ಬ್ರೇಕಿಂಗ್ ನ್ಯೂಸ್
26-04-24 02:58 pm HK News Desk ದೇಶ - ವಿದೇಶ
ಬಿಹಾರ, ಏ 26: ಬೆಂಕಿ ಅನಾಹುತದಿಂದ ಮದುವೆ ಮನೆ ಅಕ್ಷರಶಃ ಶೋಕದ ಮನೆಯಾಗಿ ಮಾರ್ಪಟ್ಟಿರುವ ಘಟನೆ ನಡೆದಿದೆ. ಮದುವೆ ಮೆರವಣಿಗೆ ಸಂಭ್ರಮದಲ್ಲಿ ಹಚ್ಚಿದ್ದ ಪಟಾಕಿ ಕಿಡಿಯಿಂದ ಆದ ಅಗ್ನಿ ಅನಾಹುತದಲ್ಲಿ ಮೂರು ಜಾನುವಾರು, ನವ ದಂಪತಿ ಸೇರಿ ಆರು ಮಂದಿ ಸಾವನ್ನಪ್ಪಿದ್ದು, ಆರು ಮಂದಿ ಗಾಯಗೊಂಡಿರುವ ಘಟನೆ ದರ್ಬಾಂಗ್ನಲ್ಲಿ ನಡೆದಿದೆ.
ಗುರುವಾರ ರಾತ್ರಿ ಮದುವೆ ಮೆರವಣಿಗೆ ಹಿನ್ನೆಲೆ ಸಂಭ್ರಮದಿಂದ ಪಟಾಕಿ ಹೊಡೆಯಲಾಗಿದ್ದು, ಈ ಬೆಂಕಿ ಕಿಡಿ ಸಿಲಿಂಡರ್ ಮತ್ತು ಡೀಸೆಲ್ ಸಂಗ್ರಹಕ್ಕೆ ಬಿದ್ದ ಪರಿಣಾಮ ಈ ಭಾರಿ ಅನಾಹುತ ಸಂಭವಿಸಿದೆ. ಘಟನೆ ಬೆಳಕಿಗೆ ಬಂದಾಕ್ಷಣ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಅಗ್ನಿ ಶಾಮಕದಳ ಕೂಡ ಬೆಂಕಿ ಆರಿಸುವ ಯತ್ನದಲ್ಲಿ ನಿರತರವಾಯಿತು.
ಬಹೇರಾ ಪೊಲೀಸ್ ಠಾಣೆಯ ಅಂತೋರ್ ಗ್ರಾಮದಲ್ಲಿ ಛಗನ್ ಪಾಸ್ವಾನ್ ಅವರ ಮಗಳ ಮದುವೆ ಸಮಾರಂಭ ಅದ್ದೂರಿಯಾಗಿ ಏರ್ಪಡಿಸಲಾಗಿತ್ತು. ಸಮಾರಂಭದ ಹಿನ್ನೆಲೆ ಮನೆಯ ಪಕ್ಕದಲ್ಲಿ ಅತಿಥಿಗಳು ತಂಗಲು ಮತ್ತು ಊಟದ ವ್ಯವಸ್ಥೆ ಮಾಡಲಾಗಿತ್ತು. ಗುರುವಾರ ರಾತ್ರಿ ಮದುವೆ ದಿಬ್ಬಣ ಬಂದಿದ್ದು, ಅದ್ದೂರಿಯಾಗಿ ಸಂಭ್ರಮಾಚರಣೆ ಸಾಗಿತ್ತು. ಈ ವೇಳೆ ಪಟಾಕಿ ಹೊಡೆಯಾಗಿದ್ದು, ಇದರ ಕಿಡಿ ಹಾಕಿದ್ದ ಶಾಮೀಯಾನದ ಮೇಲೆ ಬಿದ್ದ ಪರಿಣಾಮ ಇಡೀ ಟೆಂಟ್ ಹೊತ್ತಿ ಉರಿದಿದೆ. ಈ ವೇಳೆ ಅಲ್ಲಿಯೇ ಇದ್ದ ಸಿಲಿಂಡರ್ ಮತ್ತು ಡೀಸೆಲ್ ಸಂಗ್ರಹಕ್ಕೂ ಕಿಡಿ ತಗುಲಿದ್ದು, ಭಾರೀ ಅನಾಹುತ ಸಂಭವಿಸಿತು. ನವ ದಂಪತಿ ಸೇರಿ 6 ಮಂದಿ ಸಜೀವ ದಹನ ಆಗಿದ್ದಾರೆ.
ದುರ್ಘಟನೆ ತಿಳಿದಾಕ್ಷಣ ಗ್ರಾಮಸ್ಥರು ಆಗಮಿಸಿ ಬೆಂಕಿ ನಿಯಂತ್ರಿಸಲು ಹರಸಾಹಸ ಮಾಡಿದರು. ಆದರೆ, ಸಿಲಿಂಡರ್ ಮತ್ತು ಡೀಸೆಲ್ ಗೆ ಕಿಡಿ ತಗುಲಿದ ಹಿನ್ನಲೆ ಬೆಂಕಿ ಕೆನ್ನಾಲಿಗೆ ಚಾಚಿತು. ಇದರಿಂದ ಮೂರು ಜಾನುವಾರು ಸೇರಿದಂತೆ 6 ಮಂದಿಯನ್ನ ರಕ್ಷಿಸುವ ಯತ್ನವೂ ವಿಫಲವಾಯಿತು.
At least six people were killed and six others injured after a cylinder exploded during a wedding ceremony in Bihar’s Darbhanga on Thursday night, police said on Friday. The incident took place after a major blaze erupted due to bursting fireworks at the wedding in Antor village of the Bahera police station area, they said.
03-05-26 01:30 pm
HK News Staffer
ಶೃಂಗೇರಿ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ; ರಾತ್ರಿಯ...
03-05-26 12:34 pm
2028ರ ಅಸೆಂಬ್ಲಿಯತ್ತ ಕಾಂಗ್ರೆಸ್ ಹೈಕಮಾಂಡ್ ದೃಷ್ಟಿ...
02-05-26 06:35 pm
ತುಮಕೂರಿನಲ್ಲಿ ವಾರದ ಅಂತರದಲ್ಲಿ 44 ನವಿಲು ಸಾವು ; ಬ...
02-05-26 04:48 pm
ಮಲ್ಲಿಕಾnರ್ಜುನ ಖರ್ಗೆ ಸಿಎಂ ಬದಲಾವಣೆ ಇಲ್ಲ ಎಂದಿರುವ...
01-05-26 08:33 pm
03-05-26 05:18 pm
HK News Staffer
ಯುದ್ಧ ನಮ್ಮ ಆಯ್ಕೆಯಲ್ಲ, ಹೇರಲ್ಪಟ್ಟದ್ದು.. ; ಇರಾನ್...
03-05-26 02:35 pm
ದೇಶಾದ್ಯಂತ ಮೊಬೈಲ್ಗಳಿಗೆ ಎಚ್ಚರಿಕೆ ಧ್ವನಿ; ‘ಸೆಲ್...
02-05-26 08:26 pm
ಆನ್ಲೈನ್ ಗೇಮ್ ವಿರುದ್ಧ ಕೇಂದ್ರ ಗದಾಪ್ರಹಾರ ; ಮಕ್ಕಳ...
02-05-26 11:18 am
Actor Vijay, Election, Poll: ಚುನಾವಣೋತ್ತರ ಸಮೀಕ...
29-04-26 11:18 pm
02-05-26 11:05 pm
Mangalore Correspondent
ತುಂಬೆ ಅಣೆಕಟ್ಟಿನಲ್ಲಿ ಕೃತಕ ಅಭಾವ ಸೃಷ್ಟಿ ; ಸ್ಥಳಕ್...
02-05-26 08:58 pm
Mangalore Accident: ಬಜತ್ತೂರಿನಲ್ಲಿ ಬೈಕ್ - ಲಾರಿ...
29-04-26 11:05 pm
ತಾಲೂಕು ಆಸ್ಪತ್ರೆ ಖಾಸಗಿ ವಶಕ್ಕೆ ; ಆರೋಗ್ಯ ಸಚಿವರ ಉ...
28-04-26 09:18 pm
ASI Assault Case, Mangalore: ಎಎಸ್ಐ ಮೇಲೆ ಹಲ್ಲೆ...
28-04-26 01:35 pm
03-05-26 09:19 pm
HK News Staffer
ವಿಶೇಷ ಪೂಜೆಗೆ ಬೆತ್ತಲೆ ಫೋಟೊ ಕಳಿಸು, 30 ಲಕ್ಷ ಕೊಡ್...
03-05-26 02:31 pm
ಮಕ್ಕಳನ್ನು ರಕ್ಷಿಸಲು ಹೋಗಿ 2 ತಿಂಗಳ ಗರ್ಭಿಣಿ ಜಲಸಮಾ...
02-05-26 08:35 pm
ಕುಕ್ಕರ್ ಬಾಂಬರ್ ಗೆ 10 ವರ್ಷ ಶಿಕ್ಷೆ ; ಎನ್ಐಎ ಅಧಿಕ...
02-05-26 12:19 pm
ಕೋರ್ಟ್ ಜಟಾಪಟಿ ಬಳಿಕ ಕುದ್ರೋಳಿ ಕ್ಷೇತ್ರಕ್ಕೆ ಹೊಸ ಕ...
01-05-26 09:24 pm