ಬ್ರೇಕಿಂಗ್ ನ್ಯೂಸ್
01-04-22 08:23 pm Bengaluru Correspondent ಕರ್ನಾಟಕ
ಬೆಂಗಳೂರು, ಎ.1: ದೇಶದಲ್ಲೇ ಕರ್ನಾಟಕದ ಬಿಜೆಪಿ ಸರಕಾರ ಅತಿ ಹೆಚ್ಚು ಭ್ರಷ್ಟಾಚಾರದಲ್ಲಿ ತೊಡಗಿದೆ. ಪ್ರಧಾನಿ ಮೋದಿ ಒಂದ್ವೇಳೆ ಭ್ರಷ್ಟಾಚಾರದ ಬಗ್ಗೆ ಮಾತನಾಡಿದರೆ ಅದು ದೊಡ್ಡ ಜೋಕ್ ಆಗಲಿದೆ. ಇಲ್ಲಿನ ಜನರು ಕೂಡ ಮೋದಿ ಮಾತನ್ನು ಜೋಕ್ ಎಂದೇ ಪರಿಗಣಿಸುತ್ತಾರೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಟೀಕಿಸಿದ್ದಾರೆ.
ಬೆಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ರಾಜ್ಯ ಸರಕಾರದ ಮೇಲೆ ಭ್ರಷ್ಟಾಚಾರದ ಆರೋಪ ಹೊರಿಸಿದ್ದು ಕಾಂಗ್ರೆಸ್ ಅಲ್ಲ. ಇದೇ ರಾಜ್ಯದ ಗುತ್ತಿಗೆದಾರರೇ 40 ಶೇಕಡಾ ಕಮಿಷನ್ ಆರೋಪ ಮಾಡಿದ್ದಾರೆ. ಮೋದಿ ಈ ಹಿಂದೆ ಯಾವುದೇ ಕಡೆ ಹೋದರೂ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದರು. ಆದರೆ, ಈಗ ಬೆಂಗಳೂರಿಗೆ ಬಂದು ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುವುದಾಗಿ ಮಾತನಾಡಿದರೆ ಜನರು ನಂಬುವ ಸ್ಥಿತಿಯಲ್ಲಿ ಇಲ್ಲ. ಯಾಕಂದ್ರೆ, ಬಿಜೆಪಿ ಸರಕಾರದ ವಿರುದ್ಧವೇ ಇಲ್ಲಿನ ಗುತ್ತಿಗೆದಾರರು 40 ಶೇಕಡಾ ಕಮಿಷನ್ ಪಡೆಯುತ್ತಿರುವ ಗಂಭೀರ ಆರೋಪ ಮಾಡಿದ್ದಾರೆ. ಹೀಗಿದ್ದರೂ, ಪ್ರಧಾನಿ ಮೋದಿ ಮೌನವಾಗಿದ್ದಾರೆ. ಅವರು ಮುಂದೆ ಭ್ರಷ್ಟಾಚಾರದ ಬಗ್ಗೆ ಮಾತನಾಡಿದರೆ ಜನರು ನಂಬುವ ಸ್ಥಿತಿಯಲ್ಲಿ ಇಲ್ಲ ಎಂದು ಹೇಳಿದರು.

150 ಸ್ಥಾನದ ಗುರಿಯಿಟ್ಟು ಚುನಾವಣೆ ಎದುರಿಸಿ
ಕಾಂಗ್ರೆಸ್ ಮುಂದಿನ ಬಾರಿ ಅಧಿಕಾರಕ್ಕೆ ಬರುವಂತಾಗಲು ರಾಹುಲ್ ಗಾಂಧಿ ಮೂರು ಅಂಶಗಳನ್ನು ಮುಂದಿಟ್ಟು ಹೋರಾಟ ಕೈಗೆತ್ತಿಕೊಳ್ಳುವಂತೆ ರಾಜ್ಯ ನಾಯಕರಿಗೆ ಕರೆ ನೀಡಿದರು. ಮುಂದಿನ ಚುನಾವಣೆಯಲ್ಲಿ 150 ಸ್ಥಾನಕ್ಕೆ ಕಡಿಮೆಯಾಗದಂತೆ ಗೆಲ್ಲಲು ಪಕ್ಕಾ ಪ್ಲಾನ್ ಮಾಡಬೇಕು. ಅದಕ್ಕಾಗಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಮತ್ತು ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಎಲ್ಲರೂ ಒಗ್ಗೂಡಿ ಕೆಲಸ ಮಾಡಬೇಕಾಗಿದೆ. ನನಗೆ ನಿಮ್ಮೆಲ್ಲರ ಶಕ್ತಿ, ಸಾಮರ್ಥ್ಯದ ಬಗ್ಗೆ ಗೊತ್ತಿದೆ. ಕಳೆದ ಚುನಾವಣೆಯಲ್ಲಿ ನಿಮ್ಮ ಜೊತೆಗೆ ಸಂಚರಿಸಿದ್ದೇನೆ. ನೀವೆಲ್ಲ ಒಟ್ಟಾಗಿ ಚುನಾವಣೆ ಎದುರಿಸಿದರೆ 150 ಸ್ಥಾನ ಗೆಲ್ಲುವುದು ಕಷ್ಟದ ಕೆಲಸ ಅಲ್ಲ ಎಂದು ಹೇಳಿದರು.

ಬಿಜೆಪಿ ಸರಕಾರ ಜನರ ಮತದಿಂದ ಅಧಿಕಾರಕ್ಕೆ ಬಂದಿದ್ದಲ್ಲ. ಹಣದ ಬಲದಿಂದ ಅಧಿಕಾರಕ್ಕೆ ಬಂದಿದೆ ಅನ್ನೋದು ಎಲ್ಲರಿಗೂ ಗೊತ್ತು. ಹೀಗಾಗಿ ಬಿಜೆಪಿಗೆ ಸರಕಾರ ರಚಿಸಲು ಜನರ ಮತ ಇಲ್ಲ ಅನ್ನೋದು ಖಚಿತ. ಹೀಗಾಗಿ ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲ್ಲುವುದು ಕಷ್ಟದ ಕೆಲಸವೇನೂ ಅಲ್ಲ. ಆದರೆ ಕಾಂಗ್ರೆಸ್ ಬಹುಮತಕ್ಕೆ ಬೇಕಾದ ಜಸ್ಟ್ ಮಾರ್ಜಿನ್ ಇಟ್ಟುಕೊಂಡು ಕೆಲಸ ಮಾಡಬಾರದು. 150 ಸ್ಥಾನಗಳ ಗುರಿ ಇಟ್ಟುಕೊಂಡು ನಿಗದಿತ ವಿಚಾರಗಳನ್ನು ಮುಂದಿಟ್ಟು ಮುಂದುವರಿದಲ್ಲಿ ಯಶಸ್ಸು ಖಂಡಿತ ಎಂದು ಹೇಳಿದರು.
ಪಕ್ಷದಲ್ಲಿ ತೊಡಗಿಸಿಕೊಂಡವರಿಗಷ್ಟೇ ಟಿಕೆಟ್ ನೀಡಿ
ತಳಮಟ್ಟದಲ್ಲಿ ಯಾರು ಪಕ್ಷದ ಪರವಾಗಿ ಕೆಲಸ ಮಾಡುತ್ತಾರೋ ಅಂಥವರನ್ನು ಮಾತ್ರ ಪರಿಗಣಿಸಿ. ಅವರಿಗೆ ಪಕ್ಷದಲ್ಲಿ ಸ್ಥಾನ ನೀಡಿ. ಯಾರು ಪಕ್ಷಕ್ಕಾಗಿ ದುಡಿದಿದ್ದಾರೆ ಅನ್ನೋದನ್ನು ಆಯ್ಕೆ ಮಾಡುವುದು ಕಷ್ಟ ಆಗಲ್ಲ. ಆದರೆ ಟಿಕೆಟ್ ಕೊಡುವಾಗ, 20 ವರ್ಷಗಳಿಂದ ಪಕ್ಷಕ್ಕಾಗಿ ದುಡಿಯುತ್ತಿದ್ದಾನೆ ಅನ್ನೋದು ಮಾತ್ರ ಮಾನದಂಡ ಆಗಬೇಕಾಗಿಲ್ಲ. ಇವತ್ತು ಎಷ್ಟರ ಮಟ್ಟಿಗೆ ಪಕ್ಷದ ಜೊತೆಗಿದ್ದಾನೆ ಎನ್ನೋದನ್ನು ನೋಡಿಕೊಂಡು ಟಿಕೆಟ್ ನೀಡಬೇಕು ಎಂದು ರಾಹುಲ್ ಗಾಂಧಿ ಪಕ್ಷದ ನಾಯಕರಿಗೆ ಸೂಚನೆ ನೀಡಿದರು.
ಬಿಜೆಪಿ ಸಮಾಜ ಒಡೆದರೆ, ನಾವು ಬೆಸೆಯುತ್ತೇವೆ
ದೇಶದಲ್ಲಿ ನಿರುದ್ಯೋಗವೇ ದೊಡ್ಡ ಸಮಸ್ಯೆಯಾಗಿದೆ. ಉದ್ಯೋಗ ನೀಡುತ್ತೇವೆಂದು ಹೇಳಿದ ಬಿಜೆಪಿಯವರು ಅದನ್ನು ಬಿಟ್ಟು ಕೆಲವು ಉದ್ಯಮಿಗಳನ್ನಷ್ಟೇ ಬೆಳೆಸಿದ್ದಾರೆ. ದೇಶದ ಆರ್ಥಿಕತೆ ಕುಸಿದು ಹೋಗಿದೆ. ಜಿಎಸ್ಟಿ ತೆರಿಗೆಯಿಂದ ಜನರು ಬೇಸತ್ತಿದ್ದಾರೆ. ಬಿಜೆಪಿಯವರು ಜಾತಿ, ಧರ್ಮದ ವಿಚಾರ ಮುಂದಿಟ್ಟು ಸಮಾಜವನ್ನು ಒಡೆಯಲು ನೋಡುತ್ತಿದ್ದಾರೆ. ನಾವು ಒಡೆಯುವುದಲ್ಲ, ಬೆಸೆಯುವುದನ್ನು ಮಾಡಬೇಕು. ಯುವಕರು ಮತ್ತು ಮಹಿಳೆಯರನ್ನು ಮುಂದಿಟ್ಟು ಕಾರ್ಯಕ್ರಮ ರೂಪಿಸಿ, ಚುನಾವಣೆ ಎದುರಿಸಿ ಎಂದು ಕಾಂಗ್ರೆಸ್ ನಾಯಕರಿಗೆ ಕರೆ ನೀಡಿದ್ದಾರೆ.
Bengaluru, Apr 1 (PTI) Setting the mood for Assembly elections in Karnataka due next year, former Congress President Rahul Gandhi on Friday exhorted party leaders in the State to work together, as he set an ambitious target to win a minimum of 150 seats.He said Prime Minister Narendra Modi used to speak about corruption in his election rallies, but the country’s “most corrupt government” is in Karnataka, run by the BJP.
10-11-25 07:17 pm
Bangalore Correspondent
54 ಹೆಕ್ಟೇರ್ ಅರಣ್ಯ ನಾಶ ಭೀತಿ ; ಶರಾವತಿ ಪಂಪ್ಡ್ ಸ್...
10-11-25 02:58 pm
'ನೋ ಚೇರ್ ಇನ್ ನವೆಂಬರ್' ಎಐ ವಿಡಿಯೋ ಹಂಚಿಕೊಂಡ ಬಿಜೆ...
10-11-25 01:23 pm
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಮಾಜ್ ವಿಡಿಯೋ ವೈರಲ...
10-11-25 12:22 pm
ಮುಸ್ಲಿಂ, ಕ್ರೈಸ್ತರು ಆರೆಸ್ಸೆಸ್ ಶಾಖೆಗೆ ಬರಬಹುದಾ?...
09-11-25 06:53 pm
10-11-25 08:23 pm
HK News Desk
ಫರಿದಾಬಾದ್ ; ಕಾಶ್ಮೀರಿ ವೈದ್ಯನ ಮಾಹಿತಿಯಂತೆ 300 ಕ...
10-11-25 03:04 pm
ದೊಡ್ಡ ಮಟ್ಟದ ವಿಧ್ವಂಸಕ ಕೃತ್ಯಕ್ಕೆ ಸಂಚು ; ಮೂವರು ಶ...
09-11-25 07:49 pm
ಮುಸ್ಲಿಂ ವ್ಯಕ್ತಿಯ ಎರಡನೇ ಮದುವೆ ನೋಂದಣಿಗೆ ನಿರಾಕರಣ...
07-11-25 05:21 pm
ಮತಗಳವು ಆರೋಪ ; ರಾಹುಲ್ ವಿರುದ್ಧ ತಿರುಗಿಬಿದ್ದ ಮತದಾ...
07-11-25 11:33 am
08-11-25 08:31 pm
Mangalore Correspondent
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
09-11-25 10:27 pm
Mangalore Correspondent
ಬಹುಕೋಟಿ ವಂಚಕ ರೋಷನ್ ಸಲ್ದಾನಗೆ ಸೇರಿದ 2.85 ಕೋಟಿ ಮ...
09-11-25 03:50 pm
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm
Digital Arrest Scam, Mangalore Online Fraud:...
08-11-25 04:08 pm
ಆರೋಪಿಗೆ ಜಾಮೀನು ನೀಡಲು ಹೋಗಿ ತಾನೇ ತಗ್ಲಾಕ್ಕೊಂಡ !...
07-11-25 11:20 pm