಳವು ಪ್ರಕರಣ...
13-12-25 04:00 pm
Pet Parrot, Bangalore Youth Death: 2 ಲಕ್ಷ ರೂ....
12-12-25 08:47 pm
Yatnal, Dk Shivakumar, Vijayendra: ಡಿಕೆ ಸಿಎಂ,...
12-12-25 07:47 pm
13-12-25 08:34 pm
HK News Desk
ಕಾರ್ತಿಗೈ ದೀಪೋತ್ಸವ ವಿವಾದ ; ಮಸೀದಿಯವರೇ ಆಕ್ಷೇಪಿಸಿ...
12-12-25 11:00 pm
ಮೋದಿ ಉತ್ತರಾಧಿಕಾರಿ ಯಾರು ? ಆರೆಸ್ಸೆಸ್ ನಿರ್ಧರಿಸುತ...
11-12-25 04:24 pm
ಮಂಗಳೂರು ಏರ್ಪೋರ್ಟ್ಗೆ ವಿದೇಶಿ ನೇರ ವಿಮಾನ ವ್ಯವಸ್...
11-12-25 02:09 pm
ತಮಿಳುನಾಡಿನಲ್ಲಿ ಕಾರ್ತಿಗೈ ದೀಪಕ್ಕೆ ಹೈಕೋರ್ಟ್ ಅನುಮ...
10-12-25 11:13 pm
13-12-25 11:02 pm
Mangalore Correspondent
ಕೆಂಜಾರು ಬಳಿ ಗೋವುಗಳನ್ನು ಕಡಿದು ಹತ್ಯೆ ; ಪೊದೆಯಲ್ಲ...
13-12-25 04:36 pm
ಸತತ ನಾಲ್ಕು ಗಂಟೆ ಸ್ಕೇಟಿಂಗ್ ನಲ್ಲಿ ಶಾಸ್ತ್ರೀಯ ನೃತ...
12-12-25 10:28 pm
ದೈವ ನರ್ತನದ ಬಗ್ಗೆ ನಮಗೆ ಸಂಶಯಗಳಿಲ್ಲ, ಗ್ರಾಮ ದೈವಕ್...
12-12-25 07:32 pm
ಆಯುಷ್ ಇಲಾಖೆಯಲ್ಲಿ ಅವಧಿ ಮೀರಿದ ಔಷಧ ಪೂರೈಕೆ ; ಅಧಿಕ...
12-12-25 02:02 pm
13-12-25 12:51 pm
HK News Desk
ಹಣ್ಣಿನ ವ್ಯಾಪಾರಿಯನ್ನು ಅಡ್ಡಗಟ್ಟಿ 19 ಸಾವಿರ ನಗದು...
12-12-25 01:58 pm
Hassan Crime, Murder: ಸ್ನೇಹಿತನನ್ನು ಪಾರ್ಟಿಗೆ ಕ...
11-12-25 09:53 pm
Bangalore Crime, Blackmail, Suicide: ಬೆತ್ತಲೆ...
11-12-25 07:49 pm
Imprisonment in Malpe Case: ಮಲ್ಪೆಯಲ್ಲಿ ನೆಲೆಸಿ...
10-12-25 10:14 pm