ಬ್ರೇಕಿಂಗ್ ನ್ಯೂಸ್
18-07-24 09:51 pm HK News Desk ದೇಶ - ವಿದೇಶ
ಮುಂಬೈ, ಜುಲೈ 18: ಮುಂಬೈನಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಆಗಿದ್ದುಕೊಂಡೇ ರೀಲ್ಸ್ ಗಳನ್ನು ಮಾಡಿ ಫೇಮಸ್ ಆಗಿದ್ದ ಯುವತಿಯೊಬ್ಬಳು ಮಹಾರಾಷ್ಟ್ರದ ರಾಯಗಢ ಜಿಲ್ಲೆಯಲ್ಲಿ ಜಲಪಾತದಲ್ಲಿ ರೀಲ್ಸ್ ಮಾಡಲು ಹೋಗಿ 300 ಅಡಿ ಪ್ರಪಾತಕ್ಕೆ ಬಿದ್ದು ಜೀವ ಕಳಕೊಂಡಿದ್ದಾಳೆ.
ಮುಂಬೈನಲ್ಲಿ ಚಾರ್ಟೆಡ್ ಅಕೌಂಟೆಂಟ್ ಆಗಿದ್ದ 27 ವರ್ಷದ ಆನ್ವಿ ಅಮದಾರ್ ಪ್ರಾಣ ಕಳಕೊಂಡ ಯುವತಿ. ಈಕೆ ತನ್ನ ಏಳು ಮಂದಿ ಗೆಳತಿ- ಗೆಳೆಯರೊಂದಿಗೆ ರಾಯಗಢ ಜಿಲ್ಲೆಯ ಕುಂಭೆ ಜಲಪಾತದಲ್ಲಿ ವಿಡಿಯೋ ಮಾಡುತ್ತಿದ್ದಾಗಲೇ ಆಯತಪ್ಪಿ 300 ಅಡಿಯ ಪ್ರಪಾತಕ್ಕೆ ಬಿದ್ದಿದ್ದಾಳೆ. ಬುಧವಾರ ಜಲಪಾತದಲ್ಲಿ ನೀರು ಧುಮ್ಮಿಕ್ಕುವ ಬಂಡೆಯ ಮೇಲೆ ನಿಂತು ವಿಡಿಯೋ ಮಾಡುತ್ತಿದ್ದಾಗಲೇ ಯುವತಿ ಜಲಪಾತಕ್ಕೆ ಬಿದ್ದು ನಾಪತ್ತೆಯಾಗಿದ್ದಳು. ಕೂಡಲೇ ಜೊತೆಗಿದ್ದವರು ಸ್ಥಳೀಯಾಡಳಿತಕ್ಕೆ ಮಾಹಿತಿ ನೀಡಿ ಕಾರ್ಯಾಚರಣೆ ನಡೆಸಿದ್ದರು.
ಸ್ಥಳೀಯರು ಮತ್ತು ಅಗ್ನಿಶಾಮಕ ದಳ ಕಾರ್ಯಾಚರಣೆ ನಡೆಸಿದ್ದು, ಭಾರೀ ಕಷ್ಟದಿಂದ ನೀರಿನ ನಡುವೆ ಪ್ರಪಾತಕ್ಕಿಳಿದು ಆಕೆಯನ್ನು ಐದಾರು ಗಂಟೆಯ ಬಳಿಕ ರಕ್ಷಣೆ ಮಾಡಿದ್ದು ಸ್ಥಳೀಯ ಮಾನ್ ಗಾಂವ್ ತಾಲೂಕು ಆಸ್ಪತ್ರೆಗೆ ಒಯ್ಯುವಷ್ಟರಲ್ಲಿ ಆಕೆ ಸಾವನ್ನಪ್ಪಿದ್ದಾಳೆ. ಪಾಚಿ ಗಟ್ಟಿದ್ದ ಬಂಡೆ ಕಲ್ಲಿನಲ್ಲಿ ನಿಂತುಕೊಂಡಿದ್ದಾಗಲೇ ಯುವತಿ ಆಯತಪ್ಪಿ ಬಿದ್ದಿದ್ದಾಳೆ. ಕೆಳಗಡೆ ನೀರು ಧುಮ್ಮಿಕ್ಕುವ ಪ್ರಪಾತ ಆಗಿದ್ದು, ಯಾರಿಗೂ ಇಳಿಯುವ ಸ್ಥಿತಿ ಇರಲಿಲ್ಲ. ಬಳಿಕ ಹಗ್ಗ ಕಟ್ಟಿ ವಿಶೇಷ ಪರಿಣತಿಯುಳ್ಳ ಆರು ಮಂದಿ ಮುಳುಗು ತಜ್ಞರು ಪ್ರಪಾತಕ್ಕೆ ಇಳಿದಿದ್ದಾರೆ. ಮೇಲ್ಭಾಗದಲ್ಲಿ 50ರಷ್ಟು ಮಂದಿ ಕಾರ್ಯಾಚರಣೆಗೆ ಸಾಥ್ ನೀಡಿದ್ದಾರೆ.
ವೃತ್ತಿಯಲ್ಲಿ ಸಿಎ ಆಗಿದ್ದರೂ ಆನ್ವಿ ಅಮದಾರ್ ಪ್ರಸಿದ್ಧಿ ಗಳಿಸಿದ್ದು ಸೋಶಿಯಲ್ ಮೀಡಿಯಾ ವಿಡಿಯೋಗಳಿಂದ. ಅದರಲ್ಲೂ ಮಾನ್ಸೂನ್ ಸಂದರ್ಭದಲ್ಲಿ ಜಲಪಾತ ಸೇರಿದಂತೆ ಮಹಾರಾಷ್ಟ್ರದ ಅದ್ಭುತ ನಿಸರ್ಗ ಸೌಂದರ್ಯ ಇರುವಲ್ಲಿಗೆ ತೆರಳಿ ವಿಡಿಯೋ ಮಾಡಿ, ತನ್ನ ಇನ್ಸ್ ಟಾ ಪೇಜಿನಲ್ಲಿ ಹಾಕುತ್ತಿದ್ದಳು. ಇದರಿಂದ ಆಕೆಯನ್ನು ಭಾರೀ ಜನ ಫಾಲೋ ಮಾಡುತ್ತಿದ್ದರು. ಆನ್ವಿಗೆ ಇನ್ ಸ್ಟಾದಲ್ಲಿ 2.56 ಲಕ್ಷ ಫಾಲೋವರ್ ಗಳಿದ್ದಾರೆ. ಟ್ರಾವೆಲ್ ಡಿಟೆಕ್ಟಿವ್ ಎಂದು ತನ್ನನ್ನು ಕರೆದುಕೊಳ್ಳುತ್ತಿದ್ದ ಆನ್ವಿ ಮುಂಬೈ, ಮಹಾರಾಷ್ಟ್ರದಲ್ಲಿ ಭಾರೀ ಫೇಮಸ್ ಆಗಿದ್ದಳು. ಇದಲ್ಲದೆ, ಪ್ರಸಿದ್ಧ ಹೊಟೇಲ್, ಕೆಫೆಗಳ ಬಗ್ಗೆಯೂ ವಿಡಿಯೋ ಮಾಡುತ್ತಿದ್ದಳು. ಭಾರತದ ಬೇರೆ ಬೇರೆ ಕಡೆಯ ಪ್ರವಾಸಿ ತಾಣಗಳಿಗೆ ಹೋಗಿಯೂ ವಿಡಿಯೋ ಮಾಡುತ್ತಿದ್ದಳು. ಇತ್ತೀಚೆಗೆ ಉದಯಪುರ, ಬೇಕಲ್, ಆಗ್ರಾ, ದೆಹಲಿಗೆ ತೆರಳಿ, ಮಾನ್ಸೂನಲ್ಲಿ ಅಲ್ಲಿನ ವಿಶೇಷತೆ ಬಗ್ಗೆ ವಿಡಿಯೋ ಮಾಡಿದ್ದು ಷೇರ್ ಆಗಿತ್ತು.
ಮಂಗಳೂರಿನ ಮೂಲ್ಕಿ, ಪಣಂಬೂರು, ಗೋವಾ, ಮಲ್ಪೆ ಹೀಗೆ ಬೀಚ್ ಗಳ ಬಗ್ಗೆಯೂ ಅಲ್ಲಿ ಆಸುಪಾಸಿನಲ್ಲಿ ಭೇಟಿ ನೀಡಬಹುದಾದ ಸ್ಥಳಗಳ ಬಗ್ಗೆಯೂ ಮಾಹಿತಿಗಳನ್ನು, ವಿಡಿಯೋ ಮಾಡಿ ಹಾಕುತ್ತಿದ್ದಳು. ಇದಕ್ಕಾಗಿಯೇ ಆಕೆ ಒಂದು ಟೀಮ್ ಕಟ್ಟಿಕೊಂಡು ಪ್ರವಾಸಿ ತಾಣಗಳಿಗೆ ತೆರಳುತ್ತಿದ್ದಳು. ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ವಿಮಾನ, ರೈಲು ಸಂಪರ್ಕ, ಅವುಗಳ ರೇಟ್ ಇತ್ಯಾದಿ ಮಾಹಿತಿಯನ್ನೂ ಹಾಕುತ್ತಿದ್ದುದರಿಂದ ಭಾರೀ ಸಂಖ್ಯೆಯಲ್ಲಿ ಅಭಿಮಾನಿಗಳು ಆಕೆಯನ್ನು ಮೆಚ್ಚಿಕೊಂಡಿದ್ದರು.
A fun trip with friends turned out to be a nightmare for Mumbai-based chartered accountant Aanvi Kamdar’s family when she fell into a gorge from the waterfalls and died while making reels. The incident took place in Maharashtra’s Raigad district.
15-08-25 10:29 pm
Bangalore Correspondent
ಬೈಂದೂರಿನಲ್ಲಿ ವಿದೇಶಿಗರ ಮೋಡಿ ; ಅಧ್ಯಯನಕ್ಕೆ ಬಂದು...
15-08-25 09:47 pm
ಧರ್ಮಸ್ಥಳ ಪ್ರಕರಣದಲ್ಲಿ ಶವದ ಕುರುಹು ಸಿಗದಿದ್ದರೆ ದೂ...
15-08-25 07:15 pm
Mysterious Explosion in Bangalore: ಸ್ವಾತಂತ್ರ್...
15-08-25 03:20 pm
Masked Man, Dharmasthala, R Ashok: ಕೊನೆಯಲ್ಲಿ...
15-08-25 02:27 pm
16-08-25 03:34 pm
HK News Desk
ಕೆಂಪುಕೋಟೆಯಲ್ಲಿ ಸತತ 12ನೇ ಬಾರಿಗೆ ಸ್ವಾತಂತ್ರ್ಯೋತ್...
15-08-25 08:46 pm
ಜಮ್ಮು -ಕಾಶ್ಮೀರದಲ್ಲಿ ಭೀಕರ ಮೇಘಸ್ಫೋಟ: 46 ಜನ ಮೃತ್...
15-08-25 01:32 pm
ಕದನ ವಿರಾಮದಲ್ಲಿ ಪಾಲು ಸಿಗದ್ದಕ್ಕೆ ಭಾರತದ ಸರಕುಗಳಿಗ...
14-08-25 07:24 pm
ಯುಎಇ ಸುದ್ದಿ ; ಆರೇ ತಿಂಗಳಲ್ಲಿ ದುಬೈನಲ್ಲಿ 3,600ಕ್...
14-08-25 07:02 pm
16-08-25 04:45 pm
Mangalore Correspondent
Expert PU College Announces ‘Xcelerate 2025’...
15-08-25 09:04 pm
Flag, Oath, and Nation: Expert PU College, Ko...
15-08-25 08:51 pm
ಎಸ್ಐಟಿ ತನಿಖೆಯಿಂದ ಧರ್ಮಸ್ಥಳಕ್ಕೆ ಅಪಚಾರ ಆಗಿಲ್ಲ, ಬ...
15-08-25 08:40 pm
Dharmasthala News: ಧರ್ಮಸ್ಥಳ ಶವ ಶೋಧಕ್ಕೆ 15ನೇ ದ...
14-08-25 10:29 pm
16-08-25 11:25 am
HK News Desk
Gold Robbery, Mangalore, Kerala: ಕೇರಳದ ಚಿನ್ನದ...
16-08-25 10:20 am
Headline karnataka Impact, Lucky Scheme, Frau...
15-08-25 09:22 pm
ನಟ ದರ್ಶನ್ ಗೆ ಮತ್ತೆ ಜೈಲು ದರ್ಶನ ; ಹೆಂಡತಿ ಜೊತೆ ಅ...
14-08-25 05:31 pm
Supreme Court, Actor Darshan Jail Order: ಸುಪ್...
14-08-25 11:51 am