ಬ್ರೇಕಿಂಗ್ ನ್ಯೂಸ್
31-05-24 11:13 am HK News Desk ದೇಶ - ವಿದೇಶ
ತಿರುವನಂತಪುರಂ, ಮೇ.31: ಬಸ್ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಗರ್ಭಿಣಿಯೋರ್ವರಿಗೆ ಹೆರಿಗೆ ನೋವು ಕಾಣಿಸಿದ ಹಿನ್ನೆಲೆಯಲ್ಲಿ ಸರ್ಕಾರಿ ಬಸ್ ಡ್ರೈವರ್ ಸಮಯ ಪ್ರಜ್ಞೆ ಮೆರೆದು, ಬಸ್ ಅನ್ನು ನೇರವಾಗಿ ಆಸ್ಪತ್ರೆಗೆ ನುಗ್ಗಿಸಿದ ಘಟನೆ ಕೇರಳದಲ್ಲಿ ಬುಧವಾರ ನಡೆದಿದೆ. ಬಸ್ ಅನ್ನು ಆಸ್ಪತ್ರೆಗೆ ನುಗ್ಗಿಸಿದ ಕೂಡಲೇ ವೈದ್ಯರ ತಂಡವು ಮಹಿಳೆಗೆ ಬಸ್ನಲ್ಲೇ ಹೆರಿಗೆ ಮಾಡಿಸಿದ್ದಾರೆ.
ಈ ಘಟನೆಯು ಕೇರಳದ ತ್ರಿಶೂರ್ನಲ್ಲಿ ನಡೆದಿದ್ದು, ಇದರ ಸಿಸಿಟಿವಿ ದೃಶ್ಯವು ಸದ್ಯ ಸೋಷಿಯಲ್ ಮೀಡಿಯಾಗಳಲ್ಲಿ ವೈರಲಾಗಿದೆ. ತ್ರಿಶೂರ್ನಲ್ಲಿ 37 ವರ್ಷದ ಮಹಿಳಾ ಪ್ರಯಾಣಿಕರು ಕೆಎಸ್ಆರ್ಟಿಸಿ ಬಸ್ನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ತಿರುನವಾಯದಲ್ಲಿನ ನಿವಾಸಿ ಲಿಜೇಶ್ ಎಂಬವರ ಪತ್ನಿ ಸೆರೀನಾ ಅವರು ಬುಧವಾರ ಅಂಗಮಾಲಿಯಿಂದ ತೊಟ್ಟಿಲ್ಪಾಲಂಗೆ ಬಸ್ನಲ್ಲಿ ಪ್ರಯಾಣಿಸುತ್ತಿದ್ದರು. ಬಸ್ ಪೇರಮಂಗಲಂ ಪೊಲೀಸ್ ಠಾಣೆಯ ಸಮೀಪ ತಲುಪಿದ ನಂತರ ಆಕೆಗೆ ಹೆರಿಗೆ ನೋವು ಕಾಣಿಸಿಕೊಂಡಿತು. ಇದನ್ನು ಗಮನಿಸಿದ ಇತರೆ ಪ್ರಯಾಣಿಕರು ಕೂಡಲೇ ಚಾಲಕನ ಗಮನಕ್ಕೆ ತಂದಿದ್ದಾರೆ. ಆ ಕೂಡಲೇ ಸಮಯ ಪ್ರಜ್ಞೆ ಮೆರೆದ ಸರ್ಕಾರಿ ಬಸ್ ಚಾಲಕ, ತ್ರಿಶೂರ್ನ ಅಮಲಾ ಆಸ್ಪತ್ರೆಯ ಆವರಣಕ್ಕೆ ನುಗ್ಗಿಸಿ, ತುರ್ತು ಚಿಕಿತ್ಸಾ ಘಟಕದ ಬಳಿ ಬಸ್ ನಿಲ್ಲಿಸಿದ್ದಾನೆ.
ಬಸ್ ಆಸ್ಪತ್ರೆಯೊಳಗೆ ಬಂದ ಕೂಡಲೇ ನಿರ್ವಾಹಕ ಹಾಗೂ ಇತರೆ ಪ್ರಯಾಣಿಕರು ವೈದ್ಯರನ್ನು ಕರೆದಿದ್ದಾರೆ. ಕೂಡಲೇ ಮಹಿಳೆ ನೋವು ಅನುಭವಿಸುತ್ತಿರುವುದರ ಮಧ್ಯೆ ಹೆರಿಗೆ ಬಹುತೇಕ ಪೂರ್ಣಗೊಂಡಿರುವುದನ್ನು ಮನಗಂಡ ವೈದ್ಯರ ತಂಡ, ನೇರವಾಗಿ ವೈದ್ಯಕೀಯ ಸಲಕರಣೆಗಳೊಂದಿಗೆ ಬಸ್ನಲ್ಲೇ ಮಗುವನ್ನು ಹೊರತೆಗೆಯಲು ಸಹಾಯ ಮಾಡಿದರು. ಹೆರಿಗೆಯಾದ ಕೂಡಲೇ ಮಗು ಹಾಗೂ ಬಾಣಂತಿ ಸೆರೀನಾರನ್ನು ಆಸ್ಪತ್ರೆಯಲ್ಲಿ ದಾಖಲಿಸಿಕೊಂಡಿದ್ದಾರೆ. ಸದ್ಯ ಹೆಣ್ಣು ಮಗು ಹಾಗೂ ತಾಯಿ ಕ್ಷೇಮವಾಗಿದ್ದಾರೆ.
ಈ ಬೆಳವಣಿಗೆಯ ಬಗ್ಗೆ ಮಾಹಿತಿ ನೀಡಿರುವ ತ್ರಿಶೂರ್ನ ಅಮಲಾ ಆಸ್ಪತ್ರೆಯ ವಕ್ತಾರರು, “ಗರ್ಭಿಣಿ ಸೆರೀನಾ ಒಂಭತ್ತನೇ ತಿಂಗಳಿನಲ್ಲಿದ್ದರು. ಆಸ್ಪತ್ರೆಗೆಂದು ಬಸ್ನಲ್ಲಿ ಹೋಗುತ್ತಿದ್ದರು. ಬಸ್ ಚಾಲಕ ಸಮಯ ಪ್ರಜ್ಞೆ ಮೆರೆದು ಆಸ್ಪತ್ರೆಯ ಆವರಣಕ್ಕೆ ಬಸ್ ನುಗ್ಗಿಸಿದ್ದರು. ಬಸ್ನಲ್ಲಿದ್ದಾಗಲೇ ಬಹುತೇಕ ಮಗು ಹೊರಗೆ ಬಂದಿದ್ದರಿಂದ ಅಲ್ಲೇ ನಿಂತು ನಮ್ಮ ವೈದ್ಯರು ಮತ್ತು ನರ್ಸ್ಗಳ ತಂಡ ಹೆರಿಗೆ ಮಾಡಿಸಿದೆ. ಇಬ್ಬರೂ ಕೂಡ ಸುರಕ್ಷಿತವಾಗಿದ್ದಾರೆ. ಘಟನೆ ನಡೆದ ಕೂಡಲೇ ಪತಿ ಲಿಜೇಶ್ ಅವರಿಗೆ ಮಾಹಿತಿ ನೀಡಿದೆವು. ಅವರು ಕೂಡ ಆಸ್ಪತ್ರೆಗೆ ಬಂದಿದ್ದಾರೆ. ಮಗುವನ್ನು NICUಗೆ ಸ್ಥಳಾಂತರಿಸಿದ್ದೇವೆ. ಸೆರೀನಾ ನಿಗಾದಲ್ಲಿದ್ದಾರೆ. ತಾಯಿ ಮತ್ತು ಮಗುವಿನ ಆರೋಗ್ಯ ಸ್ಥಿರವಾಗಿದೆ” ಎಂದು ತಿಳಿಸಿದ್ದಾರೆ.
ಸಮಯಪ್ರಜ್ಞೆ ಮೆರೆದ ಸರ್ಕಾರಿ ಬಸ್ನ ಚಾಲಕ ಹಾಗೂ ಕೂಡಲೇ ಕಾರ್ಯಪ್ರವೃತ್ತರಾಗಿ ಹೆರಿಗೆ ಮಾಡಿಸಿದ ವೈದ್ಯರ ತಂಡಕ್ಕೆ ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
Superb Situational Awareness by KSRTC bus driver of Kerala
— Dr MJ Augustine Vinod 🇮🇳 (@mjavinod) May 30, 2024
A lady gave birth to a child in the bus
Driver got the bus to the hospital porch
To save mother and child
HE SUCCEEDED pic.twitter.com/JcyFGTkANR
The incident took place on Wednesday when the woman, travelling with her husband from Thrissur to Thottilpalam in Kozhikode, began experiencing severe labour pains as the bus crossed Peramangalam village.
06-10-25 10:47 pm
Bangalore Correspondent
ಕಫ್ ಸಿರಪ್ ದುರಂತ ; ರಾಜ್ಯದಲ್ಲಿ ಕಟ್ಟೆಚ್ಚರ, ಎಲ್ಲ...
06-10-25 05:27 pm
Basavaraj Rayareddy, Mallikarjuna kharge, CM...
05-10-25 09:41 pm
ನಾಯಿ ದಾಳಿಗೆ ಸ್ಥಳೀಯರ ಆಕ್ರೋಶ ; ಬೀದಿ ನಾಯಿಗಳ ಮೇಲೆ...
05-10-25 08:08 pm
ಲಿಂಗಾಯತರನ್ನು ಪ್ರತ್ಯೇಕಿಸುವುದು ಸಮಾಜ ವಿರೋಧಿ ಕೆಲಸ...
05-10-25 07:57 pm
06-10-25 07:56 pm
HK News Desk
ಬಿಹಾರ ಚುನಾವಣೆಗೆ ಮುಹೂರ್ತ ನಿಗದಿ ; ಎರಡು ಹಂತದಲ್ಲಿ...
06-10-25 07:21 pm
ಕುಂಬಳೆಯಲ್ಲಿ ಡಿವೈಎಫ್ಐ ನಾಯಕಿ, ಯುವ ವಕೀಲೆ ಆತ್ಮಹತ್...
05-10-25 11:07 pm
ಡೆಡ್ಲಿ ಸಿರಪ್ 'ಕೋಲ್ಡ್ರಿಫ್ 'ಶಿಫಾರಸು ಮಾಡಿದ್ದ...
05-10-25 10:38 pm
Coldrif syrup: ಸಿರಪ್ ಸೇವಿಸಿ 11 ಮಕ್ಕಳು ಸಾವು ;...
04-10-25 04:45 pm
06-10-25 10:42 pm
Mangalore Correspondent
ದಕ್ಷಿಣ ಕನ್ನಡದ 38 ಕಡೆ ಆಯುಷ್ಮಾನ್ ಭಾರತ್- ಆರೋಗ್ಯ...
06-10-25 07:19 pm
ಮಂಗಳೂರಿನ ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ಹೃದ್ರೋಗ...
06-10-25 04:57 pm
ಟ್ರಾಫಿಕ್ ಸಿಬಂದಿ ಕಾರು ನಿಲ್ಲಿಸಲೆತ್ನಿಸಿ ಒಡೆದ ಗಾಜ...
06-10-25 02:58 pm
Ullal, UT Khader, Sharadotsava Clash: ಉಳ್ಳಾಲ...
04-10-25 10:29 pm
07-10-25 10:31 am
HK News Desk
Kali Yogish, Arrest, Mangalore: ಮಂಗಳೂರು, ಮೈಸೂ...
05-10-25 03:22 pm
Shivamogga Murder, Mother: ಶಿವಮೊಗ್ಗ ; ಮಗಳನ್ನು...
04-10-25 02:57 pm
Karkala Murder, Crime: ಕಾರ್ಕಳ ; ಪ್ರೀತಿಸಿದ ಯುವ...
03-10-25 11:28 pm
ಸುಧಾಮೂರ್ತಿ, ನಿರ್ಮಲಾ ಸೀತಾರಾಮನ್ ಹೆಸರಲ್ಲಿ ಎಐ ವಿಡ...
01-10-25 02:39 pm