ಬ್ರೇಕಿಂಗ್ ನ್ಯೂಸ್
17-04-22 04:28 pm Bengaluru Correspondent ಕರ್ನಾಟಕ
ಬೆಂಗಳೂರು, ಎ.17 : ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್ ಬಿಟ್ಟು ಜೆಡಿಎಸ್ ಸೇರಿದ 'ಮಾತಿನ ಮಲ್ಲ' ಸಿ.ಎಂ.ಇಬ್ರಾಹಿಂ ಪಕ್ಷದ ಕೇಂದ್ರ ಕಚೇರಿ ಜೆಪಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಈ ವೇಳೆ, ಮಾತನಾಡಿದ ಇಬ್ರಾಹಿಂ, ಕಾಲ ಭೈರವ ಎದ್ದು ಕುಣಿಯುವ ಸಮಯ ಬಂದಿದೆ. ರಾಜ್ಯದಲ್ಲಿ ಮತ್ತೆ ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ. ಹರ ಹರ ಮಹದೇವ ಎಂದು ಜೋಳಿಗೆ ತೆಗೆದುಕೊಂಡು ಹೊರಡುತ್ತೇನೆ. ಮುಂದಿನ ಬಾರಿ ಕುಮಾರಸ್ವಾಮಿ ಸಿಎಂ ಆಗುವುದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಜೆಡಿಎಸ್ ಎನ್ನುವುದು ನನಗೆ ಪಾರ್ಟಿ ಅಲ್ಲ, ಅದು ನನ್ನ ಪಾಲಿಗೆ ಕುಟುಂಬ. ನಾನು ಒಂದು ವರ್ಷದಿಂದ ಏನು ಹೇಳುತ್ತಾ ಬಂದಿದ್ದೇನೋ ಅದೇ ಆಗ್ತಾಯಿದೆ. ದೇವೇಗೌಡರಿಗೆ ಸಂಸತ್ತಿನಲ್ಲಿ ಕಾಂಗ್ರೆಸ್ ಬೆಂಬಲ ವಾಪಸ್ ಪಡೆದ ವೇಳೆ ಅಟಲ್ ಬಿಹಾರಿ ವಾಜಪೇಯಿ ಅವರು ಗೌಡರಿಗೆ ಬೆಂಬಲ ಕೊಡುತ್ತೇವೆಂದು ಮುಂದೆ ಬಂದಿದ್ದರು. ಆದ್ರೆ ನಮ್ಮ ಗೌಡರು ಅವರ ಬೆಂಬಲ ತೆಗೆದುಕೊಳ್ಳಲು ಹೋಗಲಿಲ್ಲ. ಅದು ಗೌಡರ ರಾಜಕಾರಣ. ಇದೇ ಗೌಡರ ಸಮ್ಮುಖದಲ್ಲಿ ಕುಮಾರಸ್ವಾಮಿ ಪಟ್ಟಾಭಿಷೇಕ ಮಾಡ್ತೀವಿ. ಮೇ ತಿಂಗಳಿನಲ್ಲಿ ನಾವೆಲ್ಲಾ ಉತ್ತರ ಕರ್ನಾಟಕಕ್ಕೆ ಹೋಗುತ್ತೇವೆ. ಇನ್ನು ಬೇರೆ ಪ್ರಶ್ನೆಯೇ ಇಲ್ಲ. ರಾಜ್ಯಾದ್ಯಂತ ಪ್ರವಾಸ ಮಾಡುತ್ತೇವೆ ಎಂದು ಹೇಳಿದರು.
ಕುಮಾರಸ್ವಾಮಿಯನ್ನ ಮುಂದಿನ ಮುಖ್ಯಮಂತ್ರಿ ಎಂದು ಹೇಳಿಯೇ ಭಾಷಣ ಆರಂಭಿಸಿದ ಅವರು, ಕುಮಾರಸ್ವಾಮಿ ಅವರು ನನಗಿಂತ ದೊಡ್ಡ ಹುದ್ದೆ ತಗೊಂಡಿದ್ದಾರೆ. ನಮ್ಮದು ಬರೀ ತುತ್ತೂರಿ ಊದುವುದು. ಕುಮಾರಸ್ವಾಮಿಯನ್ನು ಸಿಎಂ ಮಾಡುವುದಷ್ಟೇ ನಮ್ಮ ಗುರಿ ಎಂದು ಹೇಳಿದರು.
ಇದಕ್ಕೂ ಮುನ್ನ ಪಕ್ಷದ ಧ್ವಜವನ್ನು ಕೊಟ್ಟು ಸಿಎಂ ಇಬ್ರಾಹಿಂ ಅವರನ್ನು ಪಕ್ಷಕ್ಕೆ ಸ್ವಾಗತಿಸಿ, ರಾಜ್ಯಾಧ್ಯಕ್ಷ ಸ್ಥಾನ ಬಿಟ್ಟು ಕೊಟ್ಟ ಎಚ್.ಕೆ.ಕುಮಾರಸ್ವಾಮಿ ಗದ್ಗದಿತರಾಗಿ ಮಾತನಾಡಿದರು. ನಮ್ಮ ಪಕ್ಷದಲ್ಲಿ ಹುದ್ದೆ ಅಷ್ಟೇ. ಅಧಿಕಾರ ಇಲ್ಲ. ಅಧಿಕಾರ ಒಂದೇ ಕಡೆ ಇರುತ್ತದೆ. ನನ್ನನ್ನು ರಾಜ್ಯಾಧ್ಯಕ್ಷನಾಗಿ ಗುರುತಿಸಿ ಮೇಲಕ್ಕೆ ತಂದಿದ್ದಾರೆ. ಈಗ ಹೊಸತಾಗಿ ಅಧ್ಯಕ್ಷರು ಬಂದಿದ್ದಾರೆ. ಮುಂದೆ ಎಲ್ಲವೂ ಸರಿಯಾಗಲಿದೆ ಎಂದು ಹೇಳಿದರು.
ಒಂದು ವರ್ಷದಿಂದ ಕಾಂಗ್ರೆಸ್ ತ್ಯಜಿಸುವುದಾಗಿ ಹೇಳಿಕೊಂಡು ಬಂದಿದ್ದ ಸಿ.ಎಂ.ಇಬ್ರಾಹಿಂ ಇತ್ತೀಚೆಗೆ ವಿಧಾನ ಪರಿಷತ್ ಸ್ಥಾನ ಮತ್ತು ಪಕ್ಷದ ಸದಸ್ಯಕ್ಕೂ ರಾಜಿನಾಮೆ ನೀಡಿದ್ದರು. ಅದೇ ವೇಳೆಗೆ, ಮುಂದೆ ಜೆಡಿಎಸ್ ಸೇರುವುದಾಗಿ ಹೇಳಿದ್ದರು. ಅದರಂತೆ, ಚುನಾವಣೆ ತಯಾರಿಯಲ್ಲಿರುವ ಜೆಡಿಎಸ್ ಈಗ ರಾಜ್ಯಾಧ್ಯಕ್ಷ ಸ್ಥಾನ ನೀಡಿಯೇ ಪಕ್ಷಕ್ಕೆ ಬರಮಾಡಿಕೊಂಡಿದೆ.
CM Ibrahim was sworn in as the new JDS President today. Party Office Deve Gowda, former CM HD Kumaraswamy in the presence of JDS senior Deve Gowda. Ibrahim handed over the power to them.Speaking to CM Ibrahim, I thank the next Chief Minister Kumaraswamy. Deve Gowda was PM at the time because Congress made a mistake. He made the same mistake in 2023 and expressed confidence that Kumaraswamy will now become CM.
19-05-25 04:00 pm
HK News Desk
Bjp, Radha Mohan Das Agarwal: 1971ರ ಯುದ್ಧ ಗೆಲ...
17-05-25 01:44 pm
Santosh Lad, Modi, Pak, War: ಮೋದಿ ತಾವೇ ಸುಪ್ರೀ...
16-05-25 10:04 am
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
19-05-25 02:25 pm
HK News Desk
ಚಾರ್ಮಿನಾರ್ ಬಳಿಯ ಗುಲ್ಜಾರ್ ಹೌಸ್ನಲ್ಲಿ ಬೆಂಕಿ ಅವ...
19-05-25 01:46 pm
Brijesh Chowta, Tejaswi Surya: ಪಾಕ್ ಪ್ರೇರಿತ ಭ...
18-05-25 08:23 pm
ಪಾಕ್ ಪರವಾಗಿ ಬೇಹುಗಾರಿಕೆ ; ಭಾರತೀಯ ಸೇನಾ ಮಾಹಿತಿ ಸ...
17-05-25 10:51 pm
Donald Trump, Asim Munir: ಡೊನಾಲ್ಡ್ ಟ್ರಂಪ್ ಕುಟ...
17-05-25 03:42 pm
19-05-25 11:07 pm
Mangalore Correspondent
Jail Attack, Suhas Shetty, Mangalore, Chotte...
19-05-25 10:14 pm
Konaje Suicide, Mangalore, Hair loss: ಕೂದಲು ಉ...
19-05-25 09:41 pm
Mangalore Job Scam, Police, Lawrence Dsouza,...
19-05-25 05:22 pm
Akanksha Suicide, Dharmasthala, Mangalore: ಏರ...
19-05-25 12:31 pm
19-05-25 09:38 pm
Mangalore Correspondent
Belagavi Murder, Mother in law: ಸೊಸೆಗೆ ಮಕ್ಕಳಾ...
19-05-25 03:35 pm
Reshma Bariga, FIR, Mangalore; ಆಪರೇಶನ್ ಸಿಂಧೂರ...
18-05-25 07:45 pm
Suhas Shetty, BJP Corporator Shweta Poojary,...
18-05-25 07:35 pm
Bangalore Cigarette Murder, Video Viral: ಕಾರಿ...
17-05-25 05:00 pm