Solapur Lok Sabha Constituency, Maharashtra, EVM Machine: ಮತಗಟ್ಟೆಯಲ್ಲಿ ಇವಿಎಂ ಮೆಶಿನ್ನಿಗೆ ಬೆಂಕಿ ಹಚ್ಚಿದ ಮತದಾರ ; ಕಾರಣ ಕೇಳಿದ್ರೆ ಶಾಕ್ ಆಗ್ತೀರಾ..! 

07-05-24 08:38 pm       HK News Desk   ದೇಶ - ವಿದೇಶ

ಮತಯಂತ್ರವನ್ನು ಮತಗಟ್ಟೆಗೆ ತರುವುದು ತಡವಾಗಿದ್ದರಿಂದ ಆಕ್ರೋಶಗೊಂಡ ಮತದಾರನೊಬ್ಬ ಪೆಟ್ರೋಲ್ ಸುರಿದು ಇವಿಎಂ ಮೆಶಿನ್ ಗೆ ಬೆಂಕಿ ಹಚ್ಚಿದ ಘಟನೆ ಸೊಲ್ಲಾಪುರ ಜಿಲ್ಲೆಯ ಸಂಗೋಳ ತಾಲ್ಲೂಕಿನ ಬಾದಲವಾಡಿಯಲ್ಲಿ ನಡೆದಿದೆ. 

ಮುಂಬೈ, ಮೇ.7: ಮತಯಂತ್ರವನ್ನು ಮತಗಟ್ಟೆಗೆ ತರುವುದು ತಡವಾಗಿದ್ದರಿಂದ ಆಕ್ರೋಶಗೊಂಡ ಮತದಾರನೊಬ್ಬ ಪೆಟ್ರೋಲ್ ಸುರಿದು ಇವಿಎಂ ಮೆಶಿನ್ ಗೆ ಬೆಂಕಿ ಹಚ್ಚಿದ ಘಟನೆ ಸೊಲ್ಲಾಪುರ ಜಿಲ್ಲೆಯ ಸಂಗೋಳ ತಾಲ್ಲೂಕಿನ ಬಾದಲವಾಡಿಯಲ್ಲಿ ನಡೆದಿದೆ. 

ಮಾದ ಲೋಕಸಭಾ ಕ್ಷೇತ್ರದ ಸಂಗೋಳ ತಾಲೂಕಿನ ಬಾಗಲವಾಡಿಯ ಮತಗಟ್ಟೆಯಲ್ಲಿ ಘಟನೆ ನಡೆದಿದೆ. ಸಿಬಂದಿ ನೀರು ಹಾಕಿ ಬೆಂಕಿ ನಂದಿಸುವ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ. 

ಆಕ್ರೋಶಿತ ಮತದಾರನೊಬ್ಬ ಇವಿಎಂ ಯಂತ್ರಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಯತ್ನಿಸಿದ್ದು ತಕ್ಷಣ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಘಟನೆಯಿಂದಾಗಿ ಮತದಾನ ಪ್ರಕ್ರಿಯೆ ಕೆಲ ಸಮಯ ನಿಲ್ಲಿಸಲಾಗಿತ್ತು. ಹೊಸ ಇವಿಎಂ ಯಂತ್ರ ಬಂದ ನಂತರ ಮತದಾನ ಪ್ರಕ್ರಿಯೆ ಮುಂದುವರೆಯಿತು. ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಮತಗಟ್ಟೆಯಲ್ಲಿ ಬೆಂಕಿ ಉಂಟಾಗಿದ್ದನ್ನು ತಿಳಿದು ಜನರು ಗೊಂದಲಕ್ಕೆ ಒಳಗಾಗಿದ್ದಾರೆ. ಈ ವೇಳೆ, ಮತಗಟ್ಟೆ ಸಿಬಂದಿ ನೀರನ್ನು ಬಳಸಿ ಇವಿಎಂನಲ್ಲಿ ಬೆಂಕಿಯನ್ನು ನಂದಿಸಲು ಪ್ರಯತ್ನಿಸುತ್ತಿರುವುದು ವಿಡಿಯೋದಲ್ಲಿದೆ. ಘಟನೆಯಿಂದಾಗಿ ಹೊಸ ಯಂತ್ರ ತರುವ ವರೆಗೆ ಕೆಲಕಾಲ ಮತದಾನ ಸ್ಥಗಿತಗೊಳಿಸಬೇಕಾಯಿತು. ಸಂಗೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

While the polling process was going smoothly on Tuesday in Maharashtra's Solapur Lok Sabha constituency, a voter set the electronic voting machine (EVM) on fire by pouring petrol on it.