18 ವರ್ಷದ ಮಗನಿಗೆ ಲ್ಯಾಂಬೋರ್ಗಿನಿ ಕಾರು ಗಿಫ್ಟ್ ಕೊಟ್ಟ ಭಾರತ ಮೂಲದ ಗಲ್ಫ್ ಉದ್ಯಮಿ ; ಜಾಲತಾಣದಲ್ಲಿ ವಿಡಿಯೋ ಟ್ರೆಂಡಿಂಗ್

12-04-24 07:31 pm       HK NEWS   ದೇಶ - ವಿದೇಶ

ಗಲ್ಫ್ ರಾಷ್ಟ್ರದಲ್ಲಿ ಉದ್ಯಮ ಹೊಂದಿರುವ ಭಾರತೀಯ ಮೂಲದ ವ್ಯಕ್ತಿಯೊಬ್ಬರು ತಮ್ಮ 18 ವರ್ಷದ ಮಗನ ಹುಟ್ಟುಹಬ್ಬಕ್ಕೆ ಐಷಾರಾಮಿ ಕಾರು ಲ್ಯಾಂಬೋರ್ಗಿನಿಯನ್ನು ಗಿಫ್ಟ್ ನೀಡಿದ್ದಾರೆ.

ನವದೆಹಲಿ, ಎ.12: ಗಲ್ಫ್ ರಾಷ್ಟ್ರದಲ್ಲಿ ಉದ್ಯಮ ಹೊಂದಿರುವ ಭಾರತೀಯ ಮೂಲದ ವ್ಯಕ್ತಿಯೊಬ್ಬರು ತಮ್ಮ 18 ವರ್ಷದ ಮಗನ ಹುಟ್ಟುಹಬ್ಬಕ್ಕೆ ಐಷಾರಾಮಿ ಕಾರು ಲ್ಯಾಂಬೋರ್ಗಿನಿಯನ್ನು ಗಿಫ್ಟ್ ನೀಡಿದ್ದಾರೆ.

18 ವರ್ಷ ಪೂರೈಸಿಕೊಂಡ ತರುಣ್ ರುಂಗ್ಟಾ ಎಂಬ ಹೆಸರಿನ ಹುಡುಗ ತನಗೆ ಅಪ್ಪ ನೀಡಿದ ಗಿಫ್ಟ್ ಬಗ್ಗೆ ಕಾರಿನ ವಿಡಿಯೋ ಮಾಡಿ ಹೇಳಿಕೊಂಡಿದ್ದಾನೆ. ಇನ್ ಸ್ಟಾ ಗ್ರಾಮಿನಲ್ಲಿ ಹಾಕಿರುವ ವಿಡಿಯೋ ಭಾರೀ ವೈರಲ್ ಆಗಿದ್ದು, 5 ಕೋಟಿಗೂ ಹೆಚ್ಚು ಮೌಲ್ಯದ ಐಷಾರಾಮಿ ಕಾರಿನ ಬಗ್ಗೆ ಗೆಳೆಯರು ನಾನಾ ರೀತಿಯ ಕಮೆಂಟ್ ಹಾಕಿದ್ದಾರೆ.

ವಿವೇಕ್ ಕುಮಾರ್ ರುಂಗ್ಟಾ ಹೆಸರಿನ ಉದ್ಯಮಿ ಯುಎಇಯಲ್ಲಿ ವಿಕೆಆರ್ ಗ್ರೂಪ್ ಹೆಸರಲ್ಲಿ ಉದ್ಯಮ ಹೊಂದಿದ್ದಾರೆ. ಲ್ಯಾಂಬೋರ್ಗಿನಿ ಹುರಾಕಾನ್ ಎಸ್ ಟಿಓ ಹೆಸರಿನ ಈ ಕಾರು 5 ಕೋಟಿಗೂ ಹೆಚ್ಚು ಮೌಲ್ಯದ್ದು ಎನ್ನಲಾಗುತ್ತಿದೆ. ಕಾರಿನ ಬಗ್ಗೆ ತುಂಬ ಕ್ರೇಜ್ ಇಟ್ಟುಕೊಂಡಿರುವ ತರುಣ್ ರುಂಗ್ಟಾ ತನ್ನ ತಂದೆಯ ಗಿಫ್ಟ್ ಬಗ್ಗೆ ಭಾವನಾತ್ಮಕವಾಗಿ ಬರೆದುಕೊಂಡಿದ್ದಾನೆ.

ತನ್ನ ಮೇಲಿನ ಪ್ರೀತಿಯ ಮತ್ತು ಮಮಕಾರದಿಂದಾಗಿ ನನಗೆ ಈ ಗಿಫ್ಟ್ ನೀಡಿದ್ದಾರೆ. ನನ್ನ ಕನಸಿನ ಕಾರನ್ನು ಗಿಫ್ಟ್ ಕೊಟ್ಟು 18ನೇ ಬರ್ತ್ ಡೇಯನ್ನು ವಿಶಿಷ್ಟವಾಗಿಸಿದ್ದಾರೆ. ನಿಮ್ಮ ಪ್ರೀತಿ ಮತ್ತು ಸಪೋರ್ಟ್ ನನಗೆಲ್ಲದಕ್ಕೂ ದೊಡ್ಡದು ಎಂದು ಬರೆದುಕೊಂಡಿದ್ದು, ಲ್ಯಾಂಬೋರ್ಗಿನಿ ಎಂಥೂಸಿಯಾಸ್ಟ್ ಎಂದೂ ಕ್ಯಾಪ್ಶನ್ ಕೊಟ್ಟಿದ್ದಾನೆ. ಕಾರು ಶೋರೂಮ್ ನಲ್ಲೇ ಕೇಕ್ ಕಟ್ ಮಾಡಿದ್ದು, ಆನಂತರವೇ ಕಾರಿನ ಕೀಯನ್ನು ಕೊಟ್ಟು ಕಂಪನಿ ಕಡೆಯವರು ತಂದೆಯ ಮೂಲಕ ಗಿಫ್ಟ್ ಮಾಡಿಸಿದ್ದು ವಿಡಿಯೋದಲ್ಲಿದೆ.

An Indian businessman has gifted a Lamborghini Huracan STO (Super Trofeo Omologato) to his son on his 18th birthday. Tarun Rungta received the gift in March, but its video started trending online after he posted the car's video on Instagram. The youngster added several hashtags to express his happiness and thanked his father for the gift. The businessman, UAE-based Vivek Kumar Rungta, reportedly spent more than ₹ 5 crore on the Lamborghini Huracan STO. He owns VKR Group, an investment firm, which has a big business in the Middle East.