ಬ್ರೇಕಿಂಗ್ ನ್ಯೂಸ್
03-05-24 10:58 pm HK News Desk ದೇಶ - ವಿದೇಶ
ಕೊಲ್ಕತ್ತಾ, ಮೇ.3: ಪಶ್ಚಿಮ ಬಂಗಾಳ ರಾಜ್ಯಪಾಲ ಸಿ.ವಿ. ಆನಂದ್ ಬೋಸ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿದೆ. ರಾಜಭವನದಲ್ಲಿ ಕೆಲಸಕ್ಕಿರುವ ಮಹಿಳೆಯೇ ತನ್ನ ಮೇಲೆ ಕಿರುಕುಳ ನೀಡಿದ್ದಾರೆಂದು ಪೊಲೀಸರಿಗೆ ದೂರು ನೀಡಿದ್ದಾರೆ. ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಈ ರೀತಿಯ ಆರೋಪ ಕೇಳಿಬಂದಿರುವುದು ಟಿಎಂಸಿ ಮತ್ತು ಬಿಜೆಪಿ ನಡುವೆ ಗಂಭೀರ ಕೆಸರೆರಚಾಟಕ್ಕೆ ಕಾರಣವಾಗಿದೆ.
ಮಹಿಳೆ ನೀಡಿದ ದೂರಿನಲ್ಲಿ ಎಪ್ರಿಲ್ 19ರಂದು ಮೊದಲ ಬಾರಿಗೆ ಗವರ್ನರ್ ನನ್ನನ್ನು ಅವರ ಕಚೇರಿಗೆ ಬರಲು ಹೇಳಿದ್ದರು. ಎಪ್ರಿಲ್ 24ರಂದು ಮಧ್ಯಾಹ್ನ ಕಚೇರಿಗೆ ತೆರಳಿದ್ದಾಗ, ಮುಟ್ಟ ಬಾರದ ಜಾಗವನ್ನು ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದರು. ಬೋಸ್ ಆನಂತರ ಕರೆ ಮಾಡಿ, ಮೇ 2ರಂದು ಕಚೇರಿಗೆ ಬರಲು ಹೇಳಿದ್ದರು. ಹೆದರಿಕೆಯಿಂದಾಗಿ ಮೇಲಧಿಕಾರಿಯ ಜೊತೆಗೆ ಅವರ ಚೇಂಬರಿಗೆ ಹೋಗಿದ್ದೆ. ಮೇಲಧಿಕಾರಿ ಹೊರ ಹೋದ ಬಳಿಕ ನನ್ನ ಗಲ್ಲವನ್ನು ಮುಟ್ಟಿ ಪ್ರಮೋಷನ್ ನೀಡುವುದಾಗಿ ಹೇಳಿ ಕಿರುಕುಳ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಈ ಹಿಂದೆಯೂ ರಾಜಭವನ ಕಚೇರಿಯಲ್ಲಿ ಮಹಿಳೆಯೊಬ್ಬರು ಇದೇ ರೀತಿಯ ಆರೋಪವನ್ನು ಮಾಡಿದ್ದರು. ನಾನು ಕಂಟ್ರಾಕ್ಟ್ ಆಧಾರದಲ್ಲಿ ಕೆಲಸಕ್ಕಿರುವುದರಿಂದ ದೂರು ನೀಡುವುದಕ್ಕೆ ಹೆದರಿದ್ದೆ. ಕೆಲಸ ಕಳಕೊಳ್ಳುವ ಭಯದಲ್ಲಿ ದೂರು ನೀಡಿರಲಿಲ್ಲ ಎಂದು ಮಹಿಳೆ ಮಾತನಾಡಿರುವ ವಿಡಿಯೋ ವೈರಲ್ ಆಗಿದೆ. ಪೊಲೀಸರು ಆಕೆಯ ಹೇಳಿಕೆಯನ್ನು ದಾಖಲಿಸಿದ್ದು, ಎಫ್ಐಆರ್ ದಾಖಲು ಮಾಡಿಲ್ಲ. ರಾಜ್ಯಪಾಲರ ವಿರುದ್ಧ ಪೊಲೀಸರಿಗೆ ಕೇಸು ದಾಖಲಿಸುವ ಅಧಿಕಾರ ಇರುವುದಿಲ್ಲ. ರಾಜಭವನದ ಸಂಪೂರ್ಣ ಅಧಿಕಾರ ರಾಜ್ಯಪಾಲರಿಗೆ ಇರುತ್ತದೆ. ರಾಜಭವನ ವ್ಯಾಪ್ತಿಯಲ್ಲಿ ಯಾವುದೇ ಅಪರಾಧ ಬಗ್ಗೆ ತನಿಖೆ ನಡೆಸುವುದಿದ್ದರೂ ಸೆಕ್ಷನ್ 361 ಪ್ರಕಾರ ರಾಜ್ಯಪಾಲರ ಅನುಮತಿ ಬೇಕಿರುತ್ತದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹೀಗಾಗಿ ಕಾನೂನು ತಜ್ಞರ ಮೊರೆ ಹೋಗಲು ಪೊಲೀಸರು ನಿರ್ಧರಿಸಿದ್ದಾರೆ.
ಇದೇ ವೇಳೆ, ರಾಜಭವನದಿಂದ ಹೇಳಿಕೆಯನ್ನು ಬಿಡುಗಡೆ ಮಾಡಲಾಗಿದ್ದು ಸತ್ಯ ಸತ್ಯವೇ ಆಗಿರುತ್ತದೆ. ಸುಳ್ಳಿನ ಕಂತೆಯ ಆರೋಪಗಳನ್ನು ನಿರಾಕರಿಸುತ್ತೇನೆ. ಯಾರಾದ್ರೂ ನನ್ನ ತೇಜೋವಧೆ ಮಾಡುವ ಮೂಲಕ ರಾಜಕೀಯ ಲಾಭದ ಆಸೆ ಇಟ್ಟುಕೊಂಡಿದ್ದರೆ ದೇವರು ಒಳ್ಳೆದು ಮಾಡಲಿ. ಆದರೆ ಭ್ರಷ್ಟಾಚಾರ ಮತ್ತು ಪಶ್ಚಿಮ ಬಂಗಾಳದಲ್ಲಿ ಹಿಂಸೆಯನ್ನು ತಡೆಯುವ ನನ್ನ ಹೋರಾಟವನ್ನು ನಿಲ್ಲಿಸಲಾಗದು ಎಂದು ರಾಜ್ಯಪಾಲರು ಪ್ರತಿಕ್ರಿಯಿಸಿದ್ದಾರೆ. ಇದಲ್ಲದೆ, ರಾಜಭವನದ ನೌಕರರು ಹೇಳಿಕೆ ನೀಡಿದ್ದು, ಇಬ್ಬರು ಮಹಿಳೆಯರ ದೂರಿನಲ್ಲಿ ರಾಜಕೀಯ ಲಾಭದ ವಾಸನೆ ಇದೆ. ಅವರು ರಾಜಕೀಯ ಪಕ್ಷಗಳ ಏಜೆಂಟರು ಎಂದಿದ್ದಾರೆ. ಇದೇ ಸಂದರ್ಭದಲ್ಲಿ ರಾಜಭವನಕ್ಕೆ ಪೊಲೀಸರ ಪ್ರವೇಶವನ್ನು ನಿರ್ಬಂಧಿಸಿ ರಾಜ್ಯಪಾಲರು ಆದೇಶ ಮಾಡಿದ್ದಾರೆ.
A Raj Bhavan employee complained of molestation against state governor C V Ananda Bose on Thursday evening, introducing an element of the unprecedented in Bengal politics and pitting the Trinamool government and the governor's office in direct conflict in the middle of a seven-phase election season.
16-08-25 10:03 pm
Bangalore Correspondent
ಸೆ.9ರಂದು ಉಪ ರಾಷ್ಟ್ರಪತಿ ಚುನಾವಣೆ ; ಬಿಹಾರ ರಾಜ್ಯಪ...
16-08-25 09:58 pm
Dharmasthala, Eshwar kandre: ಧರ್ಮಸ್ಥಳ ತಲೆಬುರು...
16-08-25 09:15 pm
BJP, Dharmasthala, DK Shivakumar, SIT Probe:...
16-08-25 08:05 pm
ಧರ್ಮಸ್ಥಳ ಪ್ರಕರಣದಲ್ಲಿ ಸುಳ್ಳು ಹೇಳಿ, ಅಪಪ್ರಚಾರ ಮಾ...
15-08-25 10:29 pm
17-08-25 09:09 pm
HK News Desk
ಜಮ್ಮು, ಕಾಶ್ಮೀರದಲ್ಲಿ ಮತ್ತೆ ಮೇಘ ಸ್ಫೋಟ, ಏಳು ಮಂದಿ...
17-08-25 03:02 pm
ಭಾರತಕ್ಕೆ ಮರಳಿದ ಗಗನಯಾತ್ರಿ ಶುಭಾಂಶು ಶುಕ್ಲಾ ; ದೆಹ...
17-08-25 12:54 pm
Dharmasthala, Dk Shivakumar, Pralhad Joshi: ಧ...
16-08-25 03:34 pm
ಕೆಂಪುಕೋಟೆಯಲ್ಲಿ ಸತತ 12ನೇ ಬಾರಿಗೆ ಸ್ವಾತಂತ್ರ್ಯೋತ್...
15-08-25 08:46 pm
17-08-25 11:06 pm
Mangalore Correspondent
Mangalore Rain, School Holiday: ಚಂಡಮಾರುತಕ್ಕೆ...
17-08-25 10:50 pm
Mangalore, Thokottu, Police: ತೊಕ್ಕೊಟ್ಟು ಮೊಸರು...
17-08-25 05:26 pm
Mangalore, Talapady Toll Plaza Fight: ಟೋಲ್ ತಪ...
17-08-25 04:13 pm
Landslide at Shiradi Ghat: ಭಾರೀ ಮಳೆಗೆ ಶಿರಾಡಿ...
16-08-25 11:11 pm
17-08-25 10:07 pm
Mangalore Correspondent
Mangalore Police, Drugs, Arrest: ಗಾಂಜಾ ಸೇವನೆ...
16-08-25 10:49 pm
Bengaluru Woman Hurls Abuses at Traffic Cops:...
16-08-25 07:06 pm
ಉತ್ತರ ಪ್ರದೇಶದಲ್ಲಿ ಮತ್ತೊಂದು ಮತಾಂತರ ಜಾಲ ; ಹಿಂದು...
16-08-25 11:25 am
Gold Robbery, Mangalore, Kerala: ಕೇರಳದ ಚಿನ್ನದ...
16-08-25 10:20 am