Arvind Kejriwals, Supreme Court: ಬದುಕು ಮತ್ತು ಸ್ವಾತಂತ್ರ್ಯ ಮೂಲಭೂತ ಹಕ್ಕು, ಲೋಕಸಭೆ ಚುನಾವಣೆ ಹೊತ್ತಲ್ಲೇ ಕೇಜ್ರಿವಾಲ್ ಬಂಧಿಸಿದ್ದು ಏಕೆ ? ಅರವಿಂದ ಕೇಜ್ರಿವಾಲ್ ಬಂಧನದ ಬಗ್ಗೆ ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಪ್ರಶ್ನೆ

30-04-24 11:02 pm       HK News Desk   ದೇಶ - ವಿದೇಶ

ಅಬಕಾರಿ ನೀತಿ ಅವ್ಯವಹಾರ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಲೋಕಸಭಾ ಚುನಾವಣೆ ವೇಳೆಯಲ್ಲಿ ಬಂಧಿಸಿದ ಕ್ರಮವನ್ನು ಸುಪ್ರೀಂ ಕೋರ್ಟ್ ಪ್ರಶ್ನೆ ಮಾಡಿದೆ.

ನವದೆಹಲಿ, ಎ.30: ಅಬಕಾರಿ ನೀತಿ ಅವ್ಯವಹಾರ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಲೋಕಸಭಾ ಚುನಾವಣೆ ವೇಳೆಯಲ್ಲಿ ಬಂಧಿಸಿದ ಕ್ರಮವನ್ನು ಸುಪ್ರೀಂ ಕೋರ್ಟ್ ಪ್ರಶ್ನೆ ಮಾಡಿದೆ.

ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರಿದ್ದ ನ್ಯಾಯಪೀಠವು ಸಾಲಿಸಿಟರ್ ಜನರಲ್ ಎಸ್.ವಿ. ರಾಜು ಅವರನ್ನು ಈ ಕುರಿತು ಪ್ರಶ್ನೆ ಮಾಡಿದ್ದು, ಸಾಕ್ಷಿದಾರರ ಹೇಳಿಕೆ ಅನುಸರಿಸಿ ಬಂಧಿಸುವುದಾದರೆ ಕಳೆದ ಜೂನ್ ತಿಂಗಳಲ್ಲಿಯೇ ಬಂಧಿಸಬೇಕಿತ್ತು. ಯಾಕೆ ಮಾರ್ಚ್ ತಿಂಗಳ ವರೆಗೆ ಕಾಯಬೇಕಿತ್ತು. ಇಡಿಯವರು ಲೋಕಸಭೆ ಚುನಾವಣೆ ಎದುರಾದ ಸಂದರ್ಭದಲ್ಲಿಯೇ ಯಾಕೆ ಬಂಧಿಸಬೇಕಾಯಿತು ಎಂದು ಪ್ರಶ್ನೆ ಮಾಡಿದೆ.

ಬದುಕು ಮತ್ತು ಸ್ವಾತಂತ್ರ್ಯ ಮನುಷ್ಯನ ಮೂಲಭೂತ ಹಕ್ಕು, ಅದನ್ನು ನೀವು ನಿರಾಕರಿಸುವಂತಿಲ್ಲ. ಜನರಲ್ ಇಲೆಕ್ಷನ್ ಘೋಷಣೆ ಆದ ಹೊತ್ತಲ್ಲೇ ನೀವು ಯಾಕೆ ಅರೆಸ್ಟ್ ಮಾಡಿದ್ರಿ ಎಂದು ಜಾರಿ ನಿರ್ದೇಶನಾಲಯದ ಕ್ರಮವನ್ನು ಕೋರ್ಟ್ ಪ್ರಶ್ನೆ ಮಾಡಿದೆ. ಇಬ್ಬರು ನ್ಯಾಯಾಧೀಶರ ಪೀಠವು ಪ್ರಕರಣದ ವಿಚಾರಣೆಯನ್ನು ನಡೆಸುತ್ತಿದ್ದು, ಸೋಮವಾರದಿಂದ ಮುಂದಿನ ಶುಕ್ರವಾರದ ವರೆಗೂ ಪ್ರತಿದಿನ ವಿಚಾರಣೆ ನಡೆಸುವ ಸಾಧ್ಯತೆಯಿದೆ.

Supreme Court: Latest news, Updates, Photos, Videos and more.

ಅರವಿಂದ ಕೇಜ್ರಿವಾಲ್ ಬಂಧನ ಕ್ರಮವನ್ನು ಪ್ರಶ್ನಿಸಿ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ ಸುಪ್ರೀಂ ಕೋರ್ಟಿನಲ್ಲಿ ಚಾಲೆಂಜ್ ಮಾಡಿದ್ದಾರೆ. ಸೋಮವಾರ ಈ ಕುರಿತು ವಾದ- ಪ್ರತಿವಾದ ನಡೆದಿದ್ದು, ನೀವು ಯಾಕೆ ಕೇಜ್ರಿವಾಲ್ ಪರವಾಗಿ ಜಾಮೀನು ಅರ್ಜಿ ಸಲ್ಲಿಸಿಲ್ಲ ಎಂದು ವಕೀಲರಿಗೆ ಸುಪ್ರೀಂ ಕೋರ್ಟ್ ಪ್ರಶ್ನೆ ಮಾಡಿತ್ತು. ಬಂಧನ ಕ್ರಮವೇ ತಪ್ಪು. ಹಾಗಾಗಿ ಜಾಮೀನು ಅರ್ಜಿ ಹಾಕಿಲ್ಲ ಎಂದು ಸಿಂಘ್ವಿ ಸಮರ್ಥನೆ ಮಾಡಿದ್ದಾರೆ.

ಯಾರೋ ಸಾಕ್ಷಿದಾರರು ನೀಡಿದ ಹೇಳಿಕೆ ಅನುಸರಿಸಿ ಬಂಧಿಸಿದ್ದಾರೆಂದು ಇಡಿಯವರು ಹೇಳುತ್ತಿದ್ದಾರೆ. ಸಾಕ್ಷಿಯವರು ಹೇಳಿ ಬಂಧಿಸುವುದಿದ್ದರೆ, ಹತ್ತು ತಿಂಗಳು ಮೊದಲೇ ಬಂಧನ ಮಾಡಬೇಕಿತ್ತು. ಈಗ ಯಾಕೆ ಮಾಡಿದ್ದಾರೆ. ಸಮನ್ಸ್ ನೀಡಿದ ಮಾತ್ರಕ್ಕೆ ಅಪರಾಧ ಸಾಬೀತು ಪಡಿಸಿದಂತೆ ಆಗಲ್ಲ. ಸಮನ್ಸ್ ವಿಚಾರಣೆಗಷ್ಟೇ ಕರೆಯುವುದು. ಕೇಜ್ರಿವಾಲ್ ಭಯೋತ್ಪಾದಕ ಕೃತ್ಯ ಮಾಡಿದ್ದಾರೆಯೇ.. ದೇಶ ವಿರೋಧಿ ಕೃತ್ಯ ಎಸಗಿ ವಿದೇಶಕ್ಕೆ ಪರಾರಿಯಾಗಿದ್ದಾರೆಯೇ.. ಮುಖ್ಯಮಂತ್ರಿಯಾಗಿರುವ ವ್ಯಕ್ತಿಯನ್ನು ಬಂಧಿಸಿಡುವ ಪ್ರಮೇಯ ಏನಿದೆ ಎಂದು ಪ್ರಶ್ನೆ ಮಾಡಿದ್ದಾರೆ.

ಮಾರ್ಚ್ 21ರಂದು ಅರವಿಂದ ಕೇಜ್ರಿವಾಲ್ ಅವರನ್ನು ಬಂಧಿಸಲಾಗಿತ್ತು. ಬಂಧನ ವಿರುದ್ಧ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಪುರಸ್ಕರಿಸದ ಕಾರಣ ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನೆ ಮಾಡಲಾಗಿತ್ತು. ಆನಂತರ, ಎಪ್ರಿಲ್ 1ರಂದು ಕೇಜ್ರಿವಾಲನ್ನು ಇಡಿ ಕಸ್ಟಡಿಗೆ ಪಡೆದಿದ್ದು ಮೇ 7ರ ವರೆಗೂ ತನಿಖೆಗಾಗಿ ಕಸ್ಟಡಿಯಲ್ಲಿ ಇಟ್ಟುಕೊಂಡಿದೆ. ಸದ್ಯಕ್ಕೆ ಕೇಜ್ರಿವಾಲ್ ದೆಹಲಿಯ ತಿಹಾರ್ ಜೈಲಿನಲ್ಲಿದ್ದಾರೆ. 

Supreme Court on Tuesday questioned financial probe agency Enforcement Directorate (ED) about the timing of Aam Aadmi Party (AAP) chief and Delhi Chief Minister Arvind Kejriwal’s arrest. Seeking a response, the court asked why the arrest was made just before the Lok Sabha election, 2024.