ಬ್ರೇಕಿಂಗ್ ನ್ಯೂಸ್
04-07-24 09:14 pm HK News Desk ದೇಶ - ವಿದೇಶ
ಕೊಚ್ಚಿ, ಜುಲೈ 4: ಪೊಲೀಸರು ಮನಸ್ಸು ಮಾಡಿದರೆ, 15 ವರ್ಷಗಳ ಹಿಂದಿನ ಕೇಸನ್ನೂ ಪತ್ತೆ ಮಾಡುತ್ತಾರೆ ಎಂಬುದಕ್ಕಿದು ನಿದರ್ಶನ. ಆಲಪ್ಪುಝ ಜಿಲ್ಲೆಯ ಮನ್ನಾರ್ ನಲ್ಲಿ ವಿವಾಹಿತ ಮಹಿಳೆಯೊಬ್ಬರು ಕಾಣೆಯಾಗಿದ್ದ 15 ವರ್ಷಗಳ ಹಿಂದಿನ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಆಕೆಯನ್ನು ಗಂಡನೇ ತನ್ನ ಗೆಳೆಯರೊಂದಿಗೆ ಸೇರಿ ಕೊಲೆ ಮಾಡಿದ್ದಾನೆ ಎಂಬುದನ್ನು ಪತ್ತೆ ಮಾಡಿದ್ದಾರೆ.
ಆಲಪ್ಪುಝ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೈತ್ರಾ ತೆರೆಸಾ ಜಾನ್ ಮಹಿಳೆಯ ನಾಪತ್ತೆ ಪ್ರಕರಣವನ್ನು ಕೇವಲ ಒಂದು ಕ್ಲೂ ಇಟ್ಟುಕೊಂಡು ಭೇದಿಸಿದ್ದಾರೆ. 2009ರಲ್ಲಿ ಕಲಾ ಎಂಬ ಯುವತಿ ಮನ್ನಾರ್ ಬಳಿಯ ಎರಮತ್ತೂರಿನಲ್ಲಿ ನಾಪತ್ತೆಯಾಗಿದ್ದಳು. ಅನಿಲ್ ಕುಮಾರ್ ಮತ್ತು ಕಲಾ ಕೆಲವು ವರ್ಷಗಳ ಹಿಂದಷ್ಟೇ ಪ್ರೀತಿಸಿ ಮದುವೆಯಾಗಿದ್ದರು. ಇವರ ಜಾತಿ ಬೇರೆಯಾಗಿದ್ದರಿಂದ ಮದುವೆಗೆ ಮನೆಯವರ ವಿರೋಧ ಇತ್ತು. ಹಿಂದುಳಿದ ಜಾತಿಯ ಯುವತಿಯನ್ನು ಮದುವೆಯಾಗಿ ಪ್ರತ್ಯೇಕವಾಗಿ ಉಳಿದುಕೊಂಡಿದ್ದರು. ಅವರಿಗೆ ಒಂದು ಗಂಡು ಮಗುವೂ ಆಗಿತ್ತು. ಅಷ್ಟರಲ್ಲೇ ಗಂಡ ಅನಿಲ್ ಕುಮಾರ್ ಗೆ ಇಸ್ರೇಲ್ ನಲ್ಲಿ ಉದ್ಯೋಗ ಸಿಕ್ಕಿದ್ದು, ಪತ್ನಿ ಮಗುವನ್ನು ಮನೆಯಲ್ಲಿ ಬಿಟ್ಟು ತೆರಳಿದ್ದ.
ಇದೇ ವೇಳೆ, ಗಂಡನಿಗೆ ಪತ್ನಿಯ ಮೇಲೆ ಶಂಕೆ ಮೂಡಿತ್ತು. ಪತ್ನಿ ಬೇರೆಯವರ ಜೊತೆಗೆ ಸಂಬಂಧ ಹೊಂದಿದ್ದಾಳೆ ಎಂದು ಯಾರೋ ಹೇಳಿದ ಮಾತನ್ನು ನಂಬಿ ಜಗಳ ಶುರು ಮಾಡಿದ್ದ. ಆನಂತರ, ಕಲಾ ಗಂಡನ ಮನೆಯನ್ನು ಬಿಟ್ಟು ಮಗುವಿನೊಂದಿಗೆ ತಾಯಿ ಮನೆ ಸೇರಿದ್ದಳು. ಆದರೆ ಮಗುವನ್ನು ಬಿಟ್ಟು ಕೊಡಲ್ಲ ಎಂದು ಹೇಳಿ ಇವರ ನಡುವೆ ಜಗಳ ನಡೆದಿತ್ತು. ಇಂಥ ಸಂದರ್ಭದಲ್ಲೇ ಕಲಾ ನಾಪತ್ತೆಯಾಗಿದ್ದಳು. ಆದರೆ, ಈ ಬಗ್ಗೆ ಗಂಡ ಅನಿಲ್ ಕುಮಾರ್ ನಾಪತ್ತೆ ದೂರು ನೀಡಿರಲಿಲ್ಲ. ಪೊಲೀಸರಿಗೂ ಮಾಹಿತಿ ಇರಲಿಲ್ಲ.
ಇತ್ತೀಚೆಗೆ ಮೂರು ತಿಂಗಳ ಹಿಂದೆ ಎರಮತ್ತೂರಿನ ಅನಿಲ್ ಕುಮಾರ್ ಮನೆಯಲ್ಲಿ ನೀರಿನ ಸೇಪ್ಟಿ ಟ್ಯಾಂಕ್ ಕ್ಲೀನ್ ಮಾಡಲು ತೆರಳಿದ್ದ ವ್ಯಕ್ತಿಗೆ ಕಿವಿಯೋಲೆ, ಲಾಕೆಟ್, ಕ್ಲಿಪ್ ಸೇರಿದಂತೆ ಕೆಲವು ಚಿನ್ನ ಮತ್ತು ಪ್ಲಾಸ್ಟಿಕ್ ವಸ್ತುಗಳು ಸಿಕ್ಕಿದ್ದವು. ಈ ಮಾಹಿತಿ ಪೊಲೀಸರಿಗೆ ಲಭಿಸಿದ್ದು, ಶಂಕೆಯ ಮೇರೆಗೆ ತನಿಖೆ ಆರಂಭಿಸಿದ್ದರು. ಮಹಿಳೆ ನಾಪತ್ತೆ ವಿಚಾರದ ಬೆನ್ನು ಹತ್ತಿದ ಪೊಲೀಸರಿಗೆ ಗಂಡ- ಹೆಂಡತಿ ಜಗಳದ ಮಾಹಿತಿ ಲಭಿಸಿತ್ತು. ಪೊಲೀಸರು ಮನೆಯನ್ನು ಸರ್ಚ್ ಮಾಡಿದ್ದು, ಅನಿಲ್ ಕುಮಾರ್ ಗೆಳೆಯರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ, ಆಗ 27 ವರ್ಷದವಳಾಗಿದ್ದ ಯುವತಿಯನ್ನು ಕೊಲೆಗೈದಿರುವುದನ್ನ ಒಪ್ಪಿಕೊಂಡಿದ್ದಾರೆ.
ಕೊಲೆ ಸುಳಿವು ನೀಡಿದ್ದು ಅನಾಮಧೇಯ ಪತ್ರ
ಪ್ರಕರಣದ ಆರೋಪಿಗಳಲ್ಲಿ ಒಬ್ಬನಾಗಿರುವ ಪ್ರಮೋದ್ ಕುಮಾರ್ ಎಂಬಾತ ತನ್ನ ಪತ್ನಿಯನ್ನು ಹೊಡೆದು ಸಾಯಿಸಲು ಯತ್ನಿಸಿದ್ದ. ಮಾತಿನ ಭರದಲ್ಲಿ ಕಲಾನನ್ನು ಕೊಂದ ರೀತಿಯಲ್ಲೇ ನಿನ್ನನ್ನು ಕೊಂದು ಹಾಕುತ್ತೇನೆ ಎಂದು ಹೇಳಿದ್ದ. ಈ ವಿಚಾರ ಸ್ಥಳೀವಾಗಿ ಶಂಕೆಗೆ ಕಾರಣವಾಗಿದ್ದರೂ ಮನ್ನಾರ್ ಪೋಸ್ಟ್ ಕಚೇರಿಯಿಂದ ಅಂಬಲಪ್ಪುಝ ಪೊಲೀಸ್ ಠಾಣೆಗೆ ಅನಾಮಧೇಯ ಪತ್ರ ಬಂದಿತ್ತು. ಅದರಲ್ಲಿ ಕಲಾ ಎಂಬ ಯುವತಿಯನ್ನು ಕೊಂದಿರುವ ಬಗ್ಗೆ ಮಾಹಿತಿಗಳನ್ನು ಬರೆಯಲಾಗಿತ್ತು. ಪ್ರಮೋದ್ ಕುಮಾರ್ ಬಗ್ಗೆ ಪೊಲೀಸರು ಮಾಹಿತಿ ಕೆದಕಿದಾಗ, ಕಳೆದ ಮಾರ್ಚ್ 24ರಂದು ತನ್ನ ಪತ್ನಿಯನ್ನು ಕೊಲೆಗೆ ಯತ್ನಿಸಿದ ಪ್ರಕರಣದಲ್ಲಿ ಜೈಲು ಪಾಲಾಗಿರುವುದು ತಿಳಿದುಬಂದಿತ್ತು. ಈ ಪತ್ರವನ್ನು ಆಧರಿಸಿ ಪೊಲೀಸರು ತನಿಖೆ ಆರಂಭಿಸಿದ್ದರು.
ಸಾಕ್ಷ್ಯ ಕಲೆಹಾಕುವುದೇ ಸವಾಲು
ಸದ್ಯಕ್ಕೆ ಮೂವರು ಆರೋಪಿಗಳನ್ನು ಬಂಧಿಸಿದ್ದು, ತಪ್ಪು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಕೊಲೆಗೆ ಸೂಕ್ತ ಸಾಕ್ಷ್ಯಗಳನ್ನೂ ಇನ್ನೂ ಪೊಲೀಸರು ಕಲೆ ಹಾಕುತ್ತಿದ್ದಾರೆ. ಆರೋಪಿಗಳ ಮಾಹಿತಿ ಪ್ರಕಾರ, ಯುವತಿಯನ್ನು ಸೇಪ್ಟಿ ಟ್ಯಾಂಕ್ ನಲ್ಲಿ ಮುಳುಗಿಸಿ ಕೊಲೆ ಮಾಡಲಾಗಿದೆ. ಪ್ರಮುಖ ಆರೋಪಿಯಾಗಿರುವ ಗಂಡ ಅನಿಲ್ ಕುಮಾರ್ ಇಸ್ರೇಲ್ ನಲ್ಲಿದ್ದಾನೆ. ಇದೇ ವೇಳೆ, ಅನಿಲ್ ತಂದೆ, ತಾಯಿ ಮತ್ತು ಆತ ಹೊಸತಾಗಿ ಮದುವೆಯಾಗಿದ್ದ ಯುವತಿಯನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ನಡುವೆ, ಇವರ ಜೊತೆಗಿರುವ ಅನಿಲ್ ಮಗು ದೊಡ್ಡವನಾಗಿದ್ದು, ತನ್ನ ತಾಯಿಯನ್ನು ಯಾರೂ ಕೊಲೆ ಮಾಡಿಲ್ಲ. ಆಕೆ ಎಲ್ಲಾದರೂ ಬದುಕಿಯೇ ಇದ್ದಾಳೆ ಎಂದು ಹೇಳಿದ್ದಾನೆ. 15 ವರ್ಷಗಳ ಬಳಿಕ ಕೊಲೆ ಪ್ರಕರಣ ಭೇದಿಸಿದ್ದರಿಂದ ಕಲಾ ಕುಟುಂಬಸ್ಥರು ಕೂಡ ಇದನ್ನು ನಂಬದಾಗಿದ್ದಾರೆ. ನಾಪತ್ತೆ ಸಂದರ್ಭದಲ್ಲಿ ಆಕೆಗೆ ಪಾಲಕ್ಕಾಡ್ ಮೂಲದ ಯುವಕನೊಂದಿಗೆ ಸಂಬಂಧ ಇತ್ತು, ಆತನೊಂದಿಗೆ ಮನೆ ಬಿಟ್ಟು ಹೋಗಿದ್ದಾಳೆ ಎಂದು ವದಂತಿ ಹಬ್ಬಿಸಲಾಗಿತ್ತು. ಕಲಾ ಮನೆಯವರು ಕೂಡ ಆ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ. ಈಗ ಗಂಡನೇ ಕೊಲೆ ಮಾಡಿದ್ದಾನೆ ಎಂಬ ಪೊಲೀಸರ ಮಾಹಿತಿಯನ್ನು ಕೇಳಿ ಅಚ್ಚರಿಗೊಂಡಿದ್ದಾರೆ.
Five people were taken into custody on Wednesday for the alleged murder of a woman who went missing 15 years ago from Mannar in Kerala's Aluppuzha district after cops found her human remains, officials said.
05-05-25 01:30 pm
HK News Desk
ಅಲ್ಲೊಂದು, ಇಲ್ಲೊಂದು ಕೊಲೆ ಆಗತ್ತೆ, ಅದನ್ಯಾಕೆ ಧರ್ಮ...
04-05-25 09:55 pm
ಸಿಇಟಿ ಬಳಿಕ ನೀಟ್ ಪರೀಕ್ಷೆಗೂ ಜನಿವಾರಕ್ಕೆ ಕತ್ತರಿ !...
04-05-25 09:26 pm
ಹಿಮಾಲಯ - ದೆಹಲಿಗೆ ಸುನಾಮಿ, ಮಹಾನ್ ನಾಯಕರ ದುರ್ಮರಣ...
04-05-25 09:15 pm
Bangalore Girl Naked, HSR Layout: ಬೆಂಗಳೂರಿನಲ್...
04-05-25 02:27 pm
05-05-25 11:10 pm
HK News Desk
ಪಾಕ್ ವಾಯು ಪ್ರದೇಶದಲ್ಲಿ ಭಾರತದ ವಿಮಾನಗಳಿಗೆ ನಿರ್ಬಂ...
30-04-25 06:59 pm
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
05-05-25 10:59 pm
Mangalore Correspondent
Suhas Shetty murder, MP Brijesh Chowta, Param...
05-05-25 10:43 pm
Mangalore Suhas Shetty murder, BJP Umanath Ko...
05-05-25 07:15 pm
MLA Harish Poonja, Dinesh Gundurao: ಬುರ್ಖಾಧಾರ...
05-05-25 05:10 pm
Suhas Shetty Murder, VHP, Bajpe Police: ಸುಹಾಸ...
05-05-25 03:24 pm
03-05-25 02:16 pm
Mangalore Correspondent
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm