ಬ್ರೇಕಿಂಗ್ ನ್ಯೂಸ್
15-04-22 09:48 pm Bengaluru Correspondent ಕರ್ನಾಟಕ
ಬೆಂಗಳೂರು, ಎ.15: ಹಿಂದು ದೇವಾಲಯಗಳ ಆವರಣದಲ್ಲಿ ಅನ್ಯ ಧರ್ಮೀಯರ ವ್ಯಾಪಾರಕ್ಕೆ ಅವಕಾಶ ನೀಡಬಾರದೆಂಬ ಹಿಂದೂಪರ ಸಂಘಟನೆಗಳ ಒತ್ತಾಯಕ್ಕೆ ಮುಜರಾಯಿ ಇಲಾಖೆ ಒಪ್ಪಿಗೆ ನೀಡಿದೆ. ಹಿಂದು ಸಂಘಟನೆಗಳ ಬೇಡಿಕೆಯಂತೆ ರಾಜ್ಯದಾದ್ಯಂತ ಹಿಂದು ದೇಗುಲಗಳ ವ್ಯಾಪ್ತಿಯಲ್ಲಿ ಅನ್ಯಧರ್ಮೀಯರ ವ್ಯಾಪಾರ ನಿರ್ಬಂಧಿಸುವ ಕಾನೂನನ್ನು ಕಟ್ಟುನಿಟ್ಟಾಗಿ ಪಾಲಿಸಲು ಮುಂದಾಗಿದೆ.
ಈ ಬಗ್ಗೆ ಮುಜರಾಯಿ ಇಲಾಖೆ ವತಿಯಿಂದ ಎಲ್ಲ ದೇವಸ್ಥಾನಗಳ ಆಡಳಿತ ಮಂಡಳಿಗಳಿಗೆ ಸುತ್ತೋಲೆ ಬಂದಿದೆ ಎನ್ನಲಾಗುತ್ತಿದೆ. ಹೀಗಾಗಿ ಇನ್ಮುಂದೇ ರಾಜ್ಯದ ಮುಜರಾಯಿ ದೇವಸ್ಥಾನಕ್ಕೆ ಸೇರಿದ ಅಂಗಡಿ, ಕಟ್ಟಡಗಳಲ್ಲಿ ಅನ್ಯಧರ್ಮಿಯರು ವ್ಯಾಪಾರ, ವಹಿವಾಟು ನಡೆಸಲು ಅವಕಾಶವಿರಲ್ಲ. ಜಾತ್ರೆ ಸೇರಿದಂತೆ ಇತರೇ ಸಂದರ್ಭದಲ್ಲೂ ಮುಜರಾಯಿ ದೇಗುಲದ ಸಂಕೀರ್ಣದಲ್ಲಿ ವ್ಯಾಪಾರ ಮಳಿಗೆಗಳ ಹರಾಜಿನಲ್ಲೂ ಅನ್ಯಧರ್ಮಿಯರಿಗೆ ಅವಕಾಶವಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ.
ಮುಜರಾಯಿ ಅಂಗಡಿ ಮಳಿಗೆಗಳ ಹರಾಜಿನಲ್ಲಿ ಮೊದಲು ಎಲ್ಲ ಧರ್ಮದವರು ಭಾಗವಹಿಸುತ್ತಿದ್ದರು. ಅಲ್ಲದೆ, ಹಿಂದೂಗಳು ಪಡೆದ ಅಂಗಡಿಗಳನ್ನು ಉಪ ಗುತ್ತಿಗೆ ಪಡೆದು ಬೇರೆ ಧರ್ಮದವರು ನಡೆಸುತ್ತಿದ್ದರು. ಆದರೆ ಇನ್ಮುಂದೇ ಹರಾಜಿನಲ್ಲಿ ಬೇರೆ ಧರ್ಮದವರು ಭಾಗವಹಿಸಲು ಅವಕಾಶ ಇಲ್ಲ. ಹಿಂದುಗಳು ಗುತ್ತಿಗೆ ಪಡೆದು ಬೇರೆಯವರಿಗೆ ನಿರ್ವಹಣೆ ಕೊಡುವುದಕ್ಕೂ ಅವಕಾಶ ಇರಲ್ಲ ಎಂದು ಮುಜರಾಯಿ ಇಲಾಖೆ ಹೇಳಿದೆ. ಈ ಬಗ್ಗೆ ಕಾನೂನು ಉಲ್ಲಂಘನೆಯಾದಲ್ಲಿ 2012 ಹಿಂದು ರಿಲಿಜಿಯನ್ ಆಕ್ಟ್ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಸ್ಪಷ್ಟಪಡಿಸಿದೆ. ಒಂದು ವೇಳೆ ಹಿಂದೂಗಳು ಹರಾಜಿನಲ್ಲಿ ಪಡೆದ ಅಂಗಡಿಯನ್ನು ಅನ್ಯಧರ್ಮಿಯರಿಗೆ ನೀಡಿದರೆ ಆ ದೇವಾಲಯದ ಆಡಳಿತಾಧಿಕಾರಿ ಮೇಲೆ ಕ್ರಮ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ.
ಇದಲ್ಲದೆ, ಯಾರು ಹರಾಜಿನಲ್ಲಿ ಪಡೆಯುತ್ತಾರೆಯೋ ಅವರೇ ಅಂಗಡಿಗಳನ್ನ ನಡೆಸಬೇಕಾಗಿದೆ. ಇದೇ ನೀತಿ ಆಧರಿಸಿ ಮುಜರಾಯಿ ಇಲಾಖೆ ಅಧಿಕಾರಿಗಳು ಬೆಂಗಳೂರಲ್ಲಿ ಸುಮಾರು 48 ಅಂಗಡಿಗಳಿಗೆ ನೋಟಿಸ್ ನೀಡಿದ್ದಾರೆ. ನಗರದ ಬಂಡಿ ಶೇಷಮ್ಮ ಚೌಲ್ಟ್ರಿ, ಬಳೆ ಪೇಟೆ, ಶ್ರೀನಿವಾಸ ದೇವಸ್ಥಾನ ಬಳೇಪೇಟೆ ಸುಗ್ರೀವ ವೆಂಕಟರಮಣ ದೇವಸ್ಥಾನ, ಕಾಶಿ ವಿಶ್ವನಾಥ ದೇವಸ್ಥಾನ, ಸೋಮೇಶ್ವರ ದೇವಸ್ಥಾನ ಬಳೇಪೇಟೆ ಕಾಡು ಮಲ್ಲೇಶ್ವರ ದೇವಸ್ಥಾನ, ಮಲ್ಲೇಶ್ವರ ಹೀಗೆ ಹಲವು ಕಡೆ ದೇವಾಲಯ ಅಂಗಡಿಗಳಿಗೆ ನೋಟಿಸ್ ನೀಡಲಾಗಿದ್ದು ನಿಯಮ ಪಾಲಿಸಲು ಸೂಚಿಸಲಾಗಿದೆ.
ಅಲ್ಲದೇ ಈಗಾಗಲೇ ಹಿಂದೂ ದೇವಾಲಯದ ಆವರಣದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅನ್ಯ ಧರ್ಮಿಯರ ಅಂಗಡಿಗಳ ತೆರವಿಗೆ ಮುಜರಾಯಿ ಇಲಾಖೆ 42 ದಿನಗಳ ಕಾಲಾವಕಾಶ ನೀಡಿದೆ. ಒಂದೊಮ್ಮೆ ನಿಯಮ ಮೀರಿ ಅನ್ಯಧರ್ಮಿಯರು ದೇವಾಲಯದ ಆವರಣದಲ್ಲಿ ವ್ಯಾಪಾರ ಮುಂದುವರೆಸಿದರೆ ಶಿಸ್ತುಕ್ರಮದ ಎಚ್ಚರಿಕೆಯನ್ನು ಮುಜರಾಯಿ ಇಲಾಖೆ ನೀಡಿದೆ.
The Mujahidee Department has agreed to the demands of Hindu organizations not to allow the trade of non-religious people in the premises of Hindu temples. At the request of the Hindu organizations, the law of restricting pagan trade in the jurisdiction of Hindu temples across the state has been strictly followed.
19-05-25 04:00 pm
HK News Desk
Bjp, Radha Mohan Das Agarwal: 1971ರ ಯುದ್ಧ ಗೆಲ...
17-05-25 01:44 pm
Santosh Lad, Modi, Pak, War: ಮೋದಿ ತಾವೇ ಸುಪ್ರೀ...
16-05-25 10:04 am
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
19-05-25 02:25 pm
HK News Desk
ಚಾರ್ಮಿನಾರ್ ಬಳಿಯ ಗುಲ್ಜಾರ್ ಹೌಸ್ನಲ್ಲಿ ಬೆಂಕಿ ಅವ...
19-05-25 01:46 pm
Brijesh Chowta, Tejaswi Surya: ಪಾಕ್ ಪ್ರೇರಿತ ಭ...
18-05-25 08:23 pm
ಪಾಕ್ ಪರವಾಗಿ ಬೇಹುಗಾರಿಕೆ ; ಭಾರತೀಯ ಸೇನಾ ಮಾಹಿತಿ ಸ...
17-05-25 10:51 pm
Donald Trump, Asim Munir: ಡೊನಾಲ್ಡ್ ಟ್ರಂಪ್ ಕುಟ...
17-05-25 03:42 pm
19-05-25 05:22 pm
Mangalore Correspondent
Akanksha Suicide, Dharmasthala, Mangalore: ಏರ...
19-05-25 12:31 pm
Akanksha Death, Punjab, Dharmasthala, Mangalo...
18-05-25 12:42 pm
Ullal, U T Khader, Mangalore: ಎರಡು ವರ್ಷವಾದರೂ...
17-05-25 10:09 pm
Mangalore Balmatta Accident, Bus, Video: ನಿಂತ...
17-05-25 08:52 pm
19-05-25 03:35 pm
HK News Desk
Reshma Bariga, FIR, Mangalore; ಆಪರೇಶನ್ ಸಿಂಧೂರ...
18-05-25 07:45 pm
Suhas Shetty, BJP Corporator Shweta Poojary,...
18-05-25 07:35 pm
Bangalore Cigarette Murder, Video Viral: ಕಾರಿ...
17-05-25 05:00 pm
Mangalore Stabbing, Panemangalore, Crime, Att...
16-05-25 11:06 pm