ಬ್ರೇಕಿಂಗ್ ನ್ಯೂಸ್
11-05-24 03:13 pm HK News Desk ದೇಶ - ವಿದೇಶ
ಭೋಪಾಲ್, ಮೇ.11: ತನ್ನ ಪುಸ್ತಕದಲ್ಲಿ ʼಬೈಬಲ್ʼ ಪದವನ್ನು ಬಳಸಿದ ಕಾರಣಕ್ಕೆ ಬಾಲಿವುಡ್ ನಟಿ ಕರೀನಾ ಕಪೂರ್ ವಿರುದ್ಧ ಮಧ್ಯ ಪ್ರದೇಶ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
2021ರಲ್ಲಿ ನಟಿ ಕರೀನಾ ಕಪೂರ್ ತಮ್ಮ ಗರ್ಭಾವಸ್ಥೆ ಕುರಿತು ಗರ್ಭಧಾರಣೆಯ ಸಮಯ ಮತ್ತು ನಿರೀಕ್ಷಿತ ತಾಯಂದಿರಿಗೆ ಸಲಹೆಗಳನ್ನು ನೀಡುವ ಪುಸ್ತಕವೊಂದನ್ನು ಬರೆದಿದ್ದರು. ಇದಕ್ಕೆ “ಕರೀನಾ ಕಪೂರ್ ಖಾನ್ಸ್ ಪ್ರೆಗ್ನೆನ್ಸಿ ಬೈಬಲ್” ಎನ್ನುವ ಟೈಟಲ್ ಇಟ್ಟಿದ್ರು.
ಪುಸ್ತಕದಲ್ಲಿನ ಬೈಬಲ್ ಪದ ಬಳಕೆಗೆ ಆಕ್ಷೇಪಿಸಿ ಜಬಲ್ಪುರ್ ನಿವಾಸಿ ಕ್ರಿಸ್ಟೋಫರ್ ಅಂಥೋನಿ ಎನ್ನುವವರು ಅರ್ಜಿ ಸಲ್ಲಿಸಿದ್ದಾರೆ. ಕರೀನಾ ಕಪೂರ್ ಖಾನ್ ಹಾಗೂ ಪುಸ್ತಕ ಮಾರಾಟಗಾರರ ವಿರುದ್ಧ ಪ್ರಕರಣ ದಾಖಲಿಸುವಂತೆ ಕ್ರಿಸ್ಟೋಫರ್ ಆಂಥೋನಿ ಒತ್ತಾಯಿಸಿದ್ದಾರೆ. ಪುಸ್ತಕದ ಶೀರ್ಷಿಕೆಯಲ್ಲಿ “ಬೈಬಲ್” ಪದವನ್ನು ಏಕೆ ಬಳಸಲಾಗಿದೆ ಎಂಬುದರ ಕುರಿತು ನ್ಯಾಯಾಲಯ ನಟಿಯಿಂದ ಪ್ರತಿಕ್ರಿಯೆ ಕೇಳಿ ನ್ಯಾ. ಗುರುಪಲ್ ಸಿಂಗ್ ಅಹ್ಲುವಾಲಿಯಾ ಅವರಿದ್ದ ಪೀಠ ನಟಿಗೆ ನೋಟಿಸ್ ಜಾರಿ ಮಾಡಿದೆ.
ಪುಸ್ತಕದಲ್ಲಿನ ʼಬೈಬಲ್ʼ ಪದ ಬಳಕೆಯು ಕ್ರಿಶ್ಚಿಯನ್ ಸಮುದಾಯದ ಭಾವನೆಗೆ ಧಕ್ಕೆ ತಂದಿದೆ ಎಂದು ಅರ್ಜಿದಾರ ಕ್ರಿಸ್ಟೋಫರ್ ಅಂಥೋನಿ ಉಲ್ಲೇಖಿಸಿದ್ದಾರೆ.
“ಬೈಬಲ್ ಪ್ರಪಂಚದಾದ್ಯಂತದ ಕ್ರಿಶ್ಚಿಯನ್ ಧರ್ಮದ ಪವಿತ್ರ ಗ್ರಂಥ. ಇದನ್ನು ಕರೀನಾ ಕಪೂರ್ ಗರ್ಭಧಾರಣೆಯನ್ನು ಬೈಬಲ್ ನೊಂದಿಗೆ ಹೋಲಿಸುವುದು ತಪ್ಪು” ಎಂದು ಕ್ರಿಸ್ಟೋಫರ್ ಹೇಳಿದ್ದಾರೆ.
ನಟಿ ತನ್ನ ಪುಸ್ತಕಕ್ಕೆ “ಅಗ್ಗದ ಪ್ರಚಾರ” ವನ್ನು (ಚೀಪ್ ಪಬ್ಲಿಸಿಟಿ) ಪಡೆಯಲು ಈ ಪದವನ್ನು ಬಳಸಿದ್ದಾರೆ ಎಂದು ಅವರು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

ಅರ್ಜಿದಾರರು ಮೊದಲು ನಟಿಯ ವಿರುದ್ಧ ಎಫ್ಐಆರ್ ದಾಖಲಿಸಲು ಪೊಲೀಸರನ್ನು ಸಂಪರ್ಕಿಸಿದ್ದರು ಆದರೆ ಅವರು ಪ್ರಕರಣವನ್ನು ದಾಖಲಿಸಲು ನಿರಾಕರಿಸಿದಾಗ, ನಟಿಯ ವಿರುದ್ಧ ದೂರು ದಾಖಲಿಸಲು ಕೆಳ ನ್ಯಾಯಾಲಯಕ್ಕೆ ತೆರಳಿ ಇರುವುದಾಗಿ ಹೇಳಿದ್ದಾರೆ.
ಇದಾದ ಬಳಿಕ ಮ್ಯಾಜಿಸ್ಟ್ರೇಟ್ ಕೋರ್ಟ್ನಲ್ಲಿ ಪ್ರಕರಣ ದಾಖಲಿಸಿದ್ದರು. ಆದರೆ ಅಲ್ಲಿ ʼಬೈಬಲ್ʼ ಎನ್ನುವ ಪದವು ಹೇಗೆ ಕ್ರಿಶ್ಚಿಯನ್ ಸಮುದಾಯದ ಭಾವನೆಗೆ ಹೇಗೆ ಧಕ್ಕೆ ಆಗುತ್ತದೆ ಎಂದು ಕೋರ್ಟ್ ಕೇಳಿತ್ತು. ಆದರೆ ಅದಕ್ಕೆ ಉತ್ತರಿಸಲು ಅರ್ಜಿದಾರ ವಿಫಲರಾದ ಕಾರಣಕ್ಕೆ ಅವರ ಅರ್ಜಿ ವಜಾ ಆಗಿತ್ತು. ಇದಾದ ಬಳಿಕ ಅವರು ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ಮೆಟ್ಟಿಲು ಏರಿದ್ದರು. ಇಲ್ಲೂ ಕೂಡ ಪರಿಹಾರ ಕಾಣದ ಹಿನ್ನೆಲೆ ಅವರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಈ ಕುರಿತು ನಟಿಗೆ ನೋಟಿಸ್ ಜಾರಿ ಮಾಡಿರುವ ನ್ಯಾಯಾಲಯ ಪ್ರಕ್ರಿಯೆ ಶುಲ್ಕವನ್ನು ಆರ್ಎಡಿ ಮೋಡ್ನಲ್ಲಿ ಪಾವತಿಸಲು ನೋಡಿಸ್ ನೀಡಿದ್ದು, ಇದನ್ನು ಏಳು ದಿನಗಳಲ್ಲಿ ಪಾವತಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ.
The Madhya Pradesh High Court issued a notice to Bollywood actor Kareena Kapoor Khan on a petition against her new pregnancy memoir "Kareena Kapoor Khan's Pregnancy Bible." The notice was issued after an advocate approached the court against the use of the word "bible" in the book's title.
21-11-25 05:25 pm
HK News Desk
ವಾಹನ ಸವಾರರಿಗೆ ಗುಡ್ ನ್ಯೂಸ್ ; ಮತ್ತೆ 50% ದಂಡ ವ...
21-11-25 10:19 am
CM. Siddaramaiah, CM SEAT: ಯಾವ ಕ್ರಾಂತಿಯೂ ಇಲ್ಲ...
20-11-25 03:30 pm
DK Suresh, CM Siddaramaiah : ಸಿಎಂ ಕುರ್ಚಿ ಕ್ಲೈ...
20-11-25 03:01 pm
ಆನೇಕಲ್ ನಲ್ಲಿ ಕಚಡಾ ಡಾಕ್ಟರ್ ; ಇನ್ಪೆಕ್ಟರ್ ಅಮಾನತಿ...
19-11-25 02:16 pm
21-11-25 06:10 pm
HK News Desk
ಶಬರಿಮಲೆ ಚಿನ್ನ ಲೂಟಿ ಪ್ರಕರಣ ; ಕೊನ್ನಿ ಕ್ಷೇತ್ರದ ಸ...
21-11-25 02:26 pm
ಶ್ರೀಲಂಕಾದಲ್ಲಿ ನ್ಯೂಜಿಲೆಂಡ್ ಮಹಿಳೆಯ ಜೊತೆ ಯುವಕನ ಅ...
19-11-25 06:47 pm
ಕೆಂಪು ಕೋಟೆ ಬ್ಲಾಸ್ಟ್ ಕೇಸ್ ; ಅಲ್ ಫಲಾಹ್ ವಿವಿಗೆ ಸ...
19-11-25 11:10 am
ಬಾಂಗ್ಲಾದಲ್ಲಿ ವಿದ್ಯಾರ್ಥಿಗಳ ಮಾರಣ ಹೋಮಕ್ಕೆ ಅವರೇ ಕ...
17-11-25 10:58 pm
21-11-25 10:39 pm
Mangalore Correspondent
ನವೆಂಬರ್ 23ರಿಂದ ಪ್ರತಿ ವಾರ 'ಸಂಸದ್ ಖೇಲ್ ಮಹೋತ್ಸವ'...
21-11-25 10:03 pm
ಸುರತ್ಕಲ್- ನಂತೂರು- ಬಿಸಿ ರೋಡ್ ಹೆದ್ದಾರಿ ಎನ್ಎಚ...
21-11-25 09:55 pm
Snake Bite, Mangalore, Detection Kit: ಹಾವು ಕಚ...
21-11-25 08:45 pm
ಮಾನಸಿಕ ಖಿನ್ನತೆ ; ಶಿಕ್ಷಕಿ ತಾಯಿಯನ್ನು ಕಾಲೇಜು ಬಿಟ...
20-11-25 10:48 pm
21-11-25 11:07 pm
Bangalore Correspondent
ಮಲ್ಪೆ ಶಿಪ್ ಯಾರ್ಡ್ ನಿಂದ ಪಾಕಿಸ್ತಾನಕ್ಕೆ ಮಾಹಿತಿ ಸ...
21-11-25 05:11 pm
ಬೆಂಗಳೂರು ಎಟಿಎಂ ಹಣ ದರೋಡೆ ಪ್ರಕರಣ ; ತಿರುಪತಿಯಲ್ಲಿ...
20-11-25 10:53 pm
BMR Group Fraud, Money, Mangalore, Surathkal:...
20-11-25 06:01 pm
Bangalore ATM Van Robbery, Update: ಬೆಂಗಳೂರಿನ...
20-11-25 11:51 am