ಬ್ರೇಕಿಂಗ್ ನ್ಯೂಸ್
05-08-24 11:03 pm HK News Desk ದೇಶ - ವಿದೇಶ
ನವದೆಹಲಿ, ಆಗಸ್ಟ್.5: ಬಾಂಗ್ಲಾದೇಶ ರಾಜಧಾನಿ ಢಾಕಾದಲ್ಲಿ ಹಿಂಸಾಚಾರ ಮಿತಿಮೀರಿದ ಬೆನ್ನಲ್ಲೇ ಪ್ರಧಾನಿ ಸ್ಥಾನ ತ್ಯಜಿಸಿ ತಮ್ಮ ಬಂಗಲೆಯನ್ನೇ ತೊರೆದ ಪ್ರಧಾನಿ ಶೇಖ್ ಹಸೀನಾ ಅವರು ನೇರವಾಗಿ ಮಿಲಿಟರಿ ಹೆಲಿಕಾಪ್ಟರ್ ನಲ್ಲಿ ಭಾರತಕ್ಕೆ ಬಂದಿದ್ದು, ಉತ್ತರ ಪ್ರದೇಶದ ಗಾಜಿಯಾಬಾದ್ ನಲ್ಲಿರುವ ಹಿಂಡನ್ ವಾಯುನೆಲೆಗೆ ಬಂದು ಇಳಿದಿದ್ದಾರೆ.
ಬಾಂಗ್ಲಾದೇಶದ ಸಿ-130 ಏರ್ ಕ್ರಾಫ್ಟ್ ನಲ್ಲಿ ಹಸೀನಾ ಆಗಮಿಸಿದ್ದು, ಕಾಪ್ಟರ್ ಇಳಿಯುತ್ತಲೇ ವಾಯುಪಡೆ ಮತ್ತು ಆರ್ಮಿ ಸೇನಾ ಪಡೆ ಸುತ್ತುವರಿದು ತಪಾಸಣೆ ನಡೆಸಿದೆ. ಆನಂತರ, ಶೇಖ್ ಹಸೀನಾ ಅವರನ್ನು ಭಾರತಕ್ಕೆ ಸ್ವಾಗತ ಮಾಡಿದೆ. ಇದಕ್ಕೂ ಮುನ್ನ ಹಸೀನಾ ಅವರ ಸೋದರಿ ಶೇಖ್ ರೆಹನಾ ಜೊತೆಗೆ ಇಂಗ್ಲೆಂಡಿಗೆ ತೆರಳಲಿದ್ದಾರೆ ಎನ್ನಲಾಗಿತ್ತು. ರೆಹನಾ ಅವರು ಇಂಗ್ಲೆಂಡ್ ದೇಶದ ನಾಗರಿಕತ್ವ ಪಡೆದಿದ್ದಾರೆ.
ಬಾಂಗ್ಲಾ ಮಿಲಿಟರಿ ಹೆಲಿಕಾಪ್ಟರ್ ನೇರವಾಗಿ ಭಾರತದ ವಾಯುನೆಲೆಗೆ ಬಂದಿರುವುದರಿಂದ ಭಾರತೀಯ ಸೇನಾಪಡೆ ಅಲರ್ಟ್ ಆಗಿದೆ. ಬಾಂಗ್ಲಾದಲ್ಲಿ ಹಿಂಸೆ ಭುಗಿಲೆದ್ದಿರುವುದು ಮತ್ತು ಹಸೀನಾ ಭಾರತಕ್ಕೆ ಬಂದಿರುವುದರಿಂದ ಪ್ರಧಾನಿ ನರೇಂದ್ರ ಮೋದಿ ತಮ್ಮ ನಿವಾಸದಲ್ಲಿ ಸಂಪುಟ ಸಚಿವರ ಜೊತೆಗೆ ಚರ್ಚೆ ನಡೆಸಿದ್ದಾರೆ. ವಿದೇಶಾಂಗ ಮಂತ್ರಿ ಎಸ್. ಜೈಶಂಕರ್ ಮತ್ತು ವಿದೇಶಾಂಗ ಇಲಾಖೆ ಸೆಕ್ರಟರಿ ವಿಕ್ರಮ್ ಮಿಸ್ರಿ ಜೊತೆಗೂ ಮೋದಿ ಮಾತುಕತೆ ನಡೆಸಿದ್ದಾರೆ.
ಶೇಖ್ ಹಸೀನಾ ಭಾರತಕ್ಕೆ ಬರಲು ಆಯ್ದುಕೊಂಡಿರುವುದನ್ನು ಬಾಲಿವುಡ್ ನಟಿ, ಬಿಜೆಪಿ ಸಂಸದೆ ಕಂಗನಾ ರನೌತ್ ಸ್ವಾಗತಿಸಿದ್ದು, ನೆರೆಯ ಎಲ್ಲ ಇಸ್ಲಾಮಿಕ್ ರಾಷ್ಟ್ರಗಳಿಗೂ ಭಾರತವೇ ತಾಯ್ನಾಡು. ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಭಾರತದಲ್ಲಿ ಸೇಫ್ ಆಗಿರಲಿದ್ದಾರೆ. ಭಾರತವನ್ನು ಆಯ್ಕೆ ಮಾಡಿರುವುದು ನಮಗೆಲ್ಲ ಹೆಮ್ಮೆ. ನಮ್ಮ ದೇಶದಲ್ಲಿ ನೆಲೆಸಿರುವ ಜನರು ಯಾಕೆ ಹಿಂದು ರಾಷ್ಟ್ರ, ಯಾಕೆ ರಾಮರಾಜ್ಯ ಎಂದು ಕೇಳುತ್ತಾರೆ, ಅದಕ್ಕೀಗ ಸಾಕ್ಷಿ ಸಿಕ್ಕಿದೆ ಎಂದಿದ್ದಾರೆ.
ಇದೇ ವೇಳೆ, ಮೇಘಾಲಯ ತನ್ನ ಬಾಂಗ್ಲಾ ಗಡಿಯುದ್ದಕ್ಕೂ ನೈಟ್ ಕರ್ಫ್ಯೂ ಹೇರಿದ್ದು, ಗಡಿಯಲ್ಲಿ ಬಿಎಸ್ಎಫ್ ಅಲರ್ಟ್ ಮಾಡಿದೆ. ಭಾರತದ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಹಿಂಡನ್ ವಾಯುನೆಲೆಗೆ ಆಗಮಿಸಿದ ಶೇಖ್ ಹಸೀನಾ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ. ಇದೇ ವೇಳೆ, ಅಮೆರಿಕವು ಬಾಂಗ್ಲಾದಲ್ಲಿರುವ ತನ್ನ ಪ್ರಜೆಗಳಿಗೆ ಸೇಫ್ ಜಾಗದಲ್ಲಿ ನೆಲೆಸುವಂತೆ ಸಲಹೆ ಮಾಡಿದೆ.
ಈ ಹಿಂದೆ ತನ್ನ ತಂದೆ ಮುಜೀಬುರ್ ರೆಹ್ಮಾನ್ ಹತ್ಯೆಯಾಗಿದ್ದಾಗಲೂ ಭಾರತಕ್ಕೆ ಬಂದಿದ್ದ ಶೇಖ್ ಹಸೀನಾ ಆರು ವರ್ಷಗಳ ಕಾಲ ದೆಹಲಿಯಲ್ಲಿ ಉಳಿದುಕೊಂಡಿದ್ದರು. ತನ್ನ ಗಂಡ, ಸೋದರಿ ಮತ್ತು ಇಬ್ಬರು ಮಕ್ಕಳೊಂದಿಗೆ ದೆಹಲಿಯ ಲಜಪತ್ ನಗರ್ ಮತ್ತು ಪಂಡರಾ ರೋಡ್ ನಲ್ಲಿ ರಹಸ್ಯ ಸ್ಥಳದಲ್ಲಿ ಉಳಿದಿದ್ದರು. ಈ ಬಾರಿಯೂ ಬಾಂಗ್ಲಾ ತೊರೆದು ಭಾರತಕ್ಕೆ ಬಂದಿರುವ ಶೇಖ್ ಹಸೀನಾ ಕೆಲವು ದಿನಗಳಲ್ಲಿ ಇಂಗ್ಲೆಂಡ್ ತೆರಳುವ ಸನ್ನಾಹದಲ್ಲಿದ್ದಾರೆ.
Bangladesh leader Sheikh Hasina met National Security Advisor Ajit Doval Monday evening after landing at the Hindon Air Force base in Uttar Pradesh's Ghaziabad - around 30 km from Delhi. Prime Minister Narendra Modi has been briefed on the situation in Bangladesh by External Affairs Minister S Jaishankar. There is no word yet if Mr Modi will meet Mrs Hasina.
21-11-25 05:25 pm
HK News Desk
ವಾಹನ ಸವಾರರಿಗೆ ಗುಡ್ ನ್ಯೂಸ್ ; ಮತ್ತೆ 50% ದಂಡ ವ...
21-11-25 10:19 am
CM. Siddaramaiah, CM SEAT: ಯಾವ ಕ್ರಾಂತಿಯೂ ಇಲ್ಲ...
20-11-25 03:30 pm
DK Suresh, CM Siddaramaiah : ಸಿಎಂ ಕುರ್ಚಿ ಕ್ಲೈ...
20-11-25 03:01 pm
ಆನೇಕಲ್ ನಲ್ಲಿ ಕಚಡಾ ಡಾಕ್ಟರ್ ; ಇನ್ಪೆಕ್ಟರ್ ಅಮಾನತಿ...
19-11-25 02:16 pm
21-11-25 06:10 pm
HK News Desk
ಶಬರಿಮಲೆ ಚಿನ್ನ ಲೂಟಿ ಪ್ರಕರಣ ; ಕೊನ್ನಿ ಕ್ಷೇತ್ರದ ಸ...
21-11-25 02:26 pm
ಶ್ರೀಲಂಕಾದಲ್ಲಿ ನ್ಯೂಜಿಲೆಂಡ್ ಮಹಿಳೆಯ ಜೊತೆ ಯುವಕನ ಅ...
19-11-25 06:47 pm
ಕೆಂಪು ಕೋಟೆ ಬ್ಲಾಸ್ಟ್ ಕೇಸ್ ; ಅಲ್ ಫಲಾಹ್ ವಿವಿಗೆ ಸ...
19-11-25 11:10 am
ಬಾಂಗ್ಲಾದಲ್ಲಿ ವಿದ್ಯಾರ್ಥಿಗಳ ಮಾರಣ ಹೋಮಕ್ಕೆ ಅವರೇ ಕ...
17-11-25 10:58 pm
21-11-25 10:39 pm
Mangalore Correspondent
ನವೆಂಬರ್ 23ರಿಂದ ಪ್ರತಿ ವಾರ 'ಸಂಸದ್ ಖೇಲ್ ಮಹೋತ್ಸವ'...
21-11-25 10:03 pm
ಸುರತ್ಕಲ್- ನಂತೂರು- ಬಿಸಿ ರೋಡ್ ಹೆದ್ದಾರಿ ಎನ್ಎಚ...
21-11-25 09:55 pm
Snake Bite, Mangalore, Detection Kit: ಹಾವು ಕಚ...
21-11-25 08:45 pm
ಮಾನಸಿಕ ಖಿನ್ನತೆ ; ಶಿಕ್ಷಕಿ ತಾಯಿಯನ್ನು ಕಾಲೇಜು ಬಿಟ...
20-11-25 10:48 pm
21-11-25 11:07 pm
Bangalore Correspondent
ಮಲ್ಪೆ ಶಿಪ್ ಯಾರ್ಡ್ ನಿಂದ ಪಾಕಿಸ್ತಾನಕ್ಕೆ ಮಾಹಿತಿ ಸ...
21-11-25 05:11 pm
ಬೆಂಗಳೂರು ಎಟಿಎಂ ಹಣ ದರೋಡೆ ಪ್ರಕರಣ ; ತಿರುಪತಿಯಲ್ಲಿ...
20-11-25 10:53 pm
BMR Group Fraud, Money, Mangalore, Surathkal:...
20-11-25 06:01 pm
Bangalore ATM Van Robbery, Update: ಬೆಂಗಳೂರಿನ...
20-11-25 11:51 am