Cyber crime, gold biscut: ಸೈಬರ್ ವಂಚಕನಿಗೆ ಸೇರಿದ ಬ್ಯಾಂಕ್ ಲಾಕರಿನಲ್ಲಿತ್ತು 19.5 ಕೇಜಿ ಚಿನ್ನದ ಬಿಸ್ಕತ್ತು ! ವಿದೇಶಿ ಆನ್ಲೈನ್ ಗೇಮ್ ಹೆಸರಲ್ಲಿ ಹವಾಲಾ ಜಾಲ ಪತ್ತೆ

07-05-24 10:26 pm       HK News Desk   ದೇಶ - ವಿದೇಶ

ಇತ್ತೀಚೆಗೆ ದೆಹಲಿ ಏರ್ಪೋರ್ಟ್ ನಲ್ಲಿ ಬಲೆಗೆ ಬಿದ್ದಿದ್ದ ಸೈಬರ್ ವಂಚಕನಿಗೆ ಸೇರಿದ ಬ್ಯಾಂಕ್ ಲಾಕರನ್ನು ಇಡಿ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ 14 ಕೋಟಿ ಮೌಲ್ಯದ 19.5 ಕೇಜಿ ಚಿನ್ನದ ರಾಶಿ ಪತ್ತೆಯಾಗಿದೆ.

ನವದೆಹಲಿ, ಮೇ.7: ಇತ್ತೀಚೆಗೆ ದೆಹಲಿ ಏರ್ಪೋರ್ಟ್ ನಲ್ಲಿ ಬಲೆಗೆ ಬಿದ್ದಿದ್ದ ಸೈಬರ್ ವಂಚಕನಿಗೆ ಸೇರಿದ ಬ್ಯಾಂಕ್ ಲಾಕರನ್ನು ಇಡಿ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ 14 ಕೋಟಿ ಮೌಲ್ಯದ 19.5 ಕೇಜಿ ಚಿನ್ನದ ರಾಶಿ ಪತ್ತೆಯಾಗಿದೆ.

ಪಶ್ಚಿಮ ದೆಹಲಿಯ ಮೋತಿ ನಗರ್ ಪ್ರದೇಶದ ನಿವಾಸಿ ಪುನೀತ್ ಕುಮಾರ್ ಸೈಬರ್ ವಂಚಕನಾಗಿದ್ದು, ಎಪ್ರಿಲ್ 3ರಂದು ವಿದೇಶದಿಂದ ಬಂದಿದ್ದಾಗ ಅಧಿಕಾರಿಗಳು ವಿಮಾನ ನಿಲ್ದಾಣದಲ್ಲಿ ಅರೆಸ್ಟ್ ಮಾಡಿದ್ದರು. ಹರ್ಯಾಣದ ಫರೀದಾಬಾದ್ ನಗರದ ಇಂಡಿಯನ್ ಬ್ಯಾಂಕ್ ಶಾಖೆಯಲ್ಲಿ ಪುನೀತ್ ಕುಮಾರ್ ತನ್ನ ತಾಯಿ ಹೆಸರಲ್ಲಿ ಲಾಕರ್ ತೆರೆದಿದ್ದು, ಅದರಲ್ಲಿ 19.5 ಕೇಜಿ ಚಿನ್ನಾಭರಣದ ರಾಶಿ ಪತ್ತೆಯಾಗಿದೆ.

ಪುನೀತ್ ಕುಮಾರ್ ಮತ್ತು ಸಹಚರರು ಸೇರಿ ವಿದೇಶಿ ಆನ್ಲೈನ್ ಗೇಮ್ ಗಳನ್ನು ಭಾರತದಲ್ಲಿ ಕಾರ್ಯಾಚರಿಸುವಂತೆ ಮಾಡುತ್ತಿದ್ದರು. ದೆಹಲಿಯ ಆಶಿಷ್ ಕಕ್ಕರ್, ಕೇಶವ್ ಸೂದ್, ಶಿವ್ ದರ್ಗಾರ್ ಸೇರಿದಂತೆ ಹಲವು ಅಪರಿಚಿತ ಸೈಬರ್ ವಂಚಕರು ಸೇರಿಕೊಂಡು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹವಾಲಾ ಜಾಲ ಮತ್ತು ಹಣಕಾಸು ವರ್ಗಾವಣೆ ದಂಧೆಯಲ್ಲಿ ತೊಡಗಿದ್ದರು. ಅಮೆರಿಕ, ಯುಎಇ, ಹಾಂಕಾಂಗ್, ಚೈನಾ, ಸಿಂಗಾಪುರ್, ಮಲೇಶ್ಯಾ, ಮಾರಿಷಸ್ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಇವರ ಜಾಲ ಕಾರ್ಯಾಚರಣೆಯಲ್ಲಿದೆ. ಪುನೀತ್ ಕುಮಾರ್ ಬಂಧನವಾದ ಒಂದು ತಿಂಗಳ ನಂತರ ಬ್ಯಾಂಕ್ ಲಾಕರುಗಳಲ್ಲಿ ಚಿನ್ನದ ರೂಪದಲ್ಲಿ ಹೂಡಿಕೆ ಮಾಡಿದ್ದಾನೆಂಬ ಮಾಹಿತಿ ಲಭಿಸಿತ್ತು. ಅದರಂತೆ, ಕಾರ್ಯಾಚರಣೆ ನಡೆಸಿದಾಗ ಚಿನ್ನದ ಬಿಸ್ಕತ್ತುಗಳಿದ್ದ ಲಾಕರ್ ಪತ್ತೆಯಾಗಿದೆ.

ನಿಷೇಧಿತ ಆನ್ಲೈನ್ ಗೇಮಿಂಗ್ ಏಪ್ ಗಳನ್ನು ಇವರು ಭಾರತದಲ್ಲಿ ಕಾನೂನು ಬಾಹಿರವಾಗಿ ಕಾರ್ಯಾಚರಿಸುವಂತೆ ಮಾಡುತ್ತಿದ್ದರು. ಅದರ ನೈಜ ಮಾಹಿತಿಯನ್ನು ಮುಚ್ಚಿಟ್ಟು ಬೇನಾಮಿ ಹೆಸರಲ್ಲಿ ಏಪ್ ಬಳಕೆಯಾಗುವಂತೆ ನೋಡಿಕೊಂಡಿದ್ದರು. ಅದಕ್ಕಾಗಿ ಸಾಕಷ್ಟು ಹಣವನ್ನು ಪೂರೈಕೆ ಮಾಡಿ, ಭಾರತೀಯರು ವೆಬ್ ಸೈಟ್ ಬಳಸುತ್ತಿದ್ದರು. ಆನ್ಲೈನ್ ವಂಚನೆಯನ್ನು ಪತ್ತೆ ಮಾಡುವುದಕ್ಕಾಗಿ ಇಡಿಯಿಂದ ವಿಶೇಷ ತನಿಖಾ ತಂಡವನ್ನು ನೇಮಕ ಮಾಡಲಾಗಿತ್ತು.

The Directorate of Enforcement (ED) on Monday claimed to have seized 19.5 kg gold valued at Rs 14.04 crore from the bank locker of an accused being maintained in Faridabad.