ಬ್ರೇಕಿಂಗ್ ನ್ಯೂಸ್
24-07-24 12:25 pm HK News Desk ದೇಶ - ವಿದೇಶ
ನವದೆಹಲಿ, ಜುಲೈ 24: ಬಹು ನಿರೀಕ್ಷಿತ ಪ್ಯಾರಿಸ್ ಒಲಿಂಪಿಕ್ಸ್ ಹಬ್ಬಕ್ಕೆ ಎರಡು ದಿನ ಇರುವಾಗಲೇ ಭಯೋತ್ಪಾದಕ ದಾಳಿಯ ಬೆದರಿಕೆ ಹಾಕಲಾಗಿದೆ. ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ರಕ್ತದ ಹೊಳೆ ಹರಿಸುವುದಾಗಿ ಮುಸುಕುಧಾರಿ ವ್ಯಕ್ತಿಯೊಬ್ಬ ಅರೇಬಿಕ್ ಭಾಷೆಯಲ್ಲಿ ಬೆದರಿಕೆ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಜುಲೈ 26 ರಿಂದ ಫ್ರಾನ್ಸ್ ನಲ್ಲಿ ಒಲಿಂಪಿಕ್ಸ್ ಆರಂಭವಾಗಲಿದ್ದು, ಆಗಸ್ಟ್ 11 ರವರೆಗೆ ನಡೆಯಲಿದೆ. ಒಲಿಂಪಿಕ್ಸ್ ನಲ್ಲಿ ಇಸ್ರೇಲ್ ಸಹ ಭಾಗವಹಿಸುತ್ತಿದ್ದು ಅದೇ ವಿಚಾರವನ್ನು ಮುಂದಿಟ್ಟು ಮುಸುಕುಧಾರಿ ವ್ಯಕ್ತಿ ಬೆದರಿಕೆ ಹಾಕಿದ್ದಾನೆ.
ಮಂಗಳವಾರ ಬಿಡುಗಡೆಯಾದ ವೀಡಿಯೊದಲ್ಲಿ ಮುಸುಕುಧಾರಿ ವ್ಯಕ್ತಿ ಫ್ರಾನ್ಸ್ ಮತ್ತು ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್‌ಗೆ ನೇರ ಬೆದರಿಕೆ ಹಾಕಿದ್ದಾನೆ. ಪ್ಯಾಲೆಸ್ತೀನ್ ಜೊತೆಗಿನ ಸಂಘರ್ಷದ ಮಧ್ಯೆ ‘ಝಿಯೋನಿಸ್’ ಪರವಾಗಿ ತೆಗೆದುಕೊಳ್ಳುವ ಪರಿಣಾಮಗಳನ್ನು ಎದುರಿಸಲು ನೀವು ಸಿದ್ಧರಾಗಿರಬೇಕು. ಪ್ಯಾರಿಸ್ ಬೀದಿಗಳಲ್ಲಿ ರಕ್ತದ ಕೋಡಿಯೇ ಹರಿಯಲಿದೆ ಎಂದು ಹೇಳಿದ್ದಾನೆ.
ತನ್ನ ಎದೆಯ ಮೇಲೆ ಪ್ಯಾಲೇಸ್ತೀನ್ ಧ್ವಜವನ್ನು ಹೊದ್ದು ಕಪ್ಪು ಬಟ್ಟೆಯನ್ನು ಧರಿಸಿರುವ ವ್ಯಕ್ತಿ, ಮುಖ ಮತ್ತು ತಲೆಗೆ ಪೂರ್ತಿಯಾಗಿ ಅರಬ್ಬಿಗಳ ಬಟ್ಟೆ ಧರಿಸಿದ್ದಾನೆ. ನೀವು ಇಸ್ರೇಲ್ ಜೊತೆಗೂಡಿದರೆ ಪ್ಯಾರಿಸ್ ನಲ್ಲಿ “ರಕ್ತದ ಹೊಳೆ ಹರಿಯಲಿದೆ” ಎಂದು ಘೋಷಿಸಿದ್ದು, ಇದು ದಾಳಿಯ ಸೂಚನೆ ಎನ್ನುವಂತಿದೆ. ವಿಡಿಯೋ ಕೊನೆಯಲ್ಲಿ ನಕಲಿ ಕತ್ತರಿಸಿದ ತಲೆಯನ್ನು ಹಿಡಿದಿರುವ ದೃಶ್ಯವೂ ಇದೆ.
ವೀಡಿಯೊ ಯಾರು ಮಾಡಿದ್ದಾರೆ, ಯಾವ ಸಂಘಟನೆ ಬೆಂಬಲ ನೀಡಿದೆ ಎನ್ನುವ ಬಗ್ಗೆ ಸ್ಪಷ್ಟ ಪುರಾವೆಗಳಿಲ್ಲ ಮತ್ತು ಅದನ್ನು ಅಧಿಕೃತ ಹಮಾಸ್ ಚಾನೆಲ್‌ಗಳಲ್ಲಿ ಹಂಚಿಕೊಳ್ಳಲಾಗಿಲ್ಲ. ಆದರೆ ಇದು ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಭದ್ರತಾ ಅಪಾಯಗಳ ಬಗ್ಗೆ ಕಳವಳ ಹೆಚ್ಚಿಸಿದೆ. 1972 ರ ಮ್ಯೂನಿಚ್ ಗೇಮ್ಸ್ ಮತ್ತು 1996 ರ ಅಟ್ಲಾಂಟಾ ಕ್ರೀಡಾಕೂಟಗಳಂತಹ ಹಿಂದಿನ ಒಲಿಂಪಿಕ್ಸ್ ಗಳಲ್ಲಿ ಭಯೋತ್ಪಾದಕ ದಾಳಿಯಾಗಿತ್ತು.
A video released today warning of a terror attack at the Olympics.
— Pavvy G (@pavyg) July 23, 2024
I think Paris deciding to have their opening ceremony away from a stadium and on the streets of Paris is a risk. I know they have huge security in place but surely you must minimise risks? pic.twitter.com/Yj3rBNLGnd
The National Security Council issues guidelines to Israelis traveling to Paris for the Olympics, warning that it believes that global jihadist and Iran-backed terror organizations “are seeking to carry out attacks on Israeli/Jewish targets around the Olympics.”
03-05-25 09:38 pm
HK News Desk
Shivanand Patil, U T Khader: ಯತ್ನಾಳ್ ಸವಾಲು ಸ್...
02-05-25 10:00 pm
U T Khader, Suhas Shetty Murder, Fazil, Manga...
02-05-25 08:44 pm
Suhas Shetty Murder case, Minister Parameshwa...
02-05-25 01:40 pm
Dinesh Gundu Rao, Suhas Shetty Murder: ಸುಹಾಸ್...
02-05-25 10:52 am
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
03-05-25 08:39 pm
Mangalore Correspondent
Mangalore, Animal Welfare: ಪ್ರಾಣಿ ಸಂರಕ್ಷಣೆ ಜಾ...
03-05-25 06:57 pm
Mangalore, Suhas Shetty Murder, Anti Communia...
03-05-25 02:58 pm
Mangalore Suhas Shetty Murder, Instagram, Pol...
02-05-25 10:47 pm
Mangalore Suhas Shetty Murder, Shobha Karandl...
02-05-25 09:26 pm
03-05-25 02:16 pm
Mangalore Correspondent
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm