ಬ್ರೇಕಿಂಗ್ ನ್ಯೂಸ್
17-04-24 08:42 pm HK News Desk ದೇಶ - ವಿದೇಶ
ನವದೆಹಲಿ, ಎ.17: 500 ವರ್ಷಗಳ ಸುದೀರ್ಘ ಕಾಯುವಿಕೆ ಬಳಿಕ ಅಯೋಧ್ಯೆಯಲ್ಲಿ ಅಪೂರ್ವ ಶ್ರೀರಾಮನ ದೇಗುಲ ತಲೆಯೆತ್ತಿ ನಿಂತಿದೆ. ದೇಗುಲದಲ್ಲಿ ವಿರಾಜಮಾನ್ ಆಗಿರುವ ರಾಮಲಲ್ಲಾನ ವಿಗ್ರಹದ ಹಣೆಗೆ ಮೊದಲ ರಾಮ ನವಮಿಯಂದೇ ಸೂರ್ಯನ ಬೆಳಕು ಬೀಳುವ ಅಪೂರ್ವ ವಿದ್ಯಮಾನಕ್ಕೆ ಸಾಕ್ಷಿಯಾಗಿದೆ. ಸೂರ್ಯ ತಿಲಕ ಬೀಳುತ್ತಲೇ ರಾಮನ ಮಂದಿರದಲ್ಲಿ ಜೈರಾಮ್, ಶ್ರೀರಾಮ್ ಘೋಷಣೆ ಮೊಳಗಿತು.
ಇಷ್ಟಕ್ಕೂ ಸುಂದರವಾಗಿ ನಿರ್ಮಾಣಗೊಂಡ ಬೃಹತ್ ದೇವಾಲಯದಲ್ಲಿ ರಾಮನ ವಿಗ್ರಹದ ಹಣೆಗೆ ನೇರವಾಗಿ ಸೂರ್ಯನ ಕಿರಣ ಬೀಳುವಂತೆ ಮಾಡಿದ್ದೇ ಸೋಜಿಗ. ಇದರ ಹಿಂದೆ ವಿಜ್ಞಾನ ಇದೆ, ವಿಜ್ಞಾನಿಗಳ ಕರಾರುವಾಕ್ ಲೆಕ್ಕದ ತತ್ವಜ್ಞಾನ ಇದೆ. ರಾಮನ ವಿಗ್ರಹದ ಹಣೆಗೆ ನೇರವಾಗಿ ಮಧ್ಯಾಹ್ನ 12 ಗಂಟೆಯ ವೇಳೆಗೆ 3.5 ನಿಮಿಷಗಳ ವರೆಗೆ ಸೂರ್ಯನ ಕಿರಣವು 5.8 ಸೆಂಟಿ ಮೀಟರ್ ಗಾತ್ರದಲ್ಲಿ ಬಿದ್ದಿದೆ. ಈ ರೀತಿ ಸೂರ್ಯ ಕಿರಣ ಬೀಳುವಂತೆ ಮಾಡಲು ಭಾರತದ ಪ್ರಮುಖ ವಿಜ್ಞಾನಿಗಳು ಶ್ರಮ ಪಟ್ಟಿದ್ದು, ವಿಶೇಷ ಸಾಧನಗಳನ್ನು ಬಳಸಿ ಸೂರ್ಯನ ಕಿರಣವು ವಿಗ್ರಹದ ಹಣೆಗೆ ಬೀಳುವಂತೆ ಮಾಡಿದ್ದಾರೆ.
ರಾಮನ ಮಂದಿರವನ್ನು ನಾಲ್ಕು ಅಂತಸ್ತಿನಲ್ಲಿ ಕಟ್ಟಲಾಗಿದ್ದು, ಯಾವುದೇ ಕಾರಣಕ್ಕೂ ಸೂರ್ಯನ ಕಿರಣ ನೇರವಾಗಿ ಸ್ಪರ್ಶ ಮಾಡುವುದು ಸಾಧ್ಯವಿಲ್ಲ. ಆದರೆ ತಳಭಾಗದಲ್ಲಿ ನಿಲ್ಲಿಸಿರುವ ರಾಮನ ವಿಗ್ರಹಕ್ಕೆ ರಾಮ ನವಮಿಯಂದೇ ಮಧ್ಯಾಹ್ನ ಸೂರ್ಯನ ಬಿಂದು ಬೀಳುವಂತೆ ಮಾಡಿದ್ದು ಅಪೂರ್ವ ವಿಜ್ಞಾನದ ಫಲ ಎನ್ನಲೇಬೇಕು. ಸೆಂಟ್ರಲ್ ಬಿಲ್ಡಿಂಗ್ ರೀಸರ್ಚ್ ಇನ್ಸ್ ಟಿಟ್ಯೂಟ್ ಸಂಸ್ಥೆಯ(ಸಿಬಿಆರ್ ಐ) ಡೈರೆಕ್ಟರ್ ಡಾ.ಆರ್.ಪ್ರದೀಪ್ ಕುಮಾರ್ ಈ ಬಗ್ಗೆ ಎನ್ ಡಿಟಿವಿಗೆ ಹೇಳಿಕೆ ನೀಡಿದ್ದು, ಸೂರ್ಯ ತಿಲಕ ಬೀಳಿಸಿದ ಪ್ರಕ್ರಿಯೆಯನ್ನು ಆಪ್ಟೋ ಮೆಕ್ಯಾನಿಕಲ್ ಸಿಸ್ಟಮ್ ಎಂದಿದ್ದಾರೆ.
ಅಪ್ಟೋ ಮೆಕ್ಯಾನಿಕಲ್ ಸಿಸ್ಟಮ್ ಅಂದರೆ, ನಾಲ್ಕು ಕನ್ನಡಿ ಮತ್ತು ನಾಲ್ಕು ಲೆನ್ಸ್ ಗಳನ್ನು ನಿಶ್ಚಿತ ಭಾಗದಲ್ಲಿ ನಿಲ್ಲಿಸಲಾಗಿದ್ದು, ಮೇಲಿನ ಮಹಡಿಯ ಮೇಲೆ ಬೀಳುವ ಸೂರ್ಯನ ಕಿರಣವನ್ನು ಲೆನ್ಸ್ ನಲ್ಲಿ ಡೈವರ್ಟ್ ಮಾಡಿ ಕೆಳಭಾಗಕ್ಕೆ ಹಂಚುತ್ತದೆ. ಅದೇ ಕಿರಣವು ಒಂದಕ್ಕೊಂದು ಡೈವರ್ಟ್ ಆಗಿ ಗರ್ಭಗುಡಿಯ ಒಳಗಿನ ವಿಗ್ರಹದ ಮೇಲೆ ಬೀಳುತ್ತದೆ. ಕೊನೆಯ ಲೆನ್ಸ್ ಮೇಲೆ ಬೀಳುವ ಬೆಳಕಿನ ಬಿಂದು ರಾಮ ನವಮಿಯಂದು ನೇರವಾಗಿ ರಾಮನ ವಿಗ್ರಹದ ಹಣೆಯ ಮೇಲೆ ಬೀಳುವಂತೆ ಮಾಡಲಾಗಿದೆ. ಮಿರರ್ ಮತ್ತು ಲೆನ್ಸ್ ಉನ್ನತ ಗುಣಮಟ್ಟದ್ದಾಗಿದ್ದು, ಸೂರ್ಯನ ಕಿರಣದ ಆಲ್ಫ್ರಾ ರೆಡ್ ಕಿರಣಗಳನ್ನು ಹೀರಿಕೊಳ್ಳುವಂತೆ ತಂತ್ರಜ್ಞಾನ ಬಳಕೆ ಮಾಡಲಾಗಿದೆ ಎಂದು ಪ್ರದೀಪ್ ಕುಮಾರ್ ಹೇಳುತ್ತಾರೆ.
ಸೂರ್ಯ ತಿಲಕ್ ತಂತ್ರಜ್ಞಾನದ ಹಿಂದೆ ಸಿಬಿಆರ್ ಐ ರೂರ್ಕಿ ಮತ್ತು ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್, ಬೆಂಗಳೂರು ಇದರ ವಿಜ್ಞಾನಿಗಳು ಕೆಲಸ ಮಾಡಿದ್ದಾರೆ. ಈ ತಂತ್ರಜ್ಞಾನದಿಂದಾಗಿ ಪ್ರತಿ ವರ್ಷ ರಾಮ ನವಮಿಯಂದು ಸೂರ್ಯ ಕಿರಣವು ರಾಮನ ವಿಗ್ರಹದ ಹಣೆಯನ್ನು ಸ್ಪರ್ಶಿಸಲಿದ್ದು, ಇದಕ್ಕಾಗಿ ಯಾವುದೇ ಬ್ಯಾಟರಿ, ವಿದ್ಯುತ್, ಕಬ್ಬಿಣ ಬಳಸಿದ ಉಪಕರಣಗಳನ್ನು ಬಳಸಿಲ್ಲ. ಎರಡು ಸಂಸ್ಥೆಯ ವಿಜ್ಞಾನಿಗಳ ಪೈಕಿ ಡಾ.ಎಸ್.ಕೆ.ಪಾಣಿಗ್ರಹಿ, ಡಾ.ಆರ್.ಎಸ್.ಬಿಶ್ತ್, ಕಾಂತಿ ಸೋಲಂಕಿ, ವಿ.ಚಕ್ರಾಧರ್, ದಿನೇಶ್, ಸಮೀರ್, ಪ್ರೊ.ಆರ್.ಪ್ರದೀಪ್ ಕುಮಾರ್, ಡಾ.ಅನ್ನಪೂರ್ಣಿ ಎಸ್., ಎಸ್.ಶ್ರೀರಾಮ್, ಪ್ರೊ.ತುಷಾರ್ ಪ್ರಭು, ರಾಜಿಂದರ್ ಕೊಠಾರಿಯಾ, ಬೆಂಗಳೂರಿನ ಆಪ್ಟಿಕಾ ಸಂಸ್ಥೆಯ ನಾಗರಾಜ್, ವಿವೇಕ್, ತವಾ ಕುಮಾರ್ ಕೆಲಸ ಮಾಡಿದ್ದಾರೆ. ದೇಶದ ಕೆಲವು ಜೈನ ಮಂದಿರಗಳಲ್ಲಿ ಮತ್ತು ಕೊನಾರ್ಕ್ ಸೂರ್ಯ ಮಂದಿರಗಳಲ್ಲಿ ಇದೇ ಮಾದರಿಯ ತಂತ್ರಜ್ಞಾನದಲ್ಲಿ ಸೂರ್ಯ ತಿಲಕ ಬೀಳುವಂತೆ ಮಾಡಲಾಗಿದೆ.
The Surya Tilak was performed for five minutes between 12 to 12:30 pm. During the time when Surya Tilak was being performed, devotees were allowed to visit the temple. This was the first Ram Navami since the consecration of the Ram idol at the new temple, inaugurated by Prime Minister Narendra Modi on January 22.
07-05-25 04:07 pm
Bangalore Correspondent
ಭಾರತ - ಪಾಕ್ ಮಧ್ಯೆ ಉದ್ವಿಗ್ನ ಸ್ಥಿತಿ ; ಮೇ 7 ರಂದು...
06-05-25 11:23 pm
Mysuru, Prison, Arrest, Siddaramaiah: ಬೆಳಗಾವಿ...
06-05-25 09:38 pm
ಓಬಳಾಪುರಂ ಅಕ್ರಮ ಮೈನಿಂಗ್ ಪ್ರಕರಣ ; ಮಾಜಿ ಸಚಿವ ಗಾಲ...
06-05-25 08:18 pm
Hubballi Accident, Sagara, Five Killed: ಹುಬ್ಬ...
06-05-25 01:35 pm
07-05-25 06:14 pm
HK News Desk
Kasaragod Toll, Kumbla: ತಲಪಾಡಿ – ಚೆರ್ಕಳ ಆರು ಪ...
07-05-25 12:20 pm
India strikes terror camps in Pak; ಪಾಕಿಸ್ತಾನದ...
07-05-25 09:54 am
ವಿಶ್ವಸಂಸ್ಥೆಯಲ್ಲಿ ಬೆತ್ತಲಾದ ಪಾಕ್ ; ಚೀನಾ ಬಿಟ್ಟು...
06-05-25 02:45 pm
ಭಾರತ - ಪಾಕ್ ಯುದ್ಧ ಸನ್ನಿವೇಶ ; ದೇಶಾದ್ಯಂತ ಮೇ 7ರಂ...
05-05-25 11:10 pm
07-05-25 03:36 pm
Mangalore Correspondent
Hindu Maha Sabha, Mangalore, Rajesh Pavitran:...
07-05-25 02:36 pm
Mangalore, Satish Kumapla, U T Khader: ಚಿಕ್ಕಮ...
06-05-25 06:36 pm
Suhas Shetty Murder, Bommai, Dinesh Gundurao:...
06-05-25 06:17 pm
Mangalore, Kodikere Loki Arrest: ಕಮ್ಯುನಲ್ ಕೇಸ...
06-05-25 04:02 pm
03-05-25 02:16 pm
Mangalore Correspondent
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm