ಬ್ರೇಕಿಂಗ್ ನ್ಯೂಸ್
17-07-24 10:31 pm HK News Desk ದೇಶ - ವಿದೇಶ
ನವದೆಹಲಿ, ಜುಲೈ 17: ಮುಸ್ಲಿಮರಲ್ಲಿ ಪುರುಷರದ್ದೇ ಅಧಿಪತ್ಯ. ಪತ್ನಿಯ ಮೇಲೆ ತಲಾಖ್ ಹೇಳಿಯೂ ಸಂಬಂಧವನ್ನು ಕಡಿದುಕೊಳ್ಳಬಹುದು. ಹಿಂದೆಲ್ಲಾ ತ್ರಿಬಲ್ ತಲಾಖ್ ಎನ್ನುವುದು ಮುಸ್ಲಿಮ್ ಮಹಿಳೆಯರ ಮೇಲಿನ ಶೋಷಣೆಯ ಅಸ್ತ್ರವೇ ಆಗಿತ್ತು. ಇದೀಗ ದುಬೈ ರಾಜನ ಮಗಳು, ಅರ್ಥಾತ್ ರಾಜಕುಮಾರಿ ತನ್ನ ಗಂಡ ಬೇರೊಬ್ಬಾಕೆಯನ್ನು ಕಟ್ಟಿಕೊಂಡಿದ್ದಾಳೆಂದು ತಿಳಿಯುತ್ತಲೇ ಸೋಶಿಯಲ್ ಮೀಡಿಯಾದಲ್ಲೇ ಗಂಡನಿಗೆ ತ್ರಿಬಲ್ ತಲಾಖ್ ಹೇಳಿ ಸುದ್ದಿಯಾಗಿದ್ದಾರೆ.
ದುಬೈ ರಾಜ ಮಹಮ್ಮದ್ ರಶೀದ್ ಅಲ್ ಮಕ್ತುಮ್ ಅವರ ಪುತ್ರಿಯಾಗಿರುವ ಶೈಖಾ ಮಹ್ರಾ ಅಲ್ ಮಕ್ತುಮ್ ಅವರು ತನ್ನ ಗಂಡ ಮಹಮ್ಮದ್ ಬಿನ್ ರಶೀದ್ ಬಿನ್ ಮನಾ ಅಲ್ ಮಕ್ತುಮ್ ವಿರುದ್ಧ ಇನ್ ಸ್ಟಾ ಗ್ರಾಮ್ ಪೇಜಿನಲ್ಲೇ ಡೈವರ್ಸ್ ಮಾಡಿರುವುದನ್ನು ಹೇಳಿಕೊಂಡಿದ್ದಾರೆ. ಜುಲೈ 16ರಂದು ಆಕೆ ಈ ಪೋಸ್ಟ್ ಹಾಕಿದ್ದು ಬರೆದಿರುವ ರೀತಿ ಹೀಗಿದೆ. ಪ್ರೀತಿಯ ಪತಿಯೇ, ನೀವು ಬೇರೊಬ್ಬ ಸಂಗಾತಿಯನ್ನು ಕಟ್ಟಿಕೊಂಡಿದ್ದೀರಾ.. ಹೀಗಾಗಿ ನಾನು ಈ ಮೂಲಕ ಸಂಬಂಧ ಕಡಿಕೊಳ್ಳುವ ವಿಚ್ಛೇದನ ಘೋಷಣೆ ಮಾಡುತ್ತಿದ್ದೇನೆ. ಡೈವರ್ಸ್ ಮಾಡುತ್ತೇನೆ, ಡೈವರ್ಸ್ ಮಾಡುತ್ತೇನೆ, ಡೈವರ್ಸ್ ಮಾಡುತ್ತೇನೆ. ನಿಮ್ಮ ಹಳೆ ಪತ್ನಿಯನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಪುರುಷರು ತಲಾಖ್ ಹೇಳಿದ ರೀತಿಯಲ್ಲೇ ಮೂರು ಬಾರಿ ಡೈವರ್ಸ್ ಘೋಷಣೆ ಮಾಡಿಕೊಂಡು ಪೋಸ್ಟ್ ಮಾಡಿದ್ದಾರೆ.
ಇಸ್ಲಾಮಿಕ್ ಪದ್ಧತಿಯಲ್ಲಿ ಪುರುಷನು ತನ್ನ ಪತ್ನಿಗೆ ಮೂರು ಬಾರಿ ತಲಾಖ್ ಘೋಷಣೆ ಮಾಡಿ, ಸಂಬಂಧವನ್ನೇ ಕಡಿದುಕೊಳ್ಳಲು ಅವಕಾಶ ಇದೆ. ಈ ರೀತಿಯ ತ್ರಿಬಲ್ ತಲಾಖ್ ಮುಸ್ಲಿಮರಲ್ಲಿ ಹಿಂದಿನಿಂದಲೂ ಚಾಲ್ತಿಯಲ್ಲಿದೆ. ಭಾರತದಲ್ಲಿ ಮಾತ್ರ ಈ ಪದ್ಧತಿಯನ್ನು ಇತ್ತೀಚೆಗೆ ನಿಷೇಧಿಸಲಾಗಿದೆ. ಇಸ್ಲಾಮಿನಲ್ಲಿ ಮಹಿಳೆಯರಿಗೆ ಡೈವರ್ಸ್ ಮಾಡಿಕೊಳ್ಳುವ ಅವಕಾಶ ಇದ್ದರೂ, ಅದರಲ್ಲಿ ಪುರುಷನಷ್ಟು ಸ್ವಾತಂತ್ರ್ಯ ಇಲ್ಲ. ಮಹಿಳೆ ವಿಚ್ಛೇದನ ಬಯಸುವುದನ್ನು ಖುಲಾ ಎಂದು ಕರೆಯುತ್ತಾರೆ. ಆದರೆ, ತನಗೆ ಡೈವರ್ಸ್ ಬೇಕೆಂದು ಕೋರ್ಟಿನಲ್ಲಿ ಅಥವಾ ಆತನಲ್ಲಿ ವಿನಂತಿ ಮಾಡಿಕೊಳ್ಳಬೇಕು.
ದುಬೈ ರಾಜ ಮಹಮ್ಮದ್ ಬಿನ್ ರಶೀದ್ ಅವರ ಪುತ್ರಿ ಶೈಖಾ ಮಹ್ರಾಗೆ 2023ರ ಮೇ ತಿಂಗಳಲ್ಲಿ ಮದುವೆಯಾಗಿತ್ತು. ಒಂದು ವರ್ಷದ ನಂತರ ಅಂದರೆ, ಇದೇ ಜೂನ್ ತಿಂಗಳ ಆರಂಭದಲ್ಲಿ ಆಕೆ ಮಗುವಿಗೆ ಜನ್ಮ ನೀಡಿದ್ದಳು. ತನಗೆ ಮಗುವಾಗಿದ್ದನ್ನೂ ಆಕೆ ಇನ್ ಸ್ಟಾ ಪೇಜಿನಲ್ಲಿ ಹಾಕ್ಕೊಂಡಿದ್ದಳು. ಇದೀಗ ಒಂದೇ ತಿಂಗಳಲ್ಲಿ ಆಕೆಯೇ ವಿಚ್ಛೇದನ ಘೋಷಣೆ ಮಾಡಿಕೊಂಡಿದ್ದಾರೆ. ದುಬೈನಲ್ಲಿ ಅರಬ್ಬಿಗಳದ್ದೇ ಸಾಮ್ರಾಜ್ಯ ಆಗಿದ್ದರೂ, ರಾಜಕುಮಾರಿ ಆಗಿರುವ ಶೈಖಾ ಮಹ್ರಾ ಅವರು ವಿಚ್ಛೇದನ ಘೋಷಣೆ ಮಾಡಿ ಸುದ್ದಿಯಾಗಿದ್ದಾಳೆ.
Dubai princess Shaikha Mahra Mohammed Rashed Al Maktoum gave 'instant divorce' to her husband Sheikh Mana bin Mohammed bin Rashid bin Mana Al Maktoum on Instagram, two months after the couple welcomed their first child.
15-08-25 10:29 pm
Bangalore Correspondent
ಬೈಂದೂರಿನಲ್ಲಿ ವಿದೇಶಿಗರ ಮೋಡಿ ; ಅಧ್ಯಯನಕ್ಕೆ ಬಂದು...
15-08-25 09:47 pm
ಧರ್ಮಸ್ಥಳ ಪ್ರಕರಣದಲ್ಲಿ ಶವದ ಕುರುಹು ಸಿಗದಿದ್ದರೆ ದೂ...
15-08-25 07:15 pm
Mysterious Explosion in Bangalore: ಸ್ವಾತಂತ್ರ್...
15-08-25 03:20 pm
Masked Man, Dharmasthala, R Ashok: ಕೊನೆಯಲ್ಲಿ...
15-08-25 02:27 pm
16-08-25 03:34 pm
HK News Desk
ಕೆಂಪುಕೋಟೆಯಲ್ಲಿ ಸತತ 12ನೇ ಬಾರಿಗೆ ಸ್ವಾತಂತ್ರ್ಯೋತ್...
15-08-25 08:46 pm
ಜಮ್ಮು -ಕಾಶ್ಮೀರದಲ್ಲಿ ಭೀಕರ ಮೇಘಸ್ಫೋಟ: 46 ಜನ ಮೃತ್...
15-08-25 01:32 pm
ಕದನ ವಿರಾಮದಲ್ಲಿ ಪಾಲು ಸಿಗದ್ದಕ್ಕೆ ಭಾರತದ ಸರಕುಗಳಿಗ...
14-08-25 07:24 pm
ಯುಎಇ ಸುದ್ದಿ ; ಆರೇ ತಿಂಗಳಲ್ಲಿ ದುಬೈನಲ್ಲಿ 3,600ಕ್...
14-08-25 07:02 pm
16-08-25 04:45 pm
Mangalore Correspondent
Expert PU College Announces ‘Xcelerate 2025’...
15-08-25 09:04 pm
Flag, Oath, and Nation: Expert PU College, Ko...
15-08-25 08:51 pm
ಎಸ್ಐಟಿ ತನಿಖೆಯಿಂದ ಧರ್ಮಸ್ಥಳಕ್ಕೆ ಅಪಚಾರ ಆಗಿಲ್ಲ, ಬ...
15-08-25 08:40 pm
Dharmasthala News: ಧರ್ಮಸ್ಥಳ ಶವ ಶೋಧಕ್ಕೆ 15ನೇ ದ...
14-08-25 10:29 pm
16-08-25 11:25 am
HK News Desk
Gold Robbery, Mangalore, Kerala: ಕೇರಳದ ಚಿನ್ನದ...
16-08-25 10:20 am
Headline karnataka Impact, Lucky Scheme, Frau...
15-08-25 09:22 pm
ನಟ ದರ್ಶನ್ ಗೆ ಮತ್ತೆ ಜೈಲು ದರ್ಶನ ; ಹೆಂಡತಿ ಜೊತೆ ಅ...
14-08-25 05:31 pm
Supreme Court, Actor Darshan Jail Order: ಸುಪ್...
14-08-25 11:51 am