ಬ್ರೇಕಿಂಗ್ ನ್ಯೂಸ್
20-05-24 08:15 pm HK News Desk ದೇಶ - ವಿದೇಶ
ಪುಣೆ, ಮೇ 20: ಕುಡಿದ ಮತ್ತಿನಲ್ಲಿ ಕೋಟಿ ಬೆಲೆಯ ಐಷಾರಾಮಿ ಕಾರು ಓಡಿಸಿದ್ದ ಪುಣೆಯ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರ ಅಪ್ರಾಪ್ತ ಮಗ ಇಬ್ಬರು ಸಾಫ್ಟ್ ವೇರ್ ಇಂಜಿನಿಯರ್ ಗಳ ಸಾವಿಗೆ ಕಾರಣನಾಗಿದ್ದಾನೆ. ಆದರೆ, ಪೊಲೀಸರು ಆತನನ್ನು ಬಂಧಿಸಿ ಕೋರ್ಟಿಗೆ ಹಾಜರುಪಡಿಸಿದರೆ ನ್ಯಾಯಾಧೀಶರು 15 ದಿನಗಳ ಕಾಲ ಟ್ರಾಫಿಕ್ ಪೊಲೀಸರ ಜೊತೆಗೆ ಕೆಲಸ ಮಾಡುವಂತೆ ಹೇಳಿ ಔದಾರ್ಯ ತೋರಿದ ಘಟನೆ ನಡೆದಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ.
ಪುಣೆ ನಗರದ ಯರವಾಡದಲ್ಲಿ ಭಾನುವಾರ ನಸುಕಿನಲ್ಲಿ ಘಟನೆ ನಡೆದಿದ್ದು, ಮಧ್ಯಪ್ರದೇಶ ಮೂಲದ ಟೆಕ್ಕಿಗಳಾದ ಅನೀಶ್ ಅವಧೀಯ ಮತ್ತು ಅಶ್ವಿನಿ ಕೋಷ್ಟ ಎಂಬ 24ರ ಹರೆಯದ ಯುವಕ- ಯುವತಿ ಪ್ರಾಣ ಕಳಕೊಂಡಿದ್ದಾರೆ. ಘಟನೆ ನಡೆಯುತ್ತಿದ್ದಂತೆ ಜನರು ಸೇರಿದ್ದು, ಆರೋಪಿ ಅಪ್ರಾಪ್ತ ಯುವಕನನ್ನು ಕಾರಿನಿಂದ ಹೊರಗೆಳೆದು ಥಳಿಸಿದ್ದಾರೆ. ಆನಂತರ, ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದರು.
ಆರೋಪಿ ಇದೇ ಸಾಲಿನಲ್ಲಿ ದ್ವಿತೀಯ ಪಿಯುಸಿ ಪೂರೈಸಿದ್ದು, 17.6 ವರ್ಷದವನಾಗಿದ್ದು ಅತ್ತ ಅಪ್ರಾಪ್ತನೂ ಅಲ್ಲದ, ಇತ್ತ ಪ್ರಾಪ್ತನೂ ಅಲ್ಲದ ಯುವಕ. ತನ್ನ ಗೆಳೆಯರೊಂದಿಗೆ ಪಬ್ ಒಂದರಲ್ಲಿ ನಡುರಾತ್ರಿ ವರೆಗೂ ಪಾರ್ಟಿ ಮಾಡಿದ್ದ. ಪಾರ್ಟಿ ಮುಗಿಸಿದ ಬಳಿಕ ಇನ್ನೂ ನೋಂದಣಿಯಾಗದ ಹೊಸತಾದ ಪೋರ್ಶೆ ಕಾರಿನಲ್ಲಿ ಹುಡುಗ ಮನೆಯ ಕಡೆ ಹೊರಟಿದ್ದಾನೆ. ಆದರೆ ಅತಿವೇಗದಲ್ಲಿ ಕಾರನ್ನು ಚಲಾಯಿಸಿದ್ದು ಮುಂದಿನಿಂದ ಸಾಗುತ್ತಿದ್ದ ಬೈಕಿಗೆ ಡಿಕ್ಕಿಯಾಗಿದ್ದಾನೆ. ಡಿಕ್ಕಿಯ ರಭಸಕ್ಕೆ ಬೈಕಿನಲ್ಲಿದ್ದ ಯುವಕ- ಯುವತಿ ರಸ್ತೆಗೆ ಅಪ್ಪಳಿಸಿದ್ದು, ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಘಟನೆಯ ವಿಡಿಯೋ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶಕ್ಕೀಡಾಗಿದೆ.
ಪೊಲೀಸರು ಆರೋಪಿಯನ್ನು ಭಾನುವಾರ ಸಂಜೆ ರಜಾದಿನದ ಕೋರ್ಟಿನಲ್ಲಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ಕುಡಿದು ವಾಹನ ಓಡಿಸಿದ್ದ ಕಾರಣ ಆರೋಪಿಯನ್ನು ಮೇಜರ್ ಎಂದು ಪರಿಗಣಿಸಿ ಕಸ್ಟಡಿಗೆ ನೀಡುವಂತೆ ಕೇಳಿಕೊಂಡಿದ್ದರು. ಆದರೆ ನ್ಯಾಯಾಧೀಶರು ಆರೋಪಿಗೆ ಜಾಮೀನು ನೀಡಿದ್ದಲ್ಲದೆ, ಷರತ್ತಿನ ಪ್ರಕಾರ 15 ದಿನಗಳ ಕಾಲ ಘಟನೆ ನಡೆದ ಯರವಾಡ ಪ್ರದೇಶದಲ್ಲಿ ಟ್ರಾಫಿಕ್ ಪೊಲೀಸರ ಜೊತೆಗೆ ಕೆಲಸ ಮಾಡಬೇಕು. ಅಲ್ಲದೆ, ಅಪಘಾತದ ಬಗ್ಗೆ ಪ್ರಬಂಧ ಬರೆದು ಕೊಡಬೇಕು. ಮಾನಸಿಕ ತಜ್ಞರಿಂದ ಕೌನ್ಸೆಲಿಂಗ್ ಪಡೆದು ಕುಡಿಯುವುದನ್ನು ನಿಲ್ಲಿಸಲು ವೈದ್ಯರಿಂದ ಚಿಕಿತ್ಸೆ ಪಡೆಯಬೇಕು. ಈ ಬಗ್ಗೆ ಕೋರ್ಟಿಗೆ ವರದಿಯನ್ನೂ ಸಲ್ಲಿಸಬೇಕು ಎಂದು ಪೊಲೀಸರಿಗೆ ಸೂಚನೆ ನೀಡಿದ್ದಾರೆ.
ಪೊಲೀಸರು ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 304 (ಉದ್ದೇಶಪೂರ್ವಕವಲ್ಲದ ಕೊಲೆ) ಮತ್ತು ಜುವೆನಿಲ್ ಏಕ್ಟ್ 77 ಮತ್ತು 75 ಪ್ರಕಾರ ಕೇಸುಗಳನ್ನು ದಾಖಲಿಸಿದ್ದರು. ಈ ಏಕ್ಟ್ ಪ್ರಕಾರ, ವೈದ್ಯಕೀಯ ತಪಾಸಣೆಯಲ್ಲಿ ಮದ್ಯ ಸೇವನೆ ದೃಢಪಟ್ಟರೆ ಅಪ್ರಾಪ್ತರಿಗೆ ಲಿಕ್ಕರ್ ನೀಡಿರುವ ಪಬ್ ನವರನ್ನೂ ಆರೋಪಿಯಾಗಿಸಬೇಕಾಗುತ್ತದೆ. ಅಪ್ರಾಪ್ತ ಮಗನಿಗೆ ಲೈಸನ್ಸ್ ಇಲ್ಲದೆ ಕಾರು ಕೊಡಿಸಿರುವ ತಂದೆಯನ್ನೂ ಆರೋಪಿಯಾಗಿಸಿ ತನಿಖೆಗೊಳಪಡಿಸಬೇಕಾಗುತ್ತದೆ. ಕಾರಿನಲ್ಲಿ ರಿಜಿಸ್ಟ್ರೇಶನ್ ನಂಬರ್ ಇಲ್ಲದ ಕಾರಣ ಅದರ ಬಗ್ಗೆಯೂ ತನಿಖೆ ನಡೆಸಬೇಕಾಗುತ್ತದೆ. ಹಾಗಿದ್ದರೂ, ನ್ಯಾಯಾಧೀಶರು ಆರೋಪಿ ಬಗ್ಗೆ ಔದಾರ್ಯ ತೋರಿದ್ದು ಭಾರೀ ಟೀಕೆಗೆ ಕಾರಣವಾಗಿದೆ.
ಶೋಕಿ ಮಾಡಲು ಬಿಟ್ಟು ಪ್ರಭಾವ ಬೀರುತ್ತಾರೆ
ಘಟನೆ ಕುರಿತು ಇಂಗ್ಲಿಷ್ ಪತ್ರಿಕಾ ವರದಿ ಮತ್ತು ಸಾವಿಗೀಡಾದ ಯುವಕರ ಫೋಟೋಗಳನ್ನು ಟ್ವೀಟ್ ಮಾಡಿರುವ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಸಂಚಾರ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್, ನೋಂದಣಿಯಾಗದ ಪೋರ್ಶೆ ಕಾರನ್ನು ಅಪ್ರಾಪ್ತನೊಬ್ಬ ಚಲಾಯಿಸಿ ಇಬ್ಬರ ಸಾವಿಗೆ ಕಾರಣವಾಗಿದ್ದಾನೆ. ಘಟನೆ ಬಗ್ಗೆ ಸೆಕ್ಷನ್ 199 ಪ್ರಕಾರ, ಆರೋಪಿ ತಂದೆಯ ವಿರುದ್ಧವೂ ಕೇಸು ದಾಖಲಿಸಬೇಕು. ಇದಕ್ಕೆ ಮೂರು ವರ್ಷಗಳ ಶಿಕ್ಷೆಯಿದೆ. ಶ್ರೀಮಂತರು ತಮ್ಮ ಮಕ್ಕಳನ್ನು ಸಿರಿವಂತಿಕೆಯ ಪ್ರದರ್ಶನಕ್ಕೆ ಶೋಕಿ ಮಾಡಲು ಬಿಟ್ಟು ಸಮಸ್ಯೆಗಳಾದಾಗ ಪ್ರಭಾವ ಬೀರುತ್ತಾರೆ ಎಂದು ಟೀಕಿಸಿದ್ದಾರೆ.
An unregistered Porsche vehicle driven by a minor, allegedly drunk,kills two youths in Pune on 19 th
— alok kumar (@alokkumar6994) May 20, 2024
Hope action is taken u/s 199a against the guardian too, imprisonment up to 3 yrs
“Filthy rich parents allow kids to flaunt affluence n use their influence later” pic.twitter.com/geHRcCwZm0
Two youngsters died on the spot after a speeding Porsche hit their two-wheeler in Kalyaninagar during the wee hours on Sunday, police said. Officials confirmed that a juvenile was driving the luxury car that caused the horrific accident.
06-05-25 11:23 pm
Bangalore Correspondent
Mysuru, Prison, Arrest, Siddaramaiah: ಬೆಳಗಾವಿ...
06-05-25 09:38 pm
ಓಬಳಾಪುರಂ ಅಕ್ರಮ ಮೈನಿಂಗ್ ಪ್ರಕರಣ ; ಮಾಜಿ ಸಚಿವ ಗಾಲ...
06-05-25 08:18 pm
Hubballi Accident, Sagara, Five Killed: ಹುಬ್ಬ...
06-05-25 01:35 pm
Hassan Suicide, Police Constable Harrasment:...
05-05-25 01:30 pm
06-05-25 02:45 pm
HK News Desk
ಭಾರತ - ಪಾಕ್ ಯುದ್ಧ ಸನ್ನಿವೇಶ ; ದೇಶಾದ್ಯಂತ ಮೇ 7ರಂ...
05-05-25 11:10 pm
ಪಾಕ್ ವಾಯು ಪ್ರದೇಶದಲ್ಲಿ ಭಾರತದ ವಿಮಾನಗಳಿಗೆ ನಿರ್ಬಂ...
30-04-25 06:59 pm
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
06-05-25 06:36 pm
Mangalore Correspondent
Suhas Shetty Murder, Bommai, Dinesh Gundurao:...
06-05-25 06:17 pm
Mangalore, Kodikere Loki Arrest: ಕಮ್ಯುನಲ್ ಕೇಸ...
06-05-25 04:02 pm
Suhas Shetty Murder, Mangalore, Police: ಅಹಿತಕ...
06-05-25 12:32 pm
Mangalore Police, Sharan Pumpwell: ದಕ್ಷಿಣ ಕನ್...
05-05-25 10:59 pm
03-05-25 02:16 pm
Mangalore Correspondent
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm