ಬ್ರೇಕಿಂಗ್ ನ್ಯೂಸ್
07-07-24 01:16 pm HK News Desk ದೇಶ - ವಿದೇಶ
ಸೂರತ್, ಜುಲೈ.07: ಗುಜರಾತ್ ನ ಸೂರತ್ ನಲ್ಲಿ ಭೀಕರ ಕಟ್ಟಡ ಕುಸಿತ ಉಂಟಾಗಿದ್ದು, ಘಟನೆಯಲ್ಲಿ ಕನಿಷ್ಠ 7 ಮಂದಿ ಸಾವನ್ನಪ್ಪಿದ್ದಾರೆ.
ಸೂರತ್ ನಲ್ಲಿ ಸಚಿನ್ ಪಾಲಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಸುಮಾರು 6 ಅಂತಸ್ತಿನ ಅಪಾರ್ಟ್ ಮೆಂಟ್ ಕುಸಿದಿದೆ. ಶನಿವಾರ ತಡರಾತ್ರಿ ಈ ದುರಂತ ಸಂಭವಿಸಿದ್ದು ರಾತ್ರಿ ಕಟ್ಟಡದಲ್ಲಿ ಮಲಗಿದ್ದ ಹಲವರು ಅವಶೇಷಗಳಡಿಯಲ್ಲಿ ಸಿಲುಕಿದ್ದಾರೆ.
ವಿಚಾರ ತಿಳಿಯುತ್ತಲೇ ಸ್ಥಳಕ್ಕಾಗಮಿಸಿದ ಪೊಲೀಸರು ಮತ್ತು ಎಸ್ ಡಿ ಆರ್ ಎಫ್ ತಂಡ ರಾತ್ರಿಯಿಡೀ ಕಾರ್ಯಾಚರಣೆ ನಡೆಸಿ ಈ ವರೆಗೂ 7 ಮೃತ ದೇಹಗಳನ್ನು ಹೊರ ತಂದಿದ್ದಾರೆ. ಅವಶೇಷಗಳಡಿಯಲ್ಲಿ ಇನ್ನೂ 6 ರಿಂದ 7 ಮಂದಿ ಸಿಲುಕಿರುವ ಸಾಧ್ಯತೆ ಇದೆ. ಅಂತೆಯೇ 15 ಗಾಯಾಳುಗಳನ್ನು ರಕ್ಷಿಸಿ ಆಸ್ಪತ್ರೆಗೆ ರವಾನಿಸಲಾಗಿದೆ.



2017 ರಲ್ಲಿ ನಿರ್ಮಿಸಲಾಗಿದ್ದ ಈ ಅಪಾರ್ಟ್ ಮೆಂಟ್ ನಲ್ಲಿ ಐದು ಐದು ಕುಟುಂಬಗಳು ವಾಸಿಸುತ್ತಿದ್ದವು. ಪೊಲೀಸರ ಪ್ರಕಾರ, ಕುಸಿತ ಸಂಭವಿಸಿದಾಗ ಹಲವಾರು ನಿವಾಸಿಗಳು ಕೆಲಸದಲ್ಲಿದ್ದರು. ಆದರೆ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದ ಅನೇಕರು ಒಳಗೆ ಮಲಗಿದ್ದರು. ಕಟ್ಟಡವು ಕೇವಲ 8 ವರ್ಷಗಳಷ್ಟು ಹಳೆಯದಾಗಿದ್ದರೂ, ಹೆಚ್ಚಿನ ಫ್ಲ್ಯಾಟ್‌ಗಳು ಖಾಲಿ ಮತ್ತು ಶಿಥಿಲಗೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
"ಸುಮಾರು ಐದು ಫ್ಲಾಟ್‌ಗಳಲ್ಲಿ ಈ ಪ್ರದೇಶದಲ್ಲಿ ಕಾರ್ಖಾನೆಗಳಲ್ಲಿ ಕೆಲಸ ಮಾಡುವವರು ವಾಸಿಸುತ್ತಿದ್ದರು ಎನ್ನಲಾಗಿದೆ. ಅವಶೇಷಗಳ ಒಳಗಿನಿಂದ ಅವರ ಧ್ವನಿ ನಮಗೆ ಕೇಳಿಸುತ್ತದೆ, ಶೀಘ್ರದಲ್ಲೇ ಅವರನ್ನು ರಕ್ಷಿಸಲಾಗುವುದು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಬಟ್ಟೆ ಕಾರ್ಖಾನೆಯಲ್ಲಿ ದುಡಿಯುತ್ತಿದ್ದ ಕಾರ್ಮಿಕರು ಈ ಕಟ್ಟಡದಲ್ಲಿ ಬಾಡಿಗೆಗೆ ನೆಲೆಸಿದ್ದರು. ಕಳೆದ ಕೆಲವು ದಿನಗಳಿಂದ ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಕಟ್ಟಡ ಕುಸಿದಿದೆ. ಕಳಪೆ ಗುಣಮಟ್ಟದ ನಿರ್ಮಾಣ ಈ ದುರ್ಘಟನೆಗೆ ಕಾರಣ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Amid incessant rains, tragedy struck Surat as a six-storey building collapsed in Sachin Pali village. By Sunday, officials confirmed that seven bodies had been pulled from the rubble. The building, which housed 30 apartments, was illegally constructed and mostly vacant, with only five flats occupied. Residents paid ₹1,200 per month in rent.
21-11-25 05:25 pm
HK News Desk
ವಾಹನ ಸವಾರರಿಗೆ ಗುಡ್ ನ್ಯೂಸ್ ; ಮತ್ತೆ 50% ದಂಡ ವ...
21-11-25 10:19 am
CM. Siddaramaiah, CM SEAT: ಯಾವ ಕ್ರಾಂತಿಯೂ ಇಲ್ಲ...
20-11-25 03:30 pm
DK Suresh, CM Siddaramaiah : ಸಿಎಂ ಕುರ್ಚಿ ಕ್ಲೈ...
20-11-25 03:01 pm
ಆನೇಕಲ್ ನಲ್ಲಿ ಕಚಡಾ ಡಾಕ್ಟರ್ ; ಇನ್ಪೆಕ್ಟರ್ ಅಮಾನತಿ...
19-11-25 02:16 pm
21-11-25 06:10 pm
HK News Desk
ಶಬರಿಮಲೆ ಚಿನ್ನ ಲೂಟಿ ಪ್ರಕರಣ ; ಕೊನ್ನಿ ಕ್ಷೇತ್ರದ ಸ...
21-11-25 02:26 pm
ಶ್ರೀಲಂಕಾದಲ್ಲಿ ನ್ಯೂಜಿಲೆಂಡ್ ಮಹಿಳೆಯ ಜೊತೆ ಯುವಕನ ಅ...
19-11-25 06:47 pm
ಕೆಂಪು ಕೋಟೆ ಬ್ಲಾಸ್ಟ್ ಕೇಸ್ ; ಅಲ್ ಫಲಾಹ್ ವಿವಿಗೆ ಸ...
19-11-25 11:10 am
ಬಾಂಗ್ಲಾದಲ್ಲಿ ವಿದ್ಯಾರ್ಥಿಗಳ ಮಾರಣ ಹೋಮಕ್ಕೆ ಅವರೇ ಕ...
17-11-25 10:58 pm
21-11-25 10:39 pm
Mangalore Correspondent
ನವೆಂಬರ್ 23ರಿಂದ ಪ್ರತಿ ವಾರ 'ಸಂಸದ್ ಖೇಲ್ ಮಹೋತ್ಸವ'...
21-11-25 10:03 pm
ಸುರತ್ಕಲ್- ನಂತೂರು- ಬಿಸಿ ರೋಡ್ ಹೆದ್ದಾರಿ ಎನ್ಎಚ...
21-11-25 09:55 pm
Snake Bite, Mangalore, Detection Kit: ಹಾವು ಕಚ...
21-11-25 08:45 pm
ಮಾನಸಿಕ ಖಿನ್ನತೆ ; ಶಿಕ್ಷಕಿ ತಾಯಿಯನ್ನು ಕಾಲೇಜು ಬಿಟ...
20-11-25 10:48 pm
21-11-25 11:07 pm
Bangalore Correspondent
ಮಲ್ಪೆ ಶಿಪ್ ಯಾರ್ಡ್ ನಿಂದ ಪಾಕಿಸ್ತಾನಕ್ಕೆ ಮಾಹಿತಿ ಸ...
21-11-25 05:11 pm
ಬೆಂಗಳೂರು ಎಟಿಎಂ ಹಣ ದರೋಡೆ ಪ್ರಕರಣ ; ತಿರುಪತಿಯಲ್ಲಿ...
20-11-25 10:53 pm
BMR Group Fraud, Money, Mangalore, Surathkal:...
20-11-25 06:01 pm
Bangalore ATM Van Robbery, Update: ಬೆಂಗಳೂರಿನ...
20-11-25 11:51 am